Site icon Vistara News

Microsoft Windows Outage: ಮೈಕ್ರೊಸಾಫ್ಟ್​​ ಸಮಸ್ಯೆ ; ಬೆಂಗಳೂರು ಸೇರಿದಂತೆ ದೇಶದ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲಕಲ್ಲೋಲ

Microsoft Windows Outage

ನವದೆಹಲಿ: ಜಾಗತಿಕವಾಗಿ ಮೈಕ್ರೋಸಾಫ್ಟ್ ಕಾರ್ಯನಿರ್ವಹಣೆ ಸ್ಥಗಿತಗೊಂಡ (Microsoft Windows Outage) ಕಾರಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BIAL) ಸೇರಿದಂತೆ ಭಾರತದ ಎಲ್ಲ ವಿಮಾನ ನಿಲ್ದಾಣಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಾಹಿತಿ ದೊರಕದೆ ಪ್ರಯಾಣಿಕರು ಸಮಸ್ಯೆ ಎದುರಿಸಿದ್ದು ಎಲ್ಲಡೆ ಅಲ್ಲೋಲಕಲ್ಲೋಲ ಉಂಟಾಗಿದೆ. ಇಂಡಿಗೊ, ಅಕಾಸಾ ಏರ್, ಸ್ಪೈಸ್ ಜೆಟ್, ಏರ್ ಇಂಡಿಯಾ, ವಿಸ್ತಾರಾ ಮತ್ತು ಇತರ ವಿಮಾನಯಾನ ಸಂಸ್ಥೆಗಳ ಚೆಕ್-ಇನ್ ವ್ಯವಸ್ಥೆಗಳಿಗೆ ಸಮಸ್ಯೆಯಾಗಿವೆ. ಹೀಗಾಗಿ ದೇಶಾದ್ಯಂತ ಹಲವಾರು ವಿಮಾನ ನಿಲ್ದಾಣಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು. ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳನ್ನು ರದ್ದುಪಡಿಸಲಾಯಿತು.

ಬೆಂಗಳೂರಿನಿಂದ ನಾನಾ ಪ್ರದೇಶಗಳಿಗೆ ಹೊರಟಿದ್ದ ವಿಮಾನಗಳಿಗೆ ಪ್ರಯಾಣಿಕರಿಗೆ ಬೋರ್ಡಿಂಗ್ ಆಗಲು ಸಾಧ್ಯವಾಗಲಿಲ್ಲ. ನಿಲ್ದಾಣದ ಅಲ್ಲಲ್ಲಿ ಪ್ರಯಾಣಿಕರು ಆತಂಕದಲ್ಲಿ ಕಂಡು ಬಂದರು. ವಿಳಂಬ ಮತ್ತು ಇತರ ಸಮಸ್ಯೆ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ (ಎಂಒಸಿಎ) ಮೂಲಗಳುತಿಳಿಸಿವೆ. ಅಲ್ಲದೆ, ಸಮಸ್ಯೆ ಪರಿಹರಿಸಲು ಸಮನ್ವಯ ಸಾಧಿಸಲಾಗುತ್ತದೆ ಎಂದೂ ತಿಳಿಸಿದರು.

ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದರು. ಬೋರ್ಡಿಂಗ್ ಪಾಸ್​ ಪಡೆಯಲು ಸಾಧ್ಯವಾಗದೇ ಮುಂದಕ್ಕೆ ಸಾಗಲಾಗದೆ ತೊಂದರೆಗೆ ಒಳಪಟ್ಟರು. ಸ್ಥಳೀಯವಾಗಿ ಇದ್ದ ಸಿಬ್ಬಂದಿಗಳು ಕೂಡ ಅದಕ್ಕೊಂದು ಪರಿಹಾರ ಸೂಚಿಸಲು ಸಾಧ್ಯವಾಗಲಿಲ್ಲ. ದೂರದ ಊರಿಗೆ ಪ್ರಯಾಣಕ್ಕೆ ಹೊರಟ ಜನರು ಆತಂಕ್ಕೆ ಒಳಗಾದರು.

