Site icon Vistara News

Prajwal Revanna Case: ಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌

Prajwal Revanna Case

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ (Prajwal Revanna Case) ಜೂನ್‌ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 10 ದಿನ ಎಸ್‌ಐಟಿ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ 14 ದಿನ ನ್ಯಾಯಾಂಗ ಬಂಧನ ವಿಧಿಸಿ 42ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿದೆ, ಹೀಗಾಗಿ ಪ್ರಜ್ವಲ್‌ ರೇವಣ್ಣನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಾಗುತ್ತಿದೆ.

ಬಸವನಗುಡಿಯ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಬಳಿಕ ಪ್ರಜ್ವಲ್‌ನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದೆ ನ್ಯಾಯಾಧೀಶರು ಆರೋಪಿಗೆ 14 ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ವಿಚಾರಣೆ ವೇಳೆ ಪೊಲೀಸರಿಂದ ತೊಂದರೆ ಆಯ್ತಾ ಎಂದು ಪ್ರಜ್ವಲ್‌ಗೆ ಜಡ್ಜ್ ಪ್ರಶ್ನೆ ಕೇಳಿದ್ದು, ಇದಕ್ಕೆ ಏನೂ ತೊಂದರೆ ಆಗಿಲ್ಲ ಸ್ವಾಮಿ ಎಂದು ಉತ್ತರಿಸಿದ್ದಾರೆ. ನಂತರ ಎಸ್ಐಟಿಯಿಂದ ಮೆಡಿಕಲ್‌ ಟೆಸ್ಟ್ ಹಾಗೂ ಇನ್ನಿತರ ಮಾಹಿತಿ ಪಡೆದು ಪ್ರಜ್ವಲ್‌ಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಸೂಚಿಸಿದ್ದಾರೆ.

ಇದನ್ನೂ ಓದಿ | ಮಾನಸಿಕ ಖಿನ್ನತೆಯಿಂದ ಕುದೂರು ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ಆತ್ಮಹತ್ಯೆಗೆ ಶರಣು

ಎಸ್‌ಐಟಿಯಿಂದ ಪ್ರಜ್ವಲ್‌ ರೇವಣ್ಣ ಕೋಣೆ ತಲಾಶ್‌, ಭವಾನಿ ತುಳಸಿ ಪೂಜೆ!

bhavani revanna prajwal revanna case

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಎಸ್‌ಐಟಿಯಿಂದ (SIT) ತನಿಖೆಗೆ ಒಳಗಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರ ಮನೆಯನ್ನು ಇಂದು ಮತ್ತೊಮ್ಮೆ ಮಹಜರು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ತಾಯಿ ಭವಾನಿ ರೇವಣ್ಣ (Bhavani Revanna) ಅದೇ ಮನೆಯಲ್ಲೇ ಇದ್ದರೂ ಮಗನಿಗೆ ಮುಖಾಮುಖಿ ಆಗಲಿಲ್ಲ ಎಂದು ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಅಧಿಕಾರಿಗಳು ಇಂದು ಮಹಜರ್‌ಗೆ ಕರೆದೊಯ್ದರು. ಇಂದು ಪ್ರಜ್ವಲ್‌ನನ್ನು ನ್ಯಾಯಾಲಯಕ್ಕೆ ಹಾಜರು ಮಾಡುವ ಮುನ್ನ ಬೆಂಗಳೂರಿನ ಬಸವನಗುಡಿಯ ನಿವಾಸದಲ್ಲಿ ಮಹಜರ್ ಪ್ರಕ್ರಿಯೆ ನಡೆಸಿದರು. ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಅಸೌಖ್ಯದ ಕಾರಣ ಹೇಳಿ ಮನೆಯಲ್ಲೇ ಇದ್ದರು. ಆದರೆ ಪ್ರಜ್ವಲ್‌ಗೆ ಮುಖಾಮುಖಿಯಾಗಲಿಲ್ಲ.

