ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದ ಏರ್‌ಪೋರ್ಟ್ ರಸ್ತೆಯಲ್ಲಿ ತಡರಾತ್ರಿ ಹಿಟ್ ಆ್ಯಂಡ್ ರನ್‌ಗೆ (Hit and run case) ಮೂವರು ವಿದ್ಯಾರ್ಥಿಗಳು (Road Accident) ಬಲಿಯಾಗಿದ್ದಾರೆ. ರೋಹಿತ್ (22), ಸುಚಿತ್ (22) ಹಾಗೂ ಹರ್ಷಾ (22) ಮೃತ ವಿದ್ಯಾರ್ಥಿಗಳು.
ಜಿಕೆವಿಕೆಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈ ಮೂವರು ರಾತ್ರಿ ಲಾಂಗ್ ಡ್ರೈವ್‌ಗೆಂದು ಬೈಕ್‌ನಲ್ಲಿ ಬಂದಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಗುದ್ದಿದ ರಭಸಕ್ಕೆ ಹಾರಿ ಬಿದ್ದ ಮೂವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಅಪಘಾತಕ್ಕೆ ಹೆದ್ದಾರಿಯಲ್ಲೆ ಮೃತದೇಹಗಳು ನಜ್ಜು ಗುಜ್ಜಾಗಿದ್ದವು. ಮಧ್ಯರಾತ್ರಿ 01 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ನಡೆದಿದೆ.
ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿ ಆಗಿದ್ದಾನೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹಗಳನ್ನು ಬೆಂಗಳೂರಿನ ಅಂಬೇಡ್ಕರ್ ಆಸ್ವತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ರೋಡ್ ರೇಜ್ ಕೇಸ್; ಕ್ಯಾಬ್ ಡ್ರೈವರ್ ಅರೆಸ್ಟ್
ವೈಟ್ ಫೀಲ್ಡ್‌ನ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಧಲೆ ಮಾಡಿದ್ದ ಕ್ಯಾಬ್ ಡ್ರೈವರ್ ಶಿವಕುಮಾರ್ ಎಂಬಾತನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಸೆ.5ರಂದು ನಡೆದಿದ್ದ ಗಲಾಟೆ ವಿಡಿಯೊವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಮತ್ತೊಂದು ಕಾರಿನಲ್ಲಿದ್ದ ಧನುಶ್ ಎಂಬಾತ ದೂರು ನೀಡಿದ್ದ.
ಗಾಡಿ ಟಚ್ ಆಯಿತು ಎಂದು ಶುರುವಾಗಿದ್ದ ಗಲಾಟೆಯ ಬಳಿಕ ವಿಂಡೋ ಮೂಲಕ ಕಾರಿನ ಡೋರ್ ತೆಗೆಯಲು ಕ್ಯಾಬ್ ಚಾಲಕ ಶಿವಕುಮಾರ್ ಯತ್ನಿಸಿದ್ದ. ಕೆಳಗೆ ಇಳಿಸಲು ಯತ್ನಿಸುತ್ತಿದ್ದಂತೆ ಕ್ಯಾಬ್ ಚಾಲಕನ ಕಣ್ಣಿಗೆ ಧನುಶ್
ಪೆಪ್ಲರ್ ಸ್ಪ್ರೆ ಮಾಡಿದ್ದ. ಕಣ್ಣಿಗೆ ಪೆಪ್ಲರ್ ಸ್ಪ್ರೆ ಹಾಕುತ್ತಿದ್ದಂತೆ ರೊಚ್ಚಿಗೆದ್ದ ಕ್ಯಾಬ್ ಚಾಲಕ ಶಿವಕುಮಾರ್, ತನ್ನ ಕಾರಿನಲ್ಲಿದ್ದ ಸ್ಕ್ರೂ ಡೈವ್ ತಂದು ವಿಂಡೋ ಗ್ಲಾಸ್ ಮೇಲೆ ಮೂರ್ನಾಲ್ಕು ಬಾರಿ ಗುದ್ದಿದ್ದ. ಬಳಿಕ ಸ್ಕ್ರೂ ಡೈವ್ ಮೂಲಕ ಕಾರಿನ ಬಾನೆಟ್, ಮಿರರ್ ಡ್ಯಾಮೇಜ್ ಮಾಡಿದ್ದ. ಇದೆಲ್ಲ ವಿಡಿಯೋ ಪೆಪ್ಪರ್ ಸ್ಪ್ರೆ ಮಾಡಿದ ವ್ಯಕ್ತಿಯಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸದ್ಯ ಘಟನೆಗೆ ಕಾರಣನಾದ ಆರೋಪಿ ಶಿವಕುಮಾರ್ ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