Mahindra Thar : ಥಾರ್ ಅಭಿಮಾನಿಗಳಿಗೆ ಖುಷಿಯ ವಿಚಾರ, ಕಾಯುವಿಕೆ ಅವಧಿ ಇಳಿಕೆ - Vistara News

ಪ್ರಮುಖ ಸುದ್ದಿ

Mahindra Thar : ಥಾರ್ ಅಭಿಮಾನಿಗಳಿಗೆ ಖುಷಿಯ ವಿಚಾರ, ಕಾಯುವಿಕೆ ಅವಧಿ ಇಳಿಕೆ

Mahindra Thar: ಥಾರ್ 4×2 ಡೀಸೆಲ್ ನ ಕಾಯುವ ಅವಧಿಯು 5-6 ತಿಂಗಳುಗಳಷ್ಟು ಕಡಿಮೆಯಾಗಿದೆ. 4×4 ರೂಪಾಂತರವು 2-3 ತಿಂಗಳಷ್ಟು ಕಡಿಮೆಯಾಗಿದೆ.

VISTARANEWS.COM


on

Mahindra Thar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಆಫ್​ರೋಡಿಂಗ್​ ಎಸ್​ಯುವಿ ಮಹೀಂದ್ರಾ ಥಾರ್ (Mahindra Thar)​ ಮಾಸಿಕ ಸರಾಸರಿ 5,700 ಯುನಿಟ್ ಗಳಿಗಿಂತ ಹೆಚ್ಚು ಮಾರಾಟವಾಗುತ್ತಿದೆ. ಅದೇ ರೀತಿ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತತಿದೆ. ಹೀಗಾಗಿ ಮಹೀಂದ್ರಾ ಕಂಪನಿಯು ಇನ್ನೂ ಥಾರ್ ನ ಸುಮಾರು 71,000 ಯುನಿಟ್ ಗಳಷ್ಟು ಬ್ಯಾಕ್ ಲಾಗ್ ಅನ್ನು ಹೊಂದಿದೆ. ಅಂದರೆ ಬುಕಿಂಗ್ ಆದ ಬಳಿಕವೂ ಅಷ್ಟೊಂದು ಕಾರನ್ನು ಗ್ರಾಹಕರಿಗೆ ವಿತರಣೆ ಮಾಡಬೇಕಾಗಿದೆ. ಆದಾಗ್ಯೂ ಉತ್ಪಾದನೆಯ ವೇಗ ವೃದ್ಧಿಸುವ ಮೂಲಕ ಕಾಯುವಿಕೆಯ ಅವಧಿಯನ್ನು (ವೇಟಿಂಗ್ ಪಿರಿಯಡ್​) ಕಡಿಮೆ ಮಾಡಲು ಮಹೀಂದ್ರಾ ನಿರ್ಧರಿಸಿದೆ. ಇದು ಥಾರ್​ ಬುಕ್ ಮಾಡಿರುವ ಅಭಿಮಾನಿಗಳ ಪಾಲಿಗೆ ಸಂತಸದ ವಿಷಯವಾಗಿದೆ.

ಫೆಬ್ರವರಿ 2024 ರಲ್ಲಿ ಮಹೀಂದ್ರಾ ಥಾರ್ 4×2 ಕಾಯುವ ಅವಧಿಗಳು

ಥಾರ್ 4×2 (ಅಥವಾ ಥಾರ್ ಆರ್ ಡಬ್ಲ್ಯುಡಿ) ಡೀಸೆಲ್ ಪ್ರಸ್ತುತ 10-11 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಏತನ್ಮಧ್ಯೆ, ಪೆಟ್ರೋಲ್ ಥಾರ್ 4×2 ಗಾಗಿ 5-6 ತಿಂಗಳು ಕಾಯಬೇಕಾಗುತ್ತದೆ/ ಈ ಎರಡೂ ಟೈಮ್ ಲೈನ್ ಗಳು ಆಯ್ಕೆ ಮಾಡಿದ ವೇರಿಯೆಂಟ್​​ ಮೇಲೆ ಅವಲಂಬಿತವಾಗಿರುತ್ತದೆ. ಇವು ಅಕ್ಟೋಬರ್ 2023ರಲ್ಲಿ ವರದಿಯಾದ 15, 16 ತಿಂಗಳ ಕಾಯುವಿಕೆ ಅವಧಿಗಳಿಗಿಂತ ಗಮನಾರ್ಹ ಕಡಿತವಾಗಿದೆ.

