Site icon Vistara News

Karnataka Rain News: ತುಂಬಿ ಬರಿಯುತ್ತಿರುವ ಕೃಷ್ಣಾ, ಘಟಪ್ರಭಾ; ಸೇತುವೆ ಮುಳುಗಡೆ, ನಡುಗಡ್ಡೆಯಿಂದ ಗರ್ಭಿಣಿಯರ ಸ್ಥಳಾಂತರ

karnataka rain news yadgir

ಚಿಕ್ಕೋಡಿ: ಉತ್ತರ ಕರ್ನಾಟಕದಲ್ಲಿ (Uttara Karnataka) ಹೆಚ್ಚಿರುವ ಮಳೆಯ (Karnataka Rain News) ಪರಿಣಾಮ ಕೃಷ್ಣಾ (Krishna River) ಹಾಗೂ ಘಟಪ್ರಭಾ ನದಿಗಳಲ್ಲಿ (Ghataprabha river) ಪ್ರವಾಹ ಪರಿಸ್ಥಿತಿ (Flood situation) ಉಂಟಾಗಿದೆ. ಸೇತುವೆಗಳು ಮುಳುಗಿ ರಸ್ತೆಗಳು ಜಲಾವೃತಗೊಂಡು ಹಲವಾರು ನಡುಗಡ್ಡೆಗಳು ಸಂಪರ್ಕ ಕಳೆದುಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಡುಗಡ್ಡೆಗಳಿಂದ ಗರ್ಭಿಣಿಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಕೃಷ್ಣಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹದ ಪರಿಸ್ಥಿತಿ ಉದ್ಭವವಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸುಕ್ಷೇತ್ರ ವೀರಭದ್ರ ದೇವಾಲಯ ಜಲಾವೃತಗೊಂಡಿದೆ. ರಾತ್ರಿ 11 ಗಂಟೆಗೆ ದೇವಸ್ಥಾ ಪ್ರಾಂಗಣದಲ್ಲಿ ಕೃಷ್ಣೆಯ ನೀರು ತುಂಬಿಕೊಂಡಿದೆ. ವೀರಭದ್ರ ಶಿವಲಿಂಗ ಜಲಾವೃತವಾಗಿದ್ದು, ಮೊಳಕಾಲು ಆಳದ ನೀರಿನಲ್ಲಿ ವೀರಭದ್ರ ದೇವರಿಗೆ ಮಂಗಳಾರತಿ ಮಾಡಲಾಯಿತು.

ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಇರುವ ಸುಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಕೃಷ್ಣಾ ನದಿಯ ನೀರು ತುಂಬಿರುವುದರಿಂದ ದೂರದಿಂದಲೇ ದರ್ಶನ ಪಡೆಯುತ್ತಿದ್ದಾರೆ.

ಗರ್ಭಿಣಿಯರ ಸ್ಥಳಾಂತರ

ಯಾದಗಿರಿ: ಕೃಷ್ಣಾ ನದಿಯ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣಾ ನದಿಯ ಮಧ್ಯ ಭಾಗದಲ್ಲಿರುವ ನೀಲಕಂಠರಾಯನ ಗಡ್ಡಿ ನಡುಗಡ್ಡೆಯಾಗಿದೆ. ನಡುಗಡ್ಡೆಯಲ್ಲಿದ್ದ ಗರ್ಭಿಣಿಯರನ್ನು ಆಚೆ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ತಹಶೀಲ್ದಾರ ವಿಜಯಕುಮಾರ್ ಭೇಟಿ ನೀಡಿ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿಸಿ ನಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ನಡುಗಡ್ಡೆಗೆ ತೆರಳಲು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾದ ಸೇತುವೆ ಇದೆ. ಆದರೆ ಕೃಷ್ಣಾ ನದಿಗೆ ಹೆಚ್ಚು ನೀರು ಬಿಟ್ಟರೆ ಸೇತುವೆ ಮುಳುಗಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿ ಮೂವರು ಗರ್ಭಿಣಿಯರನ್ನು ಸ್ಥಳಾಂತರಿಸಲಾಗಿದೆ.

