Yuva Rajkumar: ಹಲ್ಲು ಉಜ್ಜಲ್ಲ, ಸ್ನಾನ ಮಾಡಲ್ಲ, ಫಿಟ್ ಇಲ್ಲ ಎಂದು ಕಿರುಕುಳ ಕೊಡುತ್ತಿದ್ದ ಯುವ ಪತ್ನಿ!: ವಕೀಲರ ಆರೋಪ - Vistara News

ಪ್ರಮುಖ ಸುದ್ದಿ

Yuva Rajkumar: ಹಲ್ಲು ಉಜ್ಜಲ್ಲ, ಸ್ನಾನ ಮಾಡಲ್ಲ, ಫಿಟ್ ಇಲ್ಲ ಎಂದು ಕಿರುಕುಳ ಕೊಡುತ್ತಿದ್ದ ಯುವ ಪತ್ನಿ!: ವಕೀಲರ ಆರೋಪ

Yuva Rajkumar: ನಟ ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದಾರೆ. ಇದಾದ ಬಳಿಕ ಶ್ರೀದೇವಿ ಭೈರಪ್ಪ ಅವರು ಪ್ರತಿಕ್ರಿಯಿಸಿದ್ದು, ನನಗೆ ನೋಟಿಸ್‌ ಸಿಕ್ಕಾಗ ಪ್ರತಿಕ್ರಿಯಿಸುವೆ ಎಂದಿದ್ದಾರೆ. ಇದರ ಮಧ್ಯೆಯೇ, ಯುವ ರಾಜ್‌ಕುಮಾರ್‌ ಅವರ ವಕೀಲರು ಸುದ್ದಿಗೋಷ್ಠಿ ನಡೆಸಿ ಹಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಶ್ರೀದೇವಿ ಅವರು ಹೇಗೆ ಕಿರುಕುಳ ನೀಡುತ್ತಿದ್ದರು ಎಂಬುದನ್ನು ಅವರು ವಿವರಿಸಿದ್ದಾರೆ.

VISTARANEWS.COM


on

Yuva Rajkumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವ ರಾಜ್‌ಕುಮಾರ್‌ (Yuva Rajkumar) ಅವರು ಪತ್ನಿಗೆ ಡಿವೋರ್ಸ್‌ ನೋಟಿಸ್‌ ನೀಡಿರುವ ಪ್ರಕರಣಕ್ಕೆ ಹಲವು ಟ್ವಿಸ್ಟ್‌ಗಳು ಸಿಗುತ್ತಿವೆ. ಡಿವೋರ್ಸ್‌ ನೋಟಿಸ್‌ ಸಿಕ್ಕಾಗ ಪ್ರತಿಕ್ರಿಯಿಸುವೆ ಎಂಬುದಾಗಿ ಯುವ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಪ್ರತಿಕ್ರಿಯಿಸಿದ ಬೆನ್ನಲ್ಲೇ, ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. “ಹಲ್ಲು ಉಜ್ಜಲ್ಲ, ಸ್ನಾನ ಮಾಡಲ್ಲ, ದೈಹಿಕವಾಗಿ ಫಿಟ್‌ ಇಲ್ಲ ಎಂಬುದಾಗಿ ಶ್ರೀದೇವಿ ಪ್ರಸಾದ್‌ ಅವರು ನಟನಿಗೆ ಕಿರುಕುಳ ನೀಡಿದ್ದಾರೆ” ಎಂಬುದಾಗಿ ಅವರು ಆರೋಪಿಸಿದ್ದಾರೆ.

“ನಾನು ಅಮೆರಿಕದಲ್ಲಿ ಇರುತ್ತೇನೆ, ನೀನು ಬೆಂಗಳೂರಿನಲ್ಲಿಯೇ ಇರು ಎಂಬುದಾಗಿ ಕಿರುಕುಳ ಕೊಟ್ಟಿದ್ದಾರೆ. ಒಂದು ತಿಂಗಳ ಹಿಂದೆ ರಾಧಯ್ಯನಿಗೆ ಮದುವೆ ಆಗಿದೆ. ಆ ಸಮಯದಲ್ಲಿ ಆಕೆ ಬಹಳ ಖಿನ್ನತೆಗೆ ಜಾರಿದ್ದರು. ಇದಕ್ಕೆ ಈಗ ಯುವನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ದೈಹಿಕವಾಗಿ ಸಂಪರ್ಕಿಸಲು ಹೋದಾಗ ಅವಮಾನ ಮಾಡುತ್ತಿದ್ದರು. ಹಲ್ಲುಜ್ಜಿಕೊಂಡು ಬಾ, ಸ್ನಾನ ಮಾಡು ಅಂತ ಹೇಳುತ್ತಿದ್ದರು. ನೀನು ದೈಹಿಕವಾಗಿ ಫಿಟ್‌ ಇಲ್ಲ, ರಾಧಯ್ಯ ಫಿಟ್‌ ಇದ್ದಾನೆ ಎಂದು ಅವಮಾನ ಮಾಡುತ್ತಿದ್ದರು. ರಾಧಯ್ಯನ ಹೆಂಡತಿ ಮನೆಯಲ್ಲಿ ಇದ್ದಿದ್ದಾಗ ಆತನ ಮನೆಗೆ ಹೋಗುತ್ತಾರೆ. ಈ ರೀತಿಯ ಸಂಬಂಧ ಇಟ್ಟುಕೊಂಡಿದ್ದಾರೆ” ಎಂಬುದಾಗಿ ತಿಳಿಸಿದರು.

