Site icon Vistara News

Navaratri 2022 | ನವರಾತ್ರಿ ನವವರ್ಣ: ವಿಸ್ತಾರ ವಿಡಿಯೊ ಸಂಭ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ

Navaratri 2022

ಬೆಂಗಳೂರು: ನಾಡ ಹಬ್ಬ ನವರಾತ್ರಿಯ (Navaratri 2022) ಸಂಭ್ರಮವನ್ನು ಹೆಚ್ಚಿಸಲು “ವಿಸ್ತಾರ ನ್ಯೂಸ್‌ʼʼ ಆರಂಭಿಸಿರುವ ನವರಾತ್ರಿ ನವವರ್ಣ ವಿಡಿಯೊ ಸಂಭ್ರಮ ಡಿಜಿಟಲ್‌ ವೇದಿಕೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನವರಾತ್ರಿಯ ಮೊದಲೆರಡು ದಿನಗಳಲ್ಲಿಯೇ ನೂರಾರು ವಿಡಿಯೊಗಳು ಹರಿದು ಬಂದಿವೆ.

ನವರಾತ್ರಿಯ ಪ್ರತಿದಿನವೂ ಮಹಿಳೆಯರು ನಿಗದಿತ ಬಣ್ಣದ ಉಡುಗೆ ಧರಿಸಿ ಸಂಭ್ರಮಿಸುವುದು ಸಾಮಾನ್ಯ. ಈ ಬಾರಿ ತಾವು ಸಂಭ್ರಮ ಪಡುತ್ತಿರುವ ಸಂದರ್ಭವನ್ನು ವಿಡಿಯೊ ಮಾಡಿ ಕಳುಹಿಸಲು “ವಿಸ್ತಾರ ನ್ಯೂಸ್‌ʼʼ ಕೋರಿತ್ತು. ಇದಕ್ಕೆ ನಿರೀಕ್ಷೆಗೂ ಮೀರಿ ನಾಡಿನ ಮಹಿಳೆಯರು ಸ್ಪಂದಿಸಿದ್ದು, ವಿಡಿಯೊದ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಆಯ್ದ ವಿಡಿಯೊಗಳನ್ನು ಮಾತ್ರ ನಮ್ಮ ಡಿಜೆಟಲ್‌ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ.

ನವರಾತ್ರಿಯ ಸಂದರ್ಭದಲ್ಲಿ ದೇವಿಯ ಒಂಬತ್ತು ರೂಪಗಳಲ್ಲಿ ಪ್ರತಿದಿನ ಒಂದೊಂದು ರೂಪದಂತೆ ಆವಾಹಿಸಿ ಪೂಜಿಸಲಾಗುತ್ತದೆ. ಪ್ರತಿ ದೇವಿಗೆ ವಿಶೇಷವಾದ ಸ್ತ್ರೋತ್ರಗಳಿರುವಂತೆ ವಿಶೇಷವಾದ ವರ್ಣ, ಪುಷ್ಪ, ನೈವೇದ್ಯ, ರಾಗಗಳೂ ಇವೆ. ಆಯಾ ದಿನದಂದು ಪೂಜಿಸುವ ದೇವಿಗೆ ಇಷ್ಟವಾದ ವರ್ಣದ ದಿರಸನ್ನು ಧರಿಸಿ ಮಹಿಳೆಯರು ಸಂಭ್ರಮಿಸುತ್ತಾರೆ. ಈ ಸಂಭ್ರಮವನ್ನು ಈಗ ವಿಡಿಯೊ ಮೂಲಕ ಹಂಚಿಕೊಂಡು ತಮ್ಮವರೆಲ್ಲರೂ ಸಂಭ್ರಮ ಪಡುವಂತೆ ಮಾಡುತ್ತಿದ್ದಾರೆ.

