Site icon Vistara News

Sexual Abuse: ಯುವತಿಯನ್ನು ಅಪಹರಿಸಿ, 14 ವರ್ಷ ಆಕೆಯನ್ನು ಸೆಕ್ಸ್ ಗುಲಾಮಳನ್ನಾಗಿಟ್ಟುಕೊಂಡಿದ್ದ ಕಿರಾತಕ!

Vladimir Cheskidov

ಮಾಸ್ಕೋ, ರಷ್ಯಾ: ಪಶ್ಚಿಮ ರಷ್ಯಾದ (Russia) ಚೆಲ್ಯಾಬಿನ್ಸ್ಕ್‌ನಲ್ಲಿರುವ ತನ್ನ ಮನೆಯಲ್ಲಿ ಮಹಿಳೆಯೊಬ್ಬಳನ್ನು 14 ವರ್ಷಗಳ ಕಾಲ ಲೈಂಗಿಕ ಗುಲಾಮಳನ್ನಾಗಿ (Sex Slave) ಇಟ್ಟುಕೊಂಡಿದ್ದ ಆರೋಪದ ಮೇಲೆ ರಷ್ಯಾದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ (New York post) ವರದಿ ಮಾಡಿದೆ. ರಕ್ಷಿಸಲಾಗಿರುವ ಮಹಿಳೆಗೆ ಈಗ 33 ವರ್ಷವಾಗಿದೆ. ಆಕೆಯನ್ನು ಆರೋಪಿ 2009ರಲ್ಲಿ ಅಪಹರಿಸಿ, ತನ್ನ ಸೆರೆಯಲ್ಲಿ ಇರಿಸಿಕೊಂಡಿದ್ದ. 1,000ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿರುವುದಾಗಿ (Rape) ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಆರೋಪಿಯ ಹೆಸರು ವ್ಲಾಡಿಮಿರ್ ಚೆಸ್ಕಿಡೋವ್. ಈತನಿಗೆ ಈಗ 51 ವರ್ಷವಾಗಿದೆ. ಈಗಿರುವ ಮನೆಯಲ್ಲಿ 2011ರಲ್ಲಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ ಆರೋಪ ಕೂಡ ಈತನ ಮೇಲಿದೆ. ಈತನ ಬಂಧನದಲ್ಲಿದ್ದ ಮಹಿಳೆ ತಪ್ಪಿಸಿಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ ಮೇಲೆ ಇಡೀ ಪ್ರಕರಣವು ಬಯಲಾಗಿದೆ(Sexual Abuse).

ಆರೋಪಿಯ ಬಂಧನದಿಂದ ಸಂತ್ರಸ್ತೆ ಪಾರಾಗಲು ಆರೋಪಿಯ ತಾಯಿಯ ನೆರವು ನೀಡಿದ್ದಾಳೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಾನು ಹೇಗೆಲ್ಲ ಹಿಂಸೆ ಅನುಭವಿಸುತ್ತಿದ್ದೆ ಎಂಬ ಮಾಹಿತಿಯನ್ನು ಸಂತ್ರಸ್ತೆ ಎಕಟೆರಿನಾ ಪೊಲೀಸರಿಗೆ ತಿಳಿಸಿದ್ದಾಳೆ. ಸಂತ್ರಸ್ತ ಮಹಿಳೆಯ ಬೆಡ್‌ರೂಮ್‌ನಿಂದ ಹೊರಗೆ ಹೋಗಬೇಕಿದ್ದರೆ ಆಕೆಗೆ ಚಾಕು ತೋರಿಸಿ ಬೆದರಿಕೆ ಹಾಕಲಾಗುತ್ತಿತ್ತು. ಸಣ್ಣ ಸಣ್ಣದಕ್ಕೆಲ್ಲ ನಿರಂತರವಾಗಿ ಹಿಂಸೆ ಮಾಡಲಾಗುತ್ತಿದೆ, ಹಲ್ಲೆ ಮಾಡಲಾಗುತ್ತಿತ್ತು ಮಹಿಳೆಯ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಪೊಲೀಸರು ಸ್ಮೋಲಿನೊ ಗ್ರಾಮದಲ್ಲಿ ಚೆಸ್ಕಿಡೋವ್‌ನ ಒಂದು ಅಂತಸ್ತಿನ ಮನೆಯನ್ನು ಶೋಧಿಸಿದಾಗ, ಲೈಂಗಿಕ ಆಟಿಕೆಗಳು, ಮಜಲ್ಸ್ ಮತ್ತು ಅಶ್ಲೀಲತೆ ಸಿಡಿಗಳ ಸಂಗ್ರಹವನ್ನು ವಶಕ್ಕೆ ಪಡೆದಿದ್ದಾರೆ. ರಷ್ಯಾದ ತನಿಖಾ ಸಮಿತಿಯ ಸ್ಥಳೀಯ ಶಾಖೆಯು ಚೆಸ್ಕಿಡೋವ್ ಅವರ ಮನೆಯ ನೆಲಮಾಳಿಗೆಯಲ್ಲಿ ಮಾನವ ಅವಶೇಷಗಳ ದೊರೆತಿರುವುದನ್ನು ಖಚಿತಪಡಿಸಿದೆ.

19 ವರ್ಷದ ಎಕಟೆರಿನಾಳನ್ನು ಆರೋಪಿಯು 2009 ಭೇಟಿಯಾಗಿದ್ದಾನೆ. ತನ್ನ ಮನೆಯಲ್ಲಿ ಡ್ರಿಂಕ್ ಪಾರ್ಟಿಗೆ ಆಕೆಯನ್ನು ಆಹ್ವಾನಿಸಿದ್ದಾನೆ. ಅದೇ ಮನೆಯಲ್ಲಿ 2009ರಿಂದಲೂ ಆಕೆಯನ್ನು ಲೈಂಗಿಕ ಗುಲಾಮಳನ್ನಾಗಿ ಇಟ್ಟುಕೊಂಡಿದ್ದಾನೆ. ಆತ, ಮಾನಸಿಕ ಸಮಸ್ಯೆಗಳಿಂದಲೂ ಬಳಲುತ್ತಿದ್ದಾನೆ. ಮಾನಸಿಕ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಆತನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಇದೇ ಅವಕಾಶವನ್ನು ಬಳಸಿಕೊಂಡು ಸಂತ್ರಸ್ತೆ ಅಲ್ಲಿಂದ ಪರಾರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಈ ಸುದ್ದಿಯನ್ನೂ ಓದಿ: Pakistan: ದೇಗುಲ ಧ್ವಂಸ ಬೆನ್ನಲ್ಲೇ 30 ಪಾಕ್ ಹಿಂದೂಗಳ ಅಪಹರಣ! ನೆರವಿಗೆ ಮನವಿ ಮಾಡಿದ ಆಯೋಗ

ಆರೋಪಿಯು ಇನ್ನೊಬ್ಬ ಮಹಿಳಾ ಗುಲಾಮಳನ್ನು ಕರೆದುಕೊಂಡು ಬಂದಿದ್ದ. ಅವರಿಬ್ಬರ ಮಧ್ಯೆ ಜಗಳವಾದ ಹಿನ್ನೆಲೆಯಲ್ಲಿ 2011ರಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ. ಆ ಮಹಿಳೆಗೆ ಆರೋಪಿ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ನೇಲ್ ಪುಲ್ಲರ್ ಯಂತ್ರದ ಸಹಾಯದಿಂದ ಆಕೆಯನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸರಿಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ. ಆರೋಪಿಯ ವಿರುದ್ಧ ಅಪಹರಣ, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version