ಹೊಸದಿಲ್ಲಿ: ಮಾರ್ಚ್ ತಿಂಗಳ ಮೊದಲ ದಿನವೇ ಅಡುಗೆ ಅನಿಲ ಗ್ಯಾಸ್ ಸಿಲಿಂಡರ್ (LPG gas cylinder) ಬೆಲೆಯಲ್ಲಿ ಏರಿಕೆ (LPG Price hike) ಮಾಡಿ ಅಡುಗೆ ಅನಿಲ ಗ್ರಾಹಕರಿಗೆ ಸರ್ಕಾರ ಶಾಕ್ ನೀಡಿದೆ. ಎಲ್‌ಪಿಜಿ ವಾಣಿಜ್ಯ (LPG commercial gas cylinder) ಸಿಲಿಂಡರ್‌ಗಳ ಬೆಲೆಯಲ್ಲಿ 25.50 ರೂ. ಹೆಚ್ಚ ಳವಾಗಿದೆ.
ಲೋಕಸಭಾ ಚುನಾವಣೆ ದಿನಾಂಕಗಳ ಘೋಷಣೆಗೂ ಮುನ್ನ ಈ ಘೋಷಣೆ ಬಂದಿದೆ. ತೈಲ ಮಾರುಕಟ್ಟೆ ಕಂಪನಿಗಳು ಮಾರ್ಚ್ 1ರ ಶುಕ್ರವಾರ ಎಲ್‌ಪಿಜಿ ಸಿಲಿಂಡರ್ ದರಗಳನ್ನು ಘೋಷಿಸಿದ್ದು, ಇಂದಿನಿಂದ 19 ಕೆಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ದರಗಳನ್ನು ನವೀಕರಿಸಿವೆ.
ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ನಿನ್ನೆ ರೂ. 1851.50 ಇತ್ತು. ಇಂದು 1877 ರೂ. ಆಗಿದೆ. ಇಂದಿನಿಂದ ದೆಹಲಿ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 25.50 ರೂ., ಕೋಲ್ಕತ್ತಾದಲ್ಲಿ 24 ರೂ., ಚೆನ್ನೈನಲ್ಲಿ 23.50 ರೂ. ಏರಿಕೆಯಾಗಿದೆ. ಅಹಮದಾಬಾದ್, ಮೀರತ್, ದೆಹಲಿ, ಜೈಪುರ, ಇಂದೋರ್, ಲಕ್ನೋ, ಆಗ್ರಾ, ಮುಂಬೈ ಮತ್ತು ದೇಶಾದ್ಯಂತ ಎಲ್‌ಪಿಜಿ ದರಗಳನ್ನು ಹೆಚ್ಚಿಸಲಾಗಿದೆ. ಆದರೆ 14.2 ಕೆಜಿ ದೇಶೀಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇಂದು, ವಾಣಿಜ್ಯ ಅನಿಲ ಸಿಲಿಂಡರ್ ದೆಹಲಿಯಲ್ಲಿ 1769.50 ರೂ.ಗಳ ಬದಲು 1795 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಸಿಲಿಂಡರ್ ಈಗ 1887 ರೂ.ಗಳ ಬದಲು 1911 ರೂ.ಗೆ ಏರಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಮುಂಬೈನಲ್ಲಿ 1749 ರೂ.ಗೆ ಮತ್ತು ಚೆನ್ನೈನಲ್ಲಿ 1960 ರೂ.ಗೆ ಏರಿದೆ.
ಇದನ್ನೂ ಓದಿ: LPG Price Hike: ಬಜೆಟ್ ದಿನವೇ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಶಾಕ್, ಬೆಂಗಳೂರಿನಲ್ಲಿ ಇಷ್ಟಾಗಿದೆ ದರ