Road Accident : ಬೈಕ್‌ಗಳಿಗೆ ಗುದ್ದಿ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಟೆಂಪೋ ಬೂದಿ! ದಂಪತಿ ಸಾವು - Vistara News

ಕರ್ನಾಟಕ

Road Accident : ಬೈಕ್‌ಗಳಿಗೆ ಗುದ್ದಿ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಟೆಂಪೋ ಬೂದಿ! ದಂಪತಿ ಸಾವು

Road Accident : ಚಿಂತಾಮಣಿಯ ಕಾಚಹಳ್ಳಿ ಬಳಿ ಟೆಂಪೋವೊಂದು ಎರಡು ಬೈಕ್‌ಗಳಿಗೆ ಗುದ್ದಿದೆ. ಬಳಿಕ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ. ಈ ನಡುವೆ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.

VISTARANEWS.COM


on

chintamani road accident tempo buried
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೆಲಮಂಗಲ/ಚಿಕ್ಕಬಳ್ಳಾಪುರ: ರಾಜ್ಯದ ಪ್ರತ್ಯೇಕ ಕಡೆ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, ಸಾವು-ನೋವುಗಳು ಸಂಭವಿಸಿವೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 15 ಅಡಿ ವೃದ್ಧ ದಂಪತಿ ಹಾರಿಬಿದ್ದು ಗಾಯಗೊಂಡಿದ್ದಾರೆ. ಇನ್ನೊಂದು ಕಡೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗೇಟ್ ಬಳಿ ಸರಣಿ ಅಪಘಾತ ಸಂಭವಿಸಿದೆ. ಈ ವೇಳೆ ದಂಪತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಟೆಂಪೋ ಮತ್ತು ಬೈಕ್‌ಗಳು ಬೆಂಕಿಗಾಹುತಿಯಾಗಿವೆ.

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ; ಇಬ್ಬರ ಸಾವು, ಮೂವರು ಗಂಭೀರ

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗೇಟ್ ಬಳಿ ಸರಣಿ ಅಪಘಾತ ಸಂಭವಿಸಿದೆ. ಎರಡು ಬೈಕ್ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮತ್ತೆ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

chintamani road accident and ambulence

ಇದನ್ನೂ ಓದಿ: Video Viral : ರೈಲಿಗೆ ಸಿಲುಕೇ ಬಿಡುತ್ತಿದ್ದ ವೃದ್ಧನನ್ನು ಕಾಪಾಡಿದ ಆರ್‌ಪಿಎಫ್ ಕಾನ್‌ಸ್ಟೇಬಲ್!

ಅಪಘಾತದಲ್ಲಿ ಪತಿ ಪತ್ನಿ ದಾರುಣವಾಗಿ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಪತಿ ಶ್ರೀರಾಮಪ್ಪ, ಶ್ಯಾಮಲ ಮೃತ ದುರ್ದೈವಿಗಳು. ಇವರು ಎರಡು ಬೈಕ್‌ಗಳಲ್ಲಿ ಚಲಿಸುತಿದ್ದರು. ಟೆಂಪೊ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ವೇಗವಾಗಿ ಬರುತ್ತಿದ್ದ ಟೆಂಪೋವೊಂದು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ಮುಂದಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬದಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಟೆಂಪೋ ಹಾಗೂ ಬೈಕ್‌ಗಳು ಸುಟ್ಟು ಕರಕಲಾಗಿವೆ. ಅಪಘಾತದ ಸ್ಥಳದಿಂದ ಟೆಂಪೋ ಚಾಲಕ ಪರಾರಿಯಾಗಿದ್ದಾನೆ. ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದ್ದಾರೆ.

Road Accident : ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ 15 ಅಡಿ ಹಾರಿಬಿದ್ದ ದಂಪತಿ!

ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿ ಬಳಿ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಕೂಟರ್‌ನಲ್ಲಿದ್ದ ಅವೆರಹಳ್ಳಿ ಗ್ರಾಮದ ವೆಂಕಟನರಸಪ್ಪ ಹಾಗೂ ಅವರ ಪತ್ನಿ ಶಾರದಾ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರ ನೆರವಿನಿಂದ ಅವರನ್ನು ನೆಲಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Hasirumakki launch : ಪ್ರವಾಸಿಗರ ಗಮನಕ್ಕೆ; ನಾಳೆಯಿಂದ ಹಸಿರುಮಕ್ಕಿ ಲಾಂಚ್ ಪುನಾರಂಭ

ಅಪಘಾತದಿಂದ ಶಾರದಾ ಅವರ ತಲೆಗೆ ಗಂಭೀರ ಗಾಯಗಾಳಗಿವೆ. ಇನ್ನು ವೆಂಕಟನರಸಪ್ಪ ಅವರ ಕಾಲೊಂದು ಮುರಿದಿದೆ. ತೀವ್ರವಾಗಿ ಗಾಯಗೊಂಡ ಅವರು ನಿತ್ರಾಣರಾಗಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ ಬಂದಿದ್ದರಿಂದ ಅವರನ್ನು ಸ್ಟ್ರೆಚರ್‌ ಮೂಲಕ ಮಲಗಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Prajwal Revanna Case: ದೇವರಾಜೇಗೌಡ ಹುಚ್ಚುನಾಯಿ, ನಕಲಿ ವಕೀಲ ಎಂದ ಶಿವರಾಮೇಗೌಡ

Prajwal Revanna Case: ಏಪ್ರಿಲ್‌ 29 ಹಾಗೂ 30ರಂದು ನಾವು ಭೇಟಿ ಮಾಡಿ ಮಾತನಾಡಿದ್ದೇವೆ. ಏಪ್ರಿಲ್‌ 29ಕ್ಕೂ ಮೊದಲು ನಾನು ಭೇಟಿ ಮಾಡಿಲ್ಲ. ಏಪ್ರಿಲ್‌ 29ರ ಬಳಿಕ 30ನೇ ತಾರೀಖಿನಂದೂ ಅವನೇ ಬಂದು ಭೇಟಿ ಮಾಡಿದ್ದಾನೆ. ಆ ಎರಡು ಸಭೆ ಹೊರತುಪಡಿಸಿ ನಾನು ಅವನ ಜತೆ ಮಾತನಾಡಿಲ್ಲ. ಅವನೊಬ್ಬ ಹುಚ್ಚುನಾಯಿ ಎಂದು ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವು (Prajwal Revanna Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಇದೇ ಪ್ರಕರಣದಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಜೈಲುಪಾಲಾಗಿದ್ದಾರೆ. ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ (L R Shivarame Gowda) ನಡುವಿನ ವಾಕ್ಸಮರವೂ ಜೋರಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, “ದೇವರಾಜೇಗೌಡ ಹುಚ್ಚು ನಾಯಿ ಇದ್ದಂತೆ. ಆತ ನಕಲಿ ವಕೀಲ” ಎಂದು ಎಲ್‌.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

“ಏಪ್ರಿಲ್‌ 29 ಹಾಗೂ 30ರಂದು ನಾವು ಭೇಟಿ ಮಾಡಿ ಮಾತನಾಡಿದ್ದೇವೆ. ಏಪ್ರಿಲ್‌ 29ಕ್ಕೂ ಮೊದಲು ನಾನು ಭೇಟಿ ಮಾಡಿಲ್ಲ. ಏಪ್ರಿಲ್‌ 29ರ ಬಳಿಕ 30ನೇ ತಾರೀಖಿನಂದೂ ಅವನೇ ಬಂದು ಭೇಟಿ ಮಾಡಿದ್ದಾನೆ. ಆ ಎರಡು ಸಭೆ ಹೊರತುಪಡಿಸಿ ನಾನು ಅವನ ಜತೆ ಮಾತನಾಡಿಲ್ಲ. ಅವನೊಬ್ಬ ಹುಚ್ಚುನಾಯಿ, ನಕಲಿ ವಕೀಲ. ಅಲ್ಲದೆ, ಆತನೊಬ್ಬರ ರೋಲ್‌ ಕಾಲ್‌ ಮಾಸ್ಟರ್‌ ಆಗಿದ್ದಾನೆ. ಅವನ ಹಣಕಾಸಿನ ವ್ಯವಹಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು” ಎಂದು ಮಾಜಿ ಸಂಸದ ‘ವಿಸ್ತಾರ ನ್ಯೂಸ್‌’ಗೆ ತಿಳಿಸಿದ್ದಾರೆ.

