Fixed Deposit : ಫಿಕ್ಸೆಡ್ ಡೆಪಾಸಿಟ್ ಇಡುವ ಪ್ಲ್ಯಾನ್ ಇದೆಯಾ ? ವಿವಿಧ ಬ್ಯಾಂಕುಗಳ ಬಡ್ಡಿ ದರ ವಿವರ ಇಲ್ಲಿದೆ - Vistara News

ಪ್ರಮುಖ ಸುದ್ದಿ

Fixed Deposit : ಫಿಕ್ಸೆಡ್ ಡೆಪಾಸಿಟ್ ಇಡುವ ಪ್ಲ್ಯಾನ್ ಇದೆಯಾ ? ವಿವಿಧ ಬ್ಯಾಂಕುಗಳ ಬಡ್ಡಿ ದರ ವಿವರ ಇಲ್ಲಿದೆ

Fixed Deposit : 1 ವರ್ಷದ ಅವಧಿಯ ಠೇವಣಿಗಳಿಗೆ ಬಹುತೇಕ ಬ್ಯಾಂಕುಗಳು ಸುಮಾರು 6.8 ರಿಂದ 7% ಬಡ್ಡಿ ನೀಡುತ್ತಿವೆ.

VISTARANEWS.COM


on

Bank Fixed Deposit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದುಡಿದ ದುಡ್ಡಲ್ಲಿ ಒಂದು ಪ್ರಮಾಣವನ್ನು ಪಿಕ್ಸೆಡ್​ ಡೆಪಾಸಿಟ್ (Fixed Deposit) ಆಗಿ ಇಡುವುದು ಅಭ್ಯಾಸ. ಅದರ ಬಡ್ಡಿಯ ಮೂಲಕ ಹೆಚ್ಚಿನ ಆದಾಯ ಮಾಡಬಹುದು ಎಂಬುದು ಎಲ್ಲರ ಆಲೋಚನೆ. ಆದರೆ, ಎಫ್​ಡಿ ಇಡುವ ಮೊದಲು ಎಲ್ಲರಿಗೂ ಒಂದು ಗೊಂದಲೇ ಇದ್ದೇ ಇರುತ್ತದೆ. ಯಾವ ಬ್ಯಾಂಕ್​ನಲ್ಲಿ ಹೆಚ್ಚು ಬಡ್ಡಿ ಕೊಡ್ತಾರೆ ಎಂಬುದೇ ಅವರ ತಳಮಳಕ್ಕೆ ಕಾರಣವಾಗಿರುತ್ತದೆ. ಹೀಗಾಗಿ ಫಿಕ್ಸೆಡ್ ಡೆಪಾಸಿಟ್ (ಎಫ್ಡಿ) ಅನ್ನು ಲಾಕ್ ಮಾಡುವ ಮೊದಲು, ವಿವಿಧ ಬ್ಯಾಂಕುಗಳು ನೀಡುವ ಬಡ್ಡಿದರಗಳನ್ನು ಹೋಲಿಸಬೇಕು. ಈ ಕೆಳಗೆಆರು ವಿಭಿನ್ನ ಬ್ಯಾಂಕುಗಳ (ಖಾಸಗಿ ಮತ್ತು ಸರ್ಕಾರಿ ) ಅವಧಿ ಠೇವಣಿಗಳ ಮೇಲಿನ ಬಡ್ಡಿದರಗಳ ವಿವರ ನೀಡಲಾಗಿದೆ. ಅವುಗಳನ್ನು ಹೋಲಿಸಿ ಫಿಕ್ಸೆಡ್ ಇಡಿ.

ಆಕ್ಸಿಸ್ ಬ್ಯಾಂಕ್: ಇಲ್ಲಿ, 2 ಕೋಟಿ ರೂ.ಗಿಂತ ಕಡಿಮೆ 1 ವರ್ಷದ ಠೇವಣಿಗಳ ಮೇಲೆ ಬಡ್ಡಿದರವು 6.7% ಆಗಿದೆ. 2 ವರ್ಷ, 3 ವರ್ಷ ಮತ್ತು 4 ವರ್ಷಗಳ ಡೆಪಾಸಿಡ್​ಗೆ 7.1% ಮತ್ತು ಐದು ವರ್ಷಗಳವರೆಗೆ 7% ಬಡ್ಡಿ ಕೊಡ್ತಾರೆ.