“ಮಾನಸಿಕ ಹಾಗೂ ದೈಹಿಕ ದೌರ್ಜನ್ಯದ ಆಧಾರದ ಮೇಲೆ ನಾವು ಅರ್ಜಿ ಹಾಕಿದ್ದೇವೆ. ಒಟ್ಟು 54 ಪೇಜಿನ ಡಿವೋರ್ಸ್ ಪಿಟೀಷನ್ ಹಾಕಿದ್ದೇವೆ. ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ, ಇವರು ನೋಟಿಸ್‌ ಜಾರಿಗೊಳಿಸಲಾಗಿದೆ. ಶ್ರೀದೇವಿ ಭೈರಪ್ಪ ಅವರಿಗೆ ರಾಧಯ್ಯ ಎಂಬ ವ್ಯಕ್ತಿ ಜತೆ ಅಕ್ರಮ ಸಂಬಂಧ ಇದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಯುವ ಹಾಗೂ ಶ್ರೀದೇವಿ ನಡುವಿನ ಸಂಬಂಧ ಹಳಸಿತ್ತು” ಎಂಬುದಾಗಿ ಅವರು ಹೇಳಿದ್ದಾರೆ.

“3 ಕೋಟಿ ರೂ.ಗಿಂತ ಅಧಿಕ ಹಣವನ್ನು ರಾಜ್ ಕುಮಾರ್ ಫಿಲ್ಮ್ ಅಕಾಡೆಮಿಯಿಂದ ಆಕೆಯ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇದು ಯಾರಿಗೂ ಗೊತ್ತಿರಲಿಲ್ಲ. ರಾಜ್ ಕುಮಾರ್ ಕುಟುಂಬದ ಹೆಸರು ಕೆಡಿಸ್ತೀನಿ ಅಂತ ಬೆದರಿಕೆ ಹಾಕುತ್ತಿದ್ದರು. ಮೈಸೂರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಸುಳ್ಳು ಹೇಳಿ, ಅಮೆರಿಕಕ್ಕೆ ಹೋಗಿ ಅಲ್ಲಿ ಮಾಸ್ಟರ್ಸ್ ಮಾಡ್ತಿದ್ದಾರೆ. ಯುವ ಕುಟುಂಬದ ಹಣದಿಂದ ಬೆಂಗಳೂರಲ್ಲಿ ಸುಮಾರು 20ಕ್ಕೂ ಅಧಿಕ ಸೈಟ್ ಖರೀದಿ ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು.

“ಯುವ ಪತ್ನಿಯು ಇಡೀ ಕುಟುಂಬದ ವ್ಯವಹಾರ ಹಾಗೂ ಎಲ್ಲದರ ಮೇಲೂ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಳು. ಯುವ ಫ್ಯಾಮಿಲಿಯಿಂದ ಬಹಳ ಹಣ ಖರ್ಚು ಮಾಡಿಸಿಕೊಂಡಿದ್ದಾರೆ. ಐಎಎಸ್ ಕಲಿಯಲು ದೆಹಲಿಗೆ ಹೋಗಿದ್ದರು. ಅವಳ ಬಾಯ್ ಫ್ರೆಂಡ್ ರಾಧಯ್ಯ ಎಂಬವರ ಜತೆ ಸಂಬಂಧ ಇಟ್ಟುಕೊಂಡಿದ್ದಾರೆ. ರಾತ್ರಿ ಅವನ ಮನೆಯಲ್ಲಿ ಉಳದುಕೊಳ್ತಿದ್ದರು. ಇಂಥ ಹಲವು ಕಾರಣಗಳನ್ನು ಅರ್ಜಿಯಲ್ಲಿ ನಮೂದಿಸಿ ಫೈಲ್ ಮಾಡಿದ್ದೇವೆ. ಆದರೆ ಯುವ ಪತ್ನಿಯು ಯುವನಿಗೆ ಬೇರೆ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಸ್ಯಾಂಡಲ್ ವುಡ್ ನಟಿಯೊಬ್ಬರ ಜತೆ ಯುವನಿಗೆ ಸಂಬಂಧ ಇತ್ತು ಎಂದು ಅವರು ರಿಪ್ಲೈ ಮಾಡಿದ್ದಾರೆ” ಎಂದು ತಿಳಿಸಿದರು.

