Site icon Vistara News

Murder News : ಖಾಸಗಿ ಕ್ಷಣದ ಫೋಟೋಗಳನ್ನಿಟ್ಟು ಬೆದರಿಕೆ ಹಾಕುತ್ತಿದ್ದವನನ್ನು ಕೊಲೆ ಮಾಡಿದ ವಿವಾಹಿತ ಮಹಿಳೆ

Murder News

ಮೈಸೂರು: ಖಾಸಗಿ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿದ್ದ ಪ್ರಿಯಕರನ್ನು ವಿವಾಹಿತ ಮಹಿಳೆಯೊಬ್ಬಳು ಸಹೋದರನ ಜತೆ ಸೇರಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣ (Murder News) ಎಚ್​​​ಡಿ ಕೋಟೆ ತಾಲೂಕಿನ ಸಿದ್ದಯ್ಯನ ಹುಂಡಿ ಬಳಿ ನಡೆದಿದೆ. ಪ್ರೇಮಾ ಹಾಗೂ ಆಕೆಯ ಸಹೋದರ ಶಿವು ಕೊಲೆ ಆರೋಪಿಗಳು. 32 ವರ್ಷದ ರಾಜೇಶ್​ ಕೊಲೆಯಾದ ವ್ಯಕ್ತಿ.

ಆರೋಪಿ ಪ್ರೇಮಾ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಯಾಗಿದ್ದಾರೆ. ಅವರು 15 ವರ್ಷದ ಹಿಂದೆ ನಂಜನಗೂಡಿನ ಶ್ರೀರಾಂಪುರಕ್ಕೆ ಮದುವೆ ಆಗಿ ಬಂದಿದ್ದರು. ಒಂದು ತಿಂಗಳ ಹಿಂದೆ ಪ್ರೇಮಾಳ ಪತಿ ಆತ್ಮಹತ್ಯೆ. ಮಾಡಿಕೊಂಡಿದ್ದರು. ಆ ಬಳಿಕ ಪ್ರೇಮಾ ಪತಿಯ ಸ್ನೇಹಿತ ರಾಜೇಶ್​ ಜತೆ ಪ್ರೀತಿಯಲ್ಲಿ ಬಿದ್ದಿದ್ದಳು. ಅವರಿಬ್ಬರು ಖಾಸಗಿ ಕ್ಷಣಗಳನ್ನೂ ಕಳೆದಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದ ರಾಜೇಶ್​​, ಆ ಕ್ಷಣದ ಫೋಟೋಗಳನ್ನು ತೆಗೆದಿಟ್ಟುಕೊಂಡು ಬೆದರಿಕೆ ಹಾಕಲು ಆರಂಭಿಸಿದ್ದ. ಬೆದರಿದ ಪ್ರೇಮಾ ಆತನ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾಳೆ. ಅಂತೆಯೇ ಆತನನ್ನು ತನ್ನ ಬಳಿಗೆ ಕರೆಸಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ.

ಇದನ್ನೂ ಓದಿ: Actor Darshan Arrested : ಲಾಕಪ್​ನಲ್ಲಿ ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎದ್ದು ಕುಳಿತಿದ್ದ ನಟ ದರ್ಶನ್​!

ಪದೇ ಪದೆ ಬೆದರಿಕೆ ಹಾಕುತ್ತಿದ್ದ ರಾಜೇಶ್​ಗೆ ಸೌಮ್ಯವಾಗಿ ಮಾತನಾಡಿದ್ದ ಪ್ರೇಮಾ ತನ್ನ ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಸಹೋದರ ಶಿವುನ ನೆರವಿನಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದಾಳೆ.
ನಂಜನಗೂಡು ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ


ಮೈಸೂರು: ಮೈಸೂರಿನ ಸಿದ್ದಾರ್ಥನಗರದಲ್ಲಿ ಅನ್ನದಾನೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರ ಆಪ್ತ ಸಹಾಯಕನಿಂದಲೇ ಬರ್ಬರವಾಗಿ ಕೊಂದು (Murder case ) ಹಾಕಿದ್ದ. ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ರವಿ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ಆರೋಪಿ ರವಿಯನ್ನು ಪೊಲೀಸರು ಕೆಆರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಡಿತದ ಚಟಕ್ಕೆ ಒಳಗಾಗಿದ್ದ ರವಿಗೆ ಶಿವಾನಂದ ಸ್ವಾಮೀಜಿ ಬುದ್ಧಿವಾದ ಹೇಳಿದ್ದರು. ಸ್ವಾಮೀಜಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ರವಿ ಕೊಲೆ ಮಾಡಿದ್ದ ಎನ್ನಲಾಗಿದೆ. ಸದ್ಯ ಆರೋಪಿ‌ ರವಿ ಗುಣಮುಖನಾದ ಬಳಿಕ ಪೊಲೀಸರು ತನಿಖೆಯನ್ನು ಮುಂದುವರಿಸಲಿದ್ದಾರೆ.

ಏನಿದು ಪ್ರಕರಣ?
ನಿನ್ನೆ ಸೋಮವಾರ (ಜೂ.10) ಮೈಸೂರಿನಲ್ಲಿ ಹಿರಿಯ ಸ್ವಾಮೀಜಿಯೊಬ್ಬರ ಬರ್ಬರ (Murder case) ಕೊಲೆಯಾಗಿತ್ತು. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ (90) ಸ್ವಾಮೀಜಿ ಕೊಲೆಯಾದವರು. ಶಿವಾನಂದ ಸ್ವಾಮೀಜಿ ಅವರ ಸಹಾಯಕನಾಗಿದ್ದ ಭದ್ರತಾ ಸಿಬ್ಬಂದಿಯಿಂದಲೇ ಕೊಲೆ ನಡೆದಿತ್ತು.

ರವಿ (60) ಎಂಬಾತನಿಂದ ಈ ಕೃತ್ಯ ನಡೆದಿತ್ತು. ಶಿವಾನಂದ ಸ್ವಾಮೀಜಿಯನ್ನು ಮಾರಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಂಚದ ಮೇಲೆ ಮಲಗಿದ್ದಲ್ಲೇ ಶಿವಾನಂದ ಸ್ವಾಮೀಜಿಗೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

Exit mobile version