ಬ್ಯಾಂಕ್ ಆಫ್ ಬರೋಡಾ: ಸರ್ಕಾರಿ ಸ್ವಾಮ್ಯದ ಈ ಬ್ಯಾಂಕ್ 1-2 ವರ್ಷಗಳ ಎಫ್​ಡಿಗೆ 7%, 2-3 ವರ್ಷಗಳ ಎಫ್​ಡಿಗೆ 7.25% ಮತ್ತು 4 ವರ್ಷಗಳ ಅವಧಿಗೆ 6.5% ಬಡ್ಡಿ ಕೊಡುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್: 1 ವರ್ಷದ ಠೇವಣಿಗಳಿಗೆ, ಸಾಮಾನ್ಯ ನಾಗರಿಕರಿಗೆ 6.6% ಮತ್ತು ಹಿರಿಯ ನಾಗರಿಕರಿಗೆ 7.1% ಬಡ್ಡಿದರವಿದೆ. 15-18 ತಿಂಗಳು, 18-21 ತಿಂಗಳು, 21 ತಿಂಗಳಿನಿಂದ 2 ವರ್ಷ 11 ತಿಂಗಳು, ಮತ್ತು 2 ವರ್ಷ 11 ತಿಂಗಳಿನಿಂದ 35 ತಿಂಗಳ ಅವಧಿಗೆ ಕ್ರಮವಾಗಿ 7.1%, 7.25%, 7% ಮತ್ತು 7.15% ಬಡ್ಡಿದರಗಳನ್ನು ನಿಗದಿ ಮಾಡಿದೆ.

ಇದನ್ನೂ ಓದಿ : EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್‌ ಬಡ್ಡಿ ದರ ಶೇ.8.25ಕ್ಕೆ ಏರಿಕೆ

ಐಸಿಐಸಿಐ ಬ್ಯಾಂಕ್: ಈ ಖಾಸಗಿ ಬ್ಯಾಂಕ್​ನ ಗ್ರಾಹಕರು 1 ವರ್ಷದ ಎಫ್​ಡಿಗೆ 7.4%, 390 ದಿನಗಳಿಂದ 15 ತಿಂಗಳವರೆಗೆ 7.3%, 15 ತಿಂಗಳಿನಿಂದ 2 ವರ್ಷಗಳವರೆಗೆ 7.05% ಮತ್ತು 2 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ 7% ಬಡ್ಡಿ ಪಡೆಯುತ್ತಾರೆ.

ಕೊಟಕ್ ಮಹೀಂದ್ರಾ ಬ್ಯಾಂಕ್: ಇಲ್ಲಿ 1 ವರ್ಷದ ಎಫ್​ಡಿಗೆ 7.1%, 2 ವರ್ಷಗಳ ಎಫ್ಡಿಗೆ 7.15%, 3-4 ವರ್ಷಗಳ ಎಫ್​ಡಿಗೆ 7% ಮತ್ತು ಐದು ವರ್ಷಗಳ ಎಫ್​ಡಿಗೆ 6.2% ನೀಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ದೇಶದ ಅತಿದೊಡ್ಡ ಬ್ಯಾಂಕ್ 1 ವರ್ಷದ ಠೇವಣಿಗಳಿಗೆ 6.8%, 2-3 ವರ್ಷಗಳವರೆಗೆ 7%, 3-5 ವರ್ಷಗಳವರೆಗೆ 6.75% ಮತ್ತು 5 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ 6.5% ಬಡ್ಡಿಯನ್ನು ನೀಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Nirav Modi: ನೀರವ್‌ ಮೋದಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ಜಾನ್‌ ಜಾನಿ ಕೈಗೆತ್ತಿಕೊಂಡರು. “ನೀರವ್‌ ಮೋದಿಗೆ ಜಾಮೀನು ನೀಡಿದರೆ ಅವರು ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹಾಗೆಯೇ, ಪ್ರಭಾವಿಯಾಗಿರುವ ಕಾರಣ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿ ನೀರವ್‌ ಮೋದಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

