Site icon Vistara News

Vistara Top 10 News : ಚುನಾವಣಾ ಬಾಂಡ್​​ಗೆ ಸುಪ್ರೀಂ ತಡೆ, ಅಸೆಂಬ್ಲಿಯಲ್ಲಿ ಗಲಾಟೆ ಜೋರು ಇತ್ಯಾದಿ ಪ್ರಮುಖ ಸುದ್ದಿಗಳು

Top 10 news

1. Electoral Bonds: ಚುನಾವಣಾ ಬಾಂಡ್‌ ಯೋಜನೆ ಅಸಾಂವಿಧಾನಿಕ; ಸುಪ್ರೀಂ ತೀರ್ಪು, ಕೇಂದ್ರಕ್ಕೆ ಹಿನ್ನಡೆ
ನವದೆಹಲಿ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾದ ಚುನಾವಣಾ ಬಾಂಡ್‌ ಯೋಜನೆಯು (Electoral Bonds) ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಸಂವಿಧಾನ ನೀಡಿರುವ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುವುದರಿಂದ ಚುನಾವಣಾ ಬಾಂಡ್‌ ಯೋಜನೆಯು ಅಸಾಂವಿಧಾನಿಕವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾದಂತಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : Electoral Bonds: ಚುನಾವಣೆ ಬಾಂಡ್‌; ಸುಪ್ರೀಂ ತೀರ್ಪಿನಿಂದ ಆಗೋ ಬದಲಾವಣೆ ಏನು?
ಇದನ್ನೂ ಓದಿ: ಚುನಾವಣಾ ಬಾಂಡ್‌ನಿಂದ 16 ಸಾವಿರ ಕೋಟಿ ರೂ. ಸಂದಾಯ; ಯಾವ ಪಕ್ಷಕ್ಕೆ ಎಷ್ಟು?

2. ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!
ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಗೂಂಡಾಗಿರಿ ಸದ್ದು ಮಾಡಿದೆ. ರಾಜ್ಯದ ತೆರಿಗೆ ಪಾವತಿ ಹಾಗೂ ಕೇಂದ್ರದ ತೆರಿಗೆ ಲೆಕ್ಕಾಚಾರದ ವ್ಯತ್ಯಾಸದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ವಿಪಕ್ಷಗಳ ಗದ್ದಲದಿಂದ ಆಕ್ರೋಶಗೊಂಡು, “ಏನು ಗೂಂಡಾಗಿರಿ ಮಾಡ್ತೀರಾ? ನೀವು ಗೂಂಡಾಗಳು, ನಿಮ್ಮ ಗೂಂಡಾಗಿರಿಗೆ ನಾವು ಹೆದರುವುದಿಲ್ಲ” ಎಂದು ಹೇಳಿರುವುದು ಈಗ ಗಲಾಟೆಗೆ ಕಾರಣವಾಗಿದೆ. ಈ ಸಂಬಂಧ ವಿಪಕ್ಷಗಳು ಕೆರಳಿದ್ದು ಗದ್ದಲ ಎಬ್ಬಿಸಿದ್ದಾರೆ. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ 10 ನಿಮಿಷ ಕಾಲ ವಿಧಾನ ಪರಿಷತ್ ಕಲಾಪವನ್ನು ಸಭಾಪತಿಗಳು ಮುಂದೂಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

3. ಶುಕ್ರವಾರ ಸಿದ್ದರಾಮಯ್ಯ ʼಗ್ಯಾರಂಟಿʼ ಬಜೆಟ್‌ ಮಂಡನೆ; ಲೋಕಸಭಾ ಎಲೆಕ್ಷನ್‌ ಟಾರ್ಗೆಟ್?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ (ಫೆ. 16) ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ (Karnataka Budget Session 2024) ಮಾಡಲಿದ್ದಾರೆ. ಲೋಕಸಭಾ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಈ ಬಜೆಟ್‌ ಮೇಲೆ ಸಹಜವಾಗಿ ನಿರೀಕ್ಷೆಗಳು ಹೆಚ್ಚಾಗಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಜನಪರ ಬಜೆಟ್ ಮಂಡಿಸಬಹುದು ಎಂಬ ಚರ್ಚೆ ಜೋರಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

