ಬಾಗಲಕೋಟೆ: ಟಯರ್ ಬ್ಲಾಸ್ಟ್ ಆಗಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿದ ಘಟನೆ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಹೊಲದ ಕೆಲಸ ಮುಗಿಸಿ ರಸ್ತೆ ಪಕ್ಕ ನಿಂತಿದ್ದವರ ಮೇಲೆ ಟಿಪ್ಪರ್ ಪಲ್ಟಿಯಾಗಿದ್ದರಿಂದ ದುರಂತ ನಡೆದಿದೆ.
ಬಾದರದಿನ್ನಿ ಗ್ರಾಮದ ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಪತ್ನಿ ಯಲ್ಲವ್ವ ಯಂಕಪ್ಪ ತೋಳಮಟ್ಟಿ (60), ಮಗ ಪುಂಡಲೀಕ ಯಂಕಪ್ಪ ತೋಳಮಟ್ಟಿ (35), ಮಗಳು ನಾಗವ್ವ ಅಶೋಕ ಬಮ್ಮಣ್ಣವರ (45), ಅಳಿಯ ಅಶೋಕ ನಿಂಗಪ್ಪ ಬಮ್ಮಣ್ಣವರ (50) ಮೃತರು.
ಇದನ್ನೂ ಓದಿ | Water Crisis : ನೀರಿಗಾಗಿ ಜಗಳ; ಪಕ್ಕದ ಮನೆಯ ಮಹಿಳೆಯನ್ನೇ ಇರಿದು ಕೊಂದ 15 ಬಾಲಕಿ
ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ಬೀಳಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಯುವಕನ ಅಟ್ಟಾಡಿಸಿ ನೆಲಕ್ಕುರುಳಿಸಿ ಚಾಕುವಿನಿಂದ ಇರಿದ ದುಷ್ಟ
ಆನೇಕಲ್: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ (Attempt To murder) ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಕಲ್ಕೆರೆಯಲ್ಲಿ ನಡೆದಿದೆ. ನವೀನ್ ಅಲಿಯಾಸ್ ಅಪ್ಪು ಚಾಕು ಇರಿತಕ್ಕೆ ಒಳಗಾದವನು. ವರುಣ್ ಹಲ್ಲೆ ನಡೆಸಿದವನು.
ನವೀನ್ ಹಾಗೂ ವರುಣ್ ಇಬ್ಬರು ಚಿರಪರಿಚಿತರೇ. ಇವರಿಬ್ಬರ ನಡುವೆ ಇತ್ತೀಚೆಗೆ ಹದಿನೈದು ಸಾವಿರ ಹಣಕ್ಕೆ ಕಿರಿಕ್ ಆಗಿತ್ತು. ನವೀನ್ ಬಳಿ ಈ ವರುಣ್ ಸಾಲ ಪಡೆದಿದ್ದ. ಹೀಗಾಗಿ ತಾನು ನೀಡಿದ್ದ ಹದಿನೈದು ಸಾವಿರ ಹಣವನ್ನು ವಾಪಸ್ ಕೇಳಿದ್ದಕ್ಕೆ ವರುಣ್ ಸಿಟ್ಟಾಗಿದ್ದ.
ಇದೇ ವಿಚಾರಕ್ಕೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ನವೀನ್ ಮೇಲೆ ಏಕಾಏಕಿ ವರುಣ್ ಅಟ್ಯಾಕ್ ಮಾಡಿದ್ದಾನೆ. ರಸ್ತೆಯುದ್ದಕ್ಕೂ ಅಟ್ಟಾಡಿಸಿಕೊಂಡು ಬಂದು ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದು ಹಲ್ಲೆ ಮಾಡುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Self Harming : ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾದ ರೈತ
ದೇಹದ ಮೂರ್ನಾಲ್ಕು ಕಡೆ ನವೀನ್‌ಗೆ ಮಾರಣಾಂತಿಕ ಹಲ್ಲೆ ಮಾಡಿ ವರುಣ್ ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದವನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಆರೋಪಿ ವರುಣ್‌ಗಾಗಿ ಹುಡುಕಾಟ ನಡೆಸಿದ್ದಾರೆ.