Site icon Vistara News

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Mumbai Spa

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ (Mumbai) ವೊರ್ಲಿ ಪ್ರದೇಶದ ಸ್ಪಾ (Spa) ಒಂದರಲ್ಲಿ ಕೊಲೆಯಾದ ವ್ಯಕ್ತಿಯ ಮೈಮೇಲೆ ಇದ್ದ ಟ್ಯಾಟೂ, ಟ್ಯಾಟೂ ಹಾಕಿಸಿಕೊಂಡ ಹೆಸರುಗಳು ಕೊಲೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ. ಟ್ಯಾಟೂ (Tattoo) ಹೆಸರುಗಳೇ ಹಿಸ್ಟರಿ ಶೀಟರ್‌ ಗುರು ವಾಘ್ಮರೆಯ ಕೊಲೆ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ತನಿಖೆ ನಡೆಸಿ, ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣವೀಗ ದೇಶಾದ್ಯಂತ ಸುದ್ದಿಯಾಗಿದೆ.

ಗುರು ವಾಘ್ಮರೆಯನ್ನು ಜುಲೈ 24ರಂದು ಸ್ಪಾನಲ್ಲಿ ಕೊಲೆ ಮಾಡಲಾಗಿದೆ. ಸ್ಪಾ ಮಾಲೀಕ ಸಂತೋಷ್‌ ಶೆರೆಕರ್‌ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ತನಿಖೆ ನಡೆಸಿ ಬಂಧಿಸಿದ್ದಾರೆ. ಇನ್ನಿಬ್ಬರನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ಬೆಳಗಿನ ಜಾವ ಮುಂಬೈನ ವೊರ್ಲಿಯಲ್ಲಿರುವ ಸಾಫ್ಟ್‌ ಟಚ್‌ ಸ್ಪಾದಲ್ಲಿ 48 ವರ್ಷದ ಗುರು ವಾಘ್ಮರೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಟ್ಯಾಟೂ ಹೆಸರುಗಳೇ ಕೇಸ್‌ ಭೇದಿಸಲು ಕಾರಣ

ಗುರು ವಾಘ್ಮರೆಯು ಆರ್‌ಟಿಇ ಕಾರ್ಯಕರ್ತನೂ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈತನು ಹಿಸ್ಟರಿ ಶೀಟರ್‌ ಕೂಡ ಆಗಿದ್ದಾನೆ. ಆದರೆ, ಹತ್ಯೆಗೀಡಾಗುವ ಮುನ್ನ ಅಪಾಯದ ಮುನ್ಸೂಚನೆ ಅರಿತಿದ್ದ ಗುರು ವಾಘ್ಮರೆಯು ತನಗಿದ್ದ 22 ವೈರಿಗಳ ಹೆಸರುಗಳನ್ನು ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಪೋಸ್ಟ್‌ ಮಾರ್ಟಮ್‌ ಮಾಡುವ ವೇಳೆ ತೊಡೆಯ ಮೇಲೆ ಕಾಣಿಸಿದ ಹೆಸರುಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೊಲೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಗುರು ವಾಘ್ಮರೆಯು ಸ್ಪಾ ಮಾಲೀಕ ಸಂತೋಷ್‌ ಶೆರೆಕರ್‌ಗೆ ಹಣಕ್ಕಾಗಿ ಪೀಡಿಸುವುದು, ಬೆದರಿಕೆ ಹಾಕುವುದು ಸೇರಿ ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಸಂತೋಷ್‌, ಗುರು ವಾಘ್ಮರೆಯ ಹತ್ಯೆಗೆ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ. ಗುರು ವಾಘ್ಮರೆಯನ್ನು ಕೊಲ್ಲಲು ಮೊಹಮ್ಮದ್‌ ಫಿರೋಜ್‌ ಅನ್ಸಾರಿಗೆ ಸಂತೋಷ್‌ 6 ಲಕ್ಷ ರೂ. ನೀಡಿದ್ದ ಎನ್ನಲಾಗಿದೆ.

ಮೊಹಮ್ಮದ್‌ ಫಿರೋಜ್‌ ಅನ್ಸಾರಿಗೂ ಗುರು ಮೇಲೆ ಸೇಡಿತ್ತು. ಕಳೆದ ವರ್ಷ ಮುಂಬೈನ ನಲ್ಲಾಸೋಪರ ಬಳಿಯಲ್ಲಿದ್ದ ಮೊಹಮ್ಮದ್‌ ಫಿರೋಜ್‌ ಅನ್ಸಾರಿ ಒಡೆತನದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ, ಅದನ್ನು ಸ್ಥಗಿತಗೊಳಿಸಿದ್ದರು. ಗುರು ವಾಘ್ಮರೆ ನೀಡಿದ ದೂರಿನಿಂದಾಗಿಯೇ ಸ್ಪಾ ಸ್ಥಗಿತಗೊಂಡಿತ್ತು. ಹಾಗಾಗಿ, ಅನ್ಸಾರಿಯು ಕೆಲವರೊಂದಿಗೆ ಸೇರಿ ಗುರು ವಾಘ್ಮರೆಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Murder in PG: ಗೆಳತಿಗಾಗಿ ಕೊಲೆಯಾಗಿ ಹೋದ ಕೃತಿ ಕುಮಾರಿ; ಪ್ರೇಯಸಿಯನ್ನು ಬಂಧನದಲ್ಲಿಟ್ಟು ಕ್ರೌರ್ಯ ಮೆರೆದ ಪಾತಕಿ

Exit mobile version