ಲೀಗಲ್‌ ನೋಟಿಸ್‌ಗೆ ಶ್ರೀದೇವಿ ಪ್ರತಿಕ್ರಿಯೆ

ಯುವ ರಾಜ್‌ಕುಮಾರ್‌ ಅವರ ವಕೀಲರು ಕಳುಹಿಸಿದ ಲೀಗಲ್‌ ನೋಟಿಸ್‌ಗೆ ಶ್ರೀದೇವಿ ಭೈರಪ್ಪ ಅವರು ಅಮೆರಿಕದಿಂದಲೇ ವಕೀಲರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ಯುವ ರಾಜ್‌ಕುಮಾರ್‌ ಅವರು ನನಗೆ ಕಿರುಕುಳ ನೀಡುತ್ತಿದ್ದರು. ನೀವು ನೀಡಿದ ನೋಟಿಸ್‌ನಲ್ಲಿ ಉಲ್ಲೇಖಿಸಿದ ಅಂಶಗಳು ಸತ್ಯಕ್ಕೆ ದೂರವಾಗಿವೆ. ನನಗೆ ನಿಮ್ಮ ಕುಟುಂಬವನ್ನು ಒಡೆಯಬೇಕು ಎಂದಿದ್ದರೆ ಅಮೆರಿಕಕ್ಕೆ ಬರುತ್ತಿರಲಿಲ್ಲ. ಅಷ್ಟಕ್ಕೂ, ಯುವ ರಾಜ್‌ಕುಮಾರ್‌ ಅವರು ನಟಿ ಸಪ್ತಮಿ ಗೌಡ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ನಿಮ್ಮ ಆರೋಪಗಳಿಗೆ ಕಾನೂನಾತ್ಮಕವಾಗಿಯೇ ಉತ್ತರ ಕೊಡುತ್ತೇನೆ” ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Yuva Rajkumar: ಶ್ರೀದೇವಿ ಭೈರಪ್ಪಗೆ ಅಕ್ರಮ ಸಂಬಂಧ; ಯುವ ರಾಜ್‌ಕುಮಾರ್ ಪರ ವಕೀಲ ಸ್ಫೋಟಕ ಹೇಳಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Darshan Arrested: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಾತ್ರ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ದರ್ಶನ್‌ ಸೇರಿ ನಾಲ್ವರನ್ನೇ ಕಸ್ಟಡಿಗೆ ಪಡೆದಿರುವ ಪೊಲೀಸರು ಯಾವೆಲ್ಲ ತನಿಖೆ ನಡೆಸಲಿದ್ದಾರೆ. ಕೇಸ್‌ನಲ್ಲಿ ಇನ್ನೂ ಯಾವೆಲ್ಲ ರೀತಿಯ ತನಿಖೆ ಬಾಕಿ ಇದೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Darshan Arrested
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಎರಡು ದಿನ ಪೊಲೀಸ್‌ ಕಸ್ಟಡಿಗೆ ವಹಿಸಿದೆ. ಇನ್ನು ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾ ಗೌಡ ಸೇರಿ ಒಟ್ಟು 11 ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನು ನ್ಯಾಯಾಲಯಕ್ಕೆ ಪೊಲೀಸರು ಎರಡು ರಿಮ್ಯಾಂಡ್‌ ಅರ್ಜಿಗಳನ್ನು ಸಲ್ಲಿಸಿತ್ತು. ದರ್ಶನ್‌ ಸೇರಿ ಆರು ಆರೋಪಿಗಳನ್ನು ಮಾತ್ರ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂಬುದಾಗಿ ಕೋರಿತ್ತು. ಈಗ ಇಷ್ಟೇ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂಬುದಾಗಿ ಮನವಿ ಮಾಡಿದ್ದು ಏಕೆ ಎಂಬುದೇ ರೋಚಕವಾಗಿದೆ.

ಹೌದು, ನಟ ದರ್ಶನ್, ವಿನಯ್, ಪ್ರದೋಷ್ ಹಾಗೂ ಧನರಾಜ್‌ನನ್ನು ನ್ಯಾಯಾಲಯವು 2 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಹಣ ಪಡೆದಿದ್ದೇ ಎ 14 ಪ್ರದೋಷ್.‌ ದರ್ಶನ್‌ ಪರಮಾಪ್ತನಾಗಿರುವ ಈತನು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾನೆ. ಇನ್ನು, ಎ 10 ವಿನಯ್ ಸ್ಟೋನಿ ಬ್ರೂಕ್‌ ರೆಸ್ಟೋರೆಸ್ಟ್‌ನ ಮಾಲೀಕನಾಗಿದ್ದಾನೆ. ವಿನಯ್‌ ಮಾವ ಪಟ್ಟಣಗೆರೆ ಜಯಣ್ಣ ಅವರ ಮಾಲೀಕತ್ವದ ಶೆಡ್‌ನಲ್ಲೇ ಕೊಲೆ ನಡೆದಿದೆ. ಮತ್ತೊಂದೆಡೆ, ರೇಣುಕಾಸ್ವಾಮಿಯ ಮೊಬೈಲ್‌ಅನ್ನು ಧನರಾಜ್‌ ಬಿಸಾಡಿದ್ದಾನೆ. ಹಾಗಾಗಿ, ಪೊಲೀಸರು ನಾಲ್ವರನ್ನು ಕಸ್ಟಡಿಗೆ ಪಡೆದಿದ್ದಾರೆ.

