Site icon Vistara News

Kate Middleton : ತಿರುಚಿದ ಚಿತ್ರ ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿದ ಬ್ರಿಟನ್​ ರಾಣಿ ಕೇಟ್​ ಮಿಡಲ್ಟನ್​!

Kate Middleton

ಬೆಂಗಳೂರು: ಬ್ರಿಟನ್​ ರಾಜಕುಮಾರಿ ಕೇಟ್​ ಮಿಡಲ್ಟನ್ (Kate Middleton)​ ಅವರ ಹೊಸ ಚಿತ್ರವೊಂದು ಬ್ರಿಟನ್​ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೇಟ್​ ಇತ್ತೀಚೆಗೆ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಅರಮನೆಯಿಂದ ಬಿಡುಗಡೆ ಮಾಡಲಾಗಿರುವ ಚಿತ್ರ ವಿವಾದಕ್ಕೆ ಕಾರಣವಾಗಿದೆ. ತಾಯಂದಿರ ದಿನದ ಶುಭಾಶಯ ಕೋರಲು ಆರ್ಟಿಫೀಶಿಯಲ್ ಇಂಟಲಿಜೆನ್ಸ್​​ ಮೂಲಕ ಸಿದ್ಧಪಡಿಸಿದ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ವಿವಾದ ದೊಡ್ಡದಾಗುತ್ತಿದ್ದಂತೆ ಕೇಟ್​ ಮಿಡಲ್ಟನ್​ ಕ್ಷಮೆ ಕೋರಿದ್ದಾರೆ.

​​ನಲ್ಲಿ ತಾಯಂದಿರ ದಿನದ ಅಂಗವಾಗಿ ಬ್ರಿಟನ್​ನ ಕೆನ್ಸಿಂಗ್ಟನ್ ಅರಮನೆ ಭಾನುವಾರ, ರಾಜಕುಮಾರಿ ಕೇಟ್​​ ಹಾಗೂ ಮಕ್ಕಳ ಫೋಟೋವನ್ನು ಬಿಡುಗಡೆ ಮಾಡಿತ್ತು. ಜೀನ್ಸ್, ಸ್ವೆಟರ್ ಮತ್ತು ಡಾರ್ಕ್ ಜಾಕೆಟ್ ಧರಿಸಿದ ರಾಜಕುಮಾರಿ ಉದ್ಯಾನದ ಕುರ್ಚಿಯ ಮೇಲೆ ಕುಳಿತಿರುವುದನ್ನು ಚಿತ್ರದಲ್ಲಿ ಕಾಣಬಹುದು. ಮೂವರು ಮಕ್ಕಳಾದ ಜಾರ್ಜ್, ಷಾರ್ಲೆಟ್ ಮತ್ತು ಲೂಯಿಸ್ ನಿಂತಿದ್ದಾರೆ. ಇದು ಎಐ ಚಿತ್ರ ಎಂದು ಹೇಳಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಫೋಟೋದಲ್ಲಿ ಕೇಟ್​ ನಿಶ್ಚಿತಾರ್ಥದ ಉಂಗುರವನ್ನು ಧರಿಸಿಲ್ಲ. ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಈ ಚಿತ್ರವನ್ನು ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾಗಿರುವ ಪ್ರಿನ್ಸ್ ವಿಲಿಯಂ ವಿಂಡ್ಸರ್​ನಲ್ಲಿ ತೆಗೆದಿದ್ದಾರೆ ಎಂಬುದಾಗಿ ಅರಮನೆ ಮೂಲಗಳು ಮೊದಲು ವಾದಿಸಿದ್ದವು. ಸರ್ಜರಿ ಬಳಿಕ ಅವರು ಚೇತರಿಸುತ್ತಿದ್ದಾರೆ ಎಂದು ತಿಳಿಸಲು ಚಿತ್ರ ಕಳುಹಿಸಲಾಗಿದೆ ಎಂದು ಹೇಳಿದ್ದವು.

ಟ್ವೀಟ್​ ಮಾಡಿದ ಫೋಟೋದೊಂದಿಗೆ ಹಾಕಿದ ಸಂದೇಶ ಹೀಗಿದೆ. “ಕಳೆದ ಎರಡು ತಿಂಗಳುಗಳಿಂದ ನೀವು ಸಲ್ಲಿಸಿದ ಶುಭಾಶಯಗಳು ಮತ್ತು ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು. ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು” ಎಂದಿದೆ. ಕೆಳಗೆ ‘ಸಿ’ ಎಂದು ಸಹಿ ಹಾಕಲಾಗಿದೆ. ಇದರ್ಥ ಕ್ಯಾಥ್ರಿನ್​.

ಫೋಟೋ ಹಿಂಪಡೆದ ಸುದ್ದಿ ಸಂಸ್ಥೆಗಳು

ಎಪಿ, ಎಎಫ್​​ಪಿ ಮತ್ತು ರಾಯಿಟರ್ಸ್ ಎಂಬ ಮೂರು ಸುದ್ದಿ ಸಂಸ್ಥೆಗಳು ಇಂದು ಬೆಳಗ್ಗೆ ಫೋಟೋವನ್ನು ಡಿಲೀಟ್​ ಮಾಡಿವೆ. ಆದರೆ ರಾಜಕುಮಾರರ ಕುಟುಂಬದ ಕುರಿತು ಅಧಿಕೃತ ಮಾಹಿತಿಗಳನ್ನು ಪ್ರಕಟಿಸುವ ಬ್ರಿಟನ್​​ನ ಅತಿದೊಡ್ಡ ಸುದ್ದಿ ಸಂಸ್ಥೆ ಪಿಎ ಇನ್ನೂ ಡಿಲೀಟ್ ಮಾಡಿಲ್ಲ.