VISTARANEWS.COM


on

Nirav modi
Koo

ಲಂಡನ್‌: ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (Punjab National Bank) ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ (Nirav Modi) ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ ಕೋರ್ಟ್‌ ತಿರಸ್ಕರಿಸಿದೆ. ಇದರಿಂದಾಗಿ ನೀರವ್‌ ಮೋದಿಯು ಹಿಸ್‌ ಮೆಜೆಸ್ಟೀಸ್‌ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ. ನೀರವ್‌ ಮೋದಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ನಲ್ಲಿರುವ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ (Westminster Magistrates Court) ನಿರಾಕರಿಸಿತು. ಇದರೊಂದಿಗೆ ಸತತ ಐದನೇ ಬಾರಿಯೂ ನೀರವ್‌ ಮೋದಿ ಜಾಮೀನು ಅರ್ಜಿಯು ತಿರಸ್ಕೃತಗೊಂಡಂತಾಗಿದೆ.

ನೀರವ್‌ ಮೋದಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ಜಾನ್‌ ಜಾನಿ ಕೈಗೆತ್ತಿಕೊಂಡರು. “ನೀರವ್‌ ಮೋದಿಗೆ ಜಾಮೀನು ನೀಡಿದರೆ ಅವರು ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹಾಗೆಯೇ, ಪ್ರಭಾವಿಯಾಗಿರುವ ಕಾರಣ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ. ಹಾಗಾಗಿ, ನೀರವ್‌ ಮೋದಿಗೆ ಯಾರೂ ಜಾಮೀನು ನೀಡಲು ಸಾಧ್ಯವಿಲ್ಲ. ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ತಿಳಿಸಿದರು. ಇದು ನೀರವ್‌ ಮೋದಿಗೆ ಮತ್ತಷ್ಟು ಸಂಕಷ್ಟ ತಂದಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿರುವ ನೀರವ್‌ ಮೋದಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರ ವಿರುದ್ಧ ಸಿಬಿಐ ಹಾಗೂ ಇ.ಡಿ ತನಿಖೆ ನಡೆಸುತ್ತಿದ್ದು, ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರವು ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿದೆ. ಇವರನ್ನು ಭಾರತವು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಭಾರತದ ಮನವಿ ಮೇರೆಗೆ 2019ರಲ್ಲಿ ನೀರವ್‌ ಮೋದಿ ಅವರನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದೆ. ಅಂದಿನಿಂದ ಇದುವರೆಗೆ ನೀರವ್‌ ಮೋದಿಯು ಜೈಲಿನಲ್ಲೇ ಇದ್ದಾರೆ. ಇದಕ್ಕೂ ಮೊದಲು ಅವರನ್ನು ವಿಂಡ್ಸ್‌ವರ್ತ್‌ ಜೈಲಿನಲ್ಲಿ ಇರಿಸಲಾಗಿತ್ತು.

ನೀರವ್‌ ಮೋದಿಯು ಹಾಂಕಾಂಗ್‌ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ 253.62 ಕೋಟಿ ರೂಪಾಯಿ, ವಿವಿಧ ಬಗೆಯ ರತ್ನಗಳು, ಆಭರಣಗಳನ್ನು ಇಡಿ ಜಪ್ತಿಮಾಡಿದೆ. ಹಾಗೆಯೇ, ದೇಶಭ್ರಷ್ಟ ಆರ್ಥಿಕ ಅಪರಾಧಿಯನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇಲ್ಲಿಯವರೆಗೆ ದೇಶ-ವಿದೇಶ ಸೇರಿ ನೀರವ್‌ ಮೋದಿಯ 2,396.45ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ. ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ನೀರವ್‌ ಬ್ಯಾಂಕ್‌ ಅಕೌಂಟ್‌ಗಳನ್ನೂ ಸೀಲ್‌ ಮಾಡಲಾಗಿದೆ. 