ಪೊಲೀಸರ ಪರವಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನಕುಮಾರ್‌, “ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ರೇಣುಕಾಸ್ವಾಮಿಯ ಮೊಬೈಲ್‌ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್‌ ವರದಿ ಬರಬೇಕು. ಮೃತ ವ್ಯಕ್ತಿಯ ಒಳಾಂಗಗಳ ಎಫ್‌ಎಸ್‌ಎಲ್‌ ವರದಿ, ಆರೋಪಿಗಳ ಎಫ್‌ಎಸ್‌ಎಲ್‌ ವರದಿ ಬರಬೇಕು. ಹಾಗಾಗಿ, ದರ್ಶನ್‌ ಸೇರಿ ಕೆಲ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಬೇಕು” ಎಂಬುದಾಗಿ ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾಯಾಧೀಶ ವಿಶ್ವನಾಥ್‌ ಸಿ. ಗೌಡರ್‌ ಅವರು ನಾಲ್ವರನ್ನು ಪೊಲೀಸ್‌ ಕಸ್ಟಡಿಗೆ ವಹಿಸಿದರು. ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಕೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲ್‌ಗಳು, ಸ್ಥಳ ಮಹಜರು ವೇಳೆ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.

ಪವಿತ್ರಾ ಗೌಡ ಸೇರಿ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇವರನ್ನು ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗುತ್ತದೆ. ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ , ರವಿ ಕಾರ್ತಿಕ್‌ ಜೈಲುಪಾಲಾಗಲಿದ್ದಾರೆ. ಜೂನ್‌ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ಹತ್ಯೆ ಸಂಬಂಧ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿತ್ತು. ಅದೇ ದಿನ ಪವಿತ್ರಾ ಗೌಡರನ್ನೂ ಬಂಧಿಸಲಾಗಿತ್ತು.

ಇದನ್ನೂ ಓದಿ: Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್‌; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!

Continue Reading

ಪ್ರಮುಖ ಸುದ್ದಿ

NEET UG : ಫಿಸಿಕ್ಸ್​ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ

NEET UG : ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಿದಾಗಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. 67 ವಿದ್ಯಾರ್ಥಿಗಳು 720ಕ್ಕೆ720 ಅಂಕಗಳನ್ನು ಗಳಿಸಿದ್ದಾರೆ. ಅವರಲ್ಲಿ ಆರು ವಿದ್ಯಾರ್ಥಿಗಳು ಹರಿಯಾಣದ ಒಂದೇ ಕೋಚಿಂಗ್​ ಸೆಂಟರ್​ನವರು. ಈ ಅಕ್ರಮದ ಕುರಿತು ರಾಷ್ಟ್ರಿಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು.

VISTARANEWS.COM


on

NEET UG
Koo

ಪಾಟ್ನಾ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET UG) ಸುತ್ತ ಭಾರಿ ವಿವಾದದ ಮಧ್ಯೆ ಬಿಹಾರದ ನಾಲ್ವರು ವಿದ್ಯಾರ್ಥಿಗಳ ಅಂಕಪಟ್ಟಿಗಳು ಮಾಧ್ಯಮಗಳಿಗೆ ದೊರಕಿವೆ. ಈ ಎರಡು ಸ್ಕೋರ್ ಕಾರ್ಡ್​ಗಳು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಾಕ್ಷಿಯಾಗಿದೆ. ಬಂಧಿತರಾದ ನಾಲ್ವರಲ್ಲಿ ಒಬ್ಬರಾದ ಅನುರಾಗ್ ಯಾದವ್ ನಡೆದ ಘಟನೆಯನ್ನು ವಿವರಿಸಿದ್ದಾನೆ. ಕೋಚಿಂಗ್ ಹಬ್ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಆತನನ್ನು ಚಿಕ್ಕಪ್ಪ ಸಿಕಂದರ್ ಅವರು ಸಂಪರ್ಕಿಸಿ ಸಮಸ್ತಿಪುರಕ್ಕೆ ಹೋಗುವಂತೆ ಹೇಳಿದ್ದರು. ಸಿಕಂದರ್ ಕೂಡ ಈಗ ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಅಂತೆಯೇ ಪರೀಕ್ಷೆಯ ಹಿಂದಿನ ರಾತ್ರಿ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಅನುರಾಗ್​ಗೆ ನೀಡಲಾಗಿತ್ತು. ಈ ಪ್ರಶ್ನೆಗಳು ಮರುದಿನ ಪರೀಕ್ಷೆಯಲ್ಲಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಬಿಡುಗಡೆ ಮಾಡಿದ ಅನುರಾಗ್ ಅವರ ಸ್ಕೋರ್ ಕಾರ್ಡ್​ನಲ್ಲಿ 720 ರಲ್ಲಿ 185 ಅಂಕಗಳನ್ನು ಗಳಿಸಿದ್ದಾರೆ. ಅವರ ಒಟ್ಟು ಶೇಕಡಾವಾರು ಸ್ಕೋರ್ 54.84 (ರೌಂಡ್ ಆಫ್). ಆದರೆ ಪ್ರತ್ಯೇಕ ವಿಷಗಯಳಲ್ಲಿ ಆತನ ಅಂಕಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿರಲಿಲ್ಲ. ಅನುರಾಗ್ ಭೌತಶಾಸ್ತ್ರದಲ್ಲಿ 85.8 ಪ್ರತಿಶತ ಮತ್ತು ಜೀವಶಾಸ್ತ್ರದಲ್ಲಿ 51 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಆದರೆ ಅವನ ರಸಾಯನಶಾಸ್ತ್ರದ ಅಂಕವು ಶೇಕಡಾ 5 ಮಾತ್ರ! ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ತನಗೆ ಪ್ರಶ್ನೆಗಳು ಬಂದಿವೆ ಎಂದು ಹೇಳಿದರೂ 22 ವರ್ಷದ ವಿದ್ಯಾರ್ಥಿಗೆ ರಸಾಯನಶಾಸ್ತ್ರದಲ್ಲಿ ಸೂಕ್ತ ಪ್ರಮಾಣದಲ್ಲಿ ಅಂಕಗಳು ಸಿಗದೇ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ.

