Site icon Vistara News

Alexei Navalny: ರಷ್ಯಾ ಪ್ರತಿಪಕ್ಷದ ನಾಯಕ, ಪುಟಿನ್ ಕಡು ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು

Opposition Leader Alexei Navalny dead in Jail, Russia, Says Reports

ಮಾಸ್ಕೋ: ಜೈಲಿನಲ್ಲಿರುವ ರಷ್ಯಾದ (Russia) ವಿರೋಧ ಪಕ್ಷದ ನಾಯಕ ಅಲೆಕ್ಸಿ (Opposition Leader Alexei Navalny ) ನವಲ್ನಿ ಅವರು ಮರಣಹೊಂದಿದ್ದಾರೆ (Dead in Jail) ಎಂದು ಅವರು ಶಿಕ್ಷೆ ಅನುಭವಿಸುತ್ತಿದ್ದ ಯಮಲೋ-ನೆನೆಟ್ಸ್ ಪ್ರದೇಶದ ಜೈಲು ಸೇವೆ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನವಲ್ನಿ ವಾಕ್ ಮಾಡಿದ ನಂತರ ತೊಂದರೆಯನ್ನು ಅನುಭವಿಸಿದರು. ತಕ್ಷಣವೇ ಪ್ರಜ್ಞೆಯನ್ನು ಕಳೆದುಕೊಂಡರು. ವೈದ್ಯಕೀಯ ಸಿಬ್ಬಂದಿ ತಕ್ಷಣ ಆಗಮಿಸಿದರು ಮತ್ತು ಆಂಬ್ಯುಲೆನ್ಸ್ ತಂಡವನ್ನು ಕರೆಯಲಾಯಿತು. ಆದರೆ, ಅವರು ಮೃತಪಟ್ಟರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜ್ಞೆ ತಪ್ಪಿದ ಅಲೆಕ್ಸಿಯನ್ನು ಬದುಕಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಲಾಯಿತು. ಆದರೆ, ಯಾವುದೇ ಸಕಾರಾತ್ಮಕ ಪರಿಣಾಮ ಸಿಗಲಿಲ್ಲ. ಅರೆ ವೈದ್ಯಕೀಯ ಸಿಬ್ಬಂದಿಯೂ ಅಲೆಕ್ಸಿಯ ನಿಧನವನ್ನು ಖಚಿತಪಡಿಸಿದರು ಮತ್ತು ಈ ಸಾವಿನ ಕಾರಣವನ್ನು ಹುಡುಕಲಾಗುತ್ತಿದೆ ಎಂಜು ಜೈಲ್ ಸೇವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ಅಲೆಕ್ಸಿ ನವಲ್ನಿಯವರ ಸಾವಿನ ಬಗ್ಗೆ ಅವರ ತಂಡದಿಂದ ಯಾವುದೇ ದೃಢೀಕರಣವಿಲ್ಲ ಎಂದು ಅವರ ಸಹಾಯಕರಾದ ಕಿರಾ ಯರ್ಮಿಶ್ ಹೇಳಿದರು, “ಅಲೆಕ್ಸಿಯ ವಕೀಲರು ಖಾರ್ಪ್‌ಗೆ ಹೋಗುತ್ತಿದ್ದಾರೆ. ಅಲೆಕ್ಸಿ ನಿಧನ ಬಗ್ಗೆ ನಮಗೆ ಯಾವುದೇ ಮಾಹಿತಿ ದೊರೆತ ತಕ್ಷಣ ನಾವು ಅದನ್ನು ತಿಳಿಸುತ್ತೇವೆ ಎಂದು ಅವರ ಟೀಮ್ ಹೇಳಿದೆ. ಈ ಮಧ್ಯೆ, ನವಲ್ನಿ ಅವರು ಪತ್ರಿಕಾ ಕಾರ್ಯದರ್ಶಿ ಅವರು, ಅಲೆಕ್ಸಿ ಅವರ ಸಾವಿನ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರೆತಿಲ್ಲ ಎಂದು ಹೇಳಿದ್ದಾರೆ.

ಅಲೆಕ್ಸಿ ನವಲ್ನಿ ಉಗ್ರವಾದದ ಆರೋಪದ ಮೇಲೆ 19 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದರು ಮತ್ತು ಡಿಸೆಂಬರ್‌ನಲ್ಲಿ ಮಧ್ಯ ರಷ್ಯಾದ ವ್ಲಾಡಿಮಿರ್ ಪ್ರದೇಶದ ಜೈಲಿನಿಂದ ಉತ್ತರದ “ಪೋಲಾರ್ ವುಲ್ಫ್” ಎಂಬ ಅಡ್ಡಹೆಸರಿನ ಜೈಲಿಗೆ ಸ್ಥಳಾಂತರಿಸಲಾಯಿತು. ಇದು ಮಾಸ್ಕೋದಿಂದ ಈಶಾನ್ಯಕ್ಕೆ 1,900 ಕಿಲೋಮೀಟರ್ ದೂರದಲ್ಲಿರುವ ಖಾರ್ಪ್ ಪಟ್ಟಣದಲ್ಲಿದೆ. ರಷ್ಯಾದಲ್ಲೇ ಇದನ್ನು ಅತ್ಯಂತ ಕಠಿಣ ಜೈಲು ಎಂದು ಗುರುತಿಸಲಾಗುತ್ತದೆ. ಈ ಜೈಲಿನಲ್ಲಿ ಗಂಭೀರ ಅಪರಾಧಗಳನ್ನು ಎಸಗಿದವರನ್ನೇ ಇಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: BRICS 2024: ರಷ್ಯಾಗೆ ಬ್ರಿಕ್ಸ್‌ ಅಧ್ಯಕ್ಷ ಜವಾಬ್ದಾರಿ; ಪುಟಿನ್‌ಗೆ ಮೋದಿ ಶುಭಾಶಯ

Exit mobile version