ಕಾರ್ತಿಕ್‌, ದೇವರಾಜೇಗೌಡ ಪೆನ್‌ಡ್ರೈವ್‌ ರೂವಾರಿಗಳು

“ಪೆನ್‌ಡ್ರೈವ್‌ ರಿಲೀಸ್‌ ಮಾಡಿರುವುದರ ಹಿಂದೆ ಕಾರು ಚಾಲಕ ಕಾರ್ತಿಕ್‌ ಹಾಗೂ ದೇವರಾಜೇಗೌಡ ಇದ್ದಾರೆ. ಏಟ್ರಿಯಾ ಹೋಟೆಲ್‌ನಲ್ಲಿ ಮಾತನಾಡುವಾಗ ನನ್ನ ವಿರುದ್ಧ ತನಿಖೆ ಮಾಡಬೇಕು ಅಂತಿದ್ದಾರೆ ಎಂದ. ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಬಗ್ಗೆ ಪದೇಪದೆ ಮಾತನಾಡಬೇಡ ಎಂದೆ. ನಿನ್ನದು ನೀನು ಸರಿಮಾಡಿಕೊ. ಉಳಿದ ಉಸಾಬರಿ ನಿನಗೆ ಬೇಡ ಎಂಬುದಾಗಿ ಹೇಳಿದ್ದೆ” ಎಂದು ತಿಳಿಸಿದರು.

“ದೇವರಾಜೇಗೌಡ ಖದೀಮ ಇದ್ದಾನೆ. ಪ್ರಚಾರ ಪ್ರಿಯನಾದ ಅವನಿಗೆ ಮಾಧ್ಯಮಗಳು ಆದ್ಯತೆ ನೀಡಬಾರದು. ಸಿಎಂ ಹಾಗೂ ಡಿಸಿಎಂ ಮೇಲೆ ನಂಬಿಕೆ ಇಲ್ಲ ಎಂದ. ನೀನು ಅವರನ್ನು ಬಿಡು, ಇವತ್ತಿನಿಂದ ಕೇಸ್‌ ಬಗ್ಗೆ ಹೋರಾಡ ಮಾಡಿಲ್ಲ ಎಂದು ಹೇಳು ಅಂದೆ. ಅಷ್ಟಕ್ಕೂ, ಅವನು ಬ್ಲ್ಯಾಕ್‌ಮೇಲ್‌ ಮಾಡಿ ದುಡ್ಡು ಮಾಡಿದ್ದಾನೆ. ಅವನು ವಕೀಲಿಕೆ ಮಾಡಲ್ಲ. ಇಷ್ಟಾದರೂ ಹೇಗೆ ದುಡ್ಡು ಬರುತ್ತದೆ? ವಿಧಾನಸಭೆ ಚುನಾವಣೆಯಲ್ಲಿ ದುಡ್ಡು ಇಟ್ಟುಕೊಂಡು ಸುಮ್ಮನಾದ. ಅವನ ಬಾಡಿಯಲ್ಲಿ ಯಾವಾಗಲೂ ಕ್ಯಾಮೆರಾ (ಬಾಡಿ ಕ್ಯಾಮ್)‌ ಇರುತ್ತದೆ. ನಾವು ಕೂತಾಗ ಒಂದೂ ಮಾತಾಡಲ್ಲ. ನನಗೆ ಅವನ ಬಗ್ಗೆ ಭಯ ಇಲ್ಲ. ಎಸ್‌ಐಟಿ ಅವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ” ಎಂದು ಹೇಳಿದರು.

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸ್ಫೋಟಕ ಆಡಿಯೊ ಹೊರಬಿದ್ದಿದೆ. ಇತ್ತೀಚೆಗೆ ಈ ಹಗರಣದಲ್ಲಿ ಡಿಸಿಎಂ ಡಿಕೆಶಿ ಕೈವಾಡ ಎಂದು ಆರೋಪಿಸಿದ್ದ ವಕೀಲ ದೇವರಾಜೇಗೌಡ, ಮತ್ತೊಂದು ಆಡಿಯೊ ಬಾಂಬ್‌ ಹಾಕಿದ್ದಾರೆ. ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್‌ ಆಡಿಯೊ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಡಿಯೊ ಬಯಲಾದ ಬೆನ್ನಲ್ಲೇ ಈಗ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ ಹಲವು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Prajwal Revanna Case: ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ವಶಕ್ಕೆ

Continue Reading

ಕರ್ನಾಟಕ

Hassan Pen Drive Case: ಅಶ್ಲೀಲ ವಿಡಿಯೊ ಪ್ರಕರಣ; ಪೆನ್‌ಡ್ರೈವ್ ಲೀಕ್‌ ಮಾಡಿದವರಿಗೂ ಸಂಕಷ್ಟ?

