Site icon Vistara News

Joe Biden : ಬಂದೂಕು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಪುತ್ರ ತಪ್ಪಿತಸ್ಥ; ಕಾದಿದೆ 25 ವರ್ಷ ಜೈಲು ಶಿಕ್ಷೆ

Joe Biden

ಬೆಂಗಳೂರು: ಬಂದೂಕು ಖರೀದಿ ಮಾಡುವ ವೇಳೆ ಸುಳ್ಳು ಮಾಹಿತಿ ನೀಡಿರುವ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಪುತ್ರ ಹಂಟರ್ ಬೈಡನ್ (Hunter Biden) ತಪ್ಪಿತಸ್ಥರೆಂದು ಸಾಬೀತಾಗಿದೆ. ಬಂದೂಕು ಖರೀದಿ ವೇಳೆ ತಾವು ಮಾದಕ ವಸ್ತುಗಳನ್ನು(Banned Drug) ಬಳಸುತ್ತಿಲ್ಲ ಎಂದು ಸುಳ್ಳು ಹೇಳಿದೆ ಆರೋಪ ಅವರ ಮೇಲಿತ್ತು. ಆ ಪ್ರಕರಣದಲ್ಲಿ ಹಂಟರ್ ಬೈಡನ್ ತಪ್ಪಿತಸ್ಥರೆಂದು ತೀರ್ಪುಗಾರರು ತೀರ್ಪು ನೀಡಿದ್ದಾರೆ. ಹಂಟರ್ ಬೈಡನ್ ಮೊದಲ ಪ್ರಕರಣದಲ್ಲಿ 10 ವರ್ಷಗಳವರೆಗೆ, ಎರಡನೇ ಪ್ರಕರಣದಲ್ಲಿ ಐದು ವರ್ಷಗ ಮತ್ತು ಮೂರನೇ ಪ್ರಕರಣದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಎಲ್ಲ ಪ್ರಕರಣಗಳು ಸಾಬೀತಾದರೆ ಅವರು ತಮ್ಮ ಜೀವಿತಾವಧಿಯ 25 ವರ್ಷವನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ.

ಹಂಟರ್ ಬೈಡನ್ ಪ್ರಕರಣದಲ್ಲಿ 12 ನ್ಯಾಯಾಧೀಶರ ತಂಡ ಸೋಮವಾರ ವಿಚಾರಣೆ ಪ್ರಾರಂಭಿಸಿದ್ದರು. ಡೆಲಾವೇರ್​ನ ವಿಲ್ಮಿಂಗ್ಟನ್​​ನಲ್ಲಿರುವ ಫೆಡರಲ್ ನ್ಯಾಯಾಲಯವು ಮಂಗಳವಾರ ಹಂಟರ್ ಬೈಡನ್​​ಗೆ ಶಿಕ್ಷೆ ವಿಧಿಸಿದೆ. ಹಂಟರ್ ಅಮೆರಿಕದ ಹಾಲಿ ಅಧ್ಯಕ್ಷರ ಮೊದಲ ಪುತ್ರ.

ಹಂಟರ್ ಬೈಡನ್ ಅವರು ಕೋಲ್ಟ್ ಕೋಬ್ರಾ 38-ಕ್ಯಾಲಿಬರ್ ರಿವಾಲ್ವರ್ ಖರೀದಿಸಿದ್ದರು. ಈ ವೇಳೆ ಅಕ್ರಮ ಮಾದಕವಸ್ತುಗಳ ಬಳಕೆಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ. ಹೀಗಾಗಿ ಅದು ಅಕ್ರಮವಾಗುತ್ತದೆ. ಅಕ್ಟೋಬರ್ 2018 ರಲ್ಲಿ 11 ದಿನಗಳ ಕಾಲ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಹೊಂದಿದ್ದರು ಎಂಬ ಗಂಭೀರ ಆರೋಪಗಳನ್ನು ಒಪ್ಪಿಕೊಂಡಿದ್ದರು.

ನ್ಯಾಯಾಧೀಶರು ಮಂಗಳವಾರ ಹಂಟರ್ ಬೈಡನ್ ಅವರ ಶಿಕ್ಷೆಯ ದಿನಾಂಕವನ್ನು ನಿಗದಿಪಡಿಸಲಿಲ್ಲ. ಇನ್ನೂ 120 ದಿನಗಳಲ್ಲಿ ಶಿಕ್ಷೆ ಪ್ರಕಟಗೊಳ್ಳಲಿದೆ. ನವೆಂಬರ್ 5 ರಂದು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಶಿಕ್ಷೆ ಪ್ರಕಟಗೊಳ್ಳಲಿದೆ.

