Site icon Vistara News

Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

Viral Video

ಬೆಂಗಳೂರು: ಬಹಳ ಹಿಂದಿನ ಕಾಲದಲ್ಲಿ ವಿದ್ಯೆ ಕಲಿಸುವ ಗುರುವನ್ನು ದೇವರ ರೂಪದಲ್ಲಿ ಕಾಣುತ್ತಿದ್ದರು. ತಮ್ಮ ಜೀವನದಲ್ಲಿ ಗುರಿ ತಲುಪಲು ಸಹಾಯ ಮಾಡುವಂತಹ ಗುರುವಿಗೆ ಗೌರವನ್ನು ನೀಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು (Viral Video) ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಕೀಳಾಗಿ ಕಾಣುತ್ತಿದ್ದರೆ. ಇದನ್ನು ನೋಡಿದರೆ ನಮ್ಮ ಯುವಜನತೆ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಇದಕ್ಕೆ ಸಾಕ್ಷಿಯಂಬಂತೆ ಉತ್ತರ ಕೆರೊಲಿನಾದ ವಿನ್ ಸ್ಟನ್ –ಸೇಲಂ ಹೈಸ್ಕೂಲ್ ನಲ್ಲಿ ಇಂತಹದೊಂದು ಘಟನೆ ನಡೆದಿದೆ. ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಗೆ ತರಗತಿಯಲ್ಲಿಯೇ ಎರಡು ಬಾರಿ ಕಪಾಳಮೋಕ್ಷ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹೀನಕೃತ್ಯಕ್ಕೆ ಕಾರಣನಾದ ವಿದ್ಯಾರ್ಥಿಯ ಹೆಸರು ಮಾತ್ರ ತಿಳಿದುಬಂದಿಲ್ಲ.

ಹದಿಹರೆಯದ ವಿದ್ಯಾರ್ಥಿ ತರಗತಿಯಲ್ಲಿ ಕುರ್ಚಿಯ ಮೇಲೆ ಕುಳಿತ ಶಿಕ್ಷಕಿಯ ಸಮೀಪ ಬಂದು ಆಕೆಯ ಕಪಾಳಕ್ಕೆ ರಪ್ಪೆಂದು ಹೊಡೆಯುತ್ತಿದ್ದ. ಆದರೆ ಶಿಕ್ಷಕಿ ವಿಚಲಿತಳಾಗದೆ ತನ್ನ ಮೇಲೆ ಯಾವುದೇ ಮೇಲೆ ಪರಿಣಾಮ ಬೀರಲಿಲ್ಲ ಎಂಬಂತೆ ಸುಮ್ಮನಿದ್ದರು. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿ ಮತ್ತೆ ಅವರ ಹತ್ತಿರ ಬಂದು ಕೈ ಎತ್ತಿ ಎರಡನೇ ಬಾರಿ ಕಪಾಳಕ್ಕೆ ಹೊಡೆದಿದ್ದಾನೆ. ಇದರಿಂದ ಅವಳ ಕನ್ನಡಕ ಕಳಚಿ ಬಿದ್ದಿದೆ. ವಿದ್ಯಾರ್ಥಿಯ ಈ ಘನ ಕಾರ್ಯಕ್ಕೆ ಉಳಿದ ವಿದ್ಯಾರ್ಥಿಗಳು ನಗುವುದು ಕಂಡುಬಂದಿದೆ. ಅಲ್ಲದೆ ವಿದ್ಯಾರ್ಥಿ ಶಿಕ್ಷಕಿಗೆ ಕೆಟ್ಟ ಪದಗಳನ್ನು ಬಳಸಿ ಬೈಯುತ್ತಿರುವುದು ಕಂಡುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯ ಮೇಲೆ ಹಲ್ಲೆ ಮತ್ತು ಬೆದರಿಕೆಯ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಯ ಈ ವರ್ತನೆಯನ್ನು ಶಾಲಾವರ್ಗದವರು ಖಂಡಿಸಿದ್ದಾರೆ. ಹಾಗೇ ಈ ಬಗ್ಗೆ ಮಾತನಾಡಿದ ಶೆರಿಫ್ ಬಾಬಿ ಎಫ್ ಕಿಂಬ್ರೋ ಜೂನಿಯರ್ ಅವರು, “ಈ ಘಟನೆಯು ಸಮುದಾಯ ಮತ್ತು ಸಮುದಾಯ ಸಂಸ್ಥೆಗಳಿಗೆ ಶೋಚನೀಯ ಮತ್ತು ಅತಿರೇಕದ ಕೃತ್ಯವಾಗಿದೆ ಎಂದು ನಾವೆಲ್ಲರೂ ಒಪ್ಪುತ್ತೇವೆ. ನಮಗೆ ಶಿಕ್ಷಣ ನೀಡುವವರ ಮೇಲೆ ಹಲ್ಲೆ ನಡೆದಾಗ ಸಹಿಸುವುದು ಹೇಗೆ?” ಎಂದು ಹೇಳಿದ್ದಾರೆ.

ಹಾಗೇ ಹೈಸ್ಕೂಲ್ ನ ಪ್ರಾಂಶುಪಾಲರಾದ ನೋಯೆಲ್ ಕೀನರ್ ಕೂಡ ಈ ಘಟನೆಯನ್ನುದ್ದೇಶಿಸಿ ಮಾತನಾಡಿ ವೈರಲ್ ಆದ ವಿಡಿಯೊ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಶಾಲೆಯಲ್ಲಿ ಶಿಸ್ತು ಕ್ರಮಗಳನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Kangana Ranaut: ವಿಶೇಷ ಗೆಟಪ್ ನಲ್ಲಿ ಮತದಾರರ ಸೆಳೆಯುತ್ತಿರುವ ಕಂಗನಾ ರಣಾವತ್

ಈ ಘಟನೆಗೆ ಪ್ರತಿಕ್ರಿಯಿಸಿದ ವಿನ್ ಸ್ಟನ್ –ಸೇಲಂ/ಫೋರ್ಸಿತ್ ಕೌಂಟಿ ಶಾಲೆಗಳ ಅಧೀಕ್ಷಕ ಟ್ರಿಸಿಯಾ ಮ್ಯಾಕ್ ಮಾನಸ್, ”ಈ ನಡವಳಿಕೆಯನ್ನು ಸಹಿಸಲಾಗುವುದಿಲ್ಲ. ವಿನ್ ಸ್ಟನ್ –ಸೇಲಂ/ಫೋರ್ಸಿತ್ ಕೌಂಟಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಕೈ ಎತ್ತುವುದನ್ನು ಯಾವುದೇ ಸಮಯದಲ್ಲಿ ಒಪ್ಪಿಕೊಳ್ಳಲಾಗುವುದಿಲ್ಲ. ಹಾಗಾಗಿ ಈಗ ನನ್ನ ಗಮನ ನಮ್ಮ ಶಿಕ್ಷಕರನ್ನು ನೋಡಿಕೊಳ್ಳುವುದಾಗಿದೆ. ಈ ಘಟನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದರು.

Exit mobile version