Site icon Vistara News

R Ashok: ಪೊಲೀಸ್‌ ಇಲಾಖೆ ಸತ್ತಿದೆಯೋ ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ್ ಆಕ್ರೋಶ

There is a Taliban government in the state Opposition party leader R Ashok alleges

ಮೈಸೂರು: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾಗಿ ಒಂದು ತಿಂಗಳು ಕಳೆಯುವಾಗಲೇ ಅಂಜಲಿ ಎಂಬ ಯುವತಿ ಕೊಲೆಯಾಗಿದ್ದಾಳೆ. ರಾಜ್ಯದಲ್ಲಿ ಪೊಲೀಸ್‌ ಇಲಾಖೆ ಸತ್ತಿದೆಯೋ, ಬದುಕಿದೆಯೋ ಒಂದೂ ತಿಳಿಯುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.‌ ಅಶೋಕ (R Ashok) ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಸರಣಿಯಾಗಿ ಕೊಲೆಯಾಗುತ್ತಿದ್ದಾರೆ. ಇದರ ಜತೆಗೆ ಲವ್‌ ಜಿಹಾದ್‌ ಕೂಡ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದರು.

ಇದನ್ನೂ ಓದಿ: Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

ಈ ಎಲ್ಲ ಸಮಸ್ಯೆಗಳ ನಡುವೆ ಬರಗಾಲದಿಂದಾಗಿ ಜನರು ತೊಂದರೆಗೊಳಗಾಗಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಐದು ವರ್ಷವೂ ಬರಗಾಲ ಬಂದಿತ್ತು. ಬರಗಾಲದ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ತಮ್ಮ ಪಾಲಿನ ಹಣವಾಗಿ ಒಂದು ನಯಾ ಪೈಸೆಯನ್ನೂ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ 3 ಕೋಟಿ ರೂಪಾಯಿ ಆಸ್ತಿ ಇದೆ. ಆದರೆ ಡಿ.ಕೆ. ಶಿವಕುಮಾರ್ ಅವರ ಆಸ್ತಿ ಹೆಚ್ಚಾಗಿದೆ. ಹಾಲಿನ ಪ್ರೋತ್ಸಾಹಧನ 700 ಕೋಟಿ ರೂ‌. ಉಳಿಸಿಕೊಂಡಿದ್ದಾರೆ. ಆಂಬ್ಯುಲೆನ್ಸ್ ಚಾಲಕರು, ಗುತ್ತಿಗೆ ಸಿಬ್ಬಂದಿಗೆ ಸಂಬಳ ಪಾವತಿಯಾಗಿಲ್ಲ. ಕೇರಳಕ್ಕೆ ಬಂದ ಪರಿಸ್ಥಿತಿಯೇ ಇನ್ನು ಕರ್ನಾಟಕಕ್ಕೆ ಬರಲಿದೆ. ಪಾಕಿಸ್ತಾನದಲ್ಲಿ ಅಕ್ಕಿ, ಬೇಳೆ, ಗೋಧಿ ಬೆಲೆ 2 ಸಾವಿರ ರೂ.ಗೆ ತಲುಪಿದೆ. ಚಹ ಕುಡಿದರೆ 500 ರೂ. ಕೊಡಬೇಕು. ಸಿದ್ದರಾಮಯ್ಯನವರ ಸರ್ಕಾರ ಇನ್ನೂ ಇದ್ದರೆ ಪಾಕಿಸ್ತಾನದ ಆರ್ಥಿಕತೆ ಕರ್ನಾಟಕಕ್ಕೆ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ: Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

ವಿದ್ಯಾವಂತ ಮತದಾರರು

ಈಗ ವಿಧಾನಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಇಲ್ಲಿ ವಿದ್ಯಾವಂತರೇ ಇದ್ದಾರೆ. ಇದು ಕೈ ಮುಗಿದುಕೊಂಡು ಕೇಳುವ ಮತದಾನ ಅಲ್ಲ. ಎಲ್ಲರನ್ನೂ ಸಂಪರ್ಕಿಸಿ ಮನ ಒಲಿಸಬೇಕಾಗುತ್ತದೆ. ನಾವು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದು, ಬಿಜೆಪಿ ಅಭ್ಯರ್ಥಿ ನಾಳೆ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಮತದಾರರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತ ನೀಡಿ ಎಂದು ಮನವಿ ಮಾಡಿದರು.

Exit mobile version