ಬೆಂಗಳೂರು: ದುಡಿದ ದುಡ್ಡಲ್ಲಿ ಒಂದು ಪ್ರಮಾಣವನ್ನು ಪಿಕ್ಸೆಡ್ ಡೆಪಾಸಿಟ್ (Fixed Deposit) ಆಗಿ ಇಡುವುದು ಅಭ್ಯಾಸ. ಅದರ ಬಡ್ಡಿಯ ಮೂಲಕ ಹೆಚ್ಚಿನ ಆದಾಯ ಮಾಡಬಹುದು ಎಂಬುದು ಎಲ್ಲರ ಆಲೋಚನೆ. ಆದರೆ, ಎಫ್ಡಿ ಇಡುವ ಮೊದಲು ಎಲ್ಲರಿಗೂ ಒಂದು ಗೊಂದಲೇ ಇದ್ದೇ ಇರುತ್ತದೆ. ಯಾವ ಬ್ಯಾಂಕ್ನಲ್ಲಿ ಹೆಚ್ಚು ಬಡ್ಡಿ ಕೊಡ್ತಾರೆ ಎಂಬುದೇ ಅವರ ತಳಮಳಕ್ಕೆ ಕಾರಣವಾಗಿರುತ್ತದೆ. ಹೀಗಾಗಿ ಫಿಕ್ಸೆಡ್ ಡೆಪಾಸಿಟ್ (ಎಫ್ಡಿ) ಅನ್ನು ಲಾಕ್ ಮಾಡುವ ಮೊದಲು, ವಿವಿಧ ಬ್ಯಾಂಕುಗಳು ನೀಡುವ ಬಡ್ಡಿದರಗಳನ್ನು ಹೋಲಿಸಬೇಕು. ಈ ಕೆಳಗೆಆರು ವಿಭಿನ್ನ ಬ್ಯಾಂಕುಗಳ (ಖಾಸಗಿ ಮತ್ತು ಸರ್ಕಾರಿ ) ಅವಧಿ ಠೇವಣಿಗಳ ಮೇಲಿನ ಬಡ್ಡಿದರಗಳ ವಿವರ ನೀಡಲಾಗಿದೆ. ಅವುಗಳನ್ನು ಹೋಲಿಸಿ ಫಿಕ್ಸೆಡ್ ಇಡಿ.
ಆಕ್ಸಿಸ್ ಬ್ಯಾಂಕ್: ಇಲ್ಲಿ, 2 ಕೋಟಿ ರೂ.ಗಿಂತ ಕಡಿಮೆ 1 ವರ್ಷದ ಠೇವಣಿಗಳ ಮೇಲೆ ಬಡ್ಡಿದರವು 6.7% ಆಗಿದೆ. 2 ವರ್ಷ, 3 ವರ್ಷ ಮತ್ತು 4 ವರ್ಷಗಳ ಡೆಪಾಸಿಡ್ಗೆ 7.1% ಮತ್ತು ಐದು ವರ್ಷಗಳವರೆಗೆ 7% ಬಡ್ಡಿ ಕೊಡ್ತಾರೆ.
ಬ್ಯಾಂಕ್ ಆಫ್ ಬರೋಡಾ: ಸರ್ಕಾರಿ ಸ್ವಾಮ್ಯದ ಈ ಬ್ಯಾಂಕ್ 1-2 ವರ್ಷಗಳ ಎಫ್ಡಿಗೆ 7%, 2-3 ವರ್ಷಗಳ ಎಫ್ಡಿಗೆ 7.25% ಮತ್ತು 4 ವರ್ಷಗಳ ಅವಧಿಗೆ 6.5% ಬಡ್ಡಿ ಕೊಡುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್: 1 ವರ್ಷದ ಠೇವಣಿಗಳಿಗೆ, ಸಾಮಾನ್ಯ ನಾಗರಿಕರಿಗೆ 6.6% ಮತ್ತು ಹಿರಿಯ ನಾಗರಿಕರಿಗೆ 7.1% ಬಡ್ಡಿದರವಿದೆ. 15-18 ತಿಂಗಳು, 18-21 ತಿಂಗಳು, 21 ತಿಂಗಳಿನಿಂದ 2 ವರ್ಷ 11 ತಿಂಗಳು, ಮತ್ತು 2 ವರ್ಷ 11 ತಿಂಗಳಿನಿಂದ 35 ತಿಂಗಳ ಅವಧಿಗೆ ಕ್ರಮವಾಗಿ 7.1%, 7.25%, 7% ಮತ್ತು 7.15% ಬಡ್ಡಿದರಗಳನ್ನು ನಿಗದಿ ಮಾಡಿದೆ.
ಇದನ್ನೂ ಓದಿ : EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್ ಬಡ್ಡಿ ದರ ಶೇ.8.25ಕ್ಕೆ ಏರಿಕೆ
ಐಸಿಐಸಿಐ ಬ್ಯಾಂಕ್: ಈ ಖಾಸಗಿ ಬ್ಯಾಂಕ್ನ ಗ್ರಾಹಕರು 1 ವರ್ಷದ ಎಫ್ಡಿಗೆ 7.4%, 390 ದಿನಗಳಿಂದ 15 ತಿಂಗಳವರೆಗೆ 7.3%, 15 ತಿಂಗಳಿನಿಂದ 2 ವರ್ಷಗಳವರೆಗೆ 7.05% ಮತ್ತು 2 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ 7% ಬಡ್ಡಿ ಪಡೆಯುತ್ತಾರೆ.
ಕೊಟಕ್ ಮಹೀಂದ್ರಾ ಬ್ಯಾಂಕ್: ಇಲ್ಲಿ 1 ವರ್ಷದ ಎಫ್ಡಿಗೆ 7.1%, 2 ವರ್ಷಗಳ ಎಫ್ಡಿಗೆ 7.15%, 3-4 ವರ್ಷಗಳ ಎಫ್ಡಿಗೆ 7% ಮತ್ತು ಐದು ವರ್ಷಗಳ ಎಫ್ಡಿಗೆ 6.2% ನೀಡಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ದೇಶದ ಅತಿದೊಡ್ಡ ಬ್ಯಾಂಕ್ 1 ವರ್ಷದ ಠೇವಣಿಗಳಿಗೆ 6.8%, 2-3 ವರ್ಷಗಳವರೆಗೆ 7%, 3-5 ವರ್ಷಗಳವರೆಗೆ 6.75% ಮತ್ತು 5 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ 6.5% ಬಡ್ಡಿಯನ್ನು ನೀಡುತ್ತದೆ.