ಮೈಕ್ರೋಸಾಫ್ಟ್ ವಕ್ತಾರರೊಬ್ಬರು ಮಾಹಿತಿ ನೀಡಿ, ಥರ್ಡ್​ ಪಾರ್ಟಿ ಸಾಫ್ಟ್​ವೇರ್ ಅಪ್​ಡೇಟ್​ನಿಂದಾಗಿ ವಿಂಡೋಸ್ ಸಾಧನಗಳ ಮೇಲೆ ಪರಿಣಾಮ ಬೀರಿದೆ. ನಾವು ಶೀಘ್ರದಲ್ಲೇ ಪರಿಹಾರವನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಟರ್ಮಿನಲ್​ನಲ್ಲಿ ಸಿಕ್ಕಿ ಹಾಕಿಕೊಂಡ ಪ್ರಯಾಣಿಕರು

ತಾಂತ್ರಿಕ ದೋಷದ ಕಾರಣ ವಿಮಾನ ನಿಲ್ದಾಣದ ಒಳಗಿನ ದೃಶ್ಯಗಳು ಸಮಸ್ಯಾತ್ಮಕವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಕಷ್ಟಗಳನ್ನು ವಿವರಿಸಿದ್ದರು. ಪ್ರಯಾಣಿಕರು ಟರ್ಮಿನಲ್​ನಲ್ಲಿ ಸಿಲುಕಿಕೊಂಡಿರುವ ವಿಡಿಯೊಗಳಿಗೆ.

ಮೈಕ್ರೋಸಾಫ್ಟ್ ಸಮಸ್ಯೆಯು ಬ್ಯಾಂಕುಗಳು ಹಣ ವರ್ಗಾವಣೆಗೂ ಬಾಧಿಸಿದೆ. ವಿಶ್ವಾದ್ಯಂತ ಮೈಕ್ರೋಸಾಫ್ಟ್ ಬಳಕೆದಾರು ನಾನಾ ರೀತಿಯ ಸಮಸ್ಯೆಗೆ ಒಳಗಾಗಿದ್ದಾಎತ. ಮೈಕ್ರೋಸಾಫ್ಟ್ 365 ಅಪ್ಲಿಕೇಶ ನ್​​ಗಳು ಮತ್ತು ಸೇವೆಗಳಿಗೆ ತೊಂದರೆಯಾಗಿದೆ. ಸಮಸ್ಯೆಗೆ ನಿಖರ ಕಾರಣ, ಸ್ವರೂಪ ಅಸ್ಪಷ್ಟ. ಮೈಕ್ರೋಸಾಫ್ಟ್ ತನ್ನ ಎಕ್ಸ್ ಪೋಸ್ಟ್​​ನಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಸೂಚಿಸಿದ್ದರೂಹೇಳಿದಂತೆ ಆಗಿಲ್ಲ.

ಡೌನ್​ಡಿಟೆಕ್ಟರ್​ ವೀಸಾ, ಎಡಿಟಿ ಸೆಕ್ಯುರಿಟಿ, ಅಮೆಜಾನ್ ಮತ್ತು ಅಮೆರಿಕನ್ ಏರ್​ಲೈನ್ಸ್​ ಮತ್ತು ಡೆಲ್ಟಾದಂತಹ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ತೊಂದರೆ ಆಗಿವೆ.

ವಿಮಾನ ನಿಲ್ದಾಣಗಳಲ್ಲಿ ಅಧ್ವಾನ

ಐಟಿ ಸಮಸ್ಯೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದ ಕೆಲವು ಸೇವೆಗಳ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರಿದೆ ಎಂದು ದೆಹಲಿ ವಿಮಾನ ನಿಲ್ದಾಣವು ಸೋಶಿಯಲ್ ಮೀಡಿಯಾ ಪೋಸ್ಟ್​​ನಲ್ಲಿ ತಿಳಿಸಿದೆ. ನಮ್ಮ ಪ್ರಯಾಣಿಕರ ತೊಂದರೆ ಕಡಿಮೆ ಮಾಡಲು ನಾವು ಎಲ್ಲಾ ಪಾಲುದಾರರೊಂದಿಗೆ ಸತತವಾಗಿ ಕೆಲಸ ಮಾಡುತ್ತಿದ್ದೇವೆ. ವಿಮಾನ ಮಾಹಿತಿಗಾಗಿ ಪ್ರಯಾಣಿಕರು ಸಂಬಂಧಪಟ್ಟ ವಿಮಾನಯಾನ ಸಂಸ್ಥೆ ಅಥವಾ ಸಹಾಯ ಕೇಂದ್ರಕ್ಕೆ ಸಂಪರ್ಕಿಸಲು ತಿಳಿಸಲಾಗಿದೆ ಹೇಳಿದೆ.