ಇದನ್ನೂ ಓದಿ: IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

Continue Reading

ಪ್ರಮುಖ ಸುದ್ದಿ

Haryana Government : ಹರಿಯಾಣದ ಬಿಜೆಪಿ ಸರ್ಕಾರ ಪತನ ಸಾಧ್ಯತೆ; 3 ಪಕ್ಷೇತರರು ಕಾಂಗ್ರೆಸ್ ಕಡೆಗೆ

Nayab Saini: ಸರ್ಕಾರ ರಚಿಸಲು ಅವರಿಗೆ ನಮ್ಮ ಬೆಂಬಲ ಅಗತ್ಯವಿರುವ ಸಮಯದಲ್ಲಿ ನಮ್ಮನ್ನು ಕರೆದಿದ್ದರು. ಮನೋಹರ್ ಲಾಲ್ ಖಟ್ಟರ್ ಅಧಿಕಾರದಲ್ಲಿ ಇರುವವರೆಗೂ ನಾವು ಬೆಂಬಲಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೆವು. ಅವರು ಇನ್ನು ಮುಂದೆ ಅಧಿಕಾರದಲ್ಲಿಲ್ಲ . ರೈತರ ಹಿತದೃಷ್ಟಿಯಿಂದ ನಾವು ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

VISTARANEWS.COM


on

Haryana Government
Koo

ನವದೆಹಲಿ: ಹರಿಯಾಣದಲ್ಲಿ ರಾಜಕೀಯ ಬಿಕ್ಕಟ್ಟಲು ತಲೆತೋರಿದೆ. ಅಲ್ಲಿನ ನಯಾಬ್​ ಸೈನಿ (Nayab Saini) ನೇತೃತ್ವದ ಬಿಜೆಪಿ ಸರ್ಕಾರಕ್ಕೆ (Haryana Government) ನೀಡಿದ್ದ ಬೆಂಬಲವನ್ನು ಮೂವರು ಪಕ್ಷೇತರ ಶಾಸಕರು (independent MLA) ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರ ಅತಂತ್ರವಾಗಿದೆ. ಅವರೆಲ್ಲರೂ ಪ್ರತಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಪುಂಡ್ರಿ ಕ್ಷೇತ್ರದ ರಣಧೀರ್ ಗೋಲನ್, ನಿಲೋಖೇರಿಯ ಧರಂಪಾಲ್ ಗೊಂಡರ್ ಮತ್ತು ದಾದ್ರಿಯ ಸೋಮ್ಬೀರ್ ಸಿಂಗ್ ಸಾಂಗ್ವಾನ್ ಬೆಂಬಲ ವಾಪಸ್ ಪಡೆದ ಶಾಸಕರು. ರೋಹ್ಟಕ್​ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರೆಲ್ಲರೂ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಬಾದ್​ಶಾಪುರ ಕ್ಷೇತ್ರದ ರಾಕೇಶ್ ದೌಲ್ತಾಬಾದ್ ಕೂಡ ಅವರೊಂದಿಗೆ ಸೇರುವ ನಿರೀಕ್ಷೆಯಿದೆ ಆದರೆ ಸಮಯಕ್ಕೆ ಸರಿಯಾಗಿ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಸಂಗ್ವಾನ್ ಹೇಳಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಧರಂ ಪಾಲ್ ಗೊಂಡರ್​, ಬಿಜೆಪಿ ಸರ್ಕಾರವು ರಾಜ್ಯದ ನಾನಾ ಸಮಸ್ಯೆಗಳನ್ನು ನಿಭಾಯಿಸಿದ ರೀತಿ ಸರಿಯಲ್ಲ ಎಂದು ಹೇಳಿದ್ದಾರೆ.