Hassan Pen Drive Case: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಬಂಧನವಾಗಿದೆ. ಪ್ರಜ್ವಲ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ವಿಡಿಯೊ ಲೀಕ್‌ ಮಾಡಿದವರಿಗೂ ಸಂಕಷ್ಟ ಎದುರಾಗಿದೆ. ಪೆನ್‌ಡ್ರೈವ್‌ ಲೀಕ್‌ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್‌ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಗೌಡ ಅವರಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಕಾರ್ತಿಕ್ ಸೇರಿ ನಾಲ್ವರಿಗೆ ಬಂಧನ ಭೀತಿ ಎದುರಾಗಿದೆ.

VISTARANEWS.COM


on

Hassan Pen Drive Case
Koo

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪೆನ್‌ಡ್ರೈವ್‌ ಲೀಕ್‌ ಮಾಡಿದವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಪೆನ್‌ಡ್ರೈವ್‌ ಲೀಕ್‌ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್‌ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಗೌಡ ಅವರಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಕಾರ್ತಿಕ್ ಸೇರಿ ನಾಲ್ವರಿಗೆ ಬಂಧನ ಭೀತಿ ಎದುರಾಗಿದೆ. ಕಾರ್ತಿಕ್ ಬಳಿ ಇದ್ದ ವಿಡಿಯೊವನ್ನು ಹರಿಬಿಟ್ಟವರು ಯಾರು ಎನ್ನುವ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಲೆ ಹಾಕಿರುವ ಸಾಕ್ಷಿಗಳ ಆಧರಿಸಿ ನಾಲ್ವರ ಮೇಲೆ‌ ಎಸ್ಐಟಿಗೆ ಅನುಮಾನ ಮೂಡಿದ್ದು, ಕಾರ್ತಕ್‌ ಗೌಡ ಜತೆಗೆ ನವೀನ್ ಗೌಡ, ಪುಟ್ಟರಾಜ್ ಹಾಗೂ ಚೇತನ್ ವಿರುದ್ಧ ಕೇಸ್ ದಾಖಲಾಗಿದೆ. ಈಗಾಗಲೇ ಈ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ವಜಾ ಆಗಿದೆ. ಹೀಗಾಗಿ ಈ ನಾಲ್ವರು ವಿಚಾರಣೆಗೆ ಕರೆದು ಅರೆಸ್ಟ್ ಮಾಡುವ ಭಯದಲ್ಲಿದ್ದಾರೆ.

ಅಶ್ಲೀಲ ವಿಡಿಯೊ ಶೇರ್‌: ಕುದುರೆಮುಖದಲ್ಲಿ ಕೇಸ್‌ ದಾಖಲು!

ಚಿಕ್ಕಮಗಳೂರು: ಕಳಸ ತಾಲೂಕಿನ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳನ್ನು ಶೇರ್ ಮಾಡುತ್ತಿದ್ದಾನೆ ಎಂಬ ದೂರು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಫೋಟೊವನ್ನು ಅಪ್ಲೋಡ್‌ ಮಾಡಿದ ಹಿನ್ನೆಲೆಯಲ್ಲಿ ಕಳಸ ತಾಲೂಕಿನ ಸಂಸೆ ಮೂಲದ ಪ್ರಜ್ವಲ್ ಎಂಬಾತನ ಮೇಲೆ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೊ, ವಿಡಿಯೊಗಳನ್ನು ಅಪ್ಲೋಡ್ ಮಾಡುತ್ತಿದ್ದ ಆರೋಪ ಈಗ ಪ್ರಜ್ವಲ್‌ ಮೇಲಿದೆ. ಈತ ಅಶ್ಲೀಲ ವಿಡಿಯೊಗಳನ್ನು ಹಾಗೂ ಫೋಟೊಗಳನ್ನು ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಪೇಜ್‌ಗಳಲ್ಲಿ ಟ್ರೋಲ್‌ ದುಶ್ಯಾಸನ ಎಂಬ ಖಾತೆ ಮೂಲಕ ಅಪ್ಲೋಡ್‌ ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಟ ಕೊಟ್ಟವನನ್ನು ಬಿಡಲ್ಲ!