4. ಅಸೆಂಬ್ಲಿಯಲ್ಲಿ ಮಂಗಳೂರು ಗಲಾಟೆ; FIR ವಿರುದ್ಧ ಬಿಜೆಪಿ ಶಾಸಕರು ಕೆಂಡ
ವಿಧಾನಸಭೆ: ಮಂಗಳೂರಿನ ಸೈಂಟ್‌ ಜೆರೋಸಾ ಹೈಸ್ಕೂಲ್‌ನ ಶಿಕ್ಷಕಿ (Jerosa High School Mangalore) ಹಿಂದು ಧರ್ಮ, ದೇವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ (Insulting Hindu Dharma) ಮಾತನಾಡಿದ್ದು ಮತ್ತು ಅದರ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿ ಮಂಗಳೂರಿನ ಇಬ್ಬರು ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಭರತ್‌ ಶೆಟ್ಟಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪ್ರಕರಣ (FIR Against BJP MLAs) ರಾಜ್ಯ ವಿಧಾನಸಭೆಯಲ್ಲಿ (Budget Session 2024) ಪ್ರಸ್ತಾಪವಾಯಿತು. ಸ್ಥಳದಲ್ಲೇ ಇಲ್ಲದ ತಮ್ಮಿಬ್ಬರ ಮೇಲೆ ಕೇಸು ದಾಖಲಿಸಿದ್ದು ದ್ವೇಷ ಸಾಧನೆಯ ಕ್ರಮ ಎಂದು ಕೆಂಡಾಮಂಡಲರಾದರು. ಹಿಂದು ಧರ್ಮವನ್ನು ಅವಹೇಳನ ಮಾಡಿದ ಕ್ರಿಶ್ಚಿಯನ್‌ ಶಿಕ್ಷಕಿಯ ಮೇಲೆ ಯಾವುದೇ ಪ್ರಕರಣ ದಾಖಲಿಸದ ಬಗ್ಗೆಯೂ ಆಕ್ರೋಶ ವ್ಯಕ್ತವಾಯಿತು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಇದನ್ನೂ ಓದಿ : Mangalore Issue : ಶಿಕ್ಷಕಿ ಪ್ರಕರಣಕ್ಕೆ ಟ್ವಿಸ್ಟ್‌; ಬಿಜೆಪಿ ಶಾಸಕರ ಮೇಲೆ ಜೆರೋಸಾ ಶಾಲೆ ಚಾರ್ಜ್‌ಶೀಟ್‌

5. ವಿವಾದದ ಬೆನ್ನಲ್ಲೇ ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಹೇರಿದ್ದ ನಿರ್ಬಂಧ ವಾಪಸ್
ಬೆಂಗಳೂರು: ರಾಜ್ಯದ ವಸತಿ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಹಬ್ಬ, ನಾಡಹಬ್ಬ ಹಾಗೂ ಜಯಂತಿಗಳನ್ನು ಹೊರತುಪಡಿಸಿ, ಯುಗಾದಿ, ರಂಜಾನ್‌, ಕ್ರಿಸ್‌ಮಸ್‌ನಂತಹ ಯಾವುದೇ ಧಾರ್ಮಿಕ ಹಬ್ಬವನ್ನು ಆಚರಿಸುವಂತಿಲ್ಲ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸುತ್ತೋಲೆಯನ್ನು ಹೊರಡಿಸಿತ್ತು. ಈ ಆದೇಶಕ್ಕೆ ಎಲ್ಲೆಡೆ ವಿರೋಧ ಶುರುವಾಗುತ್ತಿದ್ದಂತೆ, ಇದೀಗ ಧಾರ್ಮಿಕ ಹಬ್ಬಗಳ ಆಚರಣೆಗೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆಯಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

6. ಕಾಂಗ್ರೆಸ್‌ಗೆ ಮೈತ್ರಿ ಅಭ್ಯರ್ಥಿ ಗುನ್ನ; ಕುಪೇಂದ್ರೆ ರೆಡ್ಡಿ ಸ್ಪರ್ಧೆ ಹಿಂದಿದೆ ಮಾಸ್ಟರ್‌ ಪ್ಲ್ಯಾನ್!
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಐದನೇ ಅಭ್ಯರ್ಥಿಯಾಗಿ, ಜೆಡಿಎಸ್ ಬಿಜೆಪಿ ಮೈತ್ರಿ (JDS- BJP) ಮೂಲಕ ಕುಪೇಂದ್ರ ರೆಡ್ಡಿ (D Kupendra Reddy) ಅಖಾಡಕ್ಕೆ ಇಳಿದಿದ್ದಾರೆ. ಗುರುವಾರ ನಾಮಪತ್ರ (Nomination) ಸಲ್ಲಿಸಲಿದ್ದಾರೆ. ಈ ಸ್ಪರ್ಧೆ ಮೂಲಕ ರಾಜ್ಯಸಭಾ ಕಣ ರಣರೋಚಕವಾಗಿದೆ. ಸೋಲು – ಗೆಲುವಿನ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ. ಕುಪೇಂದ್ರ ರೆಡ್ಡಿ ಅವರಿಗೆ ಗೆಲ್ಲುವುದಕ್ಕೆ 45 ಮತಗಳು ಬೇಕಿದೆ. ಆದರೆ, ಮೈತ್ರಿ ಪಕ್ಷಗಳ ಉಳಿಕೆ ಮತ 40 ಇರುವುದರಿಂದ ಬಾಕಿ 5 ಮತಗಳನ್ನು ಎಲ್ಲಿಂದ ತರುತ್ತಾರೆ ಎಂಬುದೇ ಈಗಿನ ಸವಾಲು ಹಾಗೂ ಕುತೂಹಲವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

