Site icon Vistara News

Lok Sabha Election 2024: ಇಂದು ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

Lok Sabha Election

ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ (Voting) ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ದಕ್ಷಿಣ ಕರ್ನಾಟಕದ ಉಡುಪಿ – ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು – ಕೊಡಗು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ.

30 ಸಾವಿರದ 602 ಮತಗಟ್ಟೆ

14 ಕ್ಷೇತ್ರಗಳಲ್ಲಿ ಒಟ್ಟು 2 ಕೋಟಿ 88 ಲಕ್ಷದ 19 ಸಾವಿರದ 342 ಮತದಾರರಿದ್ದು, ಅದರಲ್ಲಿ ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರು 5,99,444 ಮಂದಿ ಇದ್ದಾರೆ. 1 ಕೋಟಿ 44 ಲಕ್ಷದ 28 ಸಾವಿರದ 99 ಪುರುಷ ಮತದಾರರಿದ್ದಾರೆ. ಹಾಗೆಯೇ 1 ಕೋಟಿ 43 ಲಕ್ಷದ 88 ಸಾವಿರದ 176 ಮಹಿಳೆಯರು ಮತದಾನದ ಮಾಡಲಿದ್ದಾರೆ. 3,067 ತೃತೀಯಲಿಂಗಿಗಳು ಇದ್ದಾರೆ. 30 ಸಾವಿರದ 602 ಮತಗಟ್ಟೆ ತೆರೆಯಲಾಗಿದ್ದು, 4 ಲಕ್ಷ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇದ್ರ ಜೊತೆಗೆ 5,000 ಮೈಕ್ರೋ ಅಬ್ಸರ್ವರ್‌ಗಳ ನೇಮಕ ಮಾಡಲಾಗಿದ್ದು, 50,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನು 65 ಅರೆಸೇನಾ ಪಡೆ ತುಕಡಿ ಹಾಗೂ ಸಶಸ್ತ್ರ ಪೊಲೀಸ್ ಪಡೆಯೂ ಕಣ್ಗಾವಲು ಇರಿಸಲಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಕೋಲಾರ, ಚಾಮರಾಜನಗರ ಹಾಗೂ ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರಗಳಾಗಿವೆ.

ಬೆಂಗಳೂರು ಉತ್ತರ ಕ್ಷೇತ್ರ 2,911 ಮತಗಟ್ಟೆಗಳನ್ನು ಹೊಂದಿದ್ದು, ಇದು ಅತ್ಯಧಿಕ ಆಗಿದೆ. ಅದಲ್ಲದೇ ಈ ಕ್ಷೇತ್ರದಲ್ಲಿ 32.1 ಲಕ್ಷ ಮತದಾರರು ಇದ್ದಾರೆ. 10 ಕ್ಷೇತ್ರಗಳಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದು, ಎರಡು ಇವಿಎಂಗಳನ್ನು ಬಳಸಲಾಗುತ್ತಿದೆ. ಇನ್ನು, ಮತದಾನದ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಅನೇಕ ಜಾಗೃತಿಗಳನ್ನು, ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದು, ಈ ಬಾರಿಯಾದರೂ ಮತದಾನದ ಪ್ರಮಾಣ ಹೆಚ್ಚಳ ಆಗುತ್ತಾ ನೋಡಬೇಕಿದೆ. 2019ರಲ್ಲಿ ಶೇ.68.8ರಷ್ಟು ಮತದಾನ ರಾಜ್ಯದಲ್ಲಿ ಆಗಿತ್ತು.

ವಿಶೇಷ ಚೇತನರಿಗೆ ಉಚಿತ ಬೈಕು, ಆಟೋ, ಟ್ಯಾಕ್ಸಿ ಸೇವೆ

ಏಪ್ರಿಲ್‌‌ 26ಕ್ಕೆ ಮತದಾನ ನಡೆಯುವ 14 ಕ್ಷೇತ್ರಗಳ ವ್ಯಾಪ್ತಿಗಳಲ್ಲೂ ಸರ್ಕಾರಿ ರಜೆ ಘೋಷಣೆಯಾಗಿದೆ. ಜೊತೆಗೆ ಬೆಂಗಳೂರಲ್ಲಿ ಮತದಾನ ಮುಗಿಸಿ ಊರಿನ ಕಡೆ ಹೊರಡೋರಿಗೆ ಅನುಕೂಲ ಆಗಲಿ ಅಂತ ನಮ್ಮ ಮೆಟ್ರೋ ರೈಲು ಸೇವೆ ರಾತ್ರಿ 12ರವರೆಗೂ ವಿಸ್ತರಣೆ ಮಾಡಿದ್ದಾರೆ. ಇನ್ನು ಮತದಾನಕ್ಕೆ ತೆರಳುವ ವಿಶೇಷ ಚೇತನರಿಗೆ ಉಚಿತ ಬೈಕು, ಆಟೋ, ಟ್ಯಾಕ್ಸಿ ಸೇವೆ ಜೊತೆಗೆ ಹಿರಿಯ ನಾಗರಿಕರಿಗೂ ರ್ಯಾಪಿಡೋದಿಂದ ಉಚಿತ ಟ್ಯಾಕ್ಸಿ ಸೇವೆ ಘೋಷಣೆಯಾಗಿದೆ. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ 68.81% ಮತದಾನ ಆಗಿತ್ತು.. ಈ ವರ್ಷ ಗರಿಷ್ಠ ಮತದಾನ ಮಾಡಿ ಅಂತ ಆಯೋಗ ಮನವಿ ಮಾಡಿದೆ.

ಇದನ್ನೂ ಓದಿ: Lok Sabha Election 2024: ಮುಸ್ಲಿಂ ಮೀಸಲಾತಿ ಬಗ್ಗೆ ಮೋದಿ ಹೇಳಿದ್ದು ಸುಳ್ಳು: ದಿನೇಶ್ ಗುಂಡೂರಾವ್

Exit mobile version