Site icon Vistara News

LIC News: ಎಲ್‌ಐಸಿ ಈಗ ನಂಬರ್‌ ಒನ್‌ ಜಾಗತಿಕ ವಿಮೆ ಬ್ರಾಂಡ್!‌

LIC

LIC Offices To Remain Open on March 30, 31

ಹೊಸದಿಲ್ಲಿ: ಭಾರತದ ಬೃಹತ್‌ ಜೀವವಿಮೆ ಸಂಸ್ಥೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation- ಎಲ್‌ಐಸಿ) ಜಾಗತಿಕವಾಗಿ ಪ್ರಬಲ ವಿಮಾ ಬ್ರಾಂಡ್ (insurance brand) ಆಗಿ ಹೊರಹೊಮ್ಮಿದೆ. ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ (Brand Finance Insurance) ಸಂಸ್ಥೆಯ 2024ರ ವರದಿ ಇದನ್ನು ತಿಳಿಸಿದೆ.

LICಯ ಬ್ರಾಂಡ್ ಮೌಲ್ಯವು 9.8 ಶತಕೋಟಿ ಡಾಲರ್‌ಗಳಲ್ಲಿ ಸ್ಥಿರವಾಗಿದೆ. ಜೊತೆಗೆ ಬ್ರಾಂಡ್ ಸಾಮರ್ಥ್ಯದ ಸೂಚ್ಯಂಕ ಸ್ಕೋರ್ 88.3ರಲ್ಲಿದ್ದು, AAA ಬ್ರಾಂಡ್ ಸಾಮರ್ಥ್ಯದ ರೇಟಿಂಗ್ ಅನ್ನು ಹೊಂದಿದೆ ಎಂದು ವರದಿ ಹೇಳಿದೆ.

LIC ನಂತರದ ಶ್ರೇಯಾಂಕಗಳ ಪ್ರಕಾರ ಕ್ಯಾಥೆ ಲೈಫ್ ಇನ್ಶುರೆನ್ಸ್ ಎರಡನೇ ಪ್ರಬಲ ಬ್ರಾಂಡ್ ಆಗಿದೆಯಂತೆ. ಇದು ಬ್ರಾಂಡ್ ಮೌಲ್ಯದಲ್ಲಿ 4.9 ಶತಕೋಟಿ ಡಾಲರ್‌ ಇದ್ದು, 9 ಶೇಕಡಾ ಹೆಚ್ಚಳ ಕಂಡಿದೆ. NRMA ಇನ್ಶುರೆನ್ಸ್ ನಂತರದ ಸ್ಥಾನದಲ್ಲಿದ್ದು, 82 ಸೂಚ್ಯಂಕ ಹಾಗೂ 1.3 ಶತಕೋಟಿ ಡಾಲರ್‌ ಬ್ರಾಂಡ್ ಮೌಲ್ಯ ಹೊಂದಿದೆ.

ಈ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಾಂತಿ, “ನಮ್ಮ ಗ್ರಾಹಕರ ಅಗತ್ಯಗಳ ಬಗ್ಗೆ ನಾವು ಜಾಗೃತರಾಗಿದ್ದೇವೆ. ಅವರ ವಿಮೆ ಮತ್ತು ಹೂಡಿಕೆಯ ಅಗತ್ಯಗಳನ್ನು ಪೂರೈಸಲು ನಾವು ನಿರಂತರವಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಗ್ರಾಹಕರ ಸೇವೆಯತ್ತ ತೀವ್ರವಾಗಿ ಗಮನಹರಿಸುತ್ತೇವೆ ಮತ್ತು ಎಲ್ಲರಿಗೂ ಮೌಲ್ಯವರ್ಧಿತ ಸೇವೆಯನ್ನು ನೀಡುತ್ತೇವೆ” ಎಂದಿದ್ದಾರೆ.

2024ರ ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್-100 ವರದಿಯಲ್ಲಿ ಪ್ರಬಲ ವಿಮಾ ಬ್ರಾಂಡ್‌ಗಳ ಪಟ್ಟಿಯಲ್ಲಿ ನಂ.1ನೇ ಸ್ಥಾನವನ್ನು ಗಳಿಸುತ್ತಿರುವುದು ಹೆಮ್ಮೆ. ಇದು ಕಂಪನಿಯ ಮೇಲಿನ ಜನರ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದ್ದಾರೆ.