ಅನುರಾಗ್ ಅವರ ರಾಷ್ಟ್ರಿಯ ಮಟ್ಟದ ರ್ಯಾಂಕ್​ 10,51,525 ಎಂದು ಉಲ್ಲೇಖಿಸಲಾಗಿದೆ ಮತ್ತು ಒಬಿಸಿ ಅಭ್ಯರ್ಥಿಯಾಗಿ ಅವರ ವರ್ಗದ ಶ್ರೇಯಾಂಕ 4,67,824 ಆಗಿದೆ. ಅನುರಾಗ್ ಅವರನ್ನು ಬಂಧಿಸಲಾಗಿದ್ದು, ಇತರ ಮೂವರನ್ನು ಪ್ರಶ್ನಿಸಲಾಗಿದೆ. ಈ ಮೂವರೂ ಒಬಿಸಿ ವರ್ಗಕ್ಕೆ ಸೇರಿದವರು. ಅವರಲ್ಲಿ ಒಬ್ಬರು ಪರೀಕ್ಷೆಯಲ್ಲಿ 720 ರಲ್ಲಿ 300 ಅಂಕಗಳನ್ನು ಗಳಿಸಿದ್ದಾರೆ ಮತ್ತು ಶೇಕಡಾವಾರು 73.37 (ರೌಂಡ್-ಆಫ್) ಆಗಿದೆ. ಇಲ್ಲಿಯೂ ಪ್ರತ್ಯಕೇ ವಿಷಯಗಳ ಅಂಕಗಳು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಜೀವಶಾಸ್ತ್ರದಲ್ಲಿ ಶೇ.87.8, ಭೌತಶಾಸ್ತ್ರದಲ್ಲಿ ಶೇ.15.5 ಹಾಗೂ ರಸಾಯನಶಾಸ್ತ್ರದಲ್ಲಿ ಶೇ.15.3 ಅಂಕಗಳನ್ನು ಗಳಿಸಿದ್ದಾರೆ. ಇತರ ಇಬ್ಬರು ವಿದ್ಯಾರ್ಥಿಗಳ ಸ್ಕೋರ್ ಕಾರ್ಡ್ ಗಳು ಎಲ್ಲಾ ಮೂರು ವಿಷಯಗಳಲ್ಲಿ ಉತ್ತಮವಾಗಿದೆ. ಅವರಲ್ಲಿ ಒಬ್ಬರು 720 ರಲ್ಲಿ 581 ಮತ್ತು ಇನ್ನೊಬ್ಬರು 483 ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ಸಂಬಳ 27% ಹೆಚ್ಚಿಸಿದರೆ ಒಟ್ಟು ಏರಿಕೆ ಎಷ್ಟಾಗಲಿದೆ? ಇಲ್ಲಿದೆ ಲೆಕ್ಕಾಚಾರ

ಪ್ರಶ್ನೆ ಪತ್ರಿಕೆಗಳಿಗಾಗಿ ಅಮಿತ್ ಆನಂದ್ ಮತ್ತು ನಿತೀಶ್ ಕುಮಾರ್ ಅವರೊಂದಿಗೆ ನಾಲ್ವರು ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದರು ಎಂದು ಅನುರಾಗ್​ ಅವರ ಚಿಕ್ಕಪ್ಪ ಸಿಕಂದರ್ ಯಡವೇಂದು ಪೊಲೀಸರಿಗೆ ತಿಳಿಸಿದ್ದಾರೆ. ಅಮಿತ್ ಮತ್ತು ನಿತೀಶ್ ಪ್ರತಿ ವಿದ್ಯಾರ್ಥಿಗೆ 30-32 ಲಕ್ಷ ರೂಪಾಯಿಗಳನ್ನು ಕೇಳಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಿದಾಗಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. 67 ವಿದ್ಯಾರ್ಥಿಗಳು 720ಕ್ಕೆ720 ಅಂಕಗಳನ್ನು ಗಳಿಸಿದ್ದಾರೆ. ಅವರಲ್ಲಿ ಆರು ವಿದ್ಯಾರ್ಥಿಗಳು ಹರಿಯಾಣದ ಒಂದೇ ಕೋಚಿಂಗ್​ ಸೆಂಟರ್​ನವರು. ಈ ಅಕ್ರಮದ ಕುರಿತು ರಾಷ್ಟ್ರಿಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು.