ಡೀಸೆಲ್ ಥಾರ್ 4×2 1.5-ಲೀಟರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲ್ಪಟ್ಟಿದೆ. ಇದು 118 ಬಿಹೆಚ್ ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಆವೃತ್ತಿಯು ಥಾರ್ 4×4 ನಿಂದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್​ ಘಟಕವನ್ನು ಹೊಂದಿದೆ. ಇದು 152 ಬಿಹೆಚ್ ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್​ಬಾಕ್ಸ್​ ಬರುತ್ತದೆ. ಥಾರ್ 4×2 ಶ್ರೇಣಿಯ ಬೆಲೆಗಳು 11.25 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ರೂ.11.25 ಲಕ್ಷಗಳವರೆಗೆ ಹೋಗುತ್ತವೆ.

ಫೆಬ್ರವರಿ 2024 ರಲ್ಲಿ ಮಹೀಂದ್ರಾ ಥಾರ್ 4×2 ಕಾಯುವ ಅವಧಿಗಳು

ಥಾರ್ 4×4 ನ ಯಾವುದೇ ವೇರಿಯೆಂಟ್​ ಖರೀದಿಸಲು ಬಯಸುವವರು ಕೇವಲ 2-3 ತಿಂಗಳು ಕಾಯಬೇಕಾಗುತ್ತದೆ, ಮತ್ತು ಕಾಯುವ ಅವಧಿಯು 5-6 ತಿಂಗಳುಗಳಿಂದ ಕಡಿಮೆಯಾಗಿದೆ. ಇದು ಉತ್ಪಾದನೆಯನ್ನು ಹೆಚ್ಚಿಸುವ ಮಹೀಂದ್ರಾ ಪ್ರಯತ್ನಗಳು ಫಲ ನೀಡುತ್ತಿವೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ : Ola scooter : ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 25,000 ರೂ.ವರೆಗೆ ಇಳಿಕೆ

ಥಾರ್ 4×4 ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೇಲೆ ತಿಳಿಸಿದ 152 ಬಿಹೆಚ್ ಪಿ, 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 132 ಬಿಹೆಚ್ ಪಿ, 2.2-ಲೀಟರ್ ಎಂಜಿನ್​ನಲ್ಲಿದೆ. 2WD ರೂಪಾಂತರಗಳಿಗಿಂತ ಭಿನ್ನವಾಗಿ, 4×4 ಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಹೊಂದಿವೆ. ಮ್ಯಾನುಯಲ್​ ಶಿಫ್ಟ್ 4×4 ಟ್ರಾನ್ಸ್​ಫರ್​ ಕೇಸ್ ಪಡೆಯುತ್ತವೆ. ಆಯ್ದ ರೂಪಾಂತರಗಳು ಮ್ಯಾನುಯಲ್​ ಲಾಕಿಂಗ್ ಡಿಫರೆನ್ಸಿಯಲ್​ ಅನ್ನು ಹೊಂದಿವೆ.

ಮಹೀಂದ್ರಾ ಥಾರ್ 4×4 ಪೆಟ್ರೋಲ್ ಬೆಲೆಗಳು ಪ್ರಸ್ತುತ 14.30 ಲಕ್ಷ-16.60 ಲಕ್ಷ ರೂ.ಗಳ ನಡುವೆ ಇದ್ದರೆ, ಡೀಸೆಲ್ ಆವೃತ್ತಿಗಳ ಬೆಲೆ 15.00 ಲಕ್ಷ-17.20 ಲಕ್ಷ ರೂ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Ayodhya’s e-rickshaw : ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು; ಪ್ರವಾಸಿಗರ ಸಂಖ್ಯೆ ಇಳಿಕೆ; ರಿಕ್ಷಾ ಚಾಲಕರಿಗೆ ಆದಾಯ ನಷ್ಟ!

Ayodhya’s e-rickshaw : ಸರ್ಕಾರದಿಂದ ಗಮನದ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ರಸ್ತೆಗಳನ್ನು ಅಭಿವೃದ್ಧಿ ಮತ್ತು ಅಯೋಧ್ಯೆಯ ಅಭಿವೃದ್ಧಿಯಲ್ಲಿ ಕುಸಿತವೇ ಇದಕ್ಕೆ ಕಾರಣ. ಬಿಜೆಪಿ ಸೋತ ಕಾರಣ ಪರಿಸ್ಥಿತಿ ಇದೇ ರೀತಿ ಮುಂದುವರಿಯಲಿದೆ. ಹೀಗಾಗಿ ನಮ್ಮ ಸಮಸ್ಯೆಗಳು ಬಿಗಡಾಯಿಸಲಿದೆ ಎಂದು ರಿಕ್ಷಾ ಚಾಲಕರೊಬ್ಬರು ಹೇಳಿದ್ದಾರೆ.

