ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಳ್ಳಲು ಹಣ ಸಹಾಯ ಮಾಡಿದ ಆರೋಪದಡಿ ಪ್ರಜ್ವಲ್ ಗರ್ಲ್ ಫ್ರೆಂಡ್ಗೆ ಎಸ್ಐಟಿ ನೊಟೀಸ್ ನೀಡಿದೆ. ಸಹಾಯ ಮಾಡುವ ಜತೆಗೆ ಇಲ್ಲಿನ ವಿದ್ಯಾಮಾನಗಳನ್ನು ಗರ್ಲ್ ಫ್ರೆಂಡ್ ಅಪ್ ಡೇಟ್ ಮಾಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಗರ್ಲ್ ಫ್ರೆಂಡ್ಗೆ ನೋಟಿಸ್ ಜಾರಿ ಮಾಡಲಾಗಿದೆ.
ಹಲವು ಬಾರಿ ನೋಟಿಸ್ ನೀಡಿದ್ದರೂ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬಂದಿರಲಿಲ್ಲ. ಆರ್ಥಿಕವಾಗಿ ಕಟ್ಟಿ ಹಾಕಲು ಅವರ ಬ್ಯಾಂಕ್ ಅಕೌಂಟ್ಗಳನ್ನು ಸೀಜ್ ಮಾಡಲು ಎಸ್ಐಟಿ ಮುಂದಾಗಿತ್ತು. ತನಿಖೆ ವೇಳೆ ಪ್ರಜ್ವಲ್ಗೆ ಹಣ ವರ್ಗಾವಣೆ ಮಾಡಿದ ಅಕೌಂಟ್ಗಳ ಮೇಲೆಯೂ ನಿಗಾ ಇಡಲಾಗಿತ್ತು. ಆದರೆ ಪ್ರಜ್ವಲ್ಗೆ ಗರ್ಲ್ ಫ್ರೆಂಡ್ ಹಣ ಸಹಾಯ ಮಾಡಿರುವುದು, ಆಶ್ರಯ ಕಲ್ಪಿಸಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ | Bhavani Revanna: ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದ ಭವಾನಿ ರೇವಣ್ಣ ಹೇಳಿದ್ದೇನು?
ಹೊಳೆನರಸೀಪುರದ ನಿವಾಸದಲ್ಲಿ ಸ್ಥಳ ಮಹಜರು
ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸ್ಥಳ ಮಹಜರು ನಡೆಸಲು ಪ್ರಜ್ವಲ್ ರೇವಣ್ಣ ಅವರನ್ನು ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಇದಕ್ಕಾಗಿ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕ್ಯಾಮೆರಾಗಳಿಗೂ ಕಾಣದಂತೆ ಪ್ರಜ್ವಲ್ ರೇವಣ್ಣ ಅವರನ್ನು ಕರೆದೊಯ್ಯಲಾಗಿದೆ.
ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ: ಭವಾನಿ
ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಸಂತ್ರಸ್ತೆಯನ್ನು ಕರೆದುಕೊಂಡು ಬರಲು ಹೇಳಿಲ್ಲ ಎಂದು ಭವಾನಿ ರೇವಣ್ಣ ಹೇಳಿದ್ದಾರೆ. ಶುಕ್ರವಾರ ನಾಲ್ಕು ಗಂಟೆಗಳ ಕಾಲ ಭವಾನಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಪುನಃ ವಿಚಾರಣೆಗೆ ಕರೆದಾಗ ಬರುವಂತೆ ಸೂಚಿಸಲಾಗಿದೆ. ಇಂದು ಮತ್ತೆ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಮಗನ ರಕ್ಷಣೆಗೆ ಯತ್ನಿಸಿ ಇಕ್ಕಟ್ಟಿಗೆ ಸಿಲುಕಿದ ತಾಯಿ
ಮಗ ಪ್ರಜ್ವಲ್ ರೇವಣ್ಣ ರಕ್ಷಣೆಗೆ ಯತ್ನಿಸಿ ತಾಯಿ ಭವಾನಿ ರೇವಣ್ಣ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಿಐಡಿಯ ಎಸ್ಐಟಿ ಕಚೇರಿಯಲ್ಲಿ ತಾಯಿ-ಮಗನ ವಿಚಾರಣೆ ತೀವ್ರಗೊಂಡಿದೆ. ಎಷ್ಟೇ ವಿಚಾರಣೆ ನಡೆಸಿದರೂ ಇಬ್ಬರೂ ಸೂಕ್ತ ಉತ್ತರ ನೀಡುತ್ತಿಲ್ಲ. ಒಂದೇ ಕಡೆ ಇದ್ದರೂ ತಾಯಿ-ಮಗನ ಭೇಟಿ ಅವಕಾಶ ನೀಡಿಲ್ಲ.
ಇದನ್ನೂ ಓದಿ | Prajwal Revanna Case: ರೇವಣ್ಣ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂನ್ 14ಕ್ಕೆ ಮುಂದೂಡಿಕೆ
ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿದ್ದಾರೆ. ಒಂದೂವರೆ ತಿಂಗಳಿನಿಂದ ಮಗನ ಮುಖ ತಾಯಿ ನೋಡಿಲ್ಲ. ನೆನ್ನೆ ಎಸ್ಐಟಿ ಕಚೇರಿಗೆ ಬಂದರೂ ಮಗನ ಮುಖ ನೋಡಲಾಗದ ಪರಿಸ್ಥಿತಿ ಇತ್ತು. ಹೀಗಾಗಿ ವಿಚಾರಣೆ ಮುಗಿಸಿ ಭವಾನಿ ರೇವಣ್ಣ ವಾಪಸ್ ಆಗಿದ್ದರು.