Continue Reading

ಕರ್ನಾಟಕ

7th Pay Commission: ಸರ್ಕಾರಿ ನೌಕರರ ಸಂಬಳ 27% ಹೆಚ್ಚಿಸಿದರೆ ಒಟ್ಟು ಏರಿಕೆ ಎಷ್ಟಾಗಲಿದೆ? ಇಲ್ಲಿದೆ ಲೆಕ್ಕಾಚಾರ

7th Pay Commission: 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಆಗಬಹುದಾದ ವೇತನ ರಚನೆ ಮತ್ತು ವೇತನ ವ್ಯತ್ಯಾಸದ ಮಾಹಿತಿ ಲಭ್ಯವಾಗಿದ್ದು, ಯಾರಿಗೆ ಎಷ್ಟು ವೇತನ ಹೆಚ್ಚಳವಾಗಲಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

VISTARANEWS.COM


on

7th Pay Commission
Koo

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ (Government Employees) 7ನೇ ವೇತನ ಆಯೋಗದ (7th Pay Commission) ಶಿಫಾರಸಿನಂತೆ ಶೇ.27ರಷ್ಟು ವೇತನ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಒಲವು ತೋರಿದ್ದಾರೆ. ಗುರುವಾರ (ಜೂನ್‌ 20) ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಸಲಹೆಯನ್ನೂ ಮೀರಿ ವೇತನ ಹೆಚ್ಚಳ ಮಾಡಲು ಸಿದ್ದರಾಮಯ್ಯ ಅವರು ಒಲವು ತೋರಿದ್ದಾರೆ. ವೇತನ ಆಯೋಗದ ಶಿಫಾರಸುಗಳನ್ನು ಪೂರ್ಣಗೊಳಿಸುವ ಮಾತನ್ನಾಡಿರುವ ಸಿಎಂ ಸಿದ್ದರಾಮಯ್ಯ, 27%ರಷ್ಟು ವೇತನ ಹೆಚ್ಚಳ ಮಾಡಲು ಸೈ ಎಂದಿದ್ದಾರೆ. ನೌಕರರು ನಿರೀಕ್ಷೆ ಮಾಡಿದ ಹೆಚ್ಚಳ ಜಾರಿಯಾಗುವ ಸಾಧ್ಯತೆಯಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂಪುಟ ಸಭೆ ಸಿಎಂಗೆ ಬಿಟ್ಟಿದೆ. ಹಾಗಾಗಿ, ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ವೇತನ ಹೆಚ್ಚಳದ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗ ಮಾರ್ಚ್ 16ರಂದು ಅಂತಿಮ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದ್ದ ಆಯೋಗ, ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು. ಈಗ ಮುಖ್ಯಮಂತ್ರಿ ಅವರು ವೇತನ ಹೆಚ್ಚಿಸಲು ಒಲವು ತೋರಿರುವ ಕಾರಣ ನೌಕರರ ನಿರೀಕ್ಷೆ, ಕುತೂಹಲ ಜಾಸ್ತಿಯಾಗಿದೆ. ಹಾಗಾದರೆ, ಶೇ.27ರಷ್ಟು ವೇತನ ಜಾಸ್ತಿಯಾದರೆ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

Reservation in outsourcing

ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ. 31 (5,270 ರೂ.) ಹಾಗೂ ಶೇ.27.50 (4,675 ರೂ. ) ಫಿಟ್ಮೆಂಟ್‌ ಸೇರಿ ಒಟ್ಟು 26,945 ಸಿಗುತ್ತಿತ್ತು. ಇನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27,000 ಇದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 (01-01-2024ಕ್ಕೆ) ರೂ. ಸಿಗಲಿದೆ. 6ನೇ ವೇತನ ಆಯೋಗದಲ್ಲಾದರೆ ಒಟ್ಟು 29,005 ರೂ. ಸಿಗುತ್ತಿತ್ತು. ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ.

ಅದೇ ರೀತಿ ಎ ವಲಯದಲ್ಲಿ ಕಾರ್ಯ ನಿರ್ವಹಿಸುವ ಎ ಮತ್ತು ಬಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು 17,000 ರೂ. ವೇತನ ಇದ್ದರೆ, ಶೇ. 31 ತುಟ್ಟಿ ಭತ್ಯೆ (5270 ರೂ.), ಫಿಟ್ಮೆಂಟ್‌ ಶೇ.27.50 (4675 ರೂ.) ಸೇರಿ ಒಟ್ಟು 26945 ರೂ ವೇತನ ಸಿಗುತ್ತಿತ್ತು. ಆದರೆ, 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27000 ಇದ್ದರೆ, ತುಟ್ಟಿ ಭತ್ಯೆ ಶೇ.8.5 (2298 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5400 ರೂ.), ನಗರ ಪರಿಹಾರ ಭತ್ಯೆ(ಸಿಸಿಎ) 900 ಸೇರಿ ಒಟ್ಟು 35,595 ವೇತನ ಸಿಗಲಿದೆ. ಇದು 6ನೇ ವೇತನ ಆಯೋಗದ ಅವಧಿಯಲ್ಲಿ 27,545 ರೂ. ಆಗಿದೆ. ಪರಿಷ್ಕೃತ ವೇತನದಲ್ಲಿ 8,050 ರೂ. ಹೆಚ್ಚಳವಾಗಲಿದೆ.