VISTARANEWS.COM


on

Ayodhya's e-rickshaw
Koo

ಬೆಂಗಳೂರು: ರಾಮ ಜನ್ಮಭೂಮಿ ಅಯೋಧ್ಯೆಯಿರುವ ಫೈಜಾಬಾದ್​ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿರುವುದು ದೇಶಕ್ಕೆ ದೇಶವೇ ಅಚ್ಚರಿ ಪಡುವ ಸಂಗತಿ. ಅಲ್ಲಿ ಸಮಾಜವಾದಿ ಪಕ್ಷದ ಅವದೇಶ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ಇದು ಭಾರತದ ಕೋಟ್ಯಂತರ ಹಿಂದೂಗಳ ಪಾಲಿಗೆ ನೋವಿನ ಸಂಗತಿಯಾಗಿದೆ. ಇದರಿಂದಾಗಿ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಇದರ ಪರಿಣಾಮ ಅಲ್ಲಿನ ರಿಕ್ಷಾ ಚಾಲಕರಿಗೆ ತಟ್ಟಿದೆ. ದಿನಕ್ಕೆ 1000 ರೂಪಾಯಿ ದುಡಿಯುತ್ತಿದ್ದವರು 250 ರೂಪಾಯಿ ಮಾಡಲೂ ಪೇಚಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಯಾದ ಕೇವಲ ನಾಲ್ಕು ತಿಂಗಳ ನಂತರ ತಮ್ಮ ವ್ಯವಹಾರಕ್ಕೆ ಹೊಡೆತ ಬಿದ್ದಿರುವುದಕ್ಕೆ ಅಯೋಧ್ಯೆಯ ಇ-ರಿಕ್ಷಾ ಚಾಲಕರು ಅಸಮಾಧಾನಗೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆಯ ಸಂಭ್ರಮದ ನಂತರವೂ ಬಿಜೆಪಿ ಫೈಜಾಬಾದ್ ಸ್ಥಾನವನ್ನು ಕಳೆದುಕೊಂಡಿದ್ದರ ಪರಿಣಾಮ ಅದು ಎಂಬುದು ಅವರಿಗೆ ಅರಿವಾಗಿದ್ದು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ ಗಮನದ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ರಸ್ತೆಗಳನ್ನು ಅಭಿವೃದ್ಧಿ ಮತ್ತು ಅಯೋಧ್ಯೆಯ ಅಭಿವೃದ್ಧಿಯಲ್ಲಿ ಕುಸಿತವೇ ಇದಕ್ಕೆ ಕಾರಣ. ಬಿಜೆಪಿ ಸೋತ ಕಾರಣ ಪರಿಸ್ಥಿತಿ ಇದೇ ರೀತಿ ಮುಂದುವರಿಯಲಿದೆ. ಹೀಗಾಗಿ ನಮ್ಮ ಸಮಸ್ಯೆಗಳು ಬಿಗಡಾಯಿಸಲಿದೆ ಎಂದು ರಿಕ್ಷಾ ಚಾಲಕರೊಬ್ಬರು ಹೇಳಿದ್ದಾರೆ.

ನಾವು 10 ವರ್ಷಗಳಿಂದ ಇಲ್ಲಿ ರಿಕ್ಷಾಗಳನ್ನು ಓಡಿಸುತ್ತಿದ್ದೇವೆ. ಅಯೋಧ್ಯೆಯನ್ನು ಸುಂದರ ನಗರವಾಗಿ ನಿರ್ಮಿಸುವುದನ್ನು ಮತ್ತು ಅಭಿವೃದ್ಧಿಪಡಿಸುವುದನ್ನು ನಾವು ನೋಡಿದ್ದೇವೆ. ಆದಾಗ್ಯೂ, ನಾನು ನಿಮಗೆ ಹೇಳುತ್ತೇನೆ, ಬಿಜೆಪಿ ಸರ್ಕಾರವು ಈಗ ಕೆಲವು ತೊಂದರೆಗಳನ್ನು ಎದುರಿಸುತ್ತಿದೆ. ಇಲ್ಲಿ ಅಭಿವೃದ್ಧಿಯ ಕುಸಿತವಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಜವಾಬ್ದಾರರಾಗಿದ್ದಾರೆ ಏಕೆಂದರೆ ಅವರು ನಮ್ಮ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಅವರು ಯಾರನ್ನೂ ಭೇಟಿಯಾಗುವುದಿಲ್ಲ. ಮಂತ್ರಿಗಳು ಆಗಾಗ್ಗೆ ಇಲ್ಲಿಗೆ ಬರುತ್ತಾರೆ. ಆದರೆ ಅವರು ಸಾಮಾನ್ಯ ಜನರೊಂದಿಗೆ ಸಂವಹನ ನಡೆಸುವುದಿಲ್ಲ. ಅವರು ಬರುತ್ತಾರೆ, ರ್ಯಾಲಿಗಳನ್ನು ನಡೆಸುತ್ತಾರೆ ವಾಪಸ್ ಹೋಗುತ್ತಾರೆ ಎಂದು ರಿಕ್ಷಾ ಚಾಲಕರೊಬ್ಬರು ಹೇಳಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ

