ಬೆಂಗಳೂರು: ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ (Renuka Swamy Murder) ಪೊಲೀಸ್‌ಗೆ ಹಸ್ತಾಂತರಗೊಂಡಿದ್ದು, ವರದಿಯಲ್ಲಿ ಭಯಾನಕ ಅಂಶಗಳು ಪತ್ತೆಯಾಗಿವೆ. ವಿಕ್ಟೋರಿಯಾ ಆಸ್ಪತ್ರೆಯ ವಿಧಿ ವೈದ್ಯ ಮತ್ತು ವಿಷ ವಿಜ್ಞಾನ ಶಾಸ್ತ್ರ ವಿಭಾಗದ ವೈದ್ಯರಿಂದ ಮರಣೋತ್ತರ ಪರೀಕ್ಷೆ ವರದಿಯನ್ನು ಪೊಲೀಸರಿಗೆ ನೀಡಲಾಗಿದೆ.
ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಭಯಾನಕ ಅಂಶಗಳು ಪತ್ತೆಯಾಗಿವೆ. ರೇಣುಕಾಸ್ವಾಮಿ ದೇಹದ ಮೇಲೆ 30ಕ್ಕೂ ಅಧಿಕ ಗಾಯಗಳು ಕಂಡುಬಂದಿದ್ದು, ತಲೆ ಮೇಲೆ ನಾಲ್ಕು ಬಲವಾದ ಗಾಯಗಳು ಪತ್ತೆಯಾಗಿವೆ. ಸಾಯುವ ಮುನ್ನ ನಾಲ್ಕು ಬಾರಿ ಎಲೆಕ್ಟ್ರಿಕ್ ಶಾಕ್ ನೀಡಿರುವುದು ತಿಳಿದುಬಂದಿದೆ. ಹೀಗಾಗಿ ತೀವ್ರ ರಕ್ತ ಸ್ರಾವದಿಂದ ರೇಣುಕಾಸ್ವಾಮಿ ಸಾವನ್ನಪ್ಪಿರುವುದು ದೃಢವಾಗಿದೆ. ಕಬ್ಬಿಣದ ರಾಡ್, ದೊಣ್ಣೆಯಿಂದ ಹಲ್ಲೆ ನಡೆಸಿದ್ದರಿಂದ ರಕ್ತ ಹೆಪ್ಪುಗಟ್ಟಿ, ರಕ್ತಸಾವ್ರದಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Shootout Case: ಭೀಮಾ ತೀರದಲ್ಲಿ ಗುಂಡಿನ ದಾಳಿ; ರೌಡಿಶೀಟರ್ ಸ್ಥಳದಲ್ಲೇ ಸಾವು
ಮತ್ತೊಂದು ಹಂತದ ತನಿಖೆಗೆ ಮುಂದಾದ ಪೊಲೀಸರು
ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೊಂದು ಹಂತದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಕಸ್ಟಡಿಗೆ ಪಡೆದ ಆರೋಪಿಗಳ ವಿಚಾರಣೆ ವೇಗಗೊಳಿಸಿದ್ದು, ಈ ವೇಳೆ ಸಾಕ್ಷ್ಯ ನಾಶಕ್ಕೆ ಸತ ಪ್ರಯತ್ನ ನಡೆಸಿರುವುದು ತಿಳಿದುಬಂದಿದೆ.
ಆರೋಪಿಗಳ ಬಳಿ ಹತ್ತು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಮೊಬೈಲ್‌ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿವೆ. ಇನ್ನು ಸ್ಥಳ ಮಹಜರು ವೇಳೆ ಮತ್ತಷ್ಟು ಆಧಾರಗಳು ಪತ್ತೆಯಾಗಿವೆ ಎನ್ನಲಾಗಿದೆ. ಈಗಾಗಲೇ ಆಯುಧಗಳು, 30 ಲಕ್ಷ ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿ ಮಾಡಲಾಗಿದೆ.
ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!
ಬೆಂಗಳೂರು: ನಟ ದರ್ಶನ್ (Actor Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಬಗ್ಗೆ ಮೈಸೂರಿನ ರಂಗಾಯಣದ ಅಡ್ಡಂಡ ಕಾರ್ಯಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದರ್ಶನ್ ಬಗ್ಗೆ ಅವರ ಮೊದಲ ಗುರು ಅಡ್ಡಂಡ ಕಾರ್ಯಪ್ಪ ಅವರು ದರ್ಶನ್ ಕುರಿತಾಗಿ ಬೇಸರ ಹೊರ ಹಾಕಿದ್ದಾರೆ. ʻʻದರ್ಶನ್‌ಗೆ ಶನಿಯಾಗಿ ಬಂದಿದ್ದು ಪವಿತ್ರಾ ಗೌಡ. ರೇಣುಕಾಸ್ವಾಮಿ ಪತ್ನಿ ಅನಾಥವಾಗಿದ್ದಾಳೆʼʼಎಂದು ಹೇಳಿಕೊಂಡಿದ್ದಾರೆ.
