ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ (LOC) ಭದ್ರತಾ ಪಡೆಗಳು (Security Forces) ಉಗ್ರರ ಒಳನುಸುಳುವಿಕೆ (Infiltration) ಪ್ರಯತ್ನವನ್ನು (Terrorist Attack) ವಿಫಲಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಕೊಂದುಹಾಕಿದ್ದಾರೆ (Terrorists killed) ಎಂದು ಭಾರತೀಯ ಸೇನೆ (Indian Army) ಭಾನುವಾರ ತಿಳಿಸಿದೆ.
ಎಲ್‌ಒಸಿಯಲ್ಲಿ ಕುಪ್ವಾರದ ಕೆರಾನ್ ಸೆಕ್ಟರ್‌ನಲ್ಲಿ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಲಾಯಿತು. “ಕೆರಾನ್ ಸೆಕ್ಟರ್‌ನಲ್ಲಿನ ಎಲ್‌ಒಸಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ-ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಚಿನಾರ್ ಕಾರ್ಪ್ಸ್ ಎಕ್ಸ್‌ನ ವಕ್ತಾರರು ತಿಳಿಸಿದ್ದಾರೆ.
ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ. ಹತ್ಯೆಗೀಡಾದ ಉಗ್ರರ ಗುರುತು ಕುರಿತು ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಜುಲೈ 6 ಮತ್ತು 7 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಕೇವಲ ಒಂದು ವಾರದ ನಂತರ ಈ ಕಾರ್ಯಾಚರಣೆಯು ನಡೆದಿದೆ. ಗುಂಡಿನ ಚಕಮಕಿಯಲ್ಲಿ ಸೇನೆಯು ತನ್ನ ಇಬ್ಬರು ಸೈನಿಕರನ್ನು ಕಳೆದುಕೊಂಡಿತ್ತು.
ಜುಲೈ 6 ರಂದು ಚಿನಿಗಾಮ್‌ನಲ್ಲಿ ನಾಲ್ವರು ಭಯೋತ್ಪಾದಕರು ಮತ್ತು ಒಬ್ಬ ಯೋಧ (Soldier) ಸಾವನ್ನಪ್ಪಿದ್ದರೆ, ಮೊಡೆರ್‌ಗಾಮ್‌ನಲ್ಲಿ ಇನ್ನೊಬ್ಬ ಯೋಧ ಸಾವನ್ನಪ್ಪಿದ್ದರು. ಜುಲೈ 7 ರಂದು ಮಾಡರ್‌ಗಾಮ್ ಕಾರ್ಯಾಚರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಉಳಿದ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಯಿತು.
ಜೂನ್ 23 ರಂದು, ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ಎಲ್‌ಒಸಿ ಬಳಿ ಭದ್ರತಾ ಪಡೆಗಳು ನಡೆಸಿದ ಒಳನುಸುಳುವಿಕೆ ವಿರೋಧಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕನನ್ನು ಕೊಲ್ಲಲಾಯಿತು. ಉರಿ ಸೆಕ್ಟರ್‌ನ ಎಲ್‌ಒಸಿಯ ಬಾಸ್‌ಗ್ರೇನ್ ಗ್ರಾಮದ ಬಳಿಯ ಕಣಿವೆಯೊಳಗೆ ನುಸುಳಲು ಭಯೋತ್ಪಾದಕರ ಗುಂಪಿನ ಒಳನುಸುಳುವಿಕೆಯ ಪ್ರಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿತು.
ಏಪ್ರಿಲ್‌ನಲ್ಲಿ, ರುಸ್ತಮ್ ಪೋಸ್ಟ್ ಬಳಿಯ ಉರಿಯಲ್ಲಿ ಸೇನೆಯು ಇಬ್ಬರು ನುಸುಳುಕೋರರನ್ನು ಕೊಂದಿತು. ಉರಿ ಸೆಕ್ಟರ್‌ನ ಎಲ್‌ಒಸಿಯ ಸಬುರಾ ನುಲ್ಲಾ ಬಳಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಇಬ್ಬರು ನುಸುಳುಕೋರರಿಗೆ ಪಾಕಿಸ್ತಾನಿ ಪಡೆ ಬೆಂಬಲ ನೀಡಿತ್ತು ಎಂದು ಭಾರತೀಯ ಸೇನೆ ಹೇಳಿದೆ. ಇದು ಈ ವರ್ಷದ ಮೊದಲ ಒಳನುಸುಳುವಿಕೆ ಪ್ರಯತ್ನವಾಗಿದೆ. ಭಾರತೀಯ ಪಡೆಗಳು ಎಚ್ಚರದಿಂದಿದ್ದು ಇದನ್ನು ತಪ್ಪಿಸಿವೆ.
ಕಳೆದ ವರ್ಷ ನವೆಂಬರ್‌ನಲ್ಲಿ ಉರಿ ಸೆಕ್ಟರ್‌ನಲ್ಲಿ ಇದೇ ರೀತಿಯ ಒಳನುಸುಳುವಿಕೆ ಪ್ರಯತ್ನವನ್ನು ಸೇನೆ (Indian army) ವಿಫಲಗೊಳಿಸಿತ್ತು ಮತ್ತು ಇಬ್ಬರು ಭಯೋತ್ಪಾದಕರನ್ನು ಕೊಂದಿತ್ತು.
ಇದನ್ನೂ ಓದಿ: PM Modi Russia Visit: ಭಾರತ-ರಷ್ಯಾ ಜಂಟಿ ಹೇಳಿಕೆ ಬಿಡುಗಡೆ; ಜಮ್ಮು & ಕಾಶ್ಮೀರದ ಭಯೋತ್ಪಾದಕ ದಾಳಿಗೆ ಖಂಡನೆ