Site icon Vistara News

Tax Regime: ತೆರಿಗೆಯಲ್ಲಿ ಬದಲಾವಣೆ ಇಲ್ಲ: ಈ ಬಗ್ಗೆ ತಿಳಿಯಬೇಕಾದ 6 ಸಂಗತಿಗಳು

union budget

ಹೊಸದಿಲ್ಲಿ: ಹೊಸ ಹಣಕಾಸು ವರ್ಷ (New Finance Year) ಆರಂಭವಾದ ಇಂದು (ಏ.1) ತೆರಿಗೆ ಪದ್ಧತಿಯಲ್ಲಿ ಯಾವುದೇ ಹೊಸ ಬದಲಾವಣೆ ಇಲ್ಲ (Change in tax regime) ಎಂದು ಹಣಕಾಸು ಸಚಿವಾಲಯ (Finance ministry) ಸ್ಪಷ್ಟಪಡಿಸಿದೆ. ಮಧ್ಯಂತರ ಬಜೆಟ್‌ನ ಆದಾಯ ತೆರಿಗೆ (Income Tax) ಪ್ರಸ್ತಾವನೆಗಳು ಇಂದಿನಿಂದ ಜಾರಿಗೆ ಬರುತ್ತಿವೆ.

ಹಣಕಾಸು ಸಚಿವಾಲಯವು Xನಲ್ಲಿನ ಪೋಸ್ಟ್‌ನಲ್ಲಿ, ಹೊಸ ತೆರಿಗೆ ಪದ್ಧತಿಯ ಬಗ್ಗೆ ಗೊಂದಲವನ್ನು ನಿವಾರಿಸುವ ಪ್ರಕರಣೆ ನೀಡಿದೆ. ಹೊಸ ತೆರಿಗೆ ಪದ್ಧತಿಯು ಕಡಿಮೆ ದರಗಳನ್ನು ಹೊಂದಿದೆ; ಆದರೆ ಕಡಿಮೆ ವಿನಾಯಿತಿಗಳು ಮತ್ತು ಕಡಿತಗಳನ್ನು ಹೊಂದಿದೆ.

ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದಿದ್ದರು. ಮತ್ತು ಅದೇ ನೇರ ಮತ್ತು ಪರೋಕ್ಷ ತೆರಿಗೆ ದರಗಳನ್ನು ಉಳಿಸಿಕೊಂಡಿದ್ದರು.

ಹಣಕಾಸು ಸಚಿವಾಲಯ ಹೇಳಿದ್ದೇನು?

ಹಣಕಾಸು ಸಚಿವಾಲಯದ ಪೋಸ್ಟ್‌ನಲ್ಲಿ, “ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ತೆರಿಗೆ ಪದ್ಧತಿಗೆ ಸಂಬಂಧಿಸಿದ ತಪ್ಪು ಮಾಹಿತಿಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ, ಹೀಗಾಗಿ ಈ ಸ್ಪಷ್ಟನೆ” ಎಂದು ಹೇಳಿದೆ. ತೆರಿಗೆಗಳಿಗೆ ಸಂಬಂಧಿಸಿದಂತೆ ಈ ಹಣಕಾಸು ವರ್ಷದಲ್ಲಿ ಸಚಿವಾಲಯವು ಆರು ಅಂಶಗಳನ್ನು ಹಂಚಿಕೊಂಡಿದೆ.

1) 01.04.2024ರಿಂದ ತೆರಿಗೆಯಲ್ಲಿ ಯಾವುದೇ ಹೊಸ ಬದಲಾವಣೆ ಇಲ್ಲ.

2) ಅಸ್ತಿತ್ವದಲ್ಲಿರುವ ಹಳೆಯ ತೆರಿಗೆ ಪದ್ಧತಿಗೆ (ವಿನಾಯಿತಿ ಇಲ್ಲದ) ಹೋಲಿಸಿದರೆ, ಸೆಕ್ಷನ್ 115BAC(1A) ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಹಣಕಾಸು ಕಾಯಿದೆ 2023ರಲ್ಲಿ ಪರಿಚಯಿಸಿದೆ.