ಬೆಂಗಳೂರು: ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಕೇಸ್ ಹಾಕಲು ತನಗೆ ಒತ್ತಾಯಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯೊಬ್ಬರು ನೀಡಿರುವ ದೂರು ಹೊಸ ತಿರುವನ್ನು ಪಡೆದುಕೊಂಡಿದೆ. ಎಸ್‌ಐಟಿಯಿಂದ ಯಾರೂ ಆಕೆಯನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ, ಸಂಪರ್ಕ ಮಾಡಿದವರ ಬಗ್ಗೆ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ಸಂತ್ರಸ್ತ ಮಹಿಳೆಗೆ ಎಸ್ಐಟಿ ಅಧಿಕಾರಿ ಎಂದು ಕರೆ ಮಾಡಿ ತೊಂದರೆ ಮಾಡಿರುವ ಆರೋಪ ವಿಚಾರವಾಗಿ ಎಸ್ಐಟಿ ಉನ್ನತ ಮೂಲಗಳು ಸ್ಪಷ್ಟನೆ ನೀಡಿದೆ. ಅಲ್ಲದೆ, ಎನ್‌ಸಿಡಬ್ಲ್ಯು ದೂರನ್ನು ಎಸ್‌ಐಟಿಗೆ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಐಟಿ, ಗುರುವಾರವಷ್ಟೇ ಈ ಮಹಿಳೆಯ ಬಗ್ಗೆ ಎಸ್‌ಐಟಿಗೆ ತಿಳಿದುಬಂದಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ!

Continue Reading

ಕೊಪ್ಪಳ

SSLC Student Missing : ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆದ ಬಾಲಕ ನಾಪತ್ತೆ!

SSLC Student : ಕೊಪ್ಪಳದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ (Missing Case) ನಾಪತ್ತೆಯಾಗಿದ್ದಾನೆ. ಪರೀಕ್ಷೆ ಬರೆದಿದ್ದ ಬಾಲಕ ಫಲಿತಾಂಶ ಬರುವ ಮುನ್ನವೇ ನಾಪತ್ತೆಯಾಗಿದ್ದು, ಪೊಲೀಸರು (SSLC Student Missing) ಆತಂಕಗೊಂಡಿದ್ದಾರೆ.

VISTARANEWS.COM


on

By

SSLC Student missing In Kopala
Koo

ಕೊಪ್ಪಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Student) ಬರೆದಿದ್ದ ಬಾಲಕನೊರ್ವ ನಾಪತ್ತೆಯಾಗಿದ್ದಾನೆ. ಎಸ್ಎಸ್ಎಲ್‌ಸಿ ಪರೀಕ್ಷೆಯ (SSLC Student Missing) ಫಲಿತಾಂಶ ಬರುವ ಮುನ್ನವೇ (Missing Case) ಕಾಣೆಯಾಗಿದ್ದಾನೆ.

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಬಾಲಕ ಜಗದೀಶ್‌ ಎಂಬಾತ ಮೇ 7 ರಂದು ಮನೆಯಿಂದ ಹೊರ ಹೋದವನು ವಾಪಸ್‌ ಬಂದಿಲ್ಲ. ರಾತ್ರಿಯಾದರೂ ಬಾರದೆ ಇದ್ದಾಗ ಪೋಷಕರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಇನ್ನೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗಿರುವ ಬಾಲಕ ಫಲಿತಾಂಶಕ್ಕೂ ಮುನ್ನವೇ ನಾಪತ್ತೆಯಾಗಿದ್ದಾನೆ. ಇತ್ತ ಬಾಲಕನನ್ನು ಯಾರಾದರೂ ಅಪಹರಿಸಿರಬಹುದು ಎಂದು ಪಾಲಕರು ಶಂಕಿಸಿದ್ದಾರೆ.

ಸದ್ಯ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ಪೋಷಕರು ದೂರು ನೀಡಿದ್ದಾರೆ. ಪೋಷಕರು ನೀಡಿದ ದೂರಿನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ, ತನಿಖೆಯನ್ನು ನಡೆಸುತ್ತಿದ್ದಾರೆ. ಮನೆಯಿಂದ ಹೊರಟ ಬಾಲಕ ಎಲ್ಲಿ ಹೋಗಿದ್ದಾನೆ ಎಂಬುದನ್ನು ತಿಳಿಯಲು ಪೊಲೀಸರು ಸಿಸಿಟಿವಿ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್‌

