Site icon Vistara News

Mahindra Thar : ಥಾರ್ ಅಭಿಮಾನಿಗಳಿಗೆ ಖುಷಿಯ ವಿಚಾರ, ಕಾಯುವಿಕೆ ಅವಧಿ ಇಳಿಕೆ

Mahindra Thar

ಬೆಂಗಳೂರು: ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಆಫ್​ರೋಡಿಂಗ್​ ಎಸ್​ಯುವಿ ಮಹೀಂದ್ರಾ ಥಾರ್ (Mahindra Thar)​ ಮಾಸಿಕ ಸರಾಸರಿ 5,700 ಯುನಿಟ್ ಗಳಿಗಿಂತ ಹೆಚ್ಚು ಮಾರಾಟವಾಗುತ್ತಿದೆ. ಅದೇ ರೀತಿ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತತಿದೆ. ಹೀಗಾಗಿ ಮಹೀಂದ್ರಾ ಕಂಪನಿಯು ಇನ್ನೂ ಥಾರ್ ನ ಸುಮಾರು 71,000 ಯುನಿಟ್ ಗಳಷ್ಟು ಬ್ಯಾಕ್ ಲಾಗ್ ಅನ್ನು ಹೊಂದಿದೆ. ಅಂದರೆ ಬುಕಿಂಗ್ ಆದ ಬಳಿಕವೂ ಅಷ್ಟೊಂದು ಕಾರನ್ನು ಗ್ರಾಹಕರಿಗೆ ವಿತರಣೆ ಮಾಡಬೇಕಾಗಿದೆ. ಆದಾಗ್ಯೂ ಉತ್ಪಾದನೆಯ ವೇಗ ವೃದ್ಧಿಸುವ ಮೂಲಕ ಕಾಯುವಿಕೆಯ ಅವಧಿಯನ್ನು (ವೇಟಿಂಗ್ ಪಿರಿಯಡ್​) ಕಡಿಮೆ ಮಾಡಲು ಮಹೀಂದ್ರಾ ನಿರ್ಧರಿಸಿದೆ. ಇದು ಥಾರ್​ ಬುಕ್ ಮಾಡಿರುವ ಅಭಿಮಾನಿಗಳ ಪಾಲಿಗೆ ಸಂತಸದ ವಿಷಯವಾಗಿದೆ.

ಫೆಬ್ರವರಿ 2024 ರಲ್ಲಿ ಮಹೀಂದ್ರಾ ಥಾರ್ 4×2 ಕಾಯುವ ಅವಧಿಗಳು

ಥಾರ್ 4×2 (ಅಥವಾ ಥಾರ್ ಆರ್ ಡಬ್ಲ್ಯುಡಿ) ಡೀಸೆಲ್ ಪ್ರಸ್ತುತ 10-11 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಏತನ್ಮಧ್ಯೆ, ಪೆಟ್ರೋಲ್ ಥಾರ್ 4×2 ಗಾಗಿ 5-6 ತಿಂಗಳು ಕಾಯಬೇಕಾಗುತ್ತದೆ/ ಈ ಎರಡೂ ಟೈಮ್ ಲೈನ್ ಗಳು ಆಯ್ಕೆ ಮಾಡಿದ ವೇರಿಯೆಂಟ್​​ ಮೇಲೆ ಅವಲಂಬಿತವಾಗಿರುತ್ತದೆ. ಇವು ಅಕ್ಟೋಬರ್ 2023ರಲ್ಲಿ ವರದಿಯಾದ 15, 16 ತಿಂಗಳ ಕಾಯುವಿಕೆ ಅವಧಿಗಳಿಗಿಂತ ಗಮನಾರ್ಹ ಕಡಿತವಾಗಿದೆ.

ಡೀಸೆಲ್ ಥಾರ್ 4×2 1.5-ಲೀಟರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲ್ಪಟ್ಟಿದೆ. ಇದು 118 ಬಿಹೆಚ್ ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಆವೃತ್ತಿಯು ಥಾರ್ 4×4 ನಿಂದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್​ ಘಟಕವನ್ನು ಹೊಂದಿದೆ. ಇದು 152 ಬಿಹೆಚ್ ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್​ಬಾಕ್ಸ್​ ಬರುತ್ತದೆ. ಥಾರ್ 4×2 ಶ್ರೇಣಿಯ ಬೆಲೆಗಳು 11.25 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ರೂ.11.25 ಲಕ್ಷಗಳವರೆಗೆ ಹೋಗುತ್ತವೆ.

ಫೆಬ್ರವರಿ 2024 ರಲ್ಲಿ ಮಹೀಂದ್ರಾ ಥಾರ್ 4×2 ಕಾಯುವ ಅವಧಿಗಳು

ಥಾರ್ 4×4 ನ ಯಾವುದೇ ವೇರಿಯೆಂಟ್​ ಖರೀದಿಸಲು ಬಯಸುವವರು ಕೇವಲ 2-3 ತಿಂಗಳು ಕಾಯಬೇಕಾಗುತ್ತದೆ, ಮತ್ತು ಕಾಯುವ ಅವಧಿಯು 5-6 ತಿಂಗಳುಗಳಿಂದ ಕಡಿಮೆಯಾಗಿದೆ. ಇದು ಉತ್ಪಾದನೆಯನ್ನು ಹೆಚ್ಚಿಸುವ ಮಹೀಂದ್ರಾ ಪ್ರಯತ್ನಗಳು ಫಲ ನೀಡುತ್ತಿವೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ : Ola scooter : ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 25,000 ರೂ.ವರೆಗೆ ಇಳಿಕೆ

ಥಾರ್ 4×4 ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೇಲೆ ತಿಳಿಸಿದ 152 ಬಿಹೆಚ್ ಪಿ, 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 132 ಬಿಹೆಚ್ ಪಿ, 2.2-ಲೀಟರ್ ಎಂಜಿನ್​ನಲ್ಲಿದೆ. 2WD ರೂಪಾಂತರಗಳಿಗಿಂತ ಭಿನ್ನವಾಗಿ, 4×4 ಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಹೊಂದಿವೆ. ಮ್ಯಾನುಯಲ್​ ಶಿಫ್ಟ್ 4×4 ಟ್ರಾನ್ಸ್​ಫರ್​ ಕೇಸ್ ಪಡೆಯುತ್ತವೆ. ಆಯ್ದ ರೂಪಾಂತರಗಳು ಮ್ಯಾನುಯಲ್​ ಲಾಕಿಂಗ್ ಡಿಫರೆನ್ಸಿಯಲ್​ ಅನ್ನು ಹೊಂದಿವೆ.

ಮಹೀಂದ್ರಾ ಥಾರ್ 4×4 ಪೆಟ್ರೋಲ್ ಬೆಲೆಗಳು ಪ್ರಸ್ತುತ 14.30 ಲಕ್ಷ-16.60 ಲಕ್ಷ ರೂ.ಗಳ ನಡುವೆ ಇದ್ದರೆ, ಡೀಸೆಲ್ ಆವೃತ್ತಿಗಳ ಬೆಲೆ 15.00 ಲಕ್ಷ-17.20 ಲಕ್ಷ ರೂ.

Exit mobile version