Site icon Vistara News

Vidhana Soudha Chalo: ಸರಕಾರದ ದಲಿತ ವಿರೋಧಿ ನೀತಿ ಖಂಡಿಸಿ ಜುಲೈ 15ರಂದು ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ

vidhana soudha BJP Karnataka Sunil Kumar

ಬೆಂಗಳೂರು: ಸರ್ಕಾರದ ದಲಿತ ವಿರೋಧಿ ನೀತಿ (Anti Dalit) ಖಂಡಿಸಿ ಜುಲೈ 15ರಂದು ಬಿಜೆಪಿಯಿಂದ (BJP) ವಿಧಾನಸೌಧ ಮುತ್ತಿಗೆ (Vidhana Soudha Chalo) ಚಲೋಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ (Sunil kumar) ಹೇಳಿದ್ದಾರೆ. ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ವಿಷಯ ತಿಳಿಸಿದರು.

ಜುಲೈ 15ರಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ಸಭೆ ನಡೆಸಿ, ವಿಧಾನಸೌಧ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. ಪದಾಧಿಕಾರಿಗಳ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಪಕ್ಷದ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಸಭೆಯಲ್ಲಿ ಭಾಗಿಯಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದರು. ಮಾಜಿ ಸಚಿವ ಮುರುಗೇಶ್ ನಿರಾಣಿ, ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ ಸುದ್ದಿಗೋಷ್ಟಿಯಲ್ಲಿದ್ದರು.

ಪದಾಧಿಕಾರಿಗಳ ಸಭೆಯಲ್ಲಿ ವಾಲ್ಮೀಕಿ ಹಗರಣ ಬಗ್ಗೆ ಚರ್ಚೆಯಾಯ್ತು. ದಲಿತ ವಿರೋಧಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಬಿಜೆಪಿ ಸರ್ಕಾರ ಈ ವರ್ಗದ ಮೀಸಲಾತಿ ಹೆಚ್ಚು ಮಾಡಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ, ದಲಿತರ ಹೆಸರೇಳಿ ದಲಿತರ ಹೆಸರಲ್ಲಿ ಭ್ರಷ್ಟಾಚಾರ ಮಾಡಿದೆ. ಕ್ಯಾಪ್ಟನ್ ಆಗಿ ಸಿದ್ದರಾಮಯ್ಯ, ಇಡೀ ಸಚಿವ ಸಂಪುಟ ದಲಿತರ ಹಣ ನುಂಗಲು ತಯಾರಿ ಮಡಿಕೊಂಡಿರೋದು ವಿಷಾದನೀಯ ಎಂದು ಸುನೀಲ್‌ ಕುಮಾರ್‌ ತಿಳಿಸಿದರು.

ಸರ್ಕಾರದ ಯೋಜನೆ ಮೂಲಕ, ದಲಿತ ಸಮುದಾಯದ ಏಳಿಗೆ ಮಾಡಬೇಕಿತ್ತು. ದಲಿತರಿಗೆ ಮೀಸಲಿಟ್ಟ ಹಣವನ್ನ ಲೂಟಿ ಮಾಡಿದೆ ಅಂತ‌ ಬಿಜೆಪಿ ಒತ್ತಿ ಹೇಳಲಿದೆ. ವಾಲ್ಮೀಕಿ ಹಗರಣ, ಕಾರ್ಮಿಕರ ಇಲಾಖೆ ಹಗರಣ, SCP-TSP ಹಗರಣ ಹಗರಣಗಳ ಸರಮಾಲೆಯ ಸರ್ಕಾರ ಇದಾಗಿದೆ. ಇದನ್ನು ವಿರೋಧಿಸಿ ಜುಲೈ 15ರಂದು ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ ಚಲೋ ಕರೆ ನೀಡಲಾಗಿದೆ. ವಾಲ್ಮೀಕಿ ಸಮುದಾಯದ ದೊಡ್ಡ ಸಂಖ್ಯೆಯಲ್ಲಿ ಬರಲಿದೆ. ಸಿದ್ದರಾಮಯ್ಯ ಅವರ ನಿಲುವು ಖಂಡಿಸಿ ಮುತ್ತಿಗೆ ಹಾಕಲಿದೆ. ದಲಿತರ ಹಣ ಲೂಟಿ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ದಲಿತರ ಕ್ಷಮೆಯಾಚಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: Khalistani Terrorists: ಬಿಜೆಪಿ ತೊರೆಯದಿದ್ದರೆ ಸಾಯಲು ಸಿದ್ಧರಾಗಿ; ಸಿಖ್‌ ನಾಯಕರಿಗೆ ಖಲಿಸ್ತಾನಿ ಉಗ್ರರಿಂದ ಜೀವ ಬೆದರಿಕೆ

Exit mobile version