ಎಸ್‌ಎಸ್‌ಎಲ್‌ಸಿ ಫೇಲ್‌, ಸರಣಿ ಸಾವಿಗೆ ಮತ್ತೊಂದು ಸೇರ್ಪಡೆ

ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ (SSLC Result 2024) ಬಂದ ಬಳಿಕ ಫೇಲ್ (SSLC fail) ಆದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ (Student self harming) ಮಾಡಿಕೊಳ್ಳುತ್ತಿರುವ ಸುದ್ದಿಗಳು ಆತಂಕ ಮೂಡಿಸುತ್ತಿವೆ. ಫೇಲ್‌ ಆದದ್ದರಿಂದ ನೊಂದುಕೊಂಡು ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರ (chikkaballapur news) ತಾಲ್ಲೂಕಿನ ಗಂಗರೇಕಾಲುವೆ ಗ್ರಾಮದ ಜಿ.ಎನ್ ವೈಷ್ಣವಿ (15) ಮೃತ ವಿದ್ಯಾರ್ಥಿನಿ.

ವೈಷ್ಣವಿ ಮಂಚನಬೆಲೆ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಓದುತ್ತಿದ್ದಳು. ನಿನ್ನೆ ಎಸ್ಎಸ್ಎಲ್‌ಸಿ ಫಲಿತಾಂಶ ಬಂದಿತ್ತು. ಫಲಿತಾಂಶ ನೋಡಿ ತಾನು ಫೇಲ್ ಆಗಿದ್ದಕ್ಕೆ ನೊಂದುಕೊಂಡಿದ್ದಳು ಎಂದು ಗೊತ್ತಾಗಿದೆ. ನಂತರ ಮನೆಯಲ್ಲೇ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈಗಾಗಲೇ ಎಸ್‌ಎಸ್‌ಎಲ್‌ಸಿ 1, 2, 3ರ ಹೊಸ ಪರೀಕ್ಷಾ ಮಾದರಿಯನ್ನು ಪರಿಚಯಿಸಿದೆ. ಇದರ ಕ್ರಮವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿ ಅನುತೀರ್ಣರಾಗಿದ್ದರೆ ಅಥವಾ ಕಡಿಮೆ ಅಂಕ ಪಡೆದು ಜಸ್ಟ್‌ ಪಾಸ್‌ ಆಗಿದ್ದರೆ ಅಂತಹ ವಿದ್ಯಾರ್ಥಿಗಳು ಪರೀಕ್ಷೆ 2ರಲ್ಲಿ ಅಂಕವನ್ನು ಸರಿದೂಗಿಸಿಕೊಳ್ಳಬಹುದಾಗಿದೆ. ಕೇವಲ ಫೇಲ್‌ ಆದವರು, ಕಡಿಮೆ ಅಂಕ ಬಂದವರು ಮಾತ್ರವಲ್ಲ ಹೆಚ್ಚು ಅಂಕ ಗಳಿಸಲು ಯಾವುದೇ ವಿದ್ಯಾರ್ಥಿಯಾದರು ಪರೀಕ್ಷೆ 2 ಹಾಗೂ 3ರಲ್ಲಿ ಹಾಜರಾಗಬಹುದು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದಲೇ ಮುಂದಿನ 1 ತಿಂಗಳಲ್ಲಿ ಪರಿಹಾರ ಬೋಧನೆಯನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಪರೀಕ್ಷೆ 2-3ಕ್ಕೆ ಉತ್ತಮವಾಗಿ ಸಿದ್ಧರಾಗಲು ಸಹಾಯವಾಗುತ್ತದೆ. ಇಷ್ಟನ್ನು ಮನದಟ್ಟು ಮಾಡಿಸಿದ್ದರೂ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

SSLC Result 2024 Failed in SSLC Exam Student suicide in mandya

ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಫೇಲ್‌ ಆದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಖಿಲ್ (16) ನೇಣಿಗೆ ಶರಣಾದ ವಿದ್ಯಾರ್ಥಿ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಿಖಿಲ್, ಫಲಿತಾಂಶ ನೋಡಿ 3 ವಿಷಯದಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಹೊಲಕ್ಕೆ ತೆರಳಿ ಮರವೊಂದಕ್ಕೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪಾಸಾದರೂ ನೇಣು ಹಾಕಿಕೊಂಡು ವಿದ್ಯಾರ್ಥಿನಿ