ಇದೇ ಪರಿಸ್ಥಿತಿ ಮುಂದುವರಿದರೆ ಅಯೋಧ್ಯೆ ಮತ್ತು ಇತರ ಅನೇಕ ಸ್ಥಳಗಳಿಗೆ ಹಿನ್ನಡೆಯಾಗುತ್ತದೆ. ನಮ್ಮ ಆದಾಯವು ಗಮನಾರ್ಹವಾಗಿ ಕುಸಿಯುತ್ತಿದೆ. ನಾವು 500-1000 ರೂ.ಗಳನ್ನು ಗಳಿಸುತ್ತಿದ್ದೆವು, ಈಗ 4 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದಾಗಿನಿಂದ 250 ರೂ.ಗಳನ್ನು ಗಳಿಸುವುದು ಸಹ ಕಷ್ಟಕರವಾಗಿದೆ. ಕೇವಲ ಎರಡು ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Anupam Kher-Rajinikanth: ಮೋದಿ ಪ್ರಮಾಣವಚನ ವೇಳೆ ರಜನಿಕಾಂತ್‌ಗೆ ಅನುಪಮ್ ಖೇರ್ ಹೇಳಿದ್ದೇನು? ವಿಡಿಯೊ ನೋಡಿ!

ಲೋಕಸಭಾ ಚುನಾವಣಾ ಫಲಿತಾಂಶಗಳು ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ಅಯೋಧ್ಯೆಯ ವ್ಯವಹಾರದ ಮೇಲೆ ಪ್ರಭಾವ ಬೀರಿದೆ. ಅಯೋಧ್ಯೆ ಇರುವ ಫೈಜಾಬಾದ್​ನ ಬಿಜೆಪಿ ಅಭ್ಯರ್ಥಿಯ ಸೋಲಿನೊಂದಿಗೆ, ನಗರದ ವಾತಾವರಣವು ಬದಲಾಗಿದೆ.

ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ. “ಜನರು ರಾಮ ಮಂದಿರ ಮತ್ತು ಹನುಮಾನ್ ಗರ್ಹಿಯಂತಹ ಸ್ಥಳಗಳಲ್ಲಿ ಕುಳಿತಿದ್ದಾರೆ, ಆದರೆ ಇದೀಗ, ಇಲ್ಲಿ ಯಾವುದೇ ಯಾತ್ರಿಕರು ಇಲ್ಲ” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ

ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿ 2019ರ 62 ಸ್ಥಾನಗಳಿಂದ 33 ಸ್ಥಾನಕ್ಕೆ ಇಳಿಕೆಯಾದೆರ ಸಮಾಜವಾದಿ ಪಾರ್ಟಿ 37 ಹಾಗೂ ಕಾಂಗ್ರೆಸ್​ 6 ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಒಕ್ಕೂಟ ಒಟ್ಟು 43 ಸ್ಥಾನಗಳನ್ನು ಗಳಿಸಿಕೊಂಡಿದೆ. ಇದು ಕೇಂದ್ರಲ್ಲಿ ಸರಳ ಬಹುಮತದೊಂದಿಗೆ ಸರ್ಕಾರ ರಚಿಸುವ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟದ ಶಕ್ತಿಯೂ ಧಕ್ಕೆ ತಂದಿದೆ.

Continue Reading

ಪ್ರಮುಖ ಸುದ್ದಿ

Free Bus Problem: ನಮಗೆ ಫ್ರೀ ಬಸ್‌ ಬೇಡ, ವಿದ್ಯೆ ಬೇಕು! ಈ ವಿದ್ಯಾರ್ಥಿನಿ ಮಾತಿನ ವಿಡಿಯೊ ನೋಡಿ

Free Bus Problem: ಸರ್ಕಾರದ ಇಂತಹ ಫ್ರೀ ಬಸ್ ಅವ್ಯವಸ್ಥೆಯ ವಿರುದ್ಧ ಇದೀಗ ವಿದ್ಯಾರ್ಥಿಯೊಬ್ಬಳು ಕಿಡಿಕಾರಿದ್ದಾಳೆ. ವಿದ್ಯಾರ್ಥಿನಿಯೊಬ್ಬಳಿಗೆ ಬಸ್ಸು ಸರಿಯಾದ ಸಮಯಕ್ಕೆ ಸಿಗದ ಕಾರಣ ಸರ್ಕಾರಿ ಅಧಿಕಾರಿಗಳ ಕಚೇರಿಗೆ ತಮ್ಮ ಸಹಪಾಠಿಗಳ ಜೊತೆ ಹೋಗಿ ಸರ್ಕಾರದ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