3) ಹೊಸ ತೆರಿಗೆ ಪದ್ಧತಿಯು ಕಂಪನಿಗಳು ಮತ್ತು ಸಂಸ್ಥೆಗಳನ್ನು ಹೊರತುಪಡಿಸಿ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಹಣಕಾಸು ವರ್ಷ 2023-24ರಿಂದ ಡೀಫಾಲ್ಟ್ ಆಡಳಿತವಾಗಿ ಅನ್ವಯಿಸುತ್ತದೆ ಮತ್ತು ಇದಕ್ಕೆ ಅನುಗುಣವಾದ ಮೌಲ್ಯಮಾಪನ ವರ್ಷವು AY 2024-25 ಆಗಿದೆ.

4) ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ, ತೆರಿಗೆ ದರಗಳು ಗಣನೀಯವಾಗಿ ಕಡಿಮೆಯಾಗಿವೆ. ಆದರೂ ವಿವಿಧ ವಿನಾಯಿತಿಗಳು ಮತ್ತು ಕಡಿತಗಳ ಪ್ರಯೋಜನವು ಹಳೆಯದರಂತೆ ಲಭ್ಯವಿಲ್ಲ. ವೇತನದಿಂದ ರೂ. 50,000 ಮತ್ತು ಕುಟುಂಬ ಪಿಂಚಣಿಯಿಂದ ರೂ. 15,000ರ ಪ್ರಮಾಣಿತ ಕಡಿತವನ್ನು ಹೊರತುಪಡಿಸಿ.

5) ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿದೆ. ಆdre ತೆರಿಗೆ ಪಾವತಿದಾರರು ತಮಗೆ ಲಾಭದಾಯಕವೆಂದು ಭಾವಿಸುವ ತೆರಿಗೆ ಪದ್ಧತಿಯನ್ನು (ಹಳೆಯ ಅಥವಾ ಹೊಸ) ಆಯ್ಕೆ ಮಾಡಬಹುದು.

6) ಹೊಸ ತೆರಿಗೆ ಪದ್ಧತಿಯಿಂದ ಹೊರಗುಳಿಯುವ ಆಯ್ಕೆಯು AY 2024-25ಕ್ಕೆ ರಿಟರ್ನ್ ಸಲ್ಲಿಸುವವರೆಗೆ ಲಭ್ಯವಿದೆ. ಯಾವುದೇ ವ್ಯಾಪಾರ ಆದಾಯವಿಲ್ಲದ ಅರ್ಹ ವ್ಯಕ್ತಿಗಳು ಪ್ರತಿ ಹಣಕಾಸು ವರ್ಷಕ್ಕೆ ಪದ್ಧತಿಯನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿರುತ್ತಾರೆ. ಆದ್ದರಿಂದ, ಈ ವರ್ಷ ಅವರು ತೆರಿಗೆ ಪದ್ಧತಿಯನ್ನು ಮತ್ತು ಮುಂದಿನ ವರ್ಷ ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಬಹುದು.

ಹೊಸ ತೆರಿಗೆ ಪದ್ಧತಿ ಸ್ಲಾಬ್‌ಗಳು:

₹0ಯಿಂದ ₹ 3,00,000 ವರೆಗಿನ ಆದಾಯ: 0% ತೆರಿಗೆ ದರ
₹ 3,00,001 ರಿಂದ ₹ 6,00,000 ವರೆಗಿನ ಆದಾಯ: 5%
₹ 6,00,001 ರಿಂದ ₹ 9,00,000 ವರೆಗಿನ ಆದಾಯ: 10%
₹ 9,00,001 ರಿಂದ ₹ 12,00,000 ವರೆಗಿನ ಆದಾಯ: 15%
₹ 12,00,001 ರಿಂದ ₹ 15,00,001 ವರೆಗಿನ ಆದಾಯ: 20%
₹ 15,00,000 ಕ್ಕಿಂತ ಹೆಚ್ಚಿ ನ ಆದಾಯ: 30%

ಇದನ್ನೂ ಓದಿ: Money Guide: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಎಷ್ಟು ಬಗೆಯ ಫಾರ್ಮ್‌ಗಳಿವೆ? ನಿಮಗೆ ಯಾವುದು ಸೂಕ್ತ? ಚೆಕ್‌ ಮಾಡಿ

Exit mobile version