ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾನ್ ಫಿಲ್ಮ್ ಫೆಸ್ಟಿವಲ್ 2024ರ ರೆಡ್ ಕಾರ್ಪೆಟ್ (Canne Film Festival 2024) ಮೇಲೆ ಒಂದೊಂದು ದಿನವೂ ಒಂದೊಂದು ಬಗೆಯ ವಿಶೇಷವಾದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿಯರು ಹಾಗೂ ಸೆಲೆಬ್ರೆಟಿಗಳು 3ನೇ ದಿನವೂ ಕೂಡ ಆಫ್ ಶೋಲ್ಡರ್ ಡಿಸೈನರ್‌ವೇರ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದರು. ಅಂದಹಾಗೆ, ಬಾಲಿವುಡ್ ನಟಿ ಶೋಭಿತಾ, ಕಳೆದ ಬಾರಿ ನಟಿ ಅಥಿಯಾ ಶೆಟ್ಟಿ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ನಮ್ರತಾ ವಿನ್ಯಾಸಗೊಳಿಸಿ, ಧರಿಸಿದ್ದ ಶಿಮ್ಮರ್ ಪರ್ಪಲ್ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡರು. ಹಳೆಯ ಡಿಸೈನ್ ಮತ್ತೊಮ್ಮೆ ರಿಪೀಟ್ ಮಾಡಿದರು.
ಊರ್ವಶಿ ರೌತೆಲಾ ಆಕರ್ಷಕ ರೆಡ್ ಗೌನ್: ಇನ್ನು ಬಾಲಿವುಡ್ ನಟಿ ಊರ್ವಶಿ ರೌತೆಲಾ, ತುನೇಸಿಯನ್ ಡಿಸೈನರ್‌ನ ಆಫ್ ಶೋಲ್ಡರ್ ಕೇಪ್ ಶೈಲಿಯ ಬಲೂನ್ ಸ್ಲೀವ್‌ನ ಆಕರ್ಷಕ ರೆಡ್ ಗೌನ್‌ನಲ್ಲಿ ಯೂರೋಪಿಯನ್ ಕ್ವೀನ್ ಲುಕ್ ಮೂಲಕ ಕಣ್ಮನ ಸೆಳೆದರು.
ಇದನ್ನೂ ಓದಿ: Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!
ದೀಪ್ತಿ – ನಮಿತಾ ತಾಪರ್ ಡಿಸೈನರ್‌ವೇರ್ಸ್: ಇನ್ನು, ದೀಪ್ತಿ ಯೆಲ್ಲೋ & ಗೋಲ್ಡ್ ಫಿಶ್ಟೇಲ್ ರಫಲ್ ಗೌನ್‌ನಲ್ಲಿ ಕಾಣಿಸಿಕೊಂಡರೆ, ನಮಿತಾ ರಾಯಲ್ ಬ್ಲ್ಯೂ ಸ್ಯಾಟೀನ್ ಗೌನ್‌ನಲ್ಲಿ ಪೋಸ್ ನೀಡಿದರು.
ಸೆಲೆಬ್ರೆಟಿಗಳ ರೆಡ್‌ಕಾರ್ಪೆಟ್ ಸ್ಟೈಲಿಂಗ್ ಬದಲಾವಣೆ: ಮೊದಲ ದಿನ ಬಹುತೇಕ ಸೆಲೆಬ್ರೆಟಿಗಳು ತಮ್ಮ ಡಿಸೈನರ್‌ವೇರ್‌ಗಳು ಎಕ್ಸ್ಕ್ಲೂಸಿವ್ ಡಿಸೈನ್ ಹೊಂದಿವೆ ಎಂದು ಭಾವಿಸಿಯೇ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದರೆ, ತದನಂತರ ಕೊಂಚ ಜಾಗರೂಕರಾಗಿ ಸ್ಟೈಲಿಂಗ್‌ನಲ್ಲಿ ಬದಲಾವಣೆ ತಂದಿರುವುದು ಕಂಡು ಬಂದಿತು.
ಡಿಸೈನರ್‌ವೇರ್ ಬದಲಿಸಲಾಗದು!
ಹಾಗೆಂದು ಇದ್ದಕ್ಕಿದ್ದಂತೆ ಯಾವ ಸೆಲೆಬ್ರೆಟಿಗೂ ಕೂಡ ಡಿಸೈನರ್ವೇರ್ ಮತ್ತೊಬ್ಬರ ದಿರಸಿನಂತೆ ಇದೆ ಎಂದು ಅರಿವಾದಾಕ್ಷಣ ಬದಲಿಸಲು ಆಗುವುದಿಲ್ಲ! ಯಾಕೆಂದರೇ, ಅವರು ಧರಿಸುವ ಒಂದೊಂದು ಉಡುಪು ಲಕ್ಷಗಟ್ಟಲೆ ರೂ. ಬೆಲೆ ಬಾಳುತ್ತವೆ. ಅಲ್ಲದೇ, ತಿಂಗಳಾನುಗಟ್ಟಲೇ ಮೊದಲೇ ಯಾವುದನ್ನು ಧರಿಸಬೇಕೆಂಬುದು ನಿರ್ಧರಿತವಾಗಿರುತ್ತದೆ. ಇದಕ್ಕಾಗಿ ಸ್ಟಾರ್ಗಳ ಡಿಸೈನರ್‌ಗಳು ಕೂಡ ತಿಂಗಳಾನುಗಟ್ಟಲೇ ಹೋಮ್ ವರ್ಕ್ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ವಿಶೇಷ ದಿರಸನ್ನು ಸಿದ್ಧಪಡಿಸಲು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಕೆಲವು ಯಾರೂ ಧರಿಸದ ಹೊಸ ಡಿಸೈನರ್‌ಗಳಾಗಿ ಹಿಟ್ ಲಿಸ್ಟ್‌ಗೆ ಸೇರಿದರೇ, ಮತ್ತೆ ಕೆಲವು ಸೇಮ್ ಟು ಸೇಮ್ ಅಥವಾ ಕಾಪಿಕ್ಯಾಟ್ ಆಗಿ ನಗೆಪಾಟಲೀಗಿಡಾಗುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಕ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)