VISTARANEWS.COM


on

Free Bus Problem
Koo

ಕುಂದಾಪುರ: ಮಳೆಗಾಲ ಬಂತೆಂದರೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿರುತ್ತದೆ. ರಸ್ತೆಯ ಸಮಸ್ಯೆ, ಬಸ್ಸಿನ ಸಮಸ್ಯೆ, ಚರಂಡಿ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಇನ್ನು ಮಳೆಗಾಲದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು. ಪಟ್ಟಣಗಳಿಗೆ ಹೋಲಿಸಿದರೆ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಿಗೆ (Student) ಈ ಮಳೆಗಾಲವೆಂದರೆ ವನವಾಸದ ಹಾಗೇ. ಕೆಲವು ಕಡೆಗಳಲ್ಲಿ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಅಲ್ಲಲ್ಲಿ ರಸ್ತೆಗಳು ಕೆಟ್ಟಿರುವ ಕಾರಣ ಬಸ್ಸು ಬರುವುದು ತಡವಾಗುತ್ತದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮಹಿಳೆಯರಿಗಾಗಿ ಫ್ರಿ ಬಸ್ (Free Bus Problem )ವ್ಯವಸ್ಥೆ ಮಾಡಿದೆ. ಈ ಬಿಟ್ಟಿ ಭಾಗ್ಯದ  ಬಸ್ ನಿಂದ ಕೆಲವು ಭಾಗದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಈ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್ಸುಗಳು 5-10 ನಿಮಿಷಕ್ಕೂ ಬರುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವು ಒಳರಸ್ತೆಯಲ್ಲಿ ಬಸ್ಸುಗಳು ಗಂಟೆಗೊಂದು ಬರುತ್ತದೆ. ಇದರಿಂದ ವಿದ್ಯಾರ್ಥಿಗಳು ಬಸ್ಸಿನ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯದ  ಆಡಳಿತವನ್ನು ಕೈಗೆ ತೆಗೆದುಕೊಂಡ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಬಿಟ್ಟಿ ಭಾಗ್ಯಗಳನ್ನು ನೀಡಿದೆ. ಅದರಲ್ಲಿ ಫ್ರೀ ಬಸ್ ವ್ಯವಸ್ಥೆ ಕೂಡ ಒಂದು. ಈ ಫ್ರಿ ಬಸ್ ಭಾಗ್ಯದ ಯೋಜನೆ ಜಾರಿಗೆ ಬಂದ ಮೇಲಂತೂ ಸರ್ಕಾರ 10 ಬಸ್ಸು ಓಡಾಡುವ ಸ್ಥಳಗಳಲ್ಲಿ 3-4 ಬಸ್ಸುಗಳನ್ನು ಬಿಟ್ಟಿದ್ದಾರೆ. ಅಲ್ಲದೇ ಬಸ್ಸುಗಳಲ್ಲಿ ಸರಿಯಾದ ಸೀಟಿನ ವ್ಯವಸ್ಥೆ ಇಲ್ಲ, ಬಾಗಿಲು, ಕಿಟಕಿಗಳು ಸರಿಯಿಲ್ಲ. ಹಾಗೇ ಮಳೆಗಾಲದಲ್ಲಿ ಸೋರುವ ಬಸ್ಸುಗಳೇ ಹೆಚ್ಚು. ಬಸ್ಸಿನ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಅವರಿಗೆ ಕಾಲೇಜಿಗೆ ತಲುಪಲು ಆಗುತ್ತಿಲ್ಲ. ಇದರಿಂದ ಅಂದಿನ ಕ್ಲಾಸ್ ಮಿಸ್ ಆಗಿ ಪರೀಕ್ಷೆಯಲ್ಲಿ ಓದಲು ಕಷ್ಟವಾಗುತ್ತದೆ ಎಂಬುದು ವಿದ್ಯಾರ್ಥಿಗಳ ಗೋಳು.

ಬಿಟ್ಟಿ ಭಾಗ್ಯ ಬೇಡವೇ ಬೇಡ!