ಸರ್ಕಾರ ರಚಿಸಲು ಅವರಿಗೆ ನಮ್ಮ ಬೆಂಬಲ ಅಗತ್ಯವಿರುವ ಸಮಯದಲ್ಲಿ ನಮ್ಮನ್ನು ಕರೆದಿದ್ದರು. ಮನೋಹರ್ ಲಾಲ್ ಖಟ್ಟರ್ ಅಧಿಕಾರದಲ್ಲಿ ಇರುವವರೆಗೂ ನಾವು ಬೆಂಬಲಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೆವು. ಅವರು ಇನ್ನು ಮುಂದೆ ಅಧಿಕಾರದಲ್ಲಿಲ್ಲ . ರೈತರ ಹಿತದೃಷ್ಟಿಯಿಂದ ನಾವು ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದೇ ರೀತಿಯ ಮಾತುಗಳನ್ನಾಡಿದಿ ಗೋಲನ್, ಹರಿಯಾಣದಲ್ಲಿ ಬಿಜೆಪಿಯ ಅಧಿಕಾರಾವಧಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರವು ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರದಲ್ಲಿ ಪ್ರಮುಖ ಅಂಶ ಎಂದು ಹೇಳಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ಬಿಜೆಪಿಗೆ ಬೆಂಬಲ ನೀಡಿದ್ದೇವೆ. ಇಂದು ನಿರುದ್ಯೋಗ ಮತ್ತು ಹಣದುಬ್ಬರವು ಗರಿಷ್ಠ ಮಟ್ಟದಲ್ಲಿದೆ. ಇದನ್ನು ನೋಡಿ, ನಾವು ನಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರದ ಮೇಲಿನ ಜನರ ವಿಶ್ವಾಸದ ಕೊರತೆ ಮತ್ತು ಕಾಂಗ್ರೆಸ್​​ಗೆ ಹೆಚ್ಚುತ್ತಿರುವ ಬೆಂಬಲದ ಪ್ರತೀಕ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election : ರಾಜಕೀಯಕ್ಕಾಗಿ ದ್ವೇಷ ಸೃಷ್ಟಿ; ಬಿಜೆಪಿ ವಿರುದ್ಧ ವಿಡಿಯೊ ಮೂಲಕ ಟೀಕೆ ಮಾಡಿದ ಸೋನಿಯಾ ಗಾಂಧಿ

“ಪಕ್ಷೇತರರ ನಿರ್ಧಾರ ಸರಿಯಾಗಿದೆ. ಸರಿಯಾದ ಸಮಯದಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರ ಇದಾಗಿದೆ. ಇದು ಜನರ ಹಿತದೃಷ್ಟಿಯಿಂದ ಉತ್ತಮ. ರಾಜ್ಯದ ಕಾಂಗ್ರೆಸ್ ನ ಅಲೆ ಇದೆ. ನಾನು ಅವರನ್ನು ಸ್ವಾಗತಿಸುತ್ತೇನೆ” ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್, “ಮೂವರು ಸ್ವತಂತ್ರ ಶಾಸಕರಾದ ಸೋಮ್​ಬಿರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲನ್ ಮತ್ತು ಧರಂಪಾಲ್ ಗೊಂಡರ್ ಅವರು ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಕಾಂಗ್ರೆಸ್​​ಗೆ ಬೆಂಬಲ ನೀಡಿದ್ದಾರೆ” ಎಂದು ಹೇಳಿದರು.

90 ಸದಸ್ಯರ ಹರಿಯಾಣ ವಿಧಾನಸಭೆಯ ಪ್ರಸ್ತುತ ಬಲ 88. ಅದರಲ್ಲಿ ಬಿಜೆಪಿ 40 ಸದಸ್ಯರನ್ನು ಹೊಂದಿದೆ ಬಿಜೆಪಿ ಸರ್ಕಾರಕ್ಕೆ ಸ್ವತಂತ್ರರ ಬೆಂಬಲವಿತ್ತು. ಇದರಿಂದಾಗಿ ನಯಾಬ್ ಸಿಂಗ್ ಸೈನಿ ಸರ್ಕಾರ ಈಗ ಸಂಖ್ಯಾ ಬಲವಿಲ್ಲದ ಸರ್ಕಾರವಾಗಿದೆ

Continue Reading

ಕ್ರೈಂ

Prajwal Revanna Case: ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ ಜತೆ ಮುಖಾಮುಖಿ ವಿಚಾರಣೆಗೆ ಒಪ್ಪದ ರೇವಣ್ಣ!

Prajwal Revanna Case: ಕಿಡ್ನ್ಯಾಪ್ ಕೇಸಲ್ಲಿ ಬಂಧಿತರಾಗಿ ಎಸ್ಐಟಿ‌ ಕಸ್ಟಡಿಯಲ್ಲಿರುವ ಮಾಜಿ‌ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ‌ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಎರಡು‌ ದಿನಗಳಿಂದ ಸಹ ರೇವಣ್ಣ ಒಂದೇ ಮಾತನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಪಹರಣ ಬಗ್ಗೆ ನನಗೇನೂ ಗೊತ್ತಿಲ್ಲ, ನಾನು ಕಿಡ್ನ್ಯಾಪ್ ಮಾಡಿಸಿಲ್ಲ ಎಂಬ ಹೇಳಿಕೆಯನ್ನಷ್ಟೇ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮಂಗಳವಾರ ಎರಡನೇ ಆರೋಪಿ‌ಯಾದ ಸತೀಶ್ ಬಾಬುವನ್ನು ರೇವಣ್ಣ ಎದುರು ಹಾಜರುಪಡಿಸಿ ಮುಖಾಮುಖಿ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದರು.

