Site icon Vistara News

Land Grabbing: ಭೂ ಕಬಳಿಕೆ; ರೋಹಿಣಿ ಸಿಂಧೂರಿ ಸೇರಿ 6 ಮಂದಿ ವಿರುದ್ಧ ಬಾಲಿವುಡ್‌ ಖ್ಯಾತ ಗಾಯಕ ದೂರು

Land Grabbing

ಬೆಂಗಳೂರು: ಭೂ ಕಬಳಿಕೆ (Land Grabbing) ಮಾಡಿದ್ದಾರೆ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಸೇರಿ 6 ಮಂದಿ ವಿರುದ್ಧ ಬಾಲಿವುಡ್‌ನ ಖ್ಯಾತ ಗಾಯಕ ಲಕ್ಕಿ ಅಲಿ(Lucky Ali), ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಲಹಂಕ ನ್ಯೂ ಟೌನ್ ಬಳಿ, ಟ್ರಸ್ಟ್‌ಗೆ ಸೇರಿರುವ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಕಿ ಅಲಿ ಆರೋಪಿಸಿದ್ದು, ಈ ಬಗ್ಗೆ ದೂರಿನ ಪ್ರತಿಯನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ಸಹಾಯಕ ಪೊಲೀಸ್‌ ಕಮಿಷನರ್‌ ಮಂಜುನಾಥ್‌, ಯಲಹಂಕ ನ್ಯೂ ಟೌನ್‌ ಪಿಎಸ್‌ಐ, ತಾಲೂಕು ಸರ್ವೇಯರ್‌ ಮನೋಹರ್‌, ಸುಧೀರ್‌ ರೆಡ್ಡಿ ಹಾಗೂ ಮಧಸೂಧನ್‌ ರೆಡ್ಡಿ ಸೇರಿ ಮಂದಿ ವಿರುದ್ಧ ದೂರು ದಾಖಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ 2022ರಲ್ಲಿಯೂ ಲಕ್ಕಿ ಅಲಿ ದೂರು ಸಲ್ಲಿಸಿದ್ದರು. ತಮ್ಮ ಟ್ರಸ್ಟ್‌ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ರೋಹಿಣಿ ಸಿಂಧೂರಿ ಸಹಕಾರ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಯಲಹಂಕ ನ್ಯೂಟೌನ್ ಬಳಿ ಲಕ್ಕಿ ಅಲಿ ಟ್ರಸ್ಟ್ ಇದ್ದು, ಭೂ ಕಬಳಿಕೆಯಲ್ಲಿ ಯಲಹಂಕ ನ್ಯೂ ಟೌನ್ ಠಾಣೆಯ ಎಸಿಪಿ ಮಂಜುನಾಥ್, ತಾಲೂಕು ಸರ್ವೇ ಅಧಿಕಾರಿ ಮನೋಹನ್ ಶಾಮೀಲಾಗಿದ್ದಾರೆ ಎಂದು ದೂರು ನೀಡಿದ್ದಾರೆ. ರೋಹಿಣಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತಕ್ಕೆ ಗಾಯಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಚಿನ್ನದಂಗಡಿ ಮಾಲೀಕನಿಗೆ ಚಾಕು ಇರಿದು ಕಳ್ಳತನ ಮಾಡಿದ ಬುರ್ಖಾಧಾರಿ ವ್ಯಕ್ತಿ; ಅಂಗಡಿ ಮಾಲೀಕರೇ ಎಚ್ಚರ!

ಹಲಸಿನ ಮರ ತೆರವಿಗೂ ಕೊಡಬೇಕು ಗರಿ ಗರಿ ನೋಟು; ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ

ಲಂಚಕೋರರು

ದಾವಣಗೆರೆ: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ ನೀಡಿತ್ತು. ಪ್ರತ್ಯೇಕ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Raid) ದಾಳಿ ನಡೆಸಿ, ಲಂಚಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಹಾಗೂ ಎಸ್‌ಡಿಎ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಬಿ.‌ಅನ್ನಪೂರ್ಣ ಹಾಗೂ ಎಸ್‌ಡಿಎ ಲಕ್ಕಪ್ಪ ವೈ ಇವರಿಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ದಾವಣಗೆರೆ ನಗರದ ಬೇತೂರು ರಸ್ತೆಯ ನಿವಾಸಿ ಚಂದ್ರಶೇಖರ್ ಎಂಬುವರಿಂದ‌‌ ‌ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಹಿಟ್ಟಿನ ಗಿರಣಿ ಮನೆಗೆ ಇ- ಸ್ವತ್ತು ಮಾಡಿ ಕೊಡಲು ಚಂದ್ರಶೇಖರ್‌ ಬಳಿ 15 ಸಾವಿರ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುವಾಗಲೇ ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂಎಸ್ ಕೌಲಾಪೂರೆ ನೇತೃತ್ವದ ತಂಡ ದಾಳಿ ಮಾಡಿದೆ.

ಇತ್ತ ಉಡುಪಿಯಲ್ಲಿ ಅರಣ್ಯಾಧಿಕಾರಿ ಮತ್ತು ಅರಣ್ಯ ವೀಕ್ಷಕನೊಬ್ಬ ಹಲಸಿನ ಮರ ತೆರವುಗೊಳಿಸಲು ಲಂಚ ಕೇಳಿದ ಆರೋಪ ಕೇಳಿ ಬಂದಿದೆ. ಮಹಮ್ಮದ್ ಅನ್ವರ್ ಹಸನ್ ಎಂಬುವವರು ಹಲಸಿನ ಮರ ತೆರವು ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ ತೆರವಿಗೆ ಅನುಮತಿಸಲು ಬೈಂದೂರು ವಲಯದ ಉಪವಲಯ ಅರಣ್ಯ ಅಧಿಕಾರಿ ಬಂಗಾರಪ್ಪ ಮತ್ತು ಅರಣ್ಯ ವೀಕ್ಷಕ ವಿನಾಯಕ 4000 ರೂ. ಲಂಚ ಕೇಳಿದ್ದರು.

ಇದನ್ನೂ ಓದಿ: Actor Darshan: ಎಚ್‌ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದನೆ; ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ 2 ದೂರು

ಲಂಚ ಸ್ವೀಕರಿಸುವಾಗಲೇ ಆರೋಪಿಗಳು ರೆಡ್‌ ಹ್ಯಾಂಡ್‌ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳ ಪೈಕಿ ಬಂಗಾರಪ್ಪನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರೆ, ಮತ್ತೋರ್ವ ಆರೋಪಿ ವಿನಾಯಕ ಪರಾರಿ ಆಗಿದ್ದಾನೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ಎಂ.ಎ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಡಿವೈಎಸ್ಪಿ ಪ್ರಕಾಶ್ ಕೆ ಸಿ, ಪೊಲೀಸ್ ನಿರೀಕ್ಷಕ ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Exit mobile version