ಸರ್ಕಾರದ ಇಂತಹ ಫ್ರೀ ಬಸ್ ಅವ್ಯವಸ್ಥೆಯ ವಿರುದ್ಧ ಇದೀಗ ವಿದ್ಯಾರ್ಥಿಯೊಬ್ಬಳು ಕಿಡಿಕಾರಿದ್ದಾಳೆ. ಎಳಬೇರು ಎಂಬ ಊರಿನಿಂದ ಬರುವ ವಿದ್ಯಾರ್ಥಿನಿಯೊಬ್ಬಳಿಗೆ ಬಸ್ಸು ಸರಿಯಾದ ಸಮಯಕ್ಕೆ ಸಿಗದ ಕಾರಣ ಸರ್ಕಾರಿ ಅಧಿಕಾರಿಗಳ ಕಚೇರಿಗೆ ತಮ್ಮ ಸಹಪಾಠಿಗಳ ಜೊತೆ ಹೋಗಿ ಸರ್ಕಾರದ ಆಡಳಿತ ವಿರುದ್ಧ ಕಿಡಿಕಾರಿದ್ದಾಳೆ. ಇಂತಹ ಅವ್ಯವಸ್ಥೆಯ ಫ್ರೀ ಬಸ್ ಯೋಜನೆ ನಮಗೆ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಹಾಗೆಯೇ ಈ ಬಗ್ಗೆ ಅಧಿಕಾರಿಗಳು ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂದು ಕೇಳಿಕೊಂಡಿದ್ದಾಳೆ.

ಇದನ್ನೂ ಓದಿ:Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಫೇಸ್ ಬುಕ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಹಲವರು ಆ ವಿದ್ಯಾರ್ಥಿನಿಗೆ ಬೆಂಬಲ ನೀಡಿದ್ದಾರೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Continue Reading

ಪ್ರಮುಖ ಸುದ್ದಿ

Actor Darshan Arrested : ಪತಿ ಅರೆಸ್ಟ್​ ಆದರೂ ಪ್ರತಿಕ್ರಿಯೆ ನೀಡದ ದರ್ಶನ್​ ಪತ್ನಿ ವಿಜಯಲಕ್ಷ್ಮಿ!

Actor Darshan Arrested :ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮೀ ಈ ಹಿಂದೆ ಸಾಕಷ್ಟು ಬಾರಿ ಸೋಶಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಅರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ. ಆದಾಗ್ಯೂ ಅವರು ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ.

VISTARANEWS.COM


on

Actor Darshan Arrested
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಅರೆಸ್ಟ್ (Actor Darshan Arrested) ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಕರಣದಲ್ಲಿ ಬಗ್ಗೆ ಅವರ ಅಭಿಪ್ರಾಯ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಂಗಳವಾರ ಬೆಳಗ್ಗಿನಿಂದ ಪ್ರಕರಣ ರಾಜ್ಯಾದ್ಯಂತ ಹವಾ ಎಬ್ಬಿಸಿದ್ದು ಒಬ್ಬೊಬ್ಬರು ಒಂದೊಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ದರ್ಶನ್​ ಅಭಿಮಾನಿಗಳಂತೂ ಈ ವಿಚಾರದಲ್ಲಿ ಭಾವುಕರಾಗಿದ್ದಾರೆ. ಆದರೆ ಪತಿ ಜೈಲಿಗೆ ಹೋಗುವ ಸ್ಥಿತಿ ತಂದುಕೊಂಡಿದ್ದರೂ ವಿಜಯಲಕ್ಷ್ಮೀ ಈ ಕುರಿತು ಏನೂ ಹೇಳಿಕೆಗಳನ್ನು ನೀಡಿಲ್ಲ.

ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮೀ ಈ ಹಿಂದೆ ಸಾಕಷ್ಟು ಬಾರಿ ಸೋಶಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಅರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ. ಆದಾಗ್ಯೂ ಅವರು ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ.

ದರ್ಶನ್​ಗೆ ಮರಣದಂಡನೆ ಶಿಕ್ಷೆಯಾಗಲಿ! ನಟಿ ರಮ್ಯಾ ಟ್ವೀಟ್‌

ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್​ಗೆ (Actor Darshan) ಮರಣದಂಡನೆಯಾಗಲಿ ಎಂಬ ಆಶಯವನ್ನು ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ವ್ಯಕ್ತಪಡಿಸಿದ್ದಾರೆ! ಕೊಲೆ ಪ್ರಕರಣದ ಕುರಿತು ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ರಮ್ಯಾ ಐಪಿಸಿ ಸೆಕ್ಷನ್​ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್​ಗೆ ಕಠಿಣ ಶಿಕ್ಷೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಲೆಯಾಗಿರುವ ವ್ಯಕ್ತಿಯ ಪರವಾಗಿ ನಿಂತಿರುವ ರಮ್ಯಾ, ದರ್ಶನ್​ಗೆ ಇಂಡಿಯನ್ ಪಿನಲ್​ ಕೋಡ್​ 302ರ ಪ್ರಕಾರ ಯಾವ ಪ್ರಕಾರಣದ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಸೆಕ್ಷನ್​ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟ್‌ ಅನ್ನು ರಮ್ಯಾ ರೀಟ್ವೀಟ್‌ ಮಾಡಿದ್ದಾರೆ.

