ಬೆಂಗಳೂರು: ಸ್ಯಾಂಡಲ್‌ವುಡ್ ನಟ, ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ (Yuva Rajkumar) ಅವರು ಪತ್ನಿಗೆ ಡಿವೋರ್ಸ್ ನೋಟಿಸ್ ನೀಡಿರುವ ಪ್ರಕರಣಕ್ಕೆ ಹಲವು ಟ್ವಿಸ್ಟ್‌ಗಳು ಸಿಗುತ್ತಿವೆ. ಡಿವೋರ್ಸ್ ನೋಟಿಸ್ ಸಿಕ್ಕಾಗ ಪ್ರತಿಕ್ರಿಯಿಸುವೆ ಎಂಬುದಾಗಿ ಯುವ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಪ್ರತಿಕ್ರಿಯಿಸಿದ ಬೆನ್ನಲ್ಲೇ, ಯುವ ರಾಜ್‌ಕುಮಾರ್ ಪರ ವಕೀಲ ಸಿರಿಲ್ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. “ಹಲ್ಲು ಉಜ್ಜಲ್ಲ, ಸ್ನಾನ ಮಾಡಲ್ಲ, ದೈಹಿಕವಾಗಿ ಫಿಟ್ ಇಲ್ಲ ಎಂಬುದಾಗಿ ಶ್ರೀದೇವಿ ಪ್ರಸಾದ್ ಅವರು ನಟನಿಗೆ ಕಿರುಕುಳ ನೀಡಿದ್ದಾರೆ” ಎಂಬುದಾಗಿ ಅವರು ಆರೋಪಿಸಿದ್ದಾರೆ.
“ನಾನು ಅಮೆರಿಕದಲ್ಲಿ ಇರುತ್ತೇನೆ, ನೀನು ಬೆಂಗಳೂರಿನಲ್ಲಿಯೇ ಇರು ಎಂಬುದಾಗಿ ಕಿರುಕುಳ ಕೊಟ್ಟಿದ್ದಾರೆ. ಒಂದು ತಿಂಗಳ ಹಿಂದೆ ರಾಧಯ್ಯನಿಗೆ ಮದುವೆ ಆಗಿದೆ. ಆ ಸಮಯದಲ್ಲಿ ಆಕೆ ಬಹಳ ಖಿನ್ನತೆಗೆ ಜಾರಿದ್ದರು. ಇದಕ್ಕೆ ಈಗ ಯುವನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ದೈಹಿಕವಾಗಿ ಸಂಪರ್ಕಿಸಲು ಹೋದಾಗ ಅವಮಾನ ಮಾಡುತ್ತಿದ್ದರು. ಹಲ್ಲುಜ್ಜಿಕೊಂಡು ಬಾ, ಸ್ನಾನ ಮಾಡು ಅಂತ ಹೇಳುತ್ತಿದ್ದರು. ನೀನು ದೈಹಿಕವಾಗಿ ಫಿಟ್ ಇಲ್ಲ, ರಾಧಯ್ಯ ಫಿಟ್ ಇದ್ದಾನೆ ಎಂದು ಅವಮಾನ ಮಾಡುತ್ತಿದ್ದರು. ರಾಧಯ್ಯನ ಹೆಂಡತಿ ಮನೆಯಲ್ಲಿ ಇದ್ದಿದ್ದಾಗ ಆತನ ಮನೆಗೆ ಹೋಗುತ್ತಾರೆ. ಈ ರೀತಿಯ ಸಂಬಂಧ ಇಟ್ಟುಕೊಂಡಿದ್ದಾರೆ” ಎಂಬುದಾಗಿ ತಿಳಿಸಿದರು.
“ಮಾನಸಿಕ ಹಾಗೂ ದೈಹಿಕ ದೌರ್ಜನ್ಯದ ಆಧಾರದ ಮೇಲೆ ನಾವು ಅರ್ಜಿ ಹಾಕಿದ್ದೇವೆ. ಒಟ್ಟು 54 ಪೇಜಿನ ಡಿವೋರ್ಸ್ ಪಿಟೀಷನ್ ಹಾಕಿದ್ದೇವೆ. ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ, ಇವರು ನೋಟಿಸ್ ಜಾರಿಗೊಳಿಸಲಾಗಿದೆ. ಶ್ರೀದೇವಿ ಭೈರಪ್ಪ ಅವರಿಗೆ ರಾಧಯ್ಯ ಎಂಬ ವ್ಯಕ್ತಿ ಜತೆ ಅಕ್ರಮ ಸಂಬಂಧ ಇದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಯುವ ಹಾಗೂ ಶ್ರೀದೇವಿ ನಡುವಿನ ಸಂಬಂಧ ಹಳಸಿತ್ತು” ಎಂಬುದಾಗಿ ಅವರು ಹೇಳಿದ್ದಾರೆ.