ವೇತನ ರಚನೆ ಮತ್ತು ವ್ಯತ್ಯಾಸದ ಪಟ್ಟಿ ಇಲ್ಲಿದೆ

ಇದನ್ನೂ ಓದಿ: CM Siddaramaiah: ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ: 27% ವೇತನ ಹೆಚ್ಚಳಕ್ಕೆ ಮುಂದಾದ ಸಿಎಂ

Continue Reading

ಪ್ರಮುಖ ಸುದ್ದಿ

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Citroen C3 Aircross: ಸಿ3 ಏರ್ ಕ್ರಾಸ್ ಧೋನಿ ಆವೃತ್ತಿಯ ಹೊರಭಾಗದಲ್ಲಿ ಧೋನಿಯ ಹೆಸರು ಮತ್ತು ಅವರ ಜೆರ್ಸಿ ಸಂಖ್ಯೆ 7 ನೊಂದಿಗೆ ಹೊಸ ಡೆಕಾಲ್ ನೀಡಲಾಗಿದೆ. ಒಳಭಾಗದಲ್ಲಿ ಲಿಮಿಟೆಡ್ ರನ್​ ಮಾಡೆಲ್ ಆಗಿದ್ದು. ಹೊಸ ಬಣ್ಣ-ಸಂಯೋಜಿತ ಸೀಟ್ ಕವರ್ ಗಳು ಮತ್ತು ಕುಶನ್ ಪಿಲ್ಲೊ, ಸೀಟ್ ಬೆಲ್ಟ್ ಕುಶನ್ ಗಳು, ಹೆಚ್ಚು ಪ್ರಕಾಶಮಾನವಾಗಿರವು ಡೋರ್ ಸಿಲ್ ಪ್ಲೇಟ್ ಗಳು ಮತ್ತು ಮುಂಭಾಗದ ಡ್ಯಾಶ್ ಕ್ಯಾಮ್ ನೀಡಲಾಗಿದೆ.

VISTARANEWS.COM


on

Citroen C3 Aircross
Koo

ಬೆಂಗಳೂರು: ಸಿಟ್ರೋಯನ್​ ತನ್ನ ಮಧ್ಯಮ ಗಾತ್ರದ ಎಸ್​ಯುವಿ ಕಾರಾಗಿರುವ ಸಿ3 ಏರ್ ಕ್ರಾಸ್ (Citroen C3 Aircross) ಧೋನಿ ಎಡಿಷನ್ ಹೊಸ ವಿಶೇಷ ಆವೃತ್ತಿ ಹೊರತಂದಿದೆ. 11.82 ಲಕ್ಷ ರೂ.ಗಳ ಬೆಲೆ ಹೊಂದಿರುವ ಧೋನಿ ಎಡಿಷನ್ ಅನೇಕ ರೂಪಾಂತರಗಳು 5 ಮತ್ತು 7 ಸೀಟರ್​ ಕಾನ್ಫಿಗರೇಶನ್ ಗಳಲ್ಲಿ ಲಭ್ಯವಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ವಿಶೇಷ ಆವೃತ್ತಿಯ ಮಾದರಿಯು 100 ಯುನಿಟ್ ಗಳಿಗೆ ಸೀಮಿತವಾಗಿದೆ ಎಂಬುದೇ ವಿಶೇಷ. ಈ ಎಡಿಷನ್​ನಲ್ಲಿ ಸಿ3 ಏರ್ ಕ್ರಾಸ್ ಗಿಂತ ಸಣ್ಣ ಪ್ರಮಾಣದ ಇಂಟೀರಿಯರ್​ ಬದಲಾವಣೆ ಮಾಡಲಾಗಿದೆ.

ಸಿ3 ಏರ್ ಕ್ರಾಸ್ ಧೋನಿ ಆವೃತ್ತಿಯ ಹೊರಭಾಗದಲ್ಲಿ ಧೋನಿಯ ಹೆಸರು ಮತ್ತು ಅವರ ಜೆರ್ಸಿ ಸಂಖ್ಯೆ 7 ನೊಂದಿಗೆ ಹೊಸ ಡೆಕಾಲ್ ನೀಡಲಾಗಿದೆ. ಒಳಭಾಗದಲ್ಲಿ ಲಿಮಿಟೆಡ್ ರನ್​ ಮಾಡೆಲ್ ಆಗಿದ್ದು. ಹೊಸ ಬಣ್ಣ-ಸಂಯೋಜಿತ ಸೀಟ್ ಕವರ್ ಗಳು ಮತ್ತು ಕುಶನ್ ಪಿಲ್ಲೊ, ಸೀಟ್ ಬೆಲ್ಟ್ ಕುಶನ್ ಗಳು, ಹೆಚ್ಚು ಪ್ರಕಾಶಮಾನವಾಗಿರವು ಡೋರ್ ಸಿಲ್ ಪ್ಲೇಟ್ ಗಳು ಮತ್ತು ಮುಂಭಾಗದ ಡ್ಯಾಶ್ ಕ್ಯಾಮ್ ನೀಡಲಾಗಿದೆ.

