Site icon Vistara News

Repo Rates: ಬಡ್ಡಿ ದರ ಯಥಾ‌ಸ್ಥಿತಿ; ಸತತ 6ನೇ ಅವಧಿಗೆ 6.5% ದರ ಕಾಪಾಡಿಕೊಂಡ ಆರ್‌ಬಿಐ

RBI governor Shaktikanta Das

ಹೊಸದಿಲ್ಲಿ: ಸತತ 6ನೇ ಅವಧಿಗೆ ರೆಪೊ ದರಗಳನ್ನು (Repo Rates) ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank of India – RBI) ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದ್ದು, 6.5% ಬಡ್ಡಿ ದರವನ್ನು (Interest rates) ಕಾಪಾಡಿಕೊಂಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikant Das) ನಡೆಸಿದ ಹಣಕಾಸು ನೀತಿ ಸಭೆ (RBI MPC meet) ಬಳಿಕ ಇದನ್ನ ಪ್ರಕಟಿಸಿದರು.

2024-25ರ ಮೊದಲ ದ್ವೈಮಾಸಿಕ ವಿತ್ತೀಯ ನೀತಿಯಲ್ಲಿ, ದಾಸ್ ಅವರು ಸತತವಾಗಿ ಏಳನೇ ಬಾರಿಗೆ ರೆಪೊ ದರವನ್ನು ಶೇಕಡಾ 6.5ರಿಂದ ಬದಲಾಯಿಸದೆ ಇರಿಸಿದರು. ನೀತಿ ಘೋಷಣೆಯ ನಂತರ, ಆರ್‌ಬಿಐ ಗವರ್ನರ್ ಮಧ್ಯಾಹ್ನ 12:00 ಗಂಟೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ MPC ಸಭೆಯಲ್ಲಿ 2024-25ರ ದೇಶದ GDP ಬೆಳವಣಿಗೆಯನ್ನು 7% ಎಂದು ಅಂದಾಜಿಸಿದೆ. ತ್ರೈಮಾಸಿಕಗಳಾದ Q1ನಲ್ಲಿ 7.1%, Q2ನಲ್ಲಿ 6.9% ಮತ್ತು Q3 ಮತ್ತು Q4 ನಲ್ಲಿ 7% ಎಂದು ಯೋಜಿಸಲಾಗಿದೆ.

ಏಪ್ರಿಲ್ 3ರಂದು ಪ್ರಾರಂಭವಾದ 6 ಸದಸ್ಯರ ಆರ್‌ಬಿಐ ಎಂಪಿಸಿಯ 3 ದಿನಗಳ ಸಭೆ ಇಂದು ಮುಕ್ತಾಯಗೊಂಡಿದೆ. ಫೆಬ್ರವರಿ 2023ರಲ್ಲಿ ಕೇಂದ್ರ ಬ್ಯಾಂಕ್ ಕೊನೆಯದಾಗಿ ದರಗಳನ್ನು ಬದಲಾಯಿಸಿತ್ತು. ಪಾಲಿಸಿ ದರಗಳನ್ನು ಶೇಕಡಾ 6.5ಕ್ಕೆ ಹೆಚ್ಚಿಸಲಾಯಿತು.

ರೆಪೊ ದರ, ರಿವರ್ಸ್ ರೆಪೊ ದರ ಮತ್ತು ಇತರ ನೀತಿ ದರಗಳ ಕುರಿತು MPCಯ ನಿರ್ಧಾರವನ್ನು ಪ್ರಕಟಿಸುವುದರ ಹೊರತಾಗಿ, ಸಮಿತಿ ಸಭೆ ಪ್ರಸ್ತುತ ದೇಶೀಯ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಚರ್ಚಿಸಿವೆ. ಭಾರತದ ಆರ್ಥಿಕತೆಯು 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಬೆಳೆದಿದೆ. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗದ ಚಲನೆ. ಫೆಬ್ರವರಿಯಲ್ಲಿ ಚಿಲ್ಲರೆ ಬೆಲೆಗಳು ಹೆಚ್ಚಿದ ಆಹಾರ ಬೆಲೆಗಳಿಂದಾಗಿ ನಿರೀಕ್ಷಿತ ವೇಗಕ್ಕಿಂತ 5.09 ಶೇಕಡಾಕ್ಕೆ ಏರಿತು. RBIನ ನಿಗದಿತ 4ಕ್ಕಿಂತ ಶೇಕಡಾ ಗುರಿ ಹೆಚ್ಚಿದೆ.

ಫೆಬ್ರವರಿಯಲ್ಲಿ, 2024-25ರಲ್ಲಿ ಹಣದುಬ್ಬರವು ಸರಾಸರಿ 4.5%ಕ್ಕೆ ಇಳಿದಿವೆ. ಆರು ಹಣಕಾಸು ನೀತಿ ಸಮಿತಿ ಸದಸ್ಯರಲ್ಲಿ ಒಬ್ಬರು ದರ ಕಡಿತಕ್ಕೆ ಮತ ಹಾಕಿದರು. ಆದರೆ ದರ ಬದಲಾಗಲಿಲ್ಲ. ಭಾರತದಲ್ಲಿ ಹಣದುಬ್ಬರವು ಕೇಂದ್ರೀಯ ಬ್ಯಾಂಕಿನ ಗುರಿಗಿಂತ ಹೆಚ್ಚಾಗಿದೆ. ಪ್ರಮುಖ ಹಣದುಬ್ಬರವು 4%ಗಿಂತ ಕಡಿಮೆಯಾಗಿದೆ. ಇದು ಕೇಂದ್ರ ಬ್ಯಾಂಕ್ ಮುಂದೆ ನೀತಿಯನ್ನು ಸಡಿಲಗೊಳಿಸುವ ಅವಕಾಶ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: RBI News: 90 ವರ್ಷ ತುಂಬಿದ ಆರ್‌ಬಿಐ; ವಿಶೇಷ 90 ರೂಪಾಯಿ ನಾಣ್ಯ ಬಿಡುಗಡೆ ಮಾಡಿದ ಮೋದಿ

Exit mobile version