Site icon Vistara News

JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

karnataka CET Exam 2024

ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

100 ಅಂಕ ಪಡೆದವರ ಹೆಚ್ಚಳ

ಈ ಬಾರಿ, 100 ಪರ್ಸೆಂಟೈಲರ್‌ಗಳ ಸಂಖ್ಯೆ 2023ಕ್ಕೆ ಹೋಲಿಸಿದರೆ 13 ಅಭ್ಯರ್ಥಿಗಳಷ್ಟು ಹೆಚ್ಚಾಗಿದೆ. ಒಟ್ಟು 56 ಅಭ್ಯರ್ಥಿಗಳು ಪೇಪರ್ 1 (ಬಿಇ/ಬಿಟೆಕ್) ನಲ್ಲಿ 100 ಎನ್‌ಟಿಎ ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ ಇಬ್ಬರು ಹುಡುಗಿಯರು (ಕರ್ನಾಟಕದ ಸಾನ್ವಿ ಜೈನ್ ಮತ್ತು ದೆಹಲಿಯ ಶೈನಾ ಸಿನ್ಹಾ) ಮತ್ತು ಉಳಿದವರು ಪುರುಷ ಅಭ್ಯರ್ಥಿಗಳು. ಈ ಸಂಖ್ಯೆ 2023ರಲ್ಲಿ 43 ಇತ್ತು. ಅವರಲ್ಲಿ ಕರ್ನಾಟಕದ ರಿಧಿ ಕಮಲೇಶ್ ಕುಮಾರ್ ಮಹೇಶ್ವರಿ ಎಂಬ ಒಬ್ಬ ಹುಡುಗಿ ಮಾತ್ರ 100 ಪರ್ಸೆಂಟೈಲ್ ಗಳಿಸಿದ್ದಳು.

ಜನವರಿ ಪರೀಕ್ಷೆಯಲ್ಲಿ ಒಟ್ಟು 23 ಮಂದಿ 100 ಪರ್ಸೆಂಟ್ ಮಾರ್ಕ್ ತಲುಪಿದ್ದರು. ತೆಲಂಗಾಣದ ಏಳು ವಿದ್ಯಾರ್ಥಿಗಳು ಈ ಮೈಲಿಗಲ್ಲನ್ನು ಸಾಧಿಸುವುದರೊಂದಿಗೆ ಆ ರಾಜ್ಯ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳು ನಂತರದ ಸ್ಥಾನದಲ್ಲಿವೆ. ಪ್ರತಿಯೊಂದೂ ಮೂರು 100 ಪರ್ಸೆಂಟೈಲ್ ಹೋಲ್ಡರ್‌ಗಳನ್ನು ಹೊಂದಿದೆ. ದೆಹಲಿ ಮತ್ತು ಹರಿಯಾಣದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು 100 ಪರ್ಸೆಂಟೈಲ್ ಮಾರ್ಕ್‌ನಲ್ಲಿದ್ದರೆ, ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಪರಿಪೂರ್ಣ ಅಂಕಗಳನ್ನು ಗಳಿಸಿದ್ದಾರೆ.

ಕಳೆದ ವರ್ಷದಂತೆ, ತೆಲಂಗಾಣವು ಈ ವರ್ಷವೂ ಜೆಇಇ ಮೇನ್‌ನಲ್ಲಿ ಅತಿ ಹೆಚ್ಚು 100 ಪರ್ಸೆಂಟೈಲರ್‌ಗಳನ್ನು ವರದಿ ಮಾಡಿದೆ. 2023ರಲ್ಲಿ ತೆಲಂಗಾಣದ 11 ವಿದ್ಯಾರ್ಥಿಗಳು 100 ಪರ್ಸೆಂಟ್‌ ಗಳಿಸಿದ್ದರು. ಈ ವರ್ಷ ಈ ಪ್ರಮಾಣ 15ಕ್ಕೆ ಏರಿಕೆಯಾಗಿದೆ. 2023ರಲ್ಲಿ ಕ್ರಮವಾಗಿ 2 ಮತ್ತು 5ಕ್ಕೆ ಹೋಲಿಸಿದರೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶವು 100 ಅಂಕ ಗಳಿಸಿದ 7 ವಿದ್ಯಾರ್ಥಿಗಳನ್ನು ಹೊಂದಿದೆ. ದೆಹಲಿ NCRನ 100 ಪರ್ಸೆಂಟೈಲರ್‌ಗಳ ಸಂಖ್ಯೆ 2023ರಲ್ಲಿ 2 ಇದ್ದುದು 6ಕ್ಕೆ ಏರಿದೆ. 7 ಟಾಪರ್‌ಗಳೊಂದಿಗೆ ರಾಜಸ್ಥಾನ ನಂತರ ಬಂದಿದೆ.