“3 ಕೋಟಿ ರೂ.ಗಿಂತ ಅಧಿಕ ಹಣವನ್ನು ರಾಜ್ ಕುಮಾರ್ ಫಿಲ್ಮ್ ಅಕಾಡೆಮಿಯಿಂದ ಆಕೆಯ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇದು ಯಾರಿಗೂ ಗೊತ್ತಿರಲಿಲ್ಲ. ರಾಜ್ ಕುಮಾರ್ ಕುಟುಂಬದ ಹೆಸರು ಕೆಡಿಸ್ತೀನಿ ಅಂತ ಬೆದರಿಕೆ ಹಾಕುತ್ತಿದ್ದರು. ಮೈಸೂರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಸುಳ್ಳು ಹೇಳಿ, ಅಮೆರಿಕಕ್ಕೆ ಹೋಗಿ ಅಲ್ಲಿ ಮಾಸ್ಟರ್ಸ್ ಮಾಡ್ತಿದ್ದಾರೆ. ಯುವ ಕುಟುಂಬದ ಹಣದಿಂದ ಬೆಂಗಳೂರಲ್ಲಿ ಸುಮಾರು 20ಕ್ಕೂ ಅಧಿಕ ಸೈಟ್ ಖರೀದಿ ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು.
“ಯುವ ಪತ್ನಿಯು ಇಡೀ ಕುಟುಂಬದ ವ್ಯವಹಾರ ಹಾಗೂ ಎಲ್ಲದರ ಮೇಲೂ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಳು. ಯುವ ಫ್ಯಾಮಿಲಿಯಿಂದ ಬಹಳ ಹಣ ಖರ್ಚು ಮಾಡಿಸಿಕೊಂಡಿದ್ದಾರೆ. ಐಎಎಸ್ ಕಲಿಯಲು ದೆಹಲಿಗೆ ಹೋಗಿದ್ದರು. ಅವಳ ಬಾಯ್ ಫ್ರೆಂಡ್ ರಾಧಯ್ಯ ಎಂಬವರ ಜತೆ ಸಂಬಂಧ ಇಟ್ಟುಕೊಂಡಿದ್ದಾರೆ. ರಾತ್ರಿ ಅವನ ಮನೆಯಲ್ಲಿ ಉಳದುಕೊಳ್ತಿದ್ದರು. ಇಂಥ ಹಲವು ಕಾರಣಗಳನ್ನು ಅರ್ಜಿಯಲ್ಲಿ ನಮೂದಿಸಿ ಫೈಲ್ ಮಾಡಿದ್ದೇವೆ. ಆದರೆ ಯುವ ಪತ್ನಿಯು ಯುವನಿಗೆ ಬೇರೆ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಸ್ಯಾಂಡಲ್ ವುಡ್ ನಟಿಯೊಬ್ಬರ ಜತೆ ಯುವನಿಗೆ ಸಂಬಂಧ ಇತ್ತು ಎಂದು ಅವರು ರಿಪ್ಲೈ ಮಾಡಿದ್ದಾರೆ” ಎಂದು ತಿಳಿಸಿದರು.
ಲೀಗಲ್ ನೋಟಿಸ್‌ಗೆ ಶ್ರೀದೇವಿ ಪ್ರತಿಕ್ರಿಯೆ
ಯುವ ರಾಜ್‌ಕುಮಾರ್ ಅವರ ವಕೀಲರು ಕಳುಹಿಸಿದ ಲೀಗಲ್ ನೋಟಿಸ್‌ಗೆ ಶ್ರೀದೇವಿ ಭೈರಪ್ಪ ಅವರು ಅಮೆರಿಕದಿಂದಲೇ ವಕೀಲರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ಯುವ ರಾಜ್‌ಕುಮಾರ್ ಅವರು ನನಗೆ ಕಿರುಕುಳ ನೀಡುತ್ತಿದ್ದರು. ನೀವು ನೀಡಿದ ನೋಟಿಸ್‌ನಲ್ಲಿ ಉಲ್ಲೇಖಿಸಿದ ಅಂಶಗಳು ಸತ್ಯಕ್ಕೆ ದೂರವಾಗಿವೆ. ನನಗೆ ನಿಮ್ಮ ಕುಟುಂಬವನ್ನು ಒಡೆಯಬೇಕು ಎಂದಿದ್ದರೆ ಅಮೆರಿಕಕ್ಕೆ ಬರುತ್ತಿರಲಿಲ್ಲ. ಅಷ್ಟಕ್ಕೂ, ಯುವ ರಾಜ್‌ಕುಮಾರ್ ಅವರು ನಟಿ ಸಪ್ತಮಿ ಗೌಡ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ನಿಮ್ಮ ಆರೋಪಗಳಿಗೆ ಕಾನೂನಾತ್ಮಕವಾಗಿಯೇ ಉತ್ತರ ಕೊಡುತ್ತೇನೆ” ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Yuva Rajkumar: ಶ್ರೀದೇವಿ ಭೈರಪ್ಪಗೆ ಅಕ್ರಮ ಸಂಬಂಧ; ಯುವ ರಾಜ್‌ಕುಮಾರ್ ಪರ ವಕೀಲ ಸ್ಫೋಟಕ ಹೇಳಿಕೆ