ಏನಿದು ಪ್ರಕರಣ?

2018ರಲ್ಲಿ ಹಂಟರ್ ಬೈಡನ್ ಬಂದೂಕು ಖರೀದಿಸಿದ್ದರು. ಅಮೆರಿಕದಲ್ಲಿ ಬಂದೂಕು ಖರೀದಿಸುವಾಗ ಒಬ್ಬ ವ್ಯಕ್ತಿಯು ಅರ್ಜಿಯೊಂದನ್ನು ಅನ್ನು ಭರ್ತಿ ಮಾಡಬೇಕು. ಈ ವೇಳೆ ಮಾದಕವಸ್ತು ಬಳಕೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಬೇಕು. ಅಂದರೆ ಮಾದಕ ವಸ್ತುಗಳನ್ನು ಸೇವಿಸುವುದಿಲ್ಲ ಎಂದು ಖಾತರಿ ಕೊಡಬೇಕು. ಮಾದಕ ವಸ್ತುಗಳನ್ನು ಹೊಂದಿರುವವರಿಗೆ ಅಲ್ಲಿ ಬಂದೂಕು ಲೈಸನ್ಸ್ ಸಿಗುವುದಿಲ್ಲ. ಹಂಟರ್ ಬೈಡನ್ ಮಾದಕವಸ್ತು ಬಳಕೆಯ ಪ್ರಶ್ನೆಗೆ “ಇಲ್ಲ” ಎಂದು ಉತ್ತರಿಸಿದ್ದರು. ಆದರೆ ಅವರು ಆ ಸಮಯದಲ್ಲಿ ಅವುಗಳನ್ನು ಬಳಸುತ್ತಿದ್ದರು ಎಂದು ವರದಿಯಾಗಿದೆ.

ಸೆಪ್ಟೆಂಬರ್ 2023ರಲ್ಲಿ, ಹಂಟರ್ ಬೈಡನ್ ವಿರುದ್ಧ ಈ ಬಂದೂಕು ಖರೀದಿಗೆ ಸಂಬಂಧಿಸಿದ ಮೂರು ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಯಿತು. ಈ ಆರೋಪಗಳಲ್ಲಿ ಅವರ ಮಾದಕವಸ್ತು ಬಳಕೆಯ ಬಗ್ಗೆ ಸುಳ್ಳು ಹೇಳುವುದು ಮತ್ತು ಮಾದಕವಸ್ತು ಬಳಕೆದಾರರಾಗಿದ್ದಾಗ ಬಂದೂಕು ಹೊಂದಿರುವುದು ಸೇರಿಕೊಂಡಿದೆ. 2023 ರಲ್ಲಿ, ಹಂಟರ್ ವಿಚಾರಣೆಗೆ ಹೋಗಿರಲಿಲ್ಲ. ಕಾನೂನು ಪಾಲನೆಯಲ್ಲೂ ಅವರು ವಿಫಲಗೊಂಡಿದ್ದರು.

ಇದನ್ನೂ ಓದಿ: Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

ಹಂಟರ್ ಬೈಡನ್ ತಮ್ಮ ಆರೋಪಗಳನ್ನು ಮೊದಲಿಗೆ ಒಪ್ಪಿಕೊಂಡಿರಲಿಲ್ಲ. ವಿಚಾರಣೆಯ ವೇಳೆ ಹಂಟರ್ ಅವರ ವಿರುದ್ಧ ಸಾಕ್ಷಿಗಳು ದಾಖಲಾಗಿದ್ದವು. ಅವರ ಮಾಜಿ ಪತ್ನಿ, ಮಾಜಿ ಗೆಳತಿ ಮತ್ತು ಅತ್ತಿಗೆಯ ಹೇಳಿಕೆಯ ಪ್ರಕಾರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ಅವರು ಅಕ್ಟೋಬರ್ 2018 ರಲ್ಲಿ ಬಂದೂಕು ಖರೀದಿಸುವ ಮೊದಲು ಮತ್ತು ನಂತರದ ವಾರಗಳಲ್ಲಿ ಮಾದಕ ವಸ್ತುಗಳನ್ನ ಸೇವಿಸಿದ್ದು ಗೊತ್ತಾಗಿತ್ತು.

Exit mobile version