7. ಜಪಾನ್ ಬಳಿಕ ಬ್ರಿಟನ್‌‌ಗೂ ತಟ್ಟಿದ ಆರ್ಥಿಕ ಹಿಂಜರಿತ!
ಲಂಡನ್: ಸಾರ್ವತ್ರಿಕ ಚುನಾವಣೆ (Parliament Election) ಎದುರಿಸಲಿರುವ ಬ್ರಿಟನ್‌ (Britain Economy) 2023ರ ದ್ವಿತೀಯಾರ್ಧದಲ್ಲಿ ಆರ್ಥಿಕ ಹಿಂಜರಿತಕ್ಕೆ (Recession) ಜಾರಿದೆ. ವಿಪರ್ಯಾಸ ಎಂದರೆ, ಆರ್ಥಿಕತೆಯನ್ನು ಮೇಲೆತ್ತುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ ಭಾರತೀಯ ಮೂಲದ ರಿಷಿ ಸುನಕ್ (PM Rishi Sunak) ಅವರು ಮತ್ತೆ ಚುನಾವಣೆ ಎದುರಿಸಲಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

8. ಇಂಡಿಯಾ ಒಕ್ಕೂಟಕ್ಕೆ ಶಾಕ್;‌ ಮೈತ್ರಿ ತೊರೆದ ನ್ಯಾಷನಲ್‌ ಕಾನ್ಫರೆನ್ಸ್, ಎನ್‌ಡಿಎ ಸೇರ್ಪಡೆ?
ಶ್ರೀನಗರ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟಕ್ಕೆ (India Bloc) ಬೀಳುತ್ತಿರುವ ಪೆಟ್ಟುಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಒಕ್ಕೂಟದಿಂದ ಟಿಎಂಸಿ, ಆರ್‌ಎಲ್‌ಡಿ ಸೇರಿ ಹಲವು ಪಕ್ಷಗಳು ಹೊರಬಂದಿರುವ ಬೆನ್ನಲ್ಲೇ ನ್ಯಾಷನಲ್‌ ಕಾನ್ಫರೆನ್ಸ್‌ ಕೂಡ ಪ್ರತಿಪಕ್ಷಗಳ ಒಕ್ಕೂಟಕ್ಕೆ ವಿದಾಯ ಹೇಳಿದೆ. ಈ ಕುರಿತು ನ್ಯಾಷನಲ್‌ ಕಾನ್ಫರೆನ್ಸ್‌ (National Conference) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ (Farooq Abdullah) ಅವರೇ ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

9. ಅಂಚೆ ಇಲಾಖೆಯಲ್ಲಿದೆ ಬರೋಬ್ಬರಿ 98,083 ಹುದ್ದೆ; 10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಿ
ಬೆಂಗಳೂರು: ಸರ್ಕಾರಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (Post Office Recruitment 2024). ದೇಶಾದ್ಯಂತ ಬರೋಬ್ಬರಿ 98,083 ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ತೇರ್ಗಡೆಯಾದವರೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಅಧಿಕೃತ ಅಧಿಸೂಚನೆ ಇನ್ನೂ ಬಿಡುಗಡೆಯಾಗಿಲ್ಲ. ಅದಾದ ಬಳಿಕವಷ್ಟೇ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಲಭಿಸಲಿದೆ. ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ (Job Alert). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

10. ʻಕರಿಮಣಿ ಮಾಲೀಕ ನೀನಲ್ಲʼ ಎಂದಳು ಪತ್ನಿ; ಬೇಸರದಿಂದ ಪತಿ ಆತ್ಮಹತ್ಯೆ
ಚಾಮರಾಜನಗರ: ಪತ್ನಿ ಮಾಡಿದ ರೀಲ್ಸ್‌ಗೆ (Reels Tragedy) ಪತಿಯೊಬ್ಬ ಆತ್ಮಹತ್ಯೆ ( Husband death) ಮಾಡಿಕೊಂಡಿದ್ದಾನೆ. ಚಾಮರಾಜನಗರದ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಪಿ.ಜಿ‌.ಪಾಳ್ಯ ಗ್ರಾಮದ ಕುಮಾರ್ (33) ನೇಣಿಗೆ (Self Harming) ಶರಣಾದವರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಇನ್ನಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. https://vistaranews.com/category/viral-news

Exit mobile version