ಮುಂಬಯಿ: ಬಿಲೇನಿಯರ್ ನೀತಾ ಅಂಬಾನಿ (Nita Ambani) ಕಾರುಗಳ ಪ್ರೇಮಿ ಎಂಬುದು ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಅವರ ಕಾರು ಗ್ಯಾರೇಜ್ನಲ್ಲಿ ಹಲವಾರು ಐಷಾರಾಮಿ ಕಾರುಗಳಿವೆ ಆ ಪಟ್ಟಿಗೆ ಇದೀಗ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಸೆಡಾನ್ ಸೇರಿಕೊಂಡಿದೆ. ಅಂಬಾನಿ ಕುಟುಂಬದ ಆಕರ್ಷಕ ಕಾರುಗಳ ಸಂಗ್ರಹಕ್ಕೆ ಈ ಆಕರ್ಷಕ ರೋಸ್ ಕ್ವಾರ್ಟ್ಜ್ ಶೇಡ್ ವಾಹನ ಸೇರ್ಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲ ಹುಟ್ಟುಹಾಕಿದೆ. ವಿಶೇಷ ಬಣ್ಣಗಳು ಸೇರಿದಂತೆ ನಾನಾ ರೀತಿಯ 168 ಕ್ಕೂ ಹೆಚ್ಚು ಕಾರುಗಳು ಮುಖೇಶ್ ಅಂಬಾನಿ ಕಾರು ಗ್ಯಾರೇಜಿನಲ್ಲಿದೆ. ಈ ಸಂಗ್ರಹವು ದುಬಾರಿ ಮತ್ತು ವಿಶೇಷ ವಾಹನಗಳ ಶ್ರೇಣಿಯನ್ನು ಹೊಂದಿದೆ/ ಇದು ಐಷಾರಾಮಿ ಜೀವನ ಶೈಲಿಯ ಭಾಗವಾಗಿದೆ.
ನೀತಾ ಅಂಬಾನಿ ಅವರ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿಯ ರೋಸ್ ಕ್ವಾರ್ಟ್ಜ್ ಶೇಡ್ ಹೊಂದಿದೆ. ಇದು ಕಾರುಗಳಲ್ಲಿ ಬಳಸಲು ಅತ್ಯಂತ ವಿರಳ ಬಣ್ಣವಾಗಿದೆ. ಇಂಟೀರಿಯರ್ ಆರ್ಕಿಡ್ ವೆಲ್ವೆಟ್ ಬಣ್ಣವನ್ನು ಹೊಂದಿದೆ ಹಾಗೂ ಹೆಚ್ಚು ಆಕರ್ಷಣೀಯವಾಗಿದೆ.
ರೋಲ್ಸ್ ರಾಯ್ಸ್ ಕಸ್ಟಮೈಸ್ಡ್ ಆಯ್ಕೆಯನ್ನು ನೀಡುತ್ತದೆ. ಖರೀದಿದಾರ ಆದ್ಯತೆಗಳಿಗೆ ತಕ್ಕಂತೆ ಸಿದ್ಧಪಡಿಸಿಕೊಡುತ್ತದೆ. ಸ್ಟ್ಯಾಂಡರ್ಡ್ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಕಾರಿನ ಬೆಲೆಯು ರೂ.12 ಕೋಟಿಗಳಾಗಿದ್ದರೆ, ನೀತಾ ಅಂಬಾನಿಯ ರೋಸ್ ಕ್ವಾರ್ಟ್ಜ್ ಆರ್ಕಿಡ್ ವೆಲ್ವೆಟ್ ಇಂಟೀರಿಯರ್ ಹೊಂದಿರುವ ಕಾರಣ ಬೆಲೆ ಇನ್ನಷ್ಟು ಹೆಚ್ಚಾಗಿರಬಹುದು.
ಇದನ್ನೂ ಓದಿ: Rishabh Pant : ವಿಶ್ವ ಕಪ್ ತಂಡದಲ್ಲಿ ರಿಷಭ್ ಪಂತ್ಗೆ ಚಾನ್ಸ್ ಖಚಿತ, ಇಲ್ಲಿದೆ ವಿವರ
ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಐಷಾರಾಮಿ ಸೆಡಾನ್ 6.75-ಲೀಟರ್ ಟ್ವಿನ್-ಟರ್ಬೊ ವಿ 12 ಎಂಜಿನ್ ಹೊಂದಿದ್ದು, 571 ಬಿಹೆಚ್ ಪಿ ಮತ್ತು 900 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂಭಾಗದ ಚಕ್ರಗಳಿಗೆ ಶಕ್ತಿ ನೀಡುವ ಸ್ವಯಂಚಾಲಿತ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾದ ಇದು ರೋಲ್ಸ್ ರಾಯ್ಸ್ ಬ್ರಾಂಡ್ ನ ವಿಶಿಷ್ಟ ಚಾಲನಾ ಅನುಭವ ನೀಡುತ್ತದೆ.
117 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿರುವ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಅಂಬಾನಿ ಕುಟುಂಬವು ವ್ಯಾಪಕವಾದ ಕಾರು ಸಂಗ್ರಹಕ್ಕೆ ಹೆಸರುವಾಸಿಯಾಗಿದೆ. ಮುಖೇಶ್ ಅಂಬಾನಿ ಅವರ ಕುಟುಂಬ ಈ ಹಿಂದೆ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್ ಯುವಿ ಕಾರನ್ನು ಖರೀದಿ ಮಾಡಿತ್ತು.