ಪ್ರತಿ ಧೋನಿ ಎಡಿಷನ್​ ಕಾರಿನ ಗ್ಲೋವ್ ಬಾಕ್ಸ್​ನಲ್ಲಿ ವಿಶೇಷ ‘ಧೋನಿ ಗೂಡಿ’ ಒಳಗೊಂಡಿರುತ್ತದೆ ಎಂದು ಸಿಟ್ರನ್ ಹೇಳುತ್ತಾರೆ. ಅಂದರೆ ಅದೃಷ್ಟಶಾಲಿ ವಿಜೇತರು ಸ್ವತಃ ಧೋನಿಯಿಂದ ಸಹಿ ಮಾಡಿದ ಗ್ಲವ್ಸ್​​ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ

ಉಳಿದಂತೆ ಧೋನಿ ಆವೃತ್ತಿಯು ಸ್ಟ್ಯಾಂಡರ್ಡ್ ಸಿ 3 ಏರ್ ಕ್ರಾಸ್ ನಂತೆಯೇ ಇದೆ. ಇದು 110 ಬಿಹೆಚ್ ಪಿ, 1.2-ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ.

ಸಚಿನ್​ ಹೆಸರಿನ ಫಿಯೆಟ್​ ಕಾರು ಬಂದಿತ್ತು

ಖ್ಯಾತ ಕ್ರಿಕೆಟಿಗರೊಬ್ಬರು ಕಾರು ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2002 ರಲ್ಲಿ ಫಿಯೆಟ್ ತಂಡವು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕೈಜೋಡಿಸಿ ಪಾಲಿಯೋ ಎಸ್ 10 ಅನ್ನು ಹೊರತಂದಿತ್ತು. ಈ ಸೀಮಿತ ರನ್ ಮಾದರಿಯನ್ನು (ಕೇವಲ 500 ಮಾತ್ರ ಉತ್ಪಾದಿಸಲಾಗಿತ್ತು. ಪ್ರತಿಯೊಂದೂ ಅದರ ಸರಣಿ ಸಂಖ್ಯೆಯನ್ನು ಸೂಚಿಸುವ ಅಲ್ಯೂಮಿನಿಯಂ ಫಲಕವನ್ನು ಪಡೆದುಕೊಂಡಿತ್ತು ) ಹೊರಗೆ ಹಲವಾರು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಂದಿತ್ತಯ. ವಿಶೇಷ ಬಣ್ಣ ಮತ್ತು ಸಚಿನ್ ಅವರ ಆಟೋಗ್ರಾಫ್ ನಿಂದ ಹಿಡಿದು ಹಿಂಭಾಗದ ಸ್ಪಾಯ್ಲರ್ ಮತ್ತು ಹೊಸ ಅಲಾಯ್ ಚಕ್ರಗಳವರೆಗೆ ವಿಶೇಷತೆ ಇತ್ತು.

Continue Reading
Advertisement
Darshan Arrested
ಕರ್ನಾಟಕ6 mins ago

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Floral Jumpsuit fashion
ಲೈಫ್‌ಸ್ಟೈಲ್13 mins ago

Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Karnataka Weather Forecast
ಮಳೆ25 mins ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Weight Loss tension
ಆರೋಗ್ಯ27 mins ago

International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

NEET UG
ಪ್ರಮುಖ ಸುದ್ದಿ33 mins ago

NEET UG : ಫಿಸಿಕ್ಸ್​ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ

PAN Card Safety
ವಾಣಿಜ್ಯ35 mins ago

PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

7th Pay Commission
ಕರ್ನಾಟಕ43 mins ago

7th Pay Commission: ಸರ್ಕಾರಿ ನೌಕರರ ಸಂಬಳ 27% ಹೆಚ್ಚಿಸಿದರೆ ಒಟ್ಟು ಏರಿಕೆ ಎಷ್ಟಾಗಲಿದೆ? ಇಲ್ಲಿದೆ ಲೆಕ್ಕಾಚಾರ

Protest by BJP in Yallapur against petrol and diesel price hike
ಉತ್ತರ ಕನ್ನಡ58 mins ago

Uttara Kannada News: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಯಲ್ಲಾಪುರದಲ್ಲಿ ಬಿಜೆಪಿಯಿಂದ ಪ್ರತಿಭಟನೆ

Renuka swamy Murder case
ಬೆಂಗಳೂರು1 hour ago

Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್‌; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!

International Yoga Day 2024
ಫ್ಯಾಷನ್1 hour ago

International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ25 mins ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