VISTARANEWS.COM


on

Prajwal Revanna Case HD Revanna refuses to face to face with 2nd accused in kidnapping case
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ಸಂತ್ರಸ್ತೆಯನ್ನು ಕಿಡ್ನ್ಯಾಪ್‌ ಮಾಡಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ‌ ವಿಚಾರಣೆಯನ್ನು ಎದುರಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯೊಂದಿಗೆ ಮುಖಾಮುಖಿಯಾಗಿ ವಿಚಾರಣೆ ಎದುರಿಸಲು ಇಂದು (ಮಂಗಳವಾರ – ಮೇ 7) ಎಸ್ಐಟಿ ಪ್ಲ್ಯಾನ್ ಮಾಡಿತ್ತು. ಆದರೆ, ಇದಕ್ಕೆ ಎಚ್‌.ಡಿ. ರೇವಣ್ಣ ನಿರಾಕರಣೆ ಮಾಡಿದ್ದಾರೆನ್ನಲಾಗಿದೆ.

ಮುಖಾಮುಖಿ ವಿಚಾರಣೆಗೆ ಎಚ್.ಡಿ. ರೇವಣ್ಣ ಅವರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಎರಡನೇ ಆರೋಪಿ ಸತೀಶ್‌ ಬಾಬುವನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.

ಮೂರನೇ ದಿನವೂ ರೇವಣ್ಣಗೆ ಡ್ರಿಲ್

ಕಿಡ್ನ್ಯಾಪ್ ಕೇಸಲ್ಲಿ ಬಂಧಿತರಾಗಿ ಎಸ್ಐಟಿ‌ ಕಸ್ಟಡಿಯಲ್ಲಿರುವ ಮಾಜಿ‌ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ‌ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಎರಡು‌ ದಿನಗಳಿಂದ ಸಹ ರೇವಣ್ಣ ಒಂದೇ ಮಾತನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಪಹರಣ ಬಗ್ಗೆ ನನಗೇನೂ ಗೊತ್ತಿಲ್ಲ, ನಾನು ಕಿಡ್ನ್ಯಾಪ್ ಮಾಡಿಸಿಲ್ಲ ಎಂಬ ಹೇಳಿಕೆಯನ್ನಷ್ಟೇ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮಂಗಳವಾರ ಎರಡನೇ ಆರೋಪಿ‌ಯಾದ ಸತೀಶ್ ಬಾಬುವನ್ನು ರೇವಣ್ಣ ಎದುರು ಹಾಜರುಪಡಿಸಿ ಮುಖಾಮುಖಿ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದರು.

ಆದರೆ, ಎರಡನೇ ಆರೋಪಿಯ ಮುಂದೆ ಮುಖಾಮುಖಿ ವಿಚಾರಣೆಗೆ A1 ಆರೋಪಿಯಾದ ಎಚ್.ಡಿ. ರೇವಣ್ಣ ಅವರು ಒಪ್ಪಲೇ ಇಲ್ಲ ಎನ್ನಲಾಗಿದೆ. ಹೀಗಾಗಿ ಎರಡನೇ ಆರೋಪಿಯನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಸ್ಐಟಿ ಹಲವು ಪ್ರಶ್ನೆಗಳನ್ನು ಸತೀಶ್‌ ಮುಂದಿಟ್ಟಿದೆ. ಸಂತ್ರಸ್ತ ಮಹಿಳೆಯನ್ನು ಯಾರ ಸೂಚನೆ ಮೇರೆಗೆ ಕರೆದುಕೊಂಡು ಹೋಗಿದ್ದಿರಿ? ಕಿಡ್ನ್ಯಾಪ್‌ ಮಾಡುವ ಉದ್ದೇಶದಿಂದಲೇ ಸಂತ್ರಸ್ತೆಯನ್ನು ಕರೆದೊಯ್ದಿದ್ದಾ? ಕಿಡ್ನ್ಯಾಪ್ ಮಾಡಿ ಕಾಳೇನಹಳ್ಳಿಯ ತೋಟದ‌ ಮನೆಯಲ್ಲಿಡಲು ಯಾರು ಸೂಚನೆ ನೀಡಿದ್ದರು? ಹೀಗೆ ಹಲವು ಪ್ರಶ್ನೆಗಳನ್ನು ಸತೀಶ್ ಬಾಬುಗೆ ಎಸ್ಐಟಿ ಅಧಿಕಾರಿಗಳು ಕೇಳಿದ್ದಾರೆ. ಈ ವೇಳೆ ಆರೋಪಿ ನೀಡಿದ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಹಾಗೂ ವಿಡಿಯೋಗ್ರಫಿ ಮೂಲಕ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸತೀಶ್‌ ಹೇಳಿಕೆ ಮೇಲೆ ರೇವಣ್ಣ ವಿಚಾರಣೆ