ಈ ಮುನ್ನವೇ ಸ್ಥಳ ಮಹಜರು ಮಾಡುವ ವೇಳೆ ಅಡ್ಡಿಪಡಿಸದಂತೆ ಭವಾನಿ ಅವರಿಗೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. ಭವಾನಿ ಅವರು ಕೂಡ ಸಂತ್ರಸ್ತ ಮಹಿಳೆಯ ಕಿಡ್ನಾಪ್‌ ಕೇಸ್‌ನಲ್ಲಿ ಎಸ್‌ಐಟಿ ತನಿಖೆಗೆ ಒಳಗಾಗುತ್ತಿದ್ದಾರೆ. ಕೋರ್ಟ್‌ ಭವಾನಿಗೆ ಮಧ್ಯಂತರ ಜಾಮೀನು ನೀಡಿದ್ದು, ಸಂಜೆಯ ಒಳಗೆ ತನಿಖೆ ಮುಗಿಸಿ ಕಳಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿದೆ.

ಪ್ರಜ್ವಲ್‌ ಮನೆಯಲ್ಲಿ ತನ್ನನ್ನು ಲೈಂಗಿಕವಾಗಿ ಕಿರುಕುಳಕ್ಕೆ ಒಳಪಡಿಸಲಾಗಿದೆ ಎಂದು ಸಂತ್ರಸ್ತೆ ತೋರಿಸಿದ ಕೊಠಡಿ ಮಹಜರು ಮಾಡಲಾಗಿದೆ. ಈ ಸಂದರ್ಭದಲ್ಲಿ ಭವಾನಿ ಅವರು ತುಳಸಿ ಕಟ್ಟೆಗೆ ಪೂಜೆ ಮಾಡುತ್ತಿರುವುದು ಕಂಡುಬಂತು. ಕೈಯಲ್ಲಿ ಊರುಗೋಲು ಹಿಡಿದುಕೊಂಡು ಬಂದ ಭವಾನಿ ರೇವಣ್ಣ, ಮೊದಲ ಮಹಡಿಯಲ್ಲಿರುವ ತುಳಸಿ‌ಕಟ್ಟೆಗೆ ಪೂಜೆ ಸಲ್ಲಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎನ್ನಲಾಗಿದೆ.

ಅಶ್ಲೀಲ ವಿಡಿಯೋದಲ್ಲಿ ತಾನಿರುವುದನ್ನು ಪ್ರಜ್ವಲ್‌ ಒಪ್ಪಿಕೊಂಡಿಲ್ಲ. ಹೀಗಾಗಿ, ಅಶ್ಲೀಲ ವಿಡಿಯೋದಲ್ಲಿ ಕಾಣಿಸುವ ಜಾಗಕ್ಕೂ ಬಸವನಗುಡಿ ಮನೆಯ ಕೋಣೆಗೂ ತಾಳೆ ಆಗ್ತಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸುತ್ತಿಲ್ಲ. ಹಾಗಾಗಿ ಮನೆಯ ಕೆಲ ಜಾಗಗಳನ್ನು ಎವಿಡೆನ್ಸ್ ಆಗಿ ಅಧಿಕಾರಿಗಳು ಪರಿಗಣಿಸಲಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ ಮಾಡಿರುವ ಜಾಗ ಹಾಗೂ ಅಶ್ಲೀಲ ವಿಡಿಯೋದಲ್ಲಿರುವ ಜಾಗಗಳು ಮ್ಯಾಚ್‌ ಆದರೆ ಪ್ರಜ್ವಲ್‌ ಲಾಕ್‌ ಆದಂತೆಯೇ.

ಇನ್ನೊಂದೆಡೆ ವಿಡಿಯೋ ಮಾಡಿಕೊಂಡ ಮದರ್ ಡಿವೈಸ್‌ಗಾಗಿ ಎಸ್‌ಐಟಿ ಹುಡುಕಾಟ ನಡೆಸಿದೆ. ಈ ಮೂಲ ಮೊಬೈಲ್‌ ಕಳೆದುಹೋಗಿದೆ. ಒಂದು ವರ್ಷದ ಹಿಂದೆಯೇ ಈ ಬಗ್ಗೆ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವುದಾಗಿ ಪ್ರಜ್ವಲ್‌ ಹೇಳಿದ್ದಾರೆ.

Exit mobile version