ಚೀನಾದ ವಿಮಾ ಬ್ರಾಂಡ್‌ಗಳು ಜಾಗತಿಕ ಶ್ರೇಯಾಂಕದಲ್ಲಿ ಪ್ರಾಬಲ್ಯವನ್ನು ಕಾಯ್ದುಕೊಂಡಿವೆ. ಪಿಂಗ್ ಆನ್ ಬ್ರಾಂಡ್ ಮೌಲ್ಯದಲ್ಲಿ 4 ಶೇಕಡಾ ಹೆಚ್ಚಳದೊಂದಿಗೆ USD 33.6 ಶತಕೋಟಿಗೆ ಮುನ್ನಡೆ ಸಾಧಿಸಿದೆ. ನಂತರ ಚೀನಾ ಲೈಫ್ ಇನ್ಶುರೆನ್ಸ್ ಮತ್ತು CPIC ಅನುಕ್ರಮವಾಗಿ 3ನೇ ಮತ್ತು 5ನೇ ಸ್ಥಾನಗಳನ್ನು ಉಳಿಸಿಕೊಂಡಿವೆ.

ಜರ್ಮನಿಯ ಅಲಿಯಾನ್ಸ್ ಮತ್ತು ಫ್ರಾನ್ಸ್‌ನ ಎಎಕ್ಸ್‌ಎ 2 ಮತ್ತು 4ನೇ ಸ್ಥಾನಗಳಲ್ಲಿ ಅಗ್ರ 5 ಅನ್ನು ಪೂರ್ಣಗೊಳಿಸಲು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ.

ಬ್ರಾಂಡ್ ಮೌಲ್ಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಅನುಭವಿಸುತ್ತಿರುವ ಸಂಸ್ಥೆಗಳಲ್ಲಿ, ಆಸ್ಟ್ರೇಲಿಯಾದ NRMA ವಿಮೆಯು 82 ಶೇಕಡಾ ಹೆಚ್ಚಳದೊಂದಿಗೆ USD 1.3 ಶತಕೋಟಿ ಮೌಲ್ಯವನ್ನು ಕಾಣಿಸಿದೆ. ಜೊತೆಗೆ ಡೆನ್ಮಾರ್ಕ್‌ನ Tryg ಜೊತೆಗೆ USD 1.6 ಶತಕೋಟಿಗೆ 66ರಷ್ಟು ಏರಿಕೆ ಕಂಡಿದೆ.

LIC ಇಂಡಿಯಾ FY23ರಲ್ಲಿ 39,090 ಕೋಟಿ ರೂಪಾಯಿಗಳ ಮೊದಲ ವರ್ಷದ ಪ್ರೀಮಿಯಂ ಸಂಗ್ರಹವನ್ನು ಸಾಧಿಸಿದೆ. ಆದರೆ SBI ಲೈಫ್ ಇನ್ಶುರೆನ್ಸ್ ಮತ್ತು HDFC ಲೈಫ್ ಇನ್ಶುರೆನ್ಸ್ ಕ್ರಮವಾಗಿ 15,197 ಕೋಟಿ ಮತ್ತು 10,970 ಕೋಟಿ ರೂಪಾಯಿಗಳ ಹೊಸ ವ್ಯವಹಾರ ಪ್ರೀಮಿಯಂ ಸಂಗ್ರಹಗಳೊಂದಿಗೆ ಖಾಸಗಿ ವಲಯವನ್ನು ಮುನ್ನಡೆಸಿದೆ.

ಇತ್ತೀಚಿನ ಬೆಳವಣಿಗೆಗಳಲ್ಲಿ, LIC ಉದ್ಯೋಗಿಗಳಿಗೆ 17 ಪ್ರತಿಶತ ವೇತನ ಪರಿಷ್ಕರಣೆಯನ್ನು ಸರ್ಕಾರವು ಅನುಮೋದಿಸಿದೆ. ಇದು 110,000 ಉದ್ಯೋಗಿಗಳಿಗೆ ಪ್ರಯೋಜನವಾಗಿದೆ. LICಯ ಷೇರುಗಳು ಇತ್ತೀಚೆಗೆ ರೂ. 1,175ರ ಸಾರ್ವಕಾಲಿಕ ಎತ್ತರವನ್ನು ತಲುಪಿದವು. ಇದು ಭಾರತದ ಅತ್ಯಂತ ಮೌಲ್ಯಯುತವಾದ PSU ಕಂಪನಿಯಾಗಿ ಮತ್ತು ಐದನೇ ಅತ್ಯಂತ ಮೌಲ್ಯಯುತವಾದ ಭಾರತೀಯ ಲಿಸ್ಟೆಡ್ ಕಂಪನಿಯಾಗಿ ಅದರ ಸ್ಥಾನಮಾನವನ್ನು ಮರಳಿ ಪಡೆದುಕೊಂಡಿದ್ದು, ಮಾರುಕಟ್ಟೆ ಮೌಲ್ಯಮಾಪನದಲ್ಲಿ SBI ಅನ್ನು ಮೀರಿಸಿದೆ.

ಇದನ್ನೂ ಓದಿ: LIC Employees: ಎಲ್‌ಐಸಿ ನೌಕರರಿಗೆ ಕೇಂದ್ರ ಗುಡ್‌ನ್ಯೂಸ್;‌ ಇಷ್ಟು ಪರ್ಸೆಂಟ್‌ ಸಂಬಳ ಹೆಚ್ಚಳ

Exit mobile version