Site icon Vistara News

Karnataka live news: ಅಕ್ಬರ್‌-ಆಂಟನಿ ಖುಷ್‌, ಅಮರ್‌ ಮಟ್ಯಾಷ್‌ ಎಂದ ಸಿಸಿ ಪಾಟೀಲ್‌: 1 ವರ್ಷ ಕಾಯಿರಿ ಎಂದ ಎಂ.ಬಿ. ಪಾಟೀಲ್‌

Karnataka Live News

ಬೆಂಗಳೂರು: ಈ ವರ್ಷದ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳ ಕಡೆಗೆ ಗಮನಹರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.
ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಹಂತ 3 ರಡಿಯ ಬಬಲೇಶ್ವರ ಶಾಖಾ ಕಾಲುವೆ 1 ಹಾಗೂ 2 ವಿತರಣಾ ಕಾಲುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.

Deepa S

ನಾಳೆ ಎಲ್ಲೆಲ್ಲಿ ವರುಣಾರ್ಭಟ

ರಾಜ್ಯದ ಬಹುತೇಕ ಮಳೆ ಅಬ್ಬರ ಕಡಿಮೆ ಆಗಿದ್ದರೂ ಮುಂದಿನ 24 ಗಂಟೆಯಲ್ಲಿ (ಜು.10) ಕರ್ನಾಟಕ ಕರಾವಳಿಯ ಕೆಲವು ಕಡೆ ಗುಡುಗು ಸಹಿತ ಭಾರೀ ಮಳೆ (Rain News) ಸಾಧ್ಯತೆ ಇದೆ. ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸಿದ್ದರೆ, ಒಳನಾಡಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ.

Weather Report : ಕರಾವಳಿಯಲ್ಲಿ ತಗ್ಗಿತು ಮಳೆ ಅಬ್ಬರ; ನಾಳೆ ಇಲ್ಲಷ್ಟೇ ವರುಣಾರ್ಭಟ
Ramesha Doddapura

Veerashaiva lingayat: ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ: ಜುಲೈ 11ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ

ವೀರಶೈವ ಲಿಂಗಾಯತ (Veerashaiva lingayat) ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವುದರ ಕುರಿತು ಸಮುದಾಯದ ಎಲ್ಲ ಸಚಿವರು, ಶಾಸಕರ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ 11ಕ್ಕೆ ಏರ್ಪಡಿಸಲಾಗಿದೆ. ಈ ಕುರಿತು ಕಲಬುರಗಿಯ ಅಪ್ಪಾ ಸ್ಮರಣಾರ್ಥ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

Veerashaiva lingayat: ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ: ಜುಲೈ 11ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ
Adarsha Anche

Road Accident : ಬೈಕ್‌ಗಳಿಗೆ ಗುದ್ದಿ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಟೆಂಪೋ ಬೂದಿ! ದಂಪತಿ ಸಾವು

ಚಿಂತಾಮಣಿಯ ಕಾಚಹಳ್ಳಿ ಬಳಿ ಟೆಂಪೋವೊಂದು ಎರಡು ಬೈಕ್‌ಗಳಿಗೆ ಗುದ್ದಿದೆ. ಬಳಿಕ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ. ಈ ನಡುವೆ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.

Road Accident : ಬೈಕ್‌ಗಳಿಗೆ ಗುದ್ದಿ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಟೆಂಪೋ ಬೂದಿ! ದಂಪತಿ ಸಾವು
Deepa S

ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆ

ಕುಡಿತ ಮತ್ತಿನಲ್ಲಿ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲದ ಧೂಳ್ ಪೇಟೆಯಲ್ಲಿ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಶ್ರೀನಿವಾಸ್ ಅಲಿಯಾಸ್ ಮುಕ್ಕಣ್ಣ (24) ಮೃತಪಟ್ಟವರು. ಆಚಾರಿ ವರ್ಮ(23), ಪ್ರತಾಪ್ (25) ಹತ್ಯೆ ಮಾಡಿದ ಆರೋಪಿಗಳು.

Murder Case : ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆ; ಪತ್ನಿ ಕೊಂದವನು ಜೈಲಿಗೆ
Deepa S

ತೆಂಗು ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರು ಬಂಧಿ

ತುಮಕೂರು ಜಿಲ್ಲೆಯ ತಿಪಟೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೊಕೊನಟ್‌ ಕಾರ್ಖಾನೆಗಳ ಮೇಲೆ ರಾಜ್ಯ ಮಕ್ಕಳ ರಕ್ಷಣಾ ಆಯೋಗವು (child rights commission) ದಿಢೀರ್‌ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ಕೂಡಿ ಹಾಕಿದ್ದ 10ಕ್ಕೂ ಹೆಚ್ಚು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

Child Labour : ತೆಂಗು ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರು ಬಂಧಿ; ಮಕ್ಕಳ ಆಯೋಗದಿಂದ ರಕ್ಷಣೆ
Exit mobile version