ಈಗ ಸತೀಶ್‌ ಬಾಬು ನೀಡುವ ಹೇಳಿಕೆಯನ್ನು ಆಧರಿಸಿ ಎಚ್‌.ಡಿ. ರೇವಣ್ಣ ಅವರನ್ನು ವಿಚಾರಣೆ ನಡೆಸಲು ಎಸ್‌ಐಟಿ ತೀರ್ಮಾನ ಮಾಡಿದೆ. ಸತೀಶ್‌ ಬಾಬು ನಿಮ್ಮ ವಿರುದ್ಧವಾಗಿ ಇಂಥ ಹೇಳಿಕೆಯನ್ನು ಕೊಟ್ಟಿದ್ದಾನೆ. ಈ ಪ್ರಕರಣದ ಬಗ್ಗೆ ಏನೆಲ್ಲ ಹೇಳಿದ್ದಾನೆ ಎಂಬುದಾಗಿ ಪ್ರಶ್ನೆಗಳನ್ನು ಸಿದ್ಧಪಡಿಸಿ ರೇವಣ್ಣ ಅವರಿಗೆ ಕೇಳುವ ಸಾಧ್ಯತೆ ಇದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

ರೇವಣ್ಣಗೆ ಹರ್ನಿಯಾ?

ಇದರ ಮಧ್ಯೆ ಎದೆ ಉರಿ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುವ ಎಚ್‌.ಡಿ. ರೇವಣ್ಣ ಅವರನ್ನು ಮೊದಲಿಗೆಬೌರಿಂಗ್‌ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರೇವಣ್ಣ ಅವರಲ್ಲಿ ಮೊದಲು ಹರ್ನಿಯಾ ಲಕ್ಷಣ ಕಂಡುಬಂದಿತ್ತು ಎನ್ನಲಾಗಿದ್ದು, ಈ ಬಗ್ಗೆಯೂ ತಪಾಸಣೆಯನ್ನು ನಡೆಸಲಾಗಿದೆ. ಅಲ್ಲಿಯೂ ಸಹ ವೈದ್ಯರು ತಪಾಸಣೆ ನಡೆಸಿ ರೇವಣ್ಣ ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದ್ದಾರೆ. ರೇವಣ್ಣರನ್ನ ಮೆಡಿಕಲ್‌ಟೆಸ್ಟ್ ಗೆ ಒಳಪಡಿಸಿದ್ದು, ವೈದ್ಯಕೀಯ ತಪಾಸಣೆ ವೇಳೆ ಹಾರ್ನಿಯ ಲಕ್ಷಣ ಪತ್ತೆಯಾಗಿದ್ದು, ರೇವಣ್ಣ ಎದೆ ನೋವು ಇದೆ ಎಂದು ಹೇಳಿದ ಹಿನ್ನೆಲೆ ಬೌರಿಂಗ್ ಆಸ್ಪತ್ರೆ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲು‌ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಎಸ್ಐಟಿ‌ಅಧಿಕಾರಿಗಳು ರೇವಣ್ಣನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