ನವರಾತ್ರಿಯ ಮೊದಲೆರಡು ದಿನ ಆಯಾ ದಿನದ ವರ್ಣದ ದಿರಸನ್ನು ಧರಿಸಿ ನೃತ್ಯ ಮಾಡಿದ, ಕೋಲಾಟ ಆಡಿದ, ಭಜನೆ ಮಾಡಿದ ವಿಡಿಯೊಗಳಲ್ಲದೆ, ತಾವು ವಿಶೇಷವಾಗಿ ಸಂಭ್ರಮಿಸಿದ ವಿಡಿಯೊಗಳನ್ನು ವಿಸ್ತಾರ ನ್ಯೂಸ್‌ ಓದುಗರು, ನೋಡುಗರು ಕಳುಹಿಸಿಕೊಟ್ಟಿದ್ದಾರೆ. ಮೊದಲ ದಿನ ಬಿಳಿಯ ವಸ್ತ್ರ ಧರಿಸಿದ ಮಹಿಳೆಯರು ಫ್ಯಾಷನ್‌ ಶೋನಂತೆ ಹೆಜ್ಜೆ ಹಾಕಿದ ಮತ್ತು ಸಮೂಹ ನೃತ್ಯ ಮಾಡಿದ ವಿಡಿಯೊಗಳು ರಾಜ್ಯದ ಗಮನ ಸೆಳೆದಿವೆ.

ನೀವು ನಿಮ್ಮ ವಿಡಿಯೊ ಕಳುಹಿಸಬಹುದು

ಈ ಡಿಜಿಟಲ್‌ ಸಂಭ್ರಮದಲ್ಲಿ ನೀವೂ ಕೂಡ ಭಾಗವಹಿಸಬಹುದು. ನಿಮ್ಮ ಕುಟುಂಬದ ಮಹಿಳಾ ಸದಸ್ಯರು, ಬಂಧುಗಳು, ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು, ಕಾಲೇಜು ಸಹಪಾಠಿಗಳು, ಸಹೋದ್ಯೋಗಿಗಳು, ಸಂಘ ಸಂಸ್ಥೆಯ ಸದಸ್ಯರು ಹೀಗೆ ನಿಮ್ಮ ಆಪ್ತರೊಂದಿಗೆ ನೀವು ಆ ದಿನದ ಬಣ್ಣದ ಉಡುಗೆ ತೊಟ್ಟು (ನೆನಪಿರಲಿ ಎಲ್ಲರೂ ನಿಗದಿತ ಒಂದೇ ವರ್ಣದ ದಿರಸು ಧರಿಸಿರಬೇಕು) ವಿಶೇಷ ರೀತಿಯಲ್ಲಿ ನಿಮ್ಮ ಮೊಬೈಲ್‌ನಲ್ಲಿಯೇ ವಿಡಿಯೊ ಮಾಡಿಕೊಳ್ಳಿ. ಅದನ್ನು ನಮಗೆ ಕಳುಹಿಸಿ.
ನಿಮ್ಮ ವಿಡಿಯೊವನ್ನು ಇನ್ನಷ್ಟು ಆಕರ್ಷಣೀಯವಾಗಿಸಿ ವಿಸ್ತಾರ ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ನೀವು ನಿಮ್ಮವರೊಂದಿಗೆ ಲಿಂಕ್‌ ಹಂಚಿಕೊಂಡು ಅವರೂ ಸಂಭ್ರಮ ಪಡುವಂತೆ ಮಾಡಬಹುದು.

ವಿಡಿಯೊ ಕಳುಹಿಸುವುದು ಹೇಗೆ?
ಸಿಂಪಲ್. ಈ ಕೆಳಗಿನ ವಾಟ್ಸ್‌ ಆ್ಯಪ್‌ ನಂಬರ್‌ಗೆ ವಿಡಿಯೊವನ್ನು ಕಳುಹಿಸಿ. ವಿಡಿಯೊ ಕಳುಹಿಸುವಾಗ ನಿಮ್ಮ ತಂಡದ ಒಬ್ಬರ ಹೆಸರು ಮತ್ತು ಊರನ್ನು ತಿಳಿಸಲು ಮರೆಯಬೇಡಿ.
ವಾಟ್ಸ್‌ ಆ್ಯಪ್‌ ನಂಬರ್‌: 96069 42037

ಯಾವ ದಿನ ಯಾವ ಬಣ್ಣ?

ಈ ವಿಷಯ ನಿಮ್ಮ ಗಮನದಲ್ಲಿರಲಿ…

ಇದನ್ನೂ ಓದಿ | Navaratri 2022 | ನವರಾತ್ರಿಯಲ್ಲಿ ಕನ್ಯಾ ಪೂಜೆ ಹೇಗೆ ಮಾಡಬೇಕು? ಏನು ಫಲ?

Exit mobile version