ಕುವೈಟ್ : ದಿನ ಬಳಕೆಯ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಇದರಿಂದ ಇಂದಿನ ಕಾಲದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಜೀವನ ನಡೆಸುವುದೇ ಒಂದು ಸವಾಲಿನ ಕೆಲಸವಾಗಿದೆ. ಕೆಲವರು ವರ್ಷಗಳ ಹಿಂದೆ 100 ರೂಪಾಯಿ ಇದ್ದ ಸಾಮಾನ್ಯವಾಗಿ ಚಪ್ಪಲೆಯ ಬೆಲೆಯೂ 300ರಿಂದ400 ಇರುತ್ತದೆ. ಇನ್ನು ಫಂಕ್ಷನ್‌ಗಳಿಗೆ ಬಳಸುವಂತಹ ಚಪ್ಪಲಿಗಳ ಬೆಲೆ ಕೇಳುವ ಹಾಗಿಲ್ಲ. ಅದೇನೇ ಇದ್ದರೂ ಒಂದು ಚಪ್ಪಲಿಯ ಬೆಲೆ ಒಂದು ಲಕ್ಷ ರೂಪಾಯಿ ಇರಲು ಸಾಧ್ಯವೇ. ಅದೂ ದಶಕಗಳ ಹಿಂದೆ ಜನರು ಧರಿಸುತ್ತಿದ್ದ ಹವಾಯಿ ರೀತಿಯ ಚಪ್ಪಲಿಗೆ ಒಂದು ಲಕ್ಷ ರೂಪಾಯಿ ಇರಬಹುದೇ? ಖಂಡಿತಾ ಇದೆ. ಆದರೆ ಅದು ನಮ್ಮ ದೇಶದಲ್ಲಿ ಅಲ್ಲ. ಕುವೈಟ್‌ನಲ್ಲಿ. ಆದರೆ, ಚಪ್ಪಲಿಯ ಬೆಲೆ ವೈರಲ್ (Viral News) ಆಗುತ್ತಿದ್ದಂತೆ ಅದರ ಕುರಿತು ಬಗೆಬಗೆಯ ಕಾಮೆಂಟ್ಗಳೂ ಶೇರ್ ಆಗುತ್ತಿವೆ. ಬಾತ್‍ರೂಮ್‍ಗೆ ಹಾಕುವಂಥ ಚಪ್ಪಲಿಗೆ ಇಷ್ಟೊಂದು ರೇಟಾ ಎಂಬುದೇ ಜನರ ಮೊದಲ ಪ್ರಶ್ನೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ನಲ್ಲಿ ಕುವೈಟ್‌ನ ಸ್ಟೋರ್ ಒಂದರಲ್ಲಿ ಸುಮಾರು 4,500 ರಿಯಾಲ್ (1 ಲಕ್ಷ ರೂ.) ಗೆ ಚಪ್ಪಲಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಹಾಗೇ ಇದಕ್ಕೆ “4500 ರಿಯಾಲ್ ಬೆಲೆಗೆ ಇತ್ತೀಚಿನ ಫ್ಯಾಷನ್ ಜನೌಬಾ” ಎಂದು ಶೀರ್ಷಿಕೆ ನೀಡಲಾಗಿದೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡಿದೆ. ಹಾಗಾಗಿ ಜನರು ಸೋಶಿಯಲ್ ಮೀಡಿಯಾದಲ್ಲಿ ಇದರ ಬೆಲೆಯ ಬಗ್ಗೆ ಬಗೆಬಗೆಯ ಕಾಮೆಂಟ್ಗಳನ್ನು ಹಾಕಿದ್ದಾರೆ.
متداول:
— ترند (@trndkw__) July 8, 2024
احدث صيحات الموضة "زنوبة" بسعر 4500 ريال 👀!
#حمد_العنزي pic.twitter.com/Djc3pe7XBz
ಒಬ್ಬರು ಇದು ಶ್ರೀಮಂತರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರೆ, ಇನ್ನೊಬ್ಬರು “4500 ರಿಯಾಲ್ ಚಪ್ಪಲಿಗಳನ್ನು ಒಮ್ಮೆ ಖರೀದಿಸಿದರೆ ಇಡೀ ಜೀವನದುದ್ದಕ್ಕೂ ಶೌಚಾಲಯಕ್ಕೆ ಹೋಗಲು ಅದನ್ನೇ ಬಳಸಬೇಕಾಗುತ್ತದೆ ಎಂದು ಬರೆದಿದ್ದಾರೆ. ಹಾಗೇ ಮತ್ತೊಬ್ಬರು “ಇದು ನಮ್ಮ ಕುಟುಂಬದಲ್ಲಿ ಬಾತ್‍ರೂಮ್‍ಗೆ ಹೋಗಲು ಬಳಸುವ ಚಪ್ಪಲಿಗಳು” ಎಂದು ಬರೆದಿದ್ದಾರೆ. ಭಾರತದಲ್ಲಿ ನಿಮಗೆ ಈ ಚಪ್ಪಲಿಗಳು 60 ರೂಪಾಯಿಗೆ ಸಿಗುತ್ತದೆ ” ಎಂದು ನಾಲ್ಕನೇ ಬಳಕೆದಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ
ಇನ್ನೊಬ್ಬರು “ಭಾರತದಲ್ಲಿ ನಾವು ಇದನ್ನು ಹೆಚ್ಚಾಗಿ ಶೌಚಾಲಯಕ್ಕೆ ಹೋಗಲು ಬಳಸುತ್ತೇವೆ” ಎಂದು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ “ಇದು ನಿಜವಾಗಿಯೂ ತಾಯಂದಿರ ದಿನದ ಅತ್ಯುತ್ತಮ ಉಡುಗೊರೆಯಾಗಿದೆ. ಯಾಕೆಂದರೆ ಎಲ್ಲಾ ತಾಯಂದಿರಿಗೆ ಚಪ್ಪಲಿ ಅತ್ಯುತ್ತಮ ಆಯುಧ” ಎಂದ ಬರೆದುಕೊಂಡಿದ್ದಾರೆ “ಭಾರತದ ಕೆಲವು ಸ್ಥಳಗಳಲ್ಲಿ ಈ ಚಪ್ಪಲಿಗಳು ಕೇವಲ ₹ 30 ಕ್ಕೆ ಪಡೆಯಬಹುದು” ಎಂದು ಒಬ್ಬರು ಹೇಳಿದರೆ, ಈ ಚಪ್ಪಲಿಗಳಿಗೆ ಹವಾಯಿ ಚಪ್ಪಲಿಗಳೆಂದು ಕರೆಯುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.