9 ವರ್ಷದ ಹಿಂದೆ ಹೀಗೆಯೇ ಕೃಷ್ಣಾ ನದಿ ಪ್ರವಾಹ ಬಂದಿದ್ದಾಗ, ಗರ್ಭಿಣಿಯಾಗಿದ್ದ ಇದೇ ಗ್ರಾಮದ ಯಲ್ಲವ್ವ ಎಂಬಾಕೆ ನದಿ ಪ್ರವಾಹ ಈಜಿ ದಡ ಸೇರಿದ್ದರು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಈಗಾಗಲೇ ಮುಂಜಾಗ್ರತೆ ವಹಿಸಿ ಗರ್ಭಿಣಿಯರ ಸ್ಥಳಾಂತರ ಮಾಡಿದೆ ಜಿಲ್ಲಾಡಳಿತ.

ಬಾಗಲಕೋಟೆ: ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಮುಧೋಳ ಬಳಿಯ ಯಾದವಾಡ ಸೇತುವೆ ಮುಳುಗಡೆಯಾಗಿದೆ.

ಸೇತುವೆ ಮೇಲೆ 2 ಅಡಿ ನೀರಿನ ಹರಿವಿದ್ದು, ಅದೇ ನೀರಲ್ಲೇ ವಾಹನಗಳು ಸಂಚರಿಸುತ್ತಿವೆ. ಇದು ಮುಧೋಳ ನಗರದಿಂದ ಗೋಕಾಕ ತಾಲ್ಲೂಕಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಬ್ರಿಡ್ಜ್ ಮೇಲೆ ಹೆಚ್ಚಿನ ನೀರು ಬಂದಲ್ಲಿ ಯಾದವಾಡ, ಉತ್ತೂರು, ಚನ್ನಾಳ, ಮಿರ್ಜಿ, ರಂಜಣಗಿ, ಒಂಟಗೋಡಿ, ರೂಗಿ, ಹಲಕಿ, ನಿಂಗಾಪುರ, ಮೆಟಗುಡ್ಡ ಗ್ರಾಮ ಸಂಪರ್ಕ ಕಡಿತವಾಗಲಿವೆ.

ಮಟನ್‌ ಮಾರ್ಕೆಟ್‌ಗೆ ಘಟಪ್ರಭಾ ನೀರು

ಬೆಳಗಾವಿ: ಗೋಕಾಕದ ಮಟನ್ ಮಾರ್ಕೇಟ್‌ಗೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಈ ಹಿನ್ನೆಲೆ ಗಾಡಿಯಲ್ಲಿಟ್ಟು ಮಟನ್ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ನಗರಸಭೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ ನಗರಸಭೆ ಸಿಬ್ಬಂದಿ ಹಾಗೂ ವ್ಯಾಪಾರಸ್ಥರ ನಡುವೆ ವಾಗ್ವಾದ ಘಟಿಸಿತು.

ನೀರು ಬಂದಿರುವ ಪಕ್ಕದ ಜಾಗದಲ್ಲಿಯೇ ವ್ಯಾಪಾರಸ್ಥರು ಮಟನ್ ಮಾರಾಟ ಮಾಡುತ್ತಿದ್ದಾರೆ. ಬೇರೆ ಕಡೆ ಮಾರಾಟ ಮಾಡಿ ನೀರು ಬಂದಿರುವ ಕಡೆ ಬೇಡ ಎಂದು ನಗರಸಭೆ ಸಿಬ್ಬಂದಿ ಹೇಳಿದ್ದು, ನಮಗೆ ಬೇರೆ ಕಡೆ ಜಾಗವನ್ನಾದರೂ ತೋರಿಸಿ ಎಂದು ವ್ಯಾಪಾರಸ್ಥರು ಪಟ್ಟು ಹಿಡಿದರು.

ಇದನ್ನೂ ಓದಿ: Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

Exit mobile version