ಮಾಧ್ಯಮವೊಂದರಲ್ಲಿ ಅಡ್ಡಂಡ ಕಾರ್ಯಪ್ಪ ಮಾತನಾಡಿ ʻʻದರ್ಶನ್ ಮೆಜಿಸ್ಟಿಕ್ ಸಿನಿಮಾ ಹಿಟ್ ಆದ ಬಳಿಕ ನನ್ನ ಹತ್ರ ಬಂದಿದ್ದ. ನನ್ನ ಮನೆಗೆ ಬಂದು ನನ್ನ ಕಾಲಿಗೆ ಬಿದ್ದು ನಿಮ್ಮ ಆಶೀರ್ವಾದ ಎಂದ. ಅಲ್ಲಿಂದ ಅವನು ಬೆಳೆಯುತ್ತ ಹೋದ. ಹಲವು ವಿಡಿಯೊಗಳಲ್ಲಿ ಅವನ ಬಾಡಿ ಲಾಂಗ್ವೇಜ್ ನೋಡಿದ್ದೆ. ಅಕ್ಕನ್…ಅಮ್ಮನ್.. ಈ ರೀತಿ ಹೊಲಸು ಮಾತುಗಳು. ಅದನ್ನು ನೋಡಿ ನನಗೆ ಊಹಿಸಲು ಆಗಿಲ್ಲ. ಇವನ ನಡವಳಿಕೆ ಬರಬರುತ್ತ ತುಂಬ ಚೇಂಜ್ ಆಯ್ತು. ಎಜುಕೇಶನ್ ಕೊರತೆ ಅವನಿಗೆ ಇದೆʼʼಎಂದರು.
ಬದುಕು ಮತ್ತು ಸಿನಿಮಾ ಬೇರೆ ಬೇರೆ
ʻʻಬದುಕು ಮತ್ತು ಸಿನಿಮಾ ಬೇರೆ ಬೇರೆ. ಆದರೆ ದರ್ಶನ್ ಹೇಗೆ ತಿಳಿದುಕೊಂಡಿದ್ದ ಎಂದರೆ, ಸಿನಿಮಾದಲ್ಲಿ ಏನೂ ರೌಡಿಸಂ ಇರುತ್ತೋ ಅದನ್ನ ನೋಡಿ ಬದುಕು ಹಾಗೇ ಅಂದುಕೊಂಡಿದ್ದಾನೆ. ದರ್ಶನ್‌ಗೆ ಒಂದು ಪಾಠ ಇದು. ಅವನ ಜೀವನ ಇಲ್ಲಿಗೆ ಮುಗಿದಿಲ್ಲ. ರೇಣುಕಾಸ್ವಾಮಿ ಏನೋ ಸತ್ತ. ಆದರೆ ಅವನ ಹೆಂಡತಿ ಕಥೆ ಏನು? ದರ್ಶನ್ ಅಭಿಮಾನಿಗಳಿಗೆ ನಾನು ಹೇಳುವುದು ಇಷ್ಟೇ. ನಿಮಗೆ ದರ್ಶನ್ ಎಷ್ಟು ಮುಖ್ಯವೋ. ಅದೇ ರೀತಿ ರೇಣುಕಾ ಸ್ವಾಮಿ ಹೆಂಡತಿ ಕೂಡ ಅಷ್ಟೇ ಮುಖ್ಯ. ರೇಣುಕಾಸ್ವಾಮಿ ತಪ್ಪು ಮಾಡಿದ್ದಾರೆ. ಆತನ ಹೆಂಡತಿಗೆ ಸಾಂತ್ವನ ಹೇಳಿʼʼಎಂದರು.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್
ಸಂಸ್ಕಾರ ಮತ್ತು ಶಿಕ್ಷಣ ಮುಖ್ಯ, ದರ್ಶನ್ ಬಳಿ ಎರಡೂ ಇಲ್ಲ!
ʻʻಸಂಸ್ಕಾರ ಮತ್ತು ಶಿಕ್ಷಣ ಮುಖ್ಯ. ಅದು ದರ್ಶನ್ ಬಳಿ ಎರಡೂ ಇಲ್ಲ. ಇನ್ನೊಂದು ಅವನಿಗೆ ಸಿಕ್ಕ ಲೋಫರ್ ಫ್ರೆಂಡ್ಸ್. ಸುದೀಪ್‌ಗೆ ಹಾಗೆ ಫ್ರೆಂಡ್ಸ್ ಮಾಡಿಕೊಳ್ಳೋಕೆ ಆಗಲ್ಲ. ಯಾಕಂದ್ರೆ, ಸುದೀಪ್ ವಿದ್ಯಾವಂತ. ಸಹವಾಸ ದೋಷ, ಹೆಂಡ, ಮೊದಲ ಹೆಂಡತಿಗೆ ಚಿತ್ರಹಿಂಸೆ ಕೊಟ್ಟಿದ್ದು, ಹಾಗೇ ಮೀಡಿಯಾದವರು ಅವನನ್ನ 2 ವರ್ಷ ಬ್ಯಾನ್ ಮಾಡಿದರು. ರಾಜ್‌ಕುಮಾರ್ ಅವರ ವಿನೀತತೆಯನ್ನ ನೋಡಿ ದರ್ಶನ್ ಕಲಿತುಕೊಳ್ಳಲಿಲ್ಲ’’ ಎಂದು ಅಡ್ಡಂಡ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.