ಫೋಟೋದಲ್ಲಿ ರಾಜಕುಮಾರಿಯ ಷಾರ್ಲೆಟ್ ಅವರ ಎಡಗೈಯನ್ನು ಅವರ ಕಾರ್ಡಿಗನ್ ತೋಳಿನ ಮೇಲೆ ಇಡುವಂತೆ ತಿಳಿಸಲಾಗಿದೆ. ಇದು ಮಾರ್ಪಾಟು ಮಾಡಿರುವ ಚಿತ್ರ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅರಮನೆ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು ಕೇಟ್​ ಹಾಗೂ ಮಕ್ಕಳ ಚಿತ್ರವನ್ನು ಮಾರ್ಪಾಟು ಮಾಡಲಾಗಿದೆ ಎಂದು ಹೇಳಿದೆ. ಹೀಗಾಗಿ ಸುದ್ದಿ ಸಂಸ್ಥೆ ಎಫ್​ಪಿ ಅದನ್ನು ಹಿಂದಕ್ಕೆ ತೆಗೆದುಕೊಂಡಿದೆ.

ಇದನ್ನೂ ಓದಿ : ಉಕ್ರೇನ್‌ ವಿರುದ್ಧ ರಷ್ಯಾದ ಅಣುಬಾಂಬ್‌ ಸಂಭಾವ್ಯ ದಾಳಿ ತಡೆಯಲು ಪ್ರಯತ್ನಿಸಿದ್ದರು ಪ್ರಧಾನಿ ನರೇಂದ್ರ ಮೋದಿ!

ಸುದ್ದಿ ಸಂಸ್ಥೆಗಳು ಫೋಟೋವನ್ನು ಹಿಂತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಲು ಕೆನ್ಸಿಂಗ್ಟನ್ ಅರಮನೆ ನಿರಾಕರಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಆರೋಪ, ಆಕ್ರೋಶ

ರಾಜಕುಮಾರಿಯ ಎಐ (ಆರ್ಟಿಫೀಶಿಯಲ್​ ಇಂಟಲಿಜೆನ್ಸ್​​) ರಚಿಸಿದ ಚಿತ್ರವನ್ನು ಅರಮನೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹಲವಾರು ಬಳಕೆದಾರರು ಆರೋಪಿಸಿದ್ದಾರೆ. ಕೇಟ್​ ಕೈಯಲ್ಲಿ ನಿಶ್ಚಿತಾರ್ಥ ಉಂಗುರ ಇರಲಿಲ್ಲ ಎಂದು ಅವರೆಲ್ಲರೂ ಗಮನ ಸೆಳೆದಿದ್ದಾರೆ.

ಸಾರ್ವಜನಿಕವಾಗಿ ಕೇಟ್ ಕಾಣಿಸಿಕೊಳ್ಳದೇ ಇದ್ದದ್ದು ತೀವ್ರ ಊಹಾಪೋಹಗಳಿಗೆ ಕಾರಣವಾಗಿದ್ದವು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರು ಕಾಣಿಸಿಕೊಳ್ಳದೇ ಹೋಗಿದ್ದೇ ಅದಕ್ಕೆ ಕಾರಣವಾಗಿತ್ತು. ಬಳಿಕ ಅರಮನೆಯಿಂದ ಪ್ರಕಟಣೆ ಹೊರಡಿಸಲಾಗಿತ್ತು. ಈ ವೇಳೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಿದ್ದರು. ಆದರೆ, ಕ್ಯಾನ್ಸರ್​ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಯಾಕೆಂದರೆ ಆಕೆಯ ಮಾವ ಕಿಂಗ್ ಚಾರ್ಲ್ಸ್ ಈ ವರ್ಷದ ಆರಂಭದಲ್ಲಿ ಕ್ಯಾನ್ಸರ್ ನಿಂದ ಬಳಲಿದ್ದು ದೊಡ್ಡ ಸುದ್ದಿಯಾಗಿತ್ತು.

ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗಾಗಿ ಜನವರಿ 16 ರಂದು ಕೇಟ್​​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜನವರಿ 29 ರಂದು ಬಿಡುಗಡೆ ಮಾಡಲಾಯಿತು. ಅರಮನೆ ಹಂಚಿಕೊಂಡ ಫೋಟೋ ಅಂದಿನಿಂದ ಬಿಡುಗಡೆಯಾದ ಮೊದಲ ಅಧಿಕೃತ ಕುಟುಂಬ ಛಾಯಾಚಿತ್ರವಾಗಿದೆ. ಇದಕ್ಕೂ ಮೊದಲು, ಕಳೆದ ಸೋಮವಾರ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಚಿತ್ರಗಳು ಹರಿದಾಡಿದ್ದವು.

Exit mobile version