SSLC Result 2024

ಮಂಡ್ಯ: ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ್ದಾಳೆ. ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್‌ ಆಗಿಬಿಟ್ಟೆ ಎಂದು ತಿಳಿದು ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತಿರ್ಣಗೊಂಡ ವಿದ್ಯಾರ್ಥಿನಿಯೋರ್ವಳು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಜರುಗಿದೆ. ಸೃಷ್ಟಿ ಕಲ್ಲಪ್ಪ ಚೌವ್ಹಾಣ್ (16) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯಾಗಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್‌

Murder case : ಹಣ ಸಹಾಯ ಮಾಡಿದ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಂದಿದ್ದ. ಕೊಲೆ ಮಾಡಿ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿ, ಏನು ತಿಳಿಯದಂತೆ ಸುಮ್ಮನಾಗಿದ್ದ. ಆದರೆ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

VISTARANEWS.COM


on

By

Murder Case in Bengaluru
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನ ಶ್ರೀರಾಂಪುರದ ರೈಲ್ವೆ ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ (Murder case) ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತನ ಗುರುತು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ. ಎಲ್.ಎನ್ ಪುರದ ದಿಲೀಪ್ (34) ಮೃತಪಟ್ಟವನು.

ದಿಲೀಪ್‌ ಬೈಕ್ ಮೆಕ್ಯಾನಿಕ್‌ ಆಗಿದ್ದ. ಇದೇ ತಿಂಗಳ 1ರಂದು ರೈಲ್ವೆ ಸೇತುವೆಯಲ್ಲಿ ಕೊಲೆ ಮಾಡಿದ ಸ್ಥಿತಿಯಲ್ಲಿ ದಿಲೀಪ್‌ನ ಕೊಳತೆ ಶವ ಪತ್ತೆಯಾಗಿತ್ತು. ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದ ಪೊಲೀಸರಿಗೆ ಅಸಲಿ ಕಹಾನಿ ಬಯಲಾಗಿದೆ.

ಇದನ್ನೂ ಓದಿ: Murder case : ತೃತೀಯ ಲಿಂಗಿಯನ್ನು ಕೊಂದ ಮಹಿಳೆ; ಮಗನಿಗೆ ನಾಯಿ ಚೈನ್‌ ಹಾಕಿ ಎಳೆಯುವಾಗ ಸಾವು

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಗೆಳೆಯನಿಂದಲೇ ದಿಲೀಪ್‌ ಕೊಲೆ ಆಗಿದ್ದ. ಗೆಳೆಯ ವಿಠಲ ಅಲಿಯಾಸ್‌ ಪಾಂಡು ಎಂಬಾತ ದಿಲೀಪ್‌ನನ್ನು ಬರ್ಬರವಾಗಿ ಕೊಂದಿದ್ದ. ವಿಠಲ ಮತ್ತು ದಿಲೀಪ್ ಒಂದೇ ಏರಿಯಾದ ನಿವಾಸಿಗಳಾಗಿದ್ದರು. ನಾಲ್ಕು ತಿಂಗಳ ಹಿಂದೆ ದಿಲೀಪ್‌ನಿಂದ 20 ಸಾವಿರ ಹಣವನ್ನು ವಿಠಲ ಪಡೆದಿದ್ದ.

ಬಳಿಕ ಸಾಲದ ಹಣಕ್ಕೆ ಬಡ್ಡಿ ಸೇರಿ 30 ಸಾವಿರ ರೂ. ಆಗಿತ್ತು. ತಿಂಗಳು ಕಳೆದರೂ ವಿಠಲ ಹಣವನ್ನು ಕೊಟ್ಟಿರಲಿಲ್ಲ. ಇತ್ತ ದಿಲೀಪ್‌ ಹಣ ವಾಪಸ್ ಕೊಡುವಂತೆ ಪದೇಪದೆ ವಿಠಲನನ್ನು ಕೇಳುತ್ತಿದ್ದ. ಜತೆಗೆ ಅವಾಚ್ಯ ಶಬ್ಧಗಳಿಂದ ಕುಟುಂಬದವರನ್ನು ನಿಂದಿಸುತ್ತಿದ್ದ. ಇದೇ ವಿಚಾರವಾಗಿ ವಿಠಲ ದಿಲೀಪ್‌ ಮೇಲೆ ಕೋಪಗೊಂಡಿದ್ದ.

