Site icon Vistara News

Viral News: ಸರ್ಕಾರಿ ಶಾಲಾ ಮಕ್ಕಳಿಗೆ ಸಾಂಬಾರ್‌ ಇಲ್ಲವೆಂದು ಅನ್ನದ ಜತೆ ಮೆಣಸಿನ ಪುಡಿ ಕೊಟ್ಟರು!

Viral News


ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಯೋಜನೆ ಜಾರಿ ಮಾಡಿದ ಸರ್ಕಾರ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಸರಿಯಾಗಿ ಪೂರೈಸುತ್ತಿಲ್ಲ. ಇದರಿಂದ ಶಾಲಾ ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ. ಸರಿಯಾಗಿ ಊಟ ಸಿಗದೆ ಪರದಾಡುವಂತಾಗಿದೆ. ದೇಶದ ಹಲವು ಕಡೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಇದೇ ಕಥೆಯಾಗಿದೆ. ಇದೀಗ ಅಂತದೊಂದು ಘಟನೆ ತೆಲಂಗಾಣದ ಕೊಥಪಲ್ಲಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದ್ದು, ಈ ಸರ್ಕಾರಿ ಶಾಲೆಯ ಅವ್ಯವಸ್ಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿ ಬಯಲಿಗೆ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ.

ತೆಲಂಗಾಣದ ಕೊಥಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟವಾಗಿ ವಿದ್ಯಾರ್ಥಿಗಳಿಗೆ ಅನ್ನದ ಜೊತೆ ಸಾರನ್ನು ನೀಡುವ ಬದಲು ಮೆಣಸಿನ ಪುಡಿ ಮತ್ತು ಎಣ್ಣೆಯನ್ನು ನೀಡಿದ ಘಟನೆಯ ನಡೆದಿದೆ. ಆಗಸ್ಟ್ 3 ರ ಶನಿವಾರದಂದು ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮುಖಂಡ ಹರೀಶ್ ರಾವ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು. “ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಸಿಎಂ ಉಪಾಹಾರ ಯೋಜನೆಯನ್ನು ರದ್ದುಗೊಳಿಸಿದ ಸರ್ಕಾರವು ಈಗ ಮಧ್ಯಾಹ್ನದ ಊಟವನ್ನು ಒದಗಿಸುವಲ್ಲಿ ವಿಫಲವಾಗಿದೆ.

ಇದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಬಂಧಿಸಿದ ಅಡುಗೆ ಸಹಾಯಕರ ವೇತನ ಬಾಕಿ ಇರುವುದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಊಟ ಸಿಗುತ್ತಿಲ್ಲ. ಹಾಗಾಗಿ ಉಪ ಮುಖ್ಯಮಂತ್ರಿ ಕೂಡಲೇ ಸ್ಪಂದಿಸಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಬಾಕಿ ಬಿಲ್ ಪಾವತಿಸಿ, ಕಾರ್ಮಿಕರ ವೇತನ ಪಾವತಿಸಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸಿ ಎಂದು ಮನವಿ ಮಾಡುತ್ತೇನೆ “ ಎಂದು ಟ್ವೀಟ್ ಮಾಡಿದ್ದಾರೆ.

ಇದರಿಂದಾಗಿ ಸರ್ವ ಶಿಕ್ಷಣ ಅಕಾಡೆಮಿಕ್ ಮಾನಿಟರಿಂಗ್ ಸೆಲ್ ಅಧಿಕಾರಿಗಳು ಸೋಮವಾರ ಶಾಲೆಗೆ ಭೇಟಿ ನೀಡಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿದ, ಜಿಲ್ಲಾ ಅಧಿಕಾರಿಗಳು ಮಂಡಲ ಶಿಕ್ಷಣ ಅಧಿಕಾರಿಗಳು (ಎಂಇಒಗಳು), ಮುಖ್ಯ ಶಿಕ್ಷಕರು (ಎಚ್ಎಂ) ಮತ್ತು ಶಿಕ್ಷಕರನ್ನು ಎಚ್ಚರಿಸಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳುವಂತೆ ಕೇಳಿಕೊಂಡರು.‌

ಇದನ್ನೂ ಓದಿ:Mid Day Meal: ಮಕ್ಕಳ ಬಿಸಿಯೂಟದಲ್ಲೂ ಕಳ್ಳಾಟ, ವಿದ್ಯಾರ್ಥಿಗಳಿಗೆ ಸಿಗೋದು ಬರೀ ಅನ್ನ-ಅರಿಶಿಣ; Video ಇದೆ

ಮಧ್ಯಾಹ್ನದ ಊಟವನ್ನು ಪೂರೈಸುವ ಏಜೆನ್ಸಿಯು ವಿದ್ಯಾರ್ಥಿಗಳಿಗೆ ಅನ್ನದೊಂದಿಗೆ ದಾಲ್ ಮತ್ತು ತರಕಾರಿಗಳನ್ನು ಮಾತ್ರ ನೀಡುತ್ತದೆ. ಆದರೆ ಮೊಟ್ಟೆಗಳನ್ನು ನೀಡುತ್ತಿಲ್ಲ. ಇದಕ್ಕೆ ಕಾರಣ ಮೊಟ್ಟೆಗಳ ಪೂರೈಕೆಯಲ್ಲಿನ ಕೊರತೆ ಎನ್ನಲಾಗಿದೆ. ಹಾಗಾಗಿ ಮಧ್ಯಾಹ್ನದ ಊಟದ ಬಜೆಟ್ ಅನ್ನು ಹೆಚ್ಚಿಸಬೇಕು ಎಂದು ಏಜೆನ್ಸಿ ಒತ್ತಾಯಿಸಿದೆ. ಪ್ರಾಥಮಿಕ ತರಗತಿ ಮಕ್ಕಳಿಗೆ 5 ರೂ., ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 8 ರೂ. ಮೊತ್ತವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು ಮತ್ತು ನಿಗದಿಪಡಿಸಿದ ಸ್ಥಳದಲ್ಲಿ ಸಮಸ್ಯೆ ಇರುವುದರಿಂದ ಮೊಟ್ಟೆಗಳನ್ನು ಪೂರೈಸಲು ಮತ್ತು ಅಡುಗೆಮನೆಯನ್ನು ನಿರ್ಮಿಸಿಕೊಡಬೇಕೆಂದು ಇಲಾಖೆಗೆ ವಿನಂತಿಸಿದರು ಎಂಬುದಾಗಿ ತಿಳಿದುಬಂದಿದೆ.

Exit mobile version