ಸೆಕ್ಷನ್ 302 ರ ಅಡಿಯಲ್ಲಿ ನಟ ದರ್ಶನ್​ಗೆ ಜೀವಾವಧಿ ಶಿಕ್ಷೆ ಅಥವಾ ಶಿಕ್ಷೆಯಾಗಬೇಕು. ಬೇರೆ ಯಾವುದೇ ಹಣದ ಪ್ರಭಾವ ಮತ್ತು ಭಾರತೀಯ ಕಾನೂನು ವ್ಯವಸ್ಥೆಯನ್ನು ಅಣಕಿಸುವಂತಾಗಬಾರದು. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಟ್ವೀಟ್‌ ಅನ್ನು ರಮ್ಯಾ ಮರು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ರಮ್ಯಾ ಈ ಹಿಂದೆಯೂ ಸ್ಟಾರ್ ನಟರ ನಡವಳಿಕೆಯ ಬಗ್ಗೆ ಆಕ್ಷೇಪ ಎತ್ತಿದ್ದರು. ಹಿಂದೆ ದರ್ಶನ್​ಗೆ ಚಪ್ಪಲಿ ಎಸೆತ ಪ್ರಕರಣ ನಡೆದಾಗ ಸ್ಪಂದಿಸಿದ್ದ ಅವರು, ಅಭಿಮಾನಿಗಳು ಹಾಗೂ ನಟರಿಗೆ ಬುದ್ಧಿ ಹೇಳಬೇಕಾಗಿದೆ ಎಂದು ಹೇಳಿದ್ದರು.

Continue Reading

ಉದ್ಯೋಗ

Job Alert: ಬಿಎಸ್ಎಫ್‌ನಲ್ಲಿದೆ ಬರೋಬ್ಬರಿ 1,526 ಹುದ್ದೆ; ದ್ವಿತೀಯ ಪಿಯು ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

Job Alert: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಹತ್ತಿರದಲ್ಲೇ ಇದೆ. ಯಾಕೆಂದರೆ ಬಿಎಸ್‌ಎಫ್‌ ಖಾಲಿ ಇರುವ ಬರೋಬ್ಬರಿ 1,526 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆ ದಿನಾಂಕ ಜುಲೈ 8. ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಮತ್ತು ವಾರೆಂಟ್‌ ಆಫೀಸರ್‌, ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಹವಲ್ದಾರ್‌ ಹುದ್ದೆಗಳಿದ್ದು, ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ನವದೆಹಲಿ: ಗಡಿ ಭದ್ರತಾ ಪಡೆ (Border Security Force-BSF)ಯಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವುದು ಬಹುತೇಕ ಯುವ ಜನತೆಯ ಕನಸು. ಅಂತಹ ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಬಿಎಸ್ಎಫ್‌ ತನ್ನಲ್ಲಿ ಖಾಲಿ ಇರುವ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌, ಹೆಡ್‌ ಕಾನ್ಸ್‌ಟೇಬಲ್‌ ಸೇರಿ ಬರೋಬ್ಬರಿ 1,526 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BSF Recruitment 2024). 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆ ದಿನಾಂಕ ಜುಲೈ 8 (Job Alert).

ಹುದ್ದೆಗಳ ವಿವರ

ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಮತ್ತು ವಾರೆಂಟ್‌ ಆಫೀಸರ್‌ – 243 ಮತ್ತು ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಹವಲ್ದಾರ್‌ (ಕ್ಲರ್ಕ್‌) – 1,283 ಹುದ್ದೆಗಳಿವೆ. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ಮತ್ತು ವಯೋಮಿತಿ

ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯ. ಎಸ್‌ಸಿ / ಎಸ್‌ಟಿ ವರ್ಗಕ್ಕೆ 5 ವರ್ಷ ಮತ್ತು ಮಾಜಿ ಯೋಧರು / ಒಬಿಸಿ ವರ್ಗಕ್ಕೆ 3 ವರ್ಷಗಳ ವಿನಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಸಲ್ಲಿಸುವ ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ಮಹಿಳೆಯರು ಶುಲ್ಕ ಪಾವತಿಸಬೇಕಾಗಿಲ್ಲ. ಇನ್ನು ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ವಿಧಾನವನ್ನು ಬಳಸಬಹುದು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಲಿಖಿತ ಪರೀಕ್ಷೆ (Written Examination), ದೈಹಿಕ ಸಾಮರ್ಥ್ಯ ಪರೀಕ್ಷೆ (Physical Standards Test), ಸ್ಕಿಲ್‌ ಟೆಸ್ಟ್‌ (Skill Test), ದಾಖಲಾತಿ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆ (Medical Examination) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ & ವಾರೆಂಟ್‌ ಆಫೀಸರ್‌ ಹುದ್ದೆಗೆ 29,200 ರೂ. -92,300 ರೂ. ಮತ್ತು ಹೆಡ್‌ ಕಾನ್ಸ್‌ಸ್ಟೇಬಲ್‌ & ಹವಲ್ದಾರ್‌ ಹುದ್ದೆಗೆ 25,500 ರೂ. – 81,100 ರೂ. ಮಾಸಿಕ ವೇತನ ದೊರೆಯಲಿದೆ.

BSF Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು, ಮೊಬೈಲ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ ನೋಂದಾಯಿಸಿ. ಒಟಿಪಿಯನ್ನು ನಮೂದಿಸಿ.
  • ಈಗ ತೆರೆದುಕೊಳ್ಳುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: rectt.bsf.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading
Advertisement
Health Tips For Monsoon
ಆರೋಗ್ಯ9 mins ago

Health Tips For Monsoon: ಮಳೆಗಾಲಕ್ಕೆ ನಮ್ಮ ಆಹಾರ ಹೇಗಿರಬೇಕು?

Ayodhya's e-rickshaw
ಪ್ರಮುಖ ಸುದ್ದಿ11 mins ago

Ayodhya’s e-rickshaw : ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು; ಪ್ರವಾಸಿಗರ ಸಂಖ್ಯೆ ಇಳಿಕೆ; ರಿಕ್ಷಾ ಚಾಲಕರಿಗೆ ಆದಾಯ ನಷ್ಟ!

CM Siddaramaiah
ಕರ್ನಾಟಕ17 mins ago

CM Siddaramaiah: ಅಬಕಾರಿ ಪರವಾನಗಿ ನವೀಕರಣಕ್ಕೆ ಕಿರುಕುಳ ನೀಡಬೇಡಿ: ಅಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

karnataka weather Forecast
ಮಳೆ21 mins ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

Free Bus Problem
ಪ್ರಮುಖ ಸುದ್ದಿ24 mins ago

Free Bus Problem: ನಮಗೆ ಫ್ರೀ ಬಸ್‌ ಬೇಡ, ವಿದ್ಯೆ ಬೇಕು! ಈ ವಿದ್ಯಾರ್ಥಿನಿ ಮಾತಿನ ವಿಡಿಯೊ ನೋಡಿ

Actor Darshan Arrested
ಪ್ರಮುಖ ಸುದ್ದಿ34 mins ago

Actor Darshan Arrested : ಪತಿ ಅರೆಸ್ಟ್​ ಆದರೂ ಪ್ರತಿಕ್ರಿಯೆ ನೀಡದ ದರ್ಶನ್​ ಪತ್ನಿ ವಿಜಯಲಕ್ಷ್ಮಿ!

Mens Stripe Shirt Fashion
ಫ್ಯಾಷನ್39 mins ago

Mens Stripe Shirt Fashion: ಮೆನ್ಸ್ ಕ್ಯಾಶುವಲ್‌ ಲುಕ್‌ಗೆ ರೀ ಎಂಟ್ರಿ ನೀಡಿದ ಸ್ಟ್ರೈಪ್ಡ್ ಶರ್ಟ್ಸ್

MS Dhoni
ಕ್ರೀಡೆ46 mins ago

MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

Job Alert
ಉದ್ಯೋಗ49 mins ago

Job Alert: ಬಿಎಸ್ಎಫ್‌ನಲ್ಲಿದೆ ಬರೋಬ್ಬರಿ 1,526 ಹುದ್ದೆ; ದ್ವಿತೀಯ ಪಿಯು ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

Anupam Kher-Rajinikanth
ಪ್ರಮುಖ ಸುದ್ದಿ55 mins ago

Anupam Kher-Rajinikanth: ಮೋದಿ ಪ್ರಮಾಣವಚನ ವೇಳೆ ರಜನಿಕಾಂತ್‌ಗೆ ಅನುಪಮ್ ಖೇರ್ ಹೇಳಿದ್ದೇನು? ವಿಡಿಯೊ ನೋಡಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 mins ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ7 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