ಪಶ್ಚಿಮ ಬಂಗಾಳ, ಕೇರಳ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಂತಹ ಕೆಲವು ರಾಜ್ಯಗಳು ಕಳೆದ ವರ್ಷ ತಲಾ ಟಾಪರ್‌ಗಳನ್ನು ಹೊಂದಿದ್ದವು ಆದರೆ ಈ ಬಾರಿ ಯಾವುದೇ 100 ಪರ್ಸೆಂಟೈಲರ್ ಅನ್ನು ಪಡೆದಿಲ್ಲ.

JEE ಮುಖ್ಯ 2024 ಪರೀಕ್ಷೆಯ ಎರಡೂ ಅವಧಿಗಳಲ್ಲಿ (ಜನವರಿ/ಏಪ್ರಿಲ್) ನೋಂದಾಯಿಸಿದ ಸಾಮಾನ್ಯ ಅಭ್ಯರ್ಥಿಗಳ ಸಂಖ್ಯೆ 924636, ಮತ್ತು ಎರಡೂ ಅವಧಿಗಳಲ್ಲಿ (ಜನವರಿ/ಏಪ್ರಿಲ್) ಹಾಜರಾದ ಸಾಮಾನ್ಯ ಅಭ್ಯರ್ಥಿಗಳ ಸಂಖ್ಯೆ 822899. ಜನವರಿ 2024 (ಸೆಷನ್ 1) ಪರೀಕ್ಷೆಯಲ್ಲಿ ನೋಂದಾಯಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 1221624, ಅದರಲ್ಲಿ 1170048 ಅಭ್ಯರ್ಥಿಗಳು ಹಾಜರಾಗಿದ್ದರು.

ಜೆಇಇ ಕಟ್-ಆಫ್

ಈ ಬಾರಿ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ, ಜೆಇಇ (ಅಡ್ವಾನ್ಸ್ಡ್) ಕಟ್ ಆಫ್ 93.23 ಆಗಿದೆ. ಇದು 2023ರಲ್ಲಿ 90.77 ಇತ್ತು. 2022ರಲ್ಲಿ 88.4 ಇತ್ತು. SC ಅಭ್ಯರ್ಥಿಗಳಿಗೆ, ಕಟ್-ಆಫ್ 60.09 ಆಗಿದೆ. ಇದು 2023ರಲ್ಲಿ ಇದ್ದ 51.97ರಿಂದ ದೊಡ್ಡ ಜಿಗಿತ. ST ವಿದ್ಯಾರ್ಥಿಗಳಿಗೆ ಕಟ್-ಆಫ್ 46.69%, ಕಳೆದ ಬಾರಿ 37.23% ಇತ್ತು. 2023ರಲ್ಲಿ 73.61%ರಷ್ಟಿದ್ದ OBC (ನಾನ್-ಕ್ರೀಮಿ ಲೇಯರ್) ಕಟ್ ಆಫ್ ಈ ಬಾರಿ 79.67ಕ್ಕೆ ಏರಿದೆ. EWS ವರ್ಗದ ಅಭ್ಯರ್ಥಿಗಳಿಗೆ, ಈ ಬಾರಿ ಕಟ್ ಆಫ್ 75.62 ಆಗಿದೆ. ಕಳೆದ ವರ್ಷ 63.11 ಇತ್ತು.

ಇದನ್ನೂ ಓದಿ: JEE Main 2024 Result: JEE ಮೇನ್‌ 2024 ಸೆಷನ್‌ 1 ಫಲಿತಾಂಶ ಪ್ರಕಟ; ಇಲ್ಲಿ ನೋಡಿ

Exit mobile version