ದಿಲೀಪ್‌ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ವಿಠಲ ಹಣ ಕೊಡುವುದಾಗಿ ಹೇಳಿ ಏಪ್ರಿಲ್ 28ರಂದು ಕರೆಸಿಕೊಂಡಿದ್ದ. ನಿರ್ಜನ ಪ್ರದೇಶವಾದ ಓಕಳಿಪುರಂನ ರೈಲ್ವೆ ಸೇತುವೆ ಸಮೀಪ ಭೇಟಿ ಮಾಡಿದ್ದ. ವಿಠಲ ಕೊಲೆ ಮಾಡುವ ಕಾರಣಕ್ಕೆ ಈ ಮೊದಲೇ ತಂದಿದ್ದ ಚಾಕುವಿನಿಂದ ದಿಲೀಪ್‌ಗೆ ಇರಿದು ಕೊಲೆ ಮಾಡಿ ಪರಾರಿ ಆಗಿದ್ದ.

ಕೊಲೆಯಾದ ಸ್ಥಳದಲ್ಲಿ ಯಾರು ಓಡಾಡದ ಕಾರಣಕ್ಕೆ ಮೂರು ದಿನಗಳ ಕಾಲ ದಿಲೀಪ್ ಮೃತ ದೇಹ ಅಲ್ಲೆ ಕುಳಿಯುತ್ತಿತ್ತು. ನಂತರ ಮೇ 1ರಂದು ಸ್ಥಳೀಯರ ಮಾಹಿತಿ ಮೇರೆಗೆ ಮೃತದೇಹ ಪತ್ತೆಯಾಗಿತ್ತು. ಅದನ್ನು ಕಂಡ ಮೃತ ವಿಠಲನ ತಮ್ಮನ ಗೆಳೆಯ ಮಾಹಿತಿ ನೀಡಿದ್ದ. ಈತನ ಮಾಹಿತಿ ಆಧರಿಸಿ ಮೃತನ ಸಹೋದರ ಠಾಣೆಗೆ ದೂರು ನೀಡಿದ್ದ. ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿತ್ತು. ಸದ್ಯ ಶ್ರೀರಾಮಪುರಂ ಪೊಲೀಸರಿಂದ ಆರೋಪಿ ವಿಠಲನನ್ನು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prajwal Revanna Case
ಕರ್ನಾಟಕ46 seconds ago

Prajwal Revanna Case: ದೇವರಾಜೇಗೌಡ ಹುಚ್ಚುನಾಯಿ, ನಕಲಿ ವಕೀಲ ಎಂದ ಶಿವರಾಮೇಗೌಡ

Hassan Pen Drive Case
ಕರ್ನಾಟಕ7 mins ago

Hassan Pen Drive Case: ಅಶ್ಲೀಲ ವಿಡಿಯೊ ಪ್ರಕರಣ; ಪೆನ್‌ಡ್ರೈವ್ ಲೀಕ್‌ ಮಾಡಿದವರಿಗೂ ಸಂಕಷ್ಟ?

SSLC Student missing In Kopala
ಕೊಪ್ಪಳ26 mins ago

SSLC Student Missing : ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆದ ಬಾಲಕ ನಾಪತ್ತೆ!

Rahul Gandhi
ದೇಶ33 mins ago

Rahul Gandhi: ನರೇಂದ್ರ ಮೋದಿ ಪ್ರಧಾನಿಯಲ್ಲ, ಮಹಾರಾಜ ಎಂದ ರಾಹುಲ್ ಗಾಂಧಿ

Murder Case in Bengaluru
ಬೆಂಗಳೂರು45 mins ago

Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್‌

Prajwal Revanna Case
ಕರ್ನಾಟಕ60 mins ago

Prajwal Revanna Case: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ!

Food Poisoning
ಚಿತ್ರದುರ್ಗ1 hour ago

Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Gold Rate Today
ಕರ್ನಾಟಕ1 hour ago

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

Heavy Rain
ಕರ್ನಾಟಕ2 hours ago

Heavy Rain: ಧಾರಾಕಾರ ಮಳೆಯಿಂದ ಮನೆಗೆ ನುಗ್ಗಿದ ನೀರು; ಮರ ಉರುಳಿ ವಾಹನಗಳು ಜಖಂ

Murder case in Bengaluru rural
ಬೆಂಗಳೂರು ಗ್ರಾಮಾಂತರ2 hours ago

Murder case : ತಡರಾತ್ರಿ ಹರಿದ ನೆತ್ತರು; ಕತ್ತು ಸೀಳಿ ಯುವಕನ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ22 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ24 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ1 day ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