Site icon Vistara News

Bowler Celebration : ಸೂಪರ್​ ಸಂಭ್ರಮ; ವೆಸ್ಟ್​ ಇಂಡೀಸ್ ಬೌಲರ್​​ನ ಸೆಲೆಬ್ರೆಷನ್​ ವಿಡಿಯೊ ಫುಲ್​ ವೈರಲ್​

Kevin Sinclair

ಬ್ರಿಸ್ಬೇನ್​: ಇಲ್ಲಿನ ಗಬ್ಬಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್​ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಕೆವಿನ್ ಸಿಂಕ್ಲೇರ್ ಪದಾರ್ಪಣೆ ಮಾಡಿದ್ದಾರೆ. ಪಂದ್ಯದಲ್ಲಿ ಕೆವಿನ್ ಸಿಂಕ್ಲೇರ್ ಬ್ಯಾಟಿಂಗ್ ಫೀಲ್ಡಿಂಗ್ ಮತ್ತು ಬೌಲಿಂಗ್​ನಲ್ಲಿ ಪರಿಣಾಮಕಾರಿ ಕೊಡುಗೆಗಳನ್ನು ನೀಡಿದರು. ಪಂದ್ಯದ ಸಮಯದಲ್ಲಿ ತಮ್ಮ ಆಲ್​ರೌಂಡ್​ ಕೌಶಲಗಳನ್ನು ಪ್ರದರ್ಶಿಸಿದರು. ಆದರೆ, ಅವರ ಸಂಭ್ರಮವೇ (Bowler Celebration) ಈ ಪಂದ್ಯದ ಹೈಲೈಟ್ ಎನಿಸಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿದೆ. ಪ್ರವಾಸಿ ತಂಡವು ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಸ್ಪರ್ಧಾತ್ಮಕ 311 ರನ್ ಗಳಿಗೆ ಆಲೌಟ್ ಆಯಿತು. ಕೆವಿನ್ ಸಿಂಕ್ಲೇರ್ 98 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್​ನೊಂದಿಗೆ 50 ರನ್ ಗಳಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರ ಸಂಭ್ರಮವೇ ಸುದ್ದಿಯಾಯಿತು.

ಸಿಂಕ್ಲೇರ್ ಫೀಲ್ಡಿಂಗ್​ನಲ್ಲಿ ಅದ್ಭುತ ಕ್ಯಾಚ್ ಪಡೆದು ಮಾರ್ನಸ್ ಲಾಬುಶೇನ್ ಅವರನ್ನು ಔಟ್ ಮಾಡಿದ್ದಾರೆ. ಲಾಬುಶೇನ್​ ಕೇವಲ ಮೂರು ರನ್ ಗಳಿಸಿ ಔಟಾದರು. ತಂಡ 54 ರನ್ ಗಳಿಗೆ ಐದನೇ ವಿಕೆಟ್ ಕಳೆದುಕೊಂಡಿದೆ. ಏತನ್ಮಧ್ಯೆ ಇನ್ನೊಂದು ತುದಿಯಿಂದ ವಿಕೆಟ್ ಬೀಳುತ್ತಿದ್ದರೂ ಉಸ್ಮಾನ್ ಖವಾಜಾ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು. ಆರನೇ ವಿಕೆಟ್​ಗೆ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅಲೆಕ್ಸ್ ಕ್ಯಾರಿ (49 ಎಸೆತಗಳಲ್ಲಿ 65 ರನ್) ಅವರೊಂದಿಗೆ ನಿರ್ಣಾಯಕ ಜೊತೆಯಾಟ ರಚಿಸಿದರು.

ಉಸ್ಮಾನ್ ಖವಾಜಾ 75 ರನ್ ಗಳಿಸುವ ಮೊದಲು ಕೆವಿನ್ ಸಿಂಕ್ಲೇರ್ ಅವರನ್ನು ಔಟ್ ಮಾಡಿದರು. ಅವರು ತಮ್ಮ ಮೊದಲ ಟೆಸ್ಟ್ ವಿಕೆಟ್ ಪಡೆದ ತಕ್ಷ ಬ್ಯಾಕ್​ ಫ್ಲಿಪ್​ನೊಂದಿಗೆ ಸಂಭ್ರಮಾಚರಣೆ ಮಾಡಿದರು. ಅದರ ವಿಡಿಯೊ ಇಲ್ಲಿದೆ.

ಕೆವಿನ್ ಸಿಂಕ್ಲೇರ್ ತಮ್ಮ ಮೊದಲ ಟೆಸ್ಟ್ ವಿಕೆಟ್ ಪಡೆದರು ಮತ್ತು ಅವರ ಸಂಭ್ರಮ ಹೇಗಿದೆ ಎಂದು ವಿಡಿಯೊಗೆ ಶೀರ್ಷಿಕೆ ಬರೆಯಲಾಗಿದೆ.

ಇದನ್ನೂ ಓದಿ : Ind vs Eng : ಟೆಸ್ಟ್​ ಪಂದ್ಯದ ನಡುವೆ ಸುದ್ದಿಗೆ ಗ್ರಾಸವಾದ ಟಾಯ್ಲೆಟ್​ !

ಮೊದಲ ಪಂದ್ಯದಲ್ಲಿ ಜಯ

ಅಡಿಲೇಡ್ ಓವಲ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ವೆಸ್ಟ್ ಇಂಡೀಸ್ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ತವರು ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು ಮತ್ತು ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಚಕ್ರದಲ್ಲಿ ನಿರ್ಣಾಯಕ ಅಂಕಗಳನ್ನು ಗಳಿಸಿತು.

ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ವೈಟ್​ವಾಶ್​ ಆಗಿತ್ತು. ಆಸ್ಟ್ರೇಲಿಯಾ ತಂಡವು ಬೇಸಿಗೆಯಲ್ಲಿ ಎಲ್ಲಾ ಐದು ಪಂದ್ಯಗಳಿಗೆ ಒಂದೇ ರೀತಿಯ ಬೌಲಿಂಗ್ ದಾಳಿಯನ್ನು ಆರಿಸಿಕೊಂಡಿತು. ಪ್ರಸ್ತುತ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಆಸೀಸ್​ ಅಗ್ರಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ನಂತರದ ಸ್ಥಾನದಲ್ಲಿದೆ.

Exit mobile version