Site icon Vistara News

PM Narendra Modi: ಬೆಂಗಳೂರು- ಕಲಬುರಗಿ, ಮೈಸೂರು- ಚೆನ್ನೈ ಸೇರಿ 10 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

Vande Bharat

ಹೊಸದಿಲ್ಲಿ: ಬೆಂಗಳೂರು- ಕಲಬುರಗಿ ಹಾಗೂ ಮೈಸೂರು- ಚೆನ್ನೈ ನಡುವಿನ ರೈಲುಗಳು ಸೇರಿದಂತೆ 10 ಹೊಸ ವಂದೇ ಭಾರತ್ ರೈಲಿಗಳಿಗೆ (Vande Bharat Train) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಹಸಿರು ನಿಶಾನೆ ತೋರಿಸಿದರು.

ಕಲಬುರಗಿಯಿಂದ ಬೆಂಗಳೂರಿಗೆ ತೆರಳುವ ವಂದೇ ಭಾರತ್ ರೈಲು ಕರ್ನಾಟಕ ರಾಜ್ಯದಲ್ಲಿಯೇ ಅತಿ ವೇಗದ ರೈಲು ಸಂಪರ್ಕವಾಗಿದೆ. ಮೈಸೂರು- ಚೆನ್ನೈ ನಡುವೆ ಎರಡನೇ ವಂದೇ ಭಾರತ್‌ ರೈಲು ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 10 ಹೊಸ ವಂದೇ ಭಾರತ್ ರೈಲುಗಳಿಗೆ ಇಂದು ವರ್ಚುವಲ್‌ ಆಗಿ ಹಸಿರು ನಿಶಾನೆ ತೋರಿಸುವುದರೊಂದಿಗೆ, ವಂದೇ ಭಾರತ್‌ ರೈಲುಗಳ ಒಟ್ಟು ಸಂಖ್ಯೆ 50ಕ್ಕೆ ವಿಸ್ತರಿಸಿದೆ. ಇವು 45 ರಾಷ್ಟ್ರವ್ಯಾಪಿ ಮಾರ್ಗಗಳನ್ನು ಒಳಗೊಂಡಿವೆ.

ಹೊಸ ವಂದೇ ಭಾರತ್ ರೈಲುಗಳ ಮಾರ್ಗಗಳು ಇವು:

1) ಕಲಬುರಗಿ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು
2) ಮೈಸೂರು- ಡಾ. ಎಂಜಿಆರ್ ಸೆಂಟ್ರಲ್ (ಚೆನ್ನೈ)
3) ಅಹಮದಾಬಾದ್-ಮುಂಬೈ ಸೆಂಟ್ರಲ್
4) ಸಿಕಂದರಾಬಾದ್-ವಿಶಾಖಪಟ್ಟಣ
5) ಪಾಟ್ನಾ – ಲಕ್ನೋ
6) ನ್ಯೂ ಜಲ್ಪೈಗುರಿ-ಪಾಟ್ನಾ
7) ಪುರಿ-ವಿಶಾಖಪಟ್ಟಣಂ
8) ಲಕ್ನೋ – ಡೆಹ್ರಾಡೂನ್
9) ರಾಂಚಿ-ವಾರಣಾಸಿ
10) ಖಜುರಾಹೊ- ದೆಹಲಿ (ನಿಜಾಮುದ್ದೀನ್)

ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ವಂದೇ ಭಾರತ್ ರೈಲುಗಳ ವಿಸ್ತರಣೆಗೂ ಚಾಲನೆ ನೀಡಿದರು. ಅವು ಈ ಕೆಳಗಿನಂತಿವೆ:

1) ಅಹಮದಾಬಾದ್-ಜಾಮ್‌ನಗರ ವಂದೇ ಭಾರತವನ್ನು ದ್ವಾರಕಾವರೆಗೆ ವಿಸ್ತರಿಸಲಾಗುತ್ತಿದೆ
2) ಅಜ್ಮೀರ್- ದೆಹಲಿ ಸರೈ ರೋಹಿಲ್ಲಾ ವಂದೇ ಭಾರತ್ ಅನ್ನು ಚಂಡೀಗಢದವರೆಗೆ ವಿಸ್ತರಿಸಲಾಗುತ್ತಿದೆ
3) ಗೋರಖ್‌ಪುರ-ಲಖನೌ ವಂದೇ ಭಾರತವನ್ನು ಪ್ರಯಾಗರಾಜ್‌ವರೆಗೆ ವಿಸ್ತರಿಸಲಾಗುತ್ತಿದೆ
4) ತಿರುವನಂತಪುರಂ- ಕಾಸರಗೋಡು ವಂದೇ ಭಾರತವನ್ನು ಮಂಗಳೂರಿನವರೆಗೆ ವಿಸ್ತರಿಸಲಾಗುತ್ತಿದೆ

