Site icon Vistara News

Lok Sabha Election 2024: ಇಂದು ರಾಜ್ಯದಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಸಿಗಲಿದೆ ಟಿಕೆಟ್?

bjp list

bjp list

ಹೊಸದಿಲ್ಲಿ: ಲೋಕಸಭೆ ಚುನಾವಣೆಯ (Lok Sabha Election 2024) ರಾಜ್ಯದ ಸುಮಾರು 18 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ (BJP candidates) ಮೊದಲ ಪಟ್ಟಿಯನ್ನು (BJP List) ಇಂದು ಬಿಜೆಪಿ ಹೈಕಮಾಂಡ್ (BJP High command) ಬಿಡುಗಡೆ‌ ಮಾಡಲಿದೆ ಎಂದು ಗೊತ್ತಾಗಿದೆ. ನಿನ್ನೆ ದಿಲ್ಲಿಯಿಂದ ಮರಳಿದ್ದ ವಿಪಕ್ಷ ನಾಯಕ ಆರ್.‌ ಅಶೋಕ್‌ (R Ashok) ಕೂಡ ಈ ಸುಳಿವು ನೀಡಿದ್ದರು.

ಸದ್ಯ ಈ ಪಟ್ಟಿಯಲ್ಲಿ ಯಾವೆಲ್ಲ ಲೋಕಸಭಾ ಕ್ಷೇತ್ರಗಳಿವೆ, ಯಾರಿಗೆ ಟಿಕೆಟ್‌ ಸಿಗಲಿದೆ, ಯಾರ ಕೈ ತಪ್ಪಲಿದೆ ಎಂಬ ಕುತೂಹಲ ಮತದಾರರಲ್ಲಿ ಮೂಡಿದೆ. ಬೆಂಗಳೂರು ಉತ್ತರ, ದಕ್ಷಿಣ ಕನ್ನಡ ಹಾಗೂ ಮೈಸೂರಿನಲ್ಲಿ ಈಗಾಗಲೇ ಇರುವ ಸಂಸದರಿಗೆ ಟಿಕೆಟ್‌ ಕೈತಪ್ಪಲಿದೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಇನ್ನುಳಿದಂತೆ ನಿರೀಕ್ಷಿತ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ಬೆಂಗಳೂರು ಕೇಂದ್ರ – ಪಿಸಿ ಮೋಹನ್
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಬೆಂಗಳೂರು ಗ್ರಾಮಾಂತರ – ಸಿ.ಎನ್ ಮಂಜುನಾಥ್
ಶಿವಮೊಗ್ಗ – ರಾಘವೇಂದ್ರ
ಹಾವೇರಿ – ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ ಧಾರವಾಡ – ಪ್ರಹ್ಲಾದ ಜೋಶಿ
ಬೆಳಗಾವಿ – ಜಗದೀಶ್ ಶೆಟ್ಟರ್
ಚಿಕ್ಕೋಡಿ – ರಮೇಶ್ ಕತ್ತಿ
ಕೊಪ್ಪಳ – ಕರಡಿ ಸಂಗಣ್ಣ
ಬಿಜಾಪುರ – ಗೋವಿಂದ ಕಾರಜೋಳ
ಕಲ್ಬುರ್ಗಿ – ಉಮೇಶ್ ಜಾದವ್
ಬಳ್ಳಾರಿ – ಶ್ರೀರಾಮುಲು
ಚಿತ್ರದುರ್ಗ – ನಾರಾಯಣ ಸ್ವಾಮಿ
ತುಮಕೂರು – ಸೋಮಣ್ಣ
ಚಿಕ್ಕಬಳ್ಳಾಪುರ – ಡಾ.ಕೆ ಸುಧಾಕರ್

ಪೆಂಡಿಂಗ್ ಕ್ಷೇತ್ರಗಳು

ಬೆಂಗಳೂರು ಉತ್ತರ
ಮೈಸೂರು
ಚಿಕ್ಕಮಗಳೂರು ಉಡುಪಿ
ದಕ್ಷಿಣ ಕನ್ನಡ
ಉತ್ತರ ಕನ್ನಡ
ಬಾಗಲಕೋಟೆ
ಬೀದರ್
ದಾವಣಗೆರೆ
ರಾಯಚೂರು

ಯಾರ್ಯಾರಿಗೆ ಟಿಕೆಟ್ ಮಿಸ್ ಆಗಲಿದೆ ಎಂಬುದರ ಮೇಲೆ ಬಂಡಾಯ ಶುರುವಾಗಲಿದೆಯೇ ಇಲ್ಲವೇ ಎಂಬುದು ತಿಳಿಯಲಿದೆ. ಆದರೆ ಕೆಲವರು ಬಂಡೇಳುವುದಂತೂ ಖಚಿತವಾಗಿದ್ದು, ಬಿಜೆಪಿ ಟಿಕೆಟ್‌ ಮಿಸ್‌ ಆದರೆ ಕಾಂಗ್ರೆಸ್‌ನತ್ತ ಹೋಗಲು ಸ್ಕೆಚ್‌ ಹಾಕಿದ್ದಾರೆ. ಟಿಕೆಟ್ ಮಿಸ್ ಆಗುವವರ ಮೇಲೆ ಕಾಂಗ್ರೆಸ್ ಕೂಡ ಕಣ್ಣು ಇಟ್ಟಿದೆ.

ಬೆಂಗಳೂರು ಉತ್ತರಕ್ಕೆ ಪ್ರಬಲ ಅಭ್ಯರ್ಥಿಯ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ. ಹೀಗಾಗಿ ಸದಾನಂದ ಗೌಡರಿಗೆ ಗಾಳ ಹಾಕುವಂತೆ ಕೈ ನಾಯಕರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಒತ್ತಾಯವಿದೆ. ಆದರೆ ಜಗದೀಶ ಶೆಟ್ಟರ್‌ಗೆ ಆಶ್ರಯ ಕೊಟ್ಟ ಪರಿಣಾಮ ಏನಾಯಿತು ಎಂಬ ತರ್ಕವೂ ಇದ್ದು, ಶೆಟ್ಟರ್ ರೀತಿಯಲ್ಲಿ ಇವರು ವಾಪಸು ಹೋದರೆ ಎಂಬ ಭಯವೂ ಇದೆ.

ಇದನ್ನೂ ಓದಿ: Anantkumar Hegde: ಮಾಧ್ಯಮಗಳಿಗೆ ನಾಯಿ ಎಂದರೇ ಅನಂತ್‌ ಕುಮಾರ್‌? ಪತ್ರಕರ್ತರ ಸಂಘದಿಂದ ಬಿಜೆಪಿ ಹೈಕಮಾಂಡ್‌ಗೆ ದೂರು

Exit mobile version