ನವದೆಹಲಿ: ಮಧ್ಯಂತರ ಬಜೆಟ್ 2024 (Budget 2024) ಮಂಡಿಸಲು ಕೆಲವೇ ಗಂಟೆಗಳ ಮೊದಲು ಹಣಕಾಸು ಸಚಿವಾಲಯದ ಕಚೇರಿಗೆ ಆಗಮಿಸಿದಾಗ, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ನೀಲಿ ಮತ್ತು ಕೆನೆ ಬಣ್ಣದ ತಸರ್ ರೇಷ್ಮೆ ಸೀರೆಯನ್ನು ಧರಿಸಿದ್ದರು. ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಸಾಂಪ್ರದಾಯಿಕ ವಸ್ತ್ರಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ಸ್ಥಳೀಯ ಉದ್ಯಮಗಳ ಪ್ರೇರಣೆ ನೀಡುವ ಸಂದೇಶವನ್ನು ಪ್ರತಿ ಬಾರಿಯೂ ಕಳುಹಿಸುತ್ತಾರೆ. ಅಂತೆಯೇ ಅವರು ಈ ಬಾರಿ ತಸಾರ್ ಸಿಲ್ಕ್ ಸಾರಿಯಲ್ಲಿ ಮಿಂಚಿದ್ದಾರೆ.
ಕಳೆದ ವರ್ಷ ಸಚಿವರು ನವಲಗುಂದ ಕಸೂತಿಯೊಂದಿಗೆ ಕೈಯಿಂದ ನೇಯ್ದ ಕೆಂಪು ಇಳಕಲ್ ಸೀರೆ (ಕರ್ನಾಟಕದ ಇಳಕಲ್ನ ಸೀರೆ) ಆಯ್ಕೆ ಮಾಡಿದ್ದರು. ಇದು ಧಾರವಾಡದ ಕ್ಷೇತ್ರದ ಸಂಸಚ ಸಂಸದೀಯ ವ್ಯವಹಾರ ಖಾತೆ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರ ಉಡುಗೊರೆಯಾಗಿತ್ತು. ಬಜೆಟ್ ದಿನದಂದು ಅವರು ಆ ಸೀರೆಯನ್ನು ಧರಿಸುತ್ತಾರೆ ಎಂದು ನಿರ್ಧರಿಸಿದ ಬಳಿಕ ಅದರ ಮೇಲೆ ಕಸೂತಿ ಕೆಲಸ ಮಾಡಲಾಯಿತು.
And it's here… #Budget2024 pic.twitter.com/N5hwB3Wf83
— Divya Gandotra Tandon (@divya_gandotra) February 1, 2024
ಅಚ್ಚುಮೆಚ್ಚಿನ ಸೀರೆ
ಆಫ್-ವೈಟ್ ಅಥವಾ ಕ್ರೀಮ್ ಬಣ್ಣವು ಹಣಕಾಸು ಸಚಿವರಿಗೆ ಅಚ್ಚುಮೆಚ್ಚಿನದ್ದಾಗಿದೆ. ಏಕೆಂದರೆ ಅವರು ಆಗಾಗ್ಗೆ ಈ ಬಣ್ಣದ ವಸ್ತ್ರ ಧರಿಸುತ್ತಾರೆ. 2021 ರಲ್ಲಿ ನಿರ್ಮಲಾ ಅವರು ಕೆಂಪು ಮತ್ತು ಆಫ್-ವೈಟ್ ಪೋಚಂಪಳ್ಳಿ ಸೀರೆ ಧರಿಸಿದ್ದರು. 2022ರಲ್ಲಿ, ಸೀತಾರಾಮನ್ ತುಕ್ಕು ಹಿಡಿದ ಕಂದು ಬಣ್ಣದ ಬೊಮ್ಕೈ ಸೀರೆ ಆಯ್ಕೆ ಮಾಡಿದ್ದರು.
2020ರಲ್ಲಿ ಸಚಿವರು ತೆಳುವಾದ ನೀಲಿ ಅಂಚು ಹೊಂದಿರುವ ಸಂಪೂರ್ಣ ಹಳದಿ ರೇಷ್ಮೆ ಸೀರೆ ಧರಿಸಿದ್ದರು. 2019 ರಲ್ಲಿ ಅವರು ಚಿನ್ನದ ಅಂಚು ಹೊಂದಿರುವ ಗುಲಾಬಿ ಮಂಗಳಗಿರಿ ಸೀರೆಯನ್ನು ಧರಿಸಿದ್ದರು.
ಸ್ಥಿರ ಬಜೆಟ್ ಮಂಡನೆ
ಕೈಯಿಂದ ನೇಯ್ದ ಸೀರೆಗಳ ಹೊರತಾಗಿಯೂ ನಿರ್ಮಲಾ ಸೀತಾರಾಮನ್ ಅವರ ಇದುವರೆಗೆ ಸ್ಥಿರ ಬಜೆಟ್ ಮಂಡಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಕೊಂಡೊಯ್ಯುವ ಕೆಂಪು ಪುಸ್ತಕವೂ ಆಕರ್ಷಣೀಯವಾಗಿದೆ. 2021 ರಿಂದ, ನಿರ್ಮಲಾ ಸೀತಾರಾಮನ್ ಅವರು ಕೆಂಪು ಕವರ್ನಲ್ಲಿ ಟ್ಯಾಬ್ಲೆಟ್ ತೆಗೆದುಕೊಂಡು ಬಜೆಟ್ ದಾಖಲೆಗಳನ್ನು ಓದುತ್ತಿದ್ದಾರೆ.
ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಇದಾಗಿರುವುದರಿಂದ ಮಧ್ಯಂತರ ಬಜೆಟ್ 2024 ನಿರ್ಣಾಯಕವಾಗಿದೆ. ಈ ಏಪ್ರಿಲ್ನಲ್ಲಿ ಪ್ರಾರಂಭವಾಗುವ 2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯವು ಪರಿಶೀಲನಾ ವರದಿಯಲ್ಲಿ ತಿಳಿಸಿದೆ. ಭಾರತದ ಆರ್ಥಿಕತೆಯು 2022-23ರಲ್ಲಿ ಶೇಕಡಾ 7.2 ಮತ್ತು 2021-22ರಲ್ಲಿ ಶೇಕಡಾ 8.7 ರಷ್ಟು ಬೆಳೆದಿದೆ. ಬಜೆಟ್ 2023 ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದ್ದು, 2023-24ರಲ್ಲಿ ಬಂಡವಾಳ ವೆಚ್ಚವನ್ನು ಶೇಕಡಾ 33 ರಷ್ಟು ಹೆಚ್ಚಿಸಿ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಿದೆ, ಇದು ಜಿಡಿಪಿಯ ಶೇಕಡಾ 3.3 ರಷ್ಟಿರುತ್ತದೆ.