ವಿಮಾನಯಾನ ಸಂಸ್ಥೆ ಇಂಡಿಗೊ ಎಕ್ಸ್ ಪೋಸ್ಟ್​ ಮಾಡಿ ” ಮೈಕ್ರೋಸಾಫ್ಟ್ ಸ್ಥಗಿತದಿಂದ ನಮ್ಮ ವ್ಯವಸ್ಥೆಗಳಿಗೆ ತೊಂದರೆ ಆಗಿವೆ. ಇದು ಇತರ ಕಂಪನಿಗಳ ಮೇಲೂ ಪರಿಣಾಮ ಬೀರುತ್ತಿದೆ. ಬುಕಿಂಗ್, ಚೆಕ್-ಇನ್, ನಿಮ್ಮ ಬೋರ್ಡಿಂಗ್ ಪಾಸ್ ಮತ್ತು ​ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.

ಸ್ಪೈಸ್ ಜೆಟ್ ಸಂಸ್ಥೆ, ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡವು ಕೆಲಸ ಮಾಡುತ್ತಿದೆ. ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಸಮಸ್ಯೆ ಪರಿಹರಿಸಿದ ನಂತರ ವಿಷಯ ತಿಳಿಸುತ್ತೇವೆ ಎಂದು ಹೇಳಿದೆ.

ಏರ್​ ಇಂಡಿಯಾ ಪ್ರತಿಕ್ರಿಯಿಸಿ, ಪ್ರಸ್ತುತ ಮೈಕ್ರೋಸಾಫ್ಟ್ ಸ್ಥಗಿತದಿಂದಾಗಿ ನಮ್ಮ ಡಿಜಿಟಲ್ ವ್ಯವಸ್ಥೆಗಳ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರಿವೆ. ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಿ ಎಂದಿದೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ ಭದ್ರತೆಗಾಗಿ ಭಾರತೀಯ ಸೇನೆಯ ಶ್ವಾನದಳ!

ಏರ್ ಇಂಡಿಯಾ ಎಕ್ಸ್​​ಪ್ರೆಸ್​ “ಡಿಜಿಟಲ್ ಸಮಸ್ಯೆಗಳು ಜಾಗತಿಕವಾಗಿ ಅನೇಕ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳ ಕಾರ್ಯಾಚರಣೆಗಳ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರಿವೆ. ದಯವಿಟ್ಟು ನಿಮ್ಮ ಪ್ರಯಾಣವನ್ನು ಯೋಜಿಸಿ ಎಂದಿದೆ.

ಆಕಾಸಾ ಏರ್​​, ನಮ್ಮ ಸೇವಾ ಪೂರೈಕೆದಾರರೊಂದಿಗಿನ ಮೂಲಸೌಕರ್ಯ ಸಮಸ್ಯೆಗಳಿಂದಾಗಿ, ಬುಕಿಂಗ್, ಚೆಕ್-ಇನ್ ಮತ್ತು ಬುಕಿಂಗ್ ಸೇವೆಗಳನ್ನು ನಿರ್ವಹಿಸುವುದು ಸೇರಿದಂತೆ ನಮ್ಮ ಕೆಲವು ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

ವಿಸ್ತಾರಾ ಏರ್​ಲೈನ್ಸ್ “ನಮ್ಮ ಸೇವಾ ಪೂರೈಕೆದಾರರು ಎದುರಿಸಿದ ಜಾಗತಿಕ ಸ್ಥಗಿತದಿಂದಾಗಿ ನಮ್ಮ ಕಾರ್ಯಾಚರಣೆಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಹೇಳದೆ.

Exit mobile version