ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಬಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಬಣಗಳ ಬಡಿದಾಟದಿಂದ ಸುಸ್ತಾಗಿರುವ ಕಾಂಗ್ರೆಸ್ ಹೈಕಮಾಂಡ್ (Congress high command), ಇಬ್ಬರ ನಡುವಿನ ಜಗಳಕ್ಕೆ ಮದ್ದು ಅರೆಯಲು ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯ ಮುಖ್ಯಮಂತ್ರಿ (Karnataka CM) ಪದವಿಗೆ ಮೂರನೆಯವರು ಬಂದು ಕೂರಲೂಬಹುದು ಎನ್ನಲಾಗುತ್ತಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಬೆಳಗ್ಗೆ ಎದ್ರೆ ಬಣ ಬಡಿದಾಟ ಪಾಲಿಟಿಕ್ಸ್ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ನಡುವೆ ಪೈಪೋಟಿ ಎದ್ದಿದ್ದು, ಉಭಯ ಟೀಂಗಳ ನಡುವೆ ಎಟು ಎದಿರೇಟು ಪಾಲಿಟಿಕ್ಸ್ ಮುಂದುವರಿದಿದೆ. ಸಿದ್ದರಾಮಯ್ಯ ಬಣ ಇನ್ನೊಂದಷ್ಟು ಡಿಸಿಎಂ ಪೋಸ್ಟ್‌ಗಳು ಸೃಷ್ಟಿಯಾಗಬೇಕು ಎನ್ನುತ್ತಿದೆ. ಡಿಕೆಶಿ ಬಣವೂ ಒಕ್ಕಲಿಗ ಸಿಎಂ ಆಗಲಿ ಎಂದು ಎದುರೇಟು ಹಾಕಿದೆ.
ಈ ಬಣ ಬಡಿದಾಟದಿಂದ ಹೈಕಮಾಂಡ್ ಗರಂ ಆಗಿದೆ. ಉಭಯ ಬಣಗಳ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭ ಆಗಲಿದೆಯಾ ಎಂಬ ಕುತೂಹಕ ಮೂಡಿದೆ. ಹಲವು ವರ್ಷಗಳಿಂದ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ಕಾಯುತ್ತಿದ್ದ ವ್ಯಕ್ತಿಗೆ ಈ ಬಾರಿ ಅವಕಾಶ ಪಕ್ಕಾ ಅಂತಿವೆ ಹೈಕಮಾಂಡ್ ಮೂಲಗಳು. ಸಿದ್ದರಾಮಯ್ಯ ಎರಡುವರೆ ವರ್ಷಗಳನ್ನು ಪೂರೈಸಿದ ಬಳಿಕ ರಾಜ್ಯದಲ್ಲಿ ಆ ಭಾರಿ ಬದಲಾವಣೆ ಆಗುವ ಸಾಧ್ಯತೆ ಇದೆ. 2025ಕ್ಕೆ ರಾಜ್ಯ ರಾಜಕಾರಣದಲ್ಲಿ ಈ ಪಲ್ಲಟ ಆಗಬಹುದು.
ಅತ್ತ ಡಿಕೆ ಶಿವಕುಮಾರ್ ಸಿಎಂ ಆಗುವುದಕ್ಕೆ ಸಿದ್ದರಾಮಯ್ಯ ಬಣ ವಿರೋಧವಿದೆ. ಸಿದ್ದರಾಮಯ್ಯ ಮುಂದುವರಿಯಲು ಡಿಕೆಶಿ ಬಣ ಬಿಡಲಾರದು. ಹೀಗಾಗಿ ಹೈಕಮಾಂಡ್ ನಿಷ್ಠಾವಂತ ವ್ಯಕ್ತಿಗೆ, ಗಾಂಧಿ ಕುಟುಂಬಕ್ಕೆ ನಿಷ್ಠಾವಂತನಾದ ವ್ಯಕ್ತಿಗೆ ಮಣೆ ಹಾಕುವ ಸಾಧ್ಯತೆ ಇದೆ. ಅಂಥವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಟ್ಟರೆ ಬೇರೆ ಯಾರೂ ಇಲ್ಲ. ಸಿದ್ದು- ಡಿಕೆಶಿ ಕೈತಪ್ಪಿದ ಹುದ್ದೆ, ಸದ್ಯ ರಾಜ್ಯ ರಾಜಕಾರಣದ ಅತಿ ಹಿರಿಯ ಹುದ್ದರಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಗುವುದು ಬಹುತೇಕ ಪಕ್ಕಾ ಆಗಿದೆ.
ಅತ್ತ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ದಿನೇ ದಿನೆ ಗಟ್ಟಿ ಆಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಇದು ಧನಾತ್ಮಕ ಫಲಿತಾಂಶ ತಂದುಕೊಟ್ಟ ಬಳಿಕ ಮೈತ್ರಿ ಇನ್ನಷ್ಟು ಬಿಗಿಯಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ವೋಟ್ ಬ್ಯಾಂಕ್ ಮೈತ್ರಿಗೆ ಗಟ್ಟಿಯಾದರೆ ರಾಜ್ಯ ಕಾಂಗ್ರೆಸ್‌ಗೆ ತೀವ್ರ ಹಾನಿಯಾಗಲಿದೆ. ಈ ಮೈತ್ರಿ ಗಟ್ಟಿ ಆಗದಂತೆ ಬ್ರೇಕ್ ಹಾಕುವುದಕ್ಕೂ ಇದು ಅನಿವಾರ್ಯವಾಗಿದೆ.
ಲಿಂಗಾಯತ- ಒಕ್ಕಲಿಗ ಮತ ಬ್ಯಾಂಕ್‌ಗೆ ಪರ್ಯಾಯವಾಗಿ ದಲಿತ ಸಮುದಾಯಕ್ಕೆ ಮಣೆ ಹಾಕಿ ದಲಿತ ಸಮುದಾಯದ ವೋಟ್ ಗಟ್ಟಿ ಮಾಡಿಕೊಳ್ಳಲು ಹೈಕಮಾಂಡ್ ಪ್ಲಾನ್ ಮಾಡಿದೆ. ಖರ್ಗೆಗೆ ಅಧಿಕಾರ ನೀಡುವ ಮೂಲಕ ಅಹಿಂದ ವರ್ಗಕ್ಕೆ ಅಧಿಕಾರ ಕೊಟ್ಟೆವು ಅನ್ನುವ ಸಂದೇಶ ರವಾನೆ ಮಾಡುವುದು. ಆ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಟಕ್ಕರ್ ಕೊಡುವ ಪ್ಲಾನ್‌ನಲ್ಲಿ ಹೈಕಮಾಂಡ್ ಇದೆ. ಹೀಗಾಗಿ ಇಬ್ಬರ ಜಗಳ ಮೂರನೇಯವರಿಗೆ ಲಾಭವಾದರೂ ಅಚ್ಚರಿ ಇಲ್ಲ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಇದನ್ನೂ ಓದಿ: DK Shivakumar: ಸಿಎಂ- ಡಿಸಿಎಂ ದಂಗಲ್ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್