ಹೈದರಾಬಾದ್: ತಮ್ಮ ಪಕ್ಷದ ಚುನಾವಣಾ ಗೆಲುವಿಗೆ ಹಿಂದೂಗಳ ಮತಗಳು ಅಗತ್ಯವಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ (Telangana Congress) ನಾಯಕ ಟಿಎನ್ ರಾವ್ ಭಾಷಣದಲ್ಲಿ ಹೇಳಿದ್ದಾರೆ. ಅವರ ಈ ಮಾತಿನ ವಿಡಿಯೋ ವೈರಲ್ (viral video) ಆಗಿದೆ.
ಹಿಂದೂಗಳ ವಿರುದ್ಧ ಕಾಂಗ್ರೆಸ್ ಪಕ್ಷ ಪೂರ್ವಗ್ರಹ ಪೀಡಿತ ಮನೋಭಾವ ಹೊಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಆರೋಪ ಮಾಡಿರುವ ಬೆನ್ನಲ್ಲೇ, 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹಿಂದೂ ಮತಗಳ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ತುಮ್ಮಲ ನಾಗೇಶ್ವರರಾವ್ ಹೇಳಿಕೆ ನೀಡಿರುವ ವಿಡಿಯೋ ಹೊರಬಿದ್ದಿದೆ.
Congress leader Tumnala Nageswara Rao says in an election meeting – Hindu votes are not needed for Congress victory
— Megh Updates 🚨™ (@MeghUpdates) April 28, 2024
Video courtesy Ntv pic.twitter.com/VAHVGrcgnj
ತಮ್ಮ ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಪಕ್ಷವು ಭಾರತದ ಹಿಂದೂಗಳ ವಿರುದ್ಧ ಪಕ್ಷಪಾತ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡುವುದು ಕಾಂಗ್ರೆಸ್‌ನ ಆದ್ಯತೆಯಾಗಿದೆ ಎಂದ ಆರೋಪಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ, ತೆಲಂಗಾಣ ಕಾಂಗ್ರೆಸ್ ನಾಯಕ ತುಮ್ಮಲ ನಾಗೇಶ್ವರ ರಾವ್ ಅವರು ಹೀಗೆಂದಿದ್ದಾರೆ. ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾವ್, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಹಿಂದೂ ಮತಗಳ ಅಗತ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ನ ಸಿದ್ಧಾಂತಕ್ಕೆ ಪ್ರಧಾನಿ ಹೋಲಿಸಿ ಟೀಕಿಸಿದ್ದರು. ದೇಶದ ಸಂಪನ್ಮೂಲಗಳು ಮೊದಲು ಬಡವರಿಗೆ ಸಲ್ಲಬೇಕು ಎಂಬ ತತ್ವವನ್ನು ಒತ್ತಿ ಹೇಳಿದರು. ರಾಜಕೀಯ ಲಾಭಕ್ಕಾಗಿ ನಿರ್ದಿಷ್ಟವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕೆಲವು ಧಾರ್ಮಿಕ ಗುಂಪುಗಳಿಗೆ ಕಾಂಗ್ರೆಸ್ ಒಲವು ತೋರುತ್ತಿದೆ ಎಂದು ಮೋದಿ ಆರೋಪಿಸಿದ್ದರು. ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಧೋರಣೆಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದರು.
ಇದನ್ನೂ ಓದಿ: PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