Site icon Vistara News

Udupi Pocso case: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಕೇಸ್‌; 8-9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!

Udupi Pocso case

ಉಡುಪಿ: ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣವೊಂದು (Physical Abuse) ಬೆಳಕಿಗೆ ಬಂದಿದೆ. ಯುವ ಉದ್ಯಮಿಯೊಬ್ಬ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೋಕ್ಸೊ ಪ್ರಕರಣ (Udupi Pocso case) ದಾಖಲಾಗುತ್ತಲೇ ಆರೋಪಿ ಪರಾರಿಯಾಗಿದ್ದಾನೆ.

ಉದ್ಯಮಿ ಶ್ರೇಯಸ್ ನಾಯ್ಕ (25) ಆರೋಪಿ. ಬಾಲಕಿಯೊಬ್ಬಳ ಮೇಲೆ ಒಂದು ವರ್ಷದಿಂದ ಆರೋಪಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ. ಹಾಲಾಡಿ ರಸ್ತೆ ಹೆಗ್ಗೋಡ್ಲುವಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾನೆ. ಬಾಲಕಿ ಗರ್ಭಿಣಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೇ 18 ರಂದು ಪೋಕ್ಸೊ ಪ್ರಕರಣ ದಾಖಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಶ್ರೇಯಸ್‌ಗಾಗಿ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ಶಾಲೆ, ಕಾಲೇಜು ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್

ಶಾಲೆ, ಕಾಲೇಜು ವಿದ್ಯಾರ್ಥಿನಿಯರೇ ಆರೋಪಿ ಶ್ರೇಯಸ್‌ ಟಾರ್ಗೆಟ್ ಆಗಿದ್ದು, 8-9 ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಮಾಡಿರಬಹುದು ಎಂಬ ಶಂಕೆ ವ್ಯಕ್ಯವಾಗಿದೆ. ಸುಮಾರು 50ಕ್ಕೂ ಅಧಿಕ ಅಶ್ಲೀಲ ವಿಡಿಯೊಗಳನ್ನು ಆರೋಪಿ ಸೆರೆಹಿಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಯರು, ಯುವತಿಯರ ಜತೆಗಿನ ವಿಡಿಯೊಗಳನ್ನು ಸೆರೆಹಿಡಿದು ತನ್ನ ಲ್ಯಾಪ್‌ಟಾಪ್‌ನಲ್ಲಿ ಆಸಾಮಿ ಇರಿಸಿಕೊಳ್ಳುತ್ತಿದ್ದ.

ಶಾಲೆ, ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಥೇಟ್ ಪ್ರಜ್ವಲ್ ರೇವಣ್ಣ ಮಾದರಿಯಲ್ಲೇ ಈ ವಿಕೃತ ಕಾಮಿ ವಿಡಿಯೊ ಮಾಡಿಕೊಳ್ಳುತ್ತಿದ್ದ. ನಂತರ ಯುವತಿಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ.

ಇದನ್ನೂ ಓದಿ | Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

ಆರೋಪಿಯ ಲ್ಯಾಪ್‌ಟಾಪ್‌ ವಶಕ್ಕೆ ಪಡೆದ ಸೈಬರ್ ಪೊಲೀಸ್

ಆರೋಪಿ ಶ್ರೇಯಸ್‌ ಲ್ಯಾಪ್‌ಟಾಪ್‌ ಅನ್ನು ಸೈಬರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ಗೆ ಆರೋಪಿ ಪಾಸ್ ವರ್ಡ್ ಇಟ್ಟಿದ್ದು, ಸುಮಾರು 50ಕ್ಕೂ ಅಧಿಕ ವಿಡಿಯೊಗಳು ಇರುವ ಶಂಕೆ ವ್ಯಕ್ತವಾಗಿದೆ. ಸಂತ್ರಸ್ತೆ ಹೇಳಿಕೆ ಆಧರಿಸಿ ಆರೋಪಿ ಮನೆಯಿಂದ ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಶಾಲಾ, ಕಾಲೇಜಿನ 8-9 ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಶಂಕೆ ವ್ಯಕ್ತವಾಗಿದ್ದು, ಯಾರಾದರೂ ಸಂತ್ರಸ್ತೆಯರಿದ್ದಲ್ಲಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಶ್ರೇಯಸ್ ನಾಯ್ಕ ಬಂಧನಕ್ಕೆ ದಲಿತ ಸಂಘಟನೆಗಳ ಒತ್ತಾಯ

ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣ ಬೆಳಿಕಿಗೆ ಬಂದ ಹಿನ್ನೆಲೆಯಲ್ಲಿ ಆರೋಪಿ ಶ್ರೇಯಸ್ ನಾಯ್ಕ (25) ಬಂಧನಕ್ಕೆ ದಲಿತ ಸಂಘಟನೆಗಳು ಒತ್ತಾಯ ಮಾಡಿವೆ. ಆರೋಪಿ ಪ್ರಭಾವಿ ಕುಟುಂಬದಿಂದ ಬಂದಿದ್ದು, ಪೊಲೀಸರ ತನಿಖೆ ಬಗ್ಗೆ ದಲಿತ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.

ಶ್ರೇಯಸ್ ಕುಟುಂಬಸ್ಥರು ಇಲಾಖೆಯಲ್ಲಿದ್ದಾರೆ, ಈ ಕಾರಣದಿಂದ ಆತನ ರಕ್ಷಣೆ ನಡೆಯುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳು, ಶ್ರೇಯಸ್ ನಾಯ್ಕ ಬಗ್ಗೆ‌ ಸ್ಥಳೀಯವಾಗಿ ಹಲವು ಆರೋಪಗಳು ಇತ್ತು. ಹೀಗಾಗಿ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿವೆ.

Exit mobile version