Site icon Vistara News

Sapthami Gowda: ಯುವ ಪತ್ನಿ ವಿರುದ್ಧ ಸಪ್ತಮಿಗೌಡ ಮಾನಹಾನಿ ಕೇಸ್; ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ

Sapthami Gowda

ಬೆಂಗಳೂರು: ನಟ ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಬೈರಪ್ಪ ವಿರುದ್ಧ ನಟಿ ಸಪ್ತಮಿ ಗೌಡ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ವಕೀಲ ಶಂಕರಪ್ಪ ಅವರ ಮೂಲಕ ನಟಿ (Sapthami Gowda) ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ ನೀಡಿದೆ.

ಯುವ ಮತ್ತು ಶ್ರೀದೇವಿ ಬೈರಪ್ಪ ನಡುವಿನ ಆರೋಪ-ಪ್ರತ್ಯಾರೋಪಗಳಲ್ಲಿ ಸಪ್ತಮಿಗೌಡ ಹೆಸರು ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ತನ್ನ ವೃತ್ತಿ ಜೀವನದ ಪರಿಣಾಮ ಬೀರಲಿದೆ ಎಂದು ಸಪ್ತಮಿ ಗೌಡ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಇನ್ಮುಂದೆ ನಟಿಯ ಬಗ್ಗೆ ಎಲ್ಲಿಯೂ ಮಾತನಾಡದಂತೆ ಲೀಗಲ್ ನೋಟಿಸ್ ನೀಡಲಾಗಿದೆ ಹಾಗೂ ಈಗ ಮಾಡಿರುವ ಆರೋಪಗಳಿಂದ ಉಂಟಾದ ಮಾನಹಾನಿ ಸಂಬಂಧ ಶ್ರೀದೇವಿಗೆ ನೋಟಿಸ್ ನೀಡಿದ್ದು, 10 ಕೋಟಿ ರೂ. ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ನಟಿ ಸಪ್ತಮಿಗೌಡ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸಿಟಿ ಸಿವಿಲ್ ಕೋರ್ಟ್, ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ | Yuva Rajkumar: ‘ಅನೈತಿಕ ಸಂಬಂಧ’ ಎಂದು ಯುವ ಪರ ವಕೀಲ ಆರೋಪ; ತಿರುಗೇಟು ಕೊಟ್ಟ ಶ್ರೀದೇವಿ!

ಡಾ.ರಾಜ್‌ಕುಮಾರ್‌ ವಂಶದ ಕುಡಿ, ನಟ ಯುವ ರಾಜ್‌ಕುಮಾರ್‌ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾಗಿವೆ. ಅದರಲ್ಲೂ, ಅನೈತಿಕ ಸಂಬಂಧಗಳ ಆರೋಪಗಳು ಇನ್ನೂ ಹೆಚ್ಚಾಗಿವೆ. “ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇನ್ನು, ನಟನ ಲೀಗಲ್‌ ನೋಟಿಸ್‌ಗೆ ಉತ್ತರಿಸಿದ್ದ ಶ್ರೀದೇವಿ ಭೈರಪ್ಪ, “ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ (Sapthami Gowda) ಜತೆ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಆರೋಪಿಸಿದ್ದರು. ಆ ಮೂಲಕ ಡಿವೋರ್ಸ್‌ ಪ್ರಕರಣವು ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿತ್ತು

ನಟ ಯುವ ರಾಜ್‌ಕುಮಾರ್‌ ಕಳುಹಿಸಿದ ಲೀಗಲ್‌ ನೋಟಿಸ್‌ಗೆ ಮರುತ್ತರ ನೀಡಿದ್ದ ಶ್ರೀದೇವಿ ಭೈರಪ್ಪ, ಹಲವು ಆರೋಪಗಳನ್ನು ಮಾಡಿದ್ದರು. “ಸಪ್ತಮಿ ಗೌಡ ಜತೆಗೆ ಯುವ ರಾಜ್‌ಕುಮಾರ್‌ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು. ಪ್ರೀತಿಸಿ ಮದುವೆಯಾದ ಯುವ ರಾಜ್‌ಕುಮಾರ್‌, ಬಳಿಕ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ” ಎಂಬುದಾಗಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು.

ಇದನ್ನೂ ಓದಿ | Sapthami Gowda: ಲವ್‌ ಬ್ರೇಕಪ್‌ ಆಗಿದೆ, ಬಾಯ್‌ಫ್ರೆಂಡ್‌ ನನ್ನ ಜತೆ ಇಲ್ಲ ಎಂದ ಸಪ್ತಮಿ ಗೌಡ!

“ನಾನು ಹಾಗೂ ಯುವ ರಾಜ್‌ಕುಮಾರ್‌ 5 ವರ್ಷ ಪ್ರೀತಿಸಿದ್ದೆವು. 2019ರಲ್ಲಿ ಹಿಂದು ಸಂಪ್ರದಾಯದಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಮಾಡಿಕೊಂಡೆವು. ಮದುವೆಗೂ ಮುಂಚೆ ಯುವ ರಾಜ್‌ಕುಮಾರ್‌ ನಿರುದ್ಯೋಗಿ ಆಗಿದ್ದರು. ಅವರಿಗೆ ಕರಿಯರ್‌ ಬಗ್ಗೆ ಫೋಕಸ್‌ ಇರಲಿಲ್ಲ. ಅವರ ಕುಟುಂಬವು ಕೂಡ ಆರ್ಥಿಕವಾಗಿ ಸ್ಟೇಬಲ್‌ ಇರಲಿಲ್ಲ. ಇದಾದ ಬಳಿಕ ಯುವ ರಾಜ್‌ಕುಮಾರ್‌ ಸಪ್ತಮಿ ಗೌಡ ಹಿಂದೆ ಬಿದ್ದರು. ನಟಿಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಸಪ್ತಮಿ ಗೌಡ ಜತೆ ಹೋಟೆಲ್‌ನಲ್ಲಿ ಇರುವಾಗಲೇ ಯುವ ಸಿಕ್ಕಿಬಿದ್ದಿದ್ದರು. ಸಂಬಂಧ ಗೊತ್ತಾದ ಮೇಲೆ ನನ್ನ ಮೇಲೆ ಆರೋಪ ಮಾಡಲು ಶುರುವಿಟ್ಟುಕೊಂಡರು” ಎಂಬುದಾಗಿ ಶ್ರೀದೇವಿ ಆರೋಪಿಸಿದ್ದರು. ಹೀಗಾಗಿ ಇದೀಗ ದಂಪತಿ ನಡುವಿನ ವಿವಾದದಲ್ಲಿ ತಮ್ಮ ಹೆಸರನ್ನು ತರದಂತೆ ಸಪ್ತಮಿ ಗೌಡ ನೋಟಿಸ್‌ ನೀಡಿದ್ದಾರೆ.

Exit mobile version