ಪ್ರಸ್ತುತ ಭಾರತೀಯ ರೈಲ್ವೇಯು 41 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ನಿರ್ವಹಿಸುತ್ತಿದೆ. ಇವು ಬ್ರಾಡ್ ಗೇಜ್ (ಬಿಜಿ) ವಿದ್ಯುದೀಕೃತ ನೆಟ್‌ವರ್ಕ್‌ಗಳ ಮೂಲಕ ರಾಜ್ಯಗಳನ್ನು ಸಂಪರ್ಕಿಸುತ್ತದೆ ಹಾಗೂ 24 ರಾಜ್ಯಗಳು ಮತ್ತು 256 ಜಿಲ್ಲೆಗಳನ್ನು ವ್ಯಾಪಿಸಿದೆ.

ಎರಡು ವಂದೇ ಭಾರತ್‌ ರೈಲುಗಳು

ದೆಹಲಿ- ಕತ್ರಾ, ದೆಹಲಿ-ವಾರಣಾಸಿ, ಮುಂಬೈ- ಅಹಮದಾಬಾದ್, ಮೈಸೂರು- ಚೆನ್ನೈ, ಕಾಸರಗೋಡು- ತಿರುವನಂತಪುರ, ವಿಶಾಖಪಟ್ಟಣ-ಸಿಕಂದರಾಬಾದ್ ಪಟ್ಟಣಗಳ ನಡುವೆ ಈಗ ಎರಡು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸಲಿವೆ.

ಡಿಸೆಂಬರ್ 2023ರಲ್ಲಿ ಪ್ರಧಾನ ಮಂತ್ರಿ ಏಳು ಹೆಚ್ಚುವರಿ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದರು. ಇವುಗಳು ಕತ್ರಾದಿಂದ ನವದೆಹಲಿಗೆ ಸಂಪರ್ಕಿಸುವ ಎರಡನೇ ರೈಲು, ದೆಹಲಿ ಮತ್ತು ವಾರಣಾಸಿ ನಡುವಿನ ಎರಡನೇ ರೈಲು, ಅಮೃತಸರದಿಂದ ದೆಹಲಿ, ಕೊಯಮತ್ತೂರಿನಿಂದ ಬೆಂಗಳೂರು, ಮಂಗಳೂರಿನಿಂದ ಮಡಗಾಂವ್, ಜಲ್ನಾದಿಂದ ಮುಂಬೈ ಮತ್ತು ಅಯೋಧ್ಯೆಯಿಂದ ದೆಹಲಿ ಮಾರ್ಗಗಳಾಗಿವೆ.

ಅತಿ ಹೆಚ್ಚು ವಂದೇ ಭಾರತ್‌

ದೆಹಲಿಯು ಅತಿ ಹೆಚ್ಚು ವಂದೇ ಭಾರತ್ ರೈಲುಗಳನ್ನು ಸಂಯೋಜಿಸುತ್ತದೆ. ರಾಜಧಾನಿಯಲ್ಲಿ 10 ರೈಲುಗಳು ಕೊನೆಗೊಳ್ಳುತ್ತವೆ. ಈ ರೈಲುಗಳು ದೆಹಲಿಯನ್ನು ಡೆಹ್ರಾಡೂನ್, ಅಂಬ್ ಅಂಡೌರಾ, ಭೋಪಾಲ್, ಅಯೋಧ್ಯೆ, ಅಮೃತಸರ ಮತ್ತು ಖಜುರಾಹೊದಂತಹ ವಿವಿಧ ಸ್ಥಳಗಳಿಗೆ ಸಂಪರ್ಕಿಸುತ್ತವೆ. ಅಹಮದಾಬಾದ್ ಮತ್ತು ಗಾಂಧಿನಗರಕ್ಕೆ ಹೊಸ ಸೇವೆಗಳು ಸೇರಿದಂತೆ ಆರು ಮೀಸಲಾದ ರೈಲುಗಳೊಂದಿಗೆ ಮುಂಬೈ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಐದು ರೈಲುಗಳನ್ನು ಹೊಂದಿದೆ. ಮೈಸೂರಿಗೆ ಎರಡನೇ ವಂದೇ ಭಾರತ್ ರೈಲು ಇಂದು ಆರಂಭವಾಗಿದೆ.

ಇದನ್ನೂ ಓದಿ: Citizenship Amendment Act : ಪಾಕಿಸ್ತಾನದ ಹಿಂದೂ ನಿರಾಶ್ರಿತರ ಸಂಭ್ರಮ; ಮೋದಿಗೆ ಅಭಿನಂದನೆ

Exit mobile version