Site icon Vistara News

Joe Biden : ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​​ಗೆ ಗೆಲುವು

Joe Biden

ವಾಷಿಂಗ್ಟನ್​: ಜನವರಿ 3ರಂದು ನಡೆದ ದಕ್ಷಿಣ ಕೆರೊಲಿನಾ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ (Joe Biden) ಗೆಲುವು ಸಾಧಿಸಿದ್ದಾರೆ. 55 ಪ್ರತಿನಿಧಿಗಳು ಕಣದಲ್ಲಿದ್ದರು. ಆದರೂ ಬೈಡನ್ ಗೆಲುವು ನಿರೀಕ್ಷಿತವಾಗಿತ್ತು. ಎದುರಾಳಿಗಳಾದ ಮರಿಯಾನೆ ವಿಲಿಯಮ್ಸನ್ ಮತ್ತು ಡೀನ್ ಫಿಲಿಪ್ಸ್ (ಡಿ-ಮಿನ್) ಅವರನ್ನು ಸೋಲಿಸಿ ಗೆದ್ದಿದ್ದಾರೆ.

ಈ ಗೆಲುವಿನ ಬಳಿಕ ಮಾತನಾಡಿದ ಬೈಡೆನ್​, ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವುದಾಗಿ ಶನಿವಾರ ಹೇಳಿದ್ದಾರೆ. 81 ವರ್ಷದ ಹಾಲಿ ಅಧ್ಯಕ್ಷ ಬೈಡೆನ್​ ತಮ್ಮ ಪಕ್ಷದ ನಾಮನಿರ್ದೇಶನಕ್ಕಾಗಿ ಕೆರೊಲಿನಾದಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಇಬ್ಬರು ಪ್ರತಿಸ್ಪರ್ಧಿಗಳ ವಿರುದ್ಧ ಭರ್ಜರಿ ವಿಜಯ ಗಳಿಸಿದ್ದಾರೆ.

ಬೈಡನ್ ತಮ್ಮ ವಿಜಯವನ್ನು ಘೋಷಿಸುವ ವೇಳೆ ಲಾಸ್ ಏಂಜಲೀಸ್​ನಲ್ಲಿ ನಿಧಿಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. “2020 ರಲ್ಲಿ, ದಕ್ಷಿಣ ಕೆರೊಲಿನಾದ ಮತದಾರರು ರಾಜಕೀಯ ಪಂಡಿತರ ಲೆಕ್ಕಾಚಾರ ತಪ್ಪು ಎಬುದನ್ನು ಸಾಬೀತುಪಡಿಸಿದರು. ಮತದಾರರು ನಮ್ಮ ಅಭಿಯಾನಕ್ಕೆ ಹೊಸ ಜೀವ ತುಂಬಿದ್ದಾರೆ. ಅಧ್ಯಕ್ಷ ಸ್ಥಾನ ಹಾದಿಯಲ್ಲಿ ನಮ್ಮನ್ನು ಇರಿಸಿದ್ದಾರೆ. ಈಗ 2024 ರಲ್ಲಿ ದಕ್ಷಿಣ ಕೆರೊಲಿನಾದ ಜನರು ಮತ್ತೆ ಮಾತನಾಡಿದ್ದಾರೆ. ನನ್ನನ್ನು ಮತ್ತೆ ಅಧ್ಯಕ್ಷ ಸ್ಥಾನ ಹಾದಿಯಲ್ಲಿ ಇಟ್ಟಿದ್ದಾರೆ. ಈ ಮೂಕ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೆ ಸೋಲುವಂತೆ ಮಾಡಿದ್ದಾರೆ ಎಂದು ಬೈಡೆನ್ ಹೇಳಿದ್ದಾರೆ.

ಇದನ್ನೂ ಓದಿ : Houthi Targets : ಹೌತಿ ಉಗ್ರರ ವಿರುದ್ಧ ಮುಂದುವರಿದ ಕಾರ್ಯಾಚರಣೆ, ಯೆಮೆನ್​ನಲ್ಲಿ 36 ನೆಲೆಗಳ ಮೇಲೆ ದಾಳಿ

ಬೈಡನ್ ಕಳೆದ ತಿಂಗಳು ಎರಡು ಬಾರಿ ಪಾಲ್ಮೆಟ್ಟೊ ರಾಜ್ಯಕ್ಕೆ ಭೇಟಿ ನೀಡಿದ್ದರು. ಕೊಲಂಬಿಯಾದ ಬ್ರೂಕ್ಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್​ನಲ್ಲಿ ಭಾನುವಾರದ ಊಟದ ಜನಸಮೂಹವನ್ನುದ್ದೇಶಿಸಿ ಮಾತನಾಡಿದ್ದರು. “ನೀವು ನನ್ನ ಬೆಂಬಲ ಹೊಂದಿದ್ದೀರಿ. ನಾನು ನಿಮ್ಮ ಬೆಂಬಲ ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು.

ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್ನರು ದಕ್ಷಿಣ ಕೆರೊಲಿನಾದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಜಿಮ್ಮಿ ಕಾರ್ಟರ್ 1976 ರಲ್ಲಿ ಗೆದ್ದ ಕೊನೆಯ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು. ಜನವರಿ 23 ರಂದು ನ್ಯೂ ಹ್ಯಾಂಪ್​ಶೈರ್​ನ ಡೆಮಾಕ್ರಟಿಕ್ ಪ್ರಾಥಮಿಕ ಚುನಾವಣೆಯಲ್ಲಿ ಬೈಡನ್ ಗೆದ್ದಿದ್ದರು.

Exit mobile version