Site icon Vistara News

Karnataka Election: ಚನ್ನಗಿರಿಯಲ್ಲಿ ಮಾಡಾಳು ಪುತ್ರನಿಗೆ ಟಿಕೆಟ್‌ ನೀಡಲು ನಿರ್ಧರಿಸಿತಾ ಹೈಕಮಾಂಡ್‌?

madalu channagiri

ದಾವಣಗೆರೆ: ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಗೆ ಒಳಪಟ್ಟಿರುವ, ಸದ್ಯ ಜೈಲುಪಾಲಾಗಿರುವ ಮಾಡಾಳು ವಿರೂಪಾಕ್ಷಪ್ಪ ಪುತ್ರನಿಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಚನ್ನಗಿರಿಯಲ್ಲಿ ಓಡಾಡಿ ಪ್ರಚಾರ ನಡೆಸಲು ಮಾಡಾಳು ಮಲ್ಲಿಕಾರ್ಜುನ ಅವರಿಗೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರ, ಅಭಿಮಾನಿಗಳ ಸಭೆಯನ್ನು ಮಾಡಾಳು ಮಲ್ಲಿಕಾರ್ಜುನ್ ನಡೆಸಿದ್ದಾರೆ.

ಚನ್ನಗಿರಿಯಿಂದ ಬಿಜೆಪಿ ಟಿಕೆಟ್‌ಗಾಗಿ ಈಗಾಗಲೇ ಮಲ್ಲಿಕಾರ್ಜುನ್ ಅವರು ವರಿಷ್ಠರ ಬಳಿ ಲಾಬಿ ನಡೆಸುತ್ತಿದ್ದಾರೆ. ಚನ್ನಗಿರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಅವರು, ತನಗೆ ಟಿಕೆಟ್‌ ಸಿಗುವ ಭರವಸೆ ಇದೆ ಎಂದಿದ್ದಾರೆ. ʼʼನನ್ನ ತಂದೆ 75 ವರ್ಷ ಪ್ರಾಯದಲ್ಲಿ ಬಂಧನದಲ್ಲಿದ್ದಾರೆ. ಇಂತಹ ವಯಸ್ಸಿನಲ್ಲಿ ಸಂಕಷ್ಟ ಬಂದಿದೆ. ನನ್ನ ತಂದೆಗೆ ಇಂತಹ ಸಂಕಷ್ಟ ಬರಲು ಕಾರಣ ಯಾರೆಂದು ಗೊತ್ತು. ಸಮಯ ಬಂದಾಗ ಕ್ಷೇತ್ರದ ಜನರಿಗೆ ತಿಳಿಸುತ್ತೇನೆ. ಈಗ ಕ್ಷೇತ್ರದಲ್ಲಿ ಓಡಾಡಿ ಅಂತ ವರಿಷ್ಠರು ಹೇಳಿದ್ದಾರೆ. ಟಿಕೆಟ್ ಸಿಗುವ ಭರವಸೆ ಇದೆ,ʼʼ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.

ಇದನ್ನೂ ಓದಿ: Lokayukta Raid: ಮಾಡಾಳ್‌ ವಿರೂಪಾಕ್ಷಪ್ಪ ಈಗ ವಿಚಾರಣಾಧೀನ ಕೈದಿ ನಂಬರ್‌ 3411

Exit mobile version