Continue Reading

ದೇಶ

Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

Lok Sabha Election: 2019ರ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಶೇ.68.40ರಷ್ಟು ಮತದಾನ ನಡೆದಿತ್ತು. ಮಂಗಳವಾರ ಇನ್ನೂ ಒಂದು ಗಂಟೆಯ ಮತದಾನದ ಅಂಕಿ-ಅಂಶ ಲಭ್ಯವಾಗಬೇಕಿದೆ. ಆದರೂ, ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಕುಸಿದಿದೆ ಎಂದು ತಿಳಿದುಬಂದಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೂರನೇ ಹಂತದ ಮತದಾನವು (Voting) ಬಹುತೇಕ ಶಾಂತಿಯುತವಾಗಿ ನಡೆದಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮಂಗಳವಾರ (ಮೇ 7) ಸಂಜೆ 5 ಗಂಟೆ ಸುಮಾರಿಗೆ ಶೇ.60.19ರಷ್ಟು ಮತದಾನ ದಾಖಲಾಗಿದೆ. 2019ರ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಶೇ.68.40ರಷ್ಟು ಮತದಾನ ನಡೆದಿತ್ತು. ಮಂಗಳವಾರ ಇನ್ನೂ ಒಂದು ಗಂಟೆಯ ಮತದಾನದ ಅಂಕಿ-ಅಂಶ ಲಭ್ಯವಾಗಬೇಕಿದೆ. ಆದರೂ, ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಕುಸಿದಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ 14, ಗುಜರಾತ್‌ನ 26, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ಮಧ್ಯಪ್ರದೇಶ 8 ಸೇರಿ ಒಟ್ಟು 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಸೇರಿ ಹಲವು ಗಣ್ಯರು ಮತದಾನ ಮಾಡಿದರು. ಪಶ್ಚಿಮ ಬಂಗಾಳ ಸೇರಿ ಕೆಲವಡೆ ಮಾತ್ರ ಸಣ್ಣಪುಟ್ಟ ಹಿಂಸಾಚಾರಗಳು ನಡೆದಿವೆ.

ಪ್ರಮುಖ ರಾಜ್ಯಗಳಲ್ಲಿ ಮತದಾನ ಪ್ರಮಾಣ

ಕರ್ನಾಟಕ66.05%
ಪಶ್ಚಿಮ ಬಂಗಾಳ73.93%
ಅಸ್ಸಾಂ75.01%
ಮಹಾರಾಷ್ಟ್ರ53.4%
ಗುಜರಾತ್‌55.22
ಬಿಹಾರ56%
ಉತ್ತರ ಪ್ರದೇಶ55.13
ಮಧ್ಯಪ್ರದೇಶ 62.28

ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಇದು ಕೂಡ 2019ರ ಲೋಕಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್‌ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದ್ದು, ಇದುವರೆಗೆ ಮೂರು ಹಂತಗಳ ಮತದಾನ ಮುಕ್ತಾಯವಾಗಿದೆ. ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮತದಾನದ ವೇಳೆ ಗಲಾಟೆ ನಡೆಯಿತು. ಮುರ್ಷಿದಾಬಾದ್‌ನಲ್ಲಿ ಧನಂಜಯ್‌ ಘೋಷ್‌ ಅವರು ಮತದಾನ ಮಾಡಲು ಹೋದಾಗ ಅವರನ್ನು ಬೂತ್‌ ಏಜೆಂಟ್‌ ಒಬ್ಬರು ತಡೆದಿದ್ದಾರೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ನಾನೊಬ್ಬ‌ ಬಿಜೆಪಿ ಅಭ್ಯರ್ಥಿ. ನನಗೇ ಚುನಾವಣೆ ಏಜೆಂಟ್‌ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್‌ ಘೋಷ್‌ ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಮತದಾನಕ್ಕೆ ಬಂದು ಇವಿಎಂಗೆ ಬೆಂಕಿ ಹಾಕಿದ ಯುವಕ; ಸುರಪುರದಲ್ಲಿ ಕಲ್ಲು ತೂರಾಟ

Continue Reading
Advertisement
Nirav modi
ದೇಶ14 mins ago

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Yallapura MLA Shivaram Hebbar voting in Arabail village
ರಾಜಕೀಯ24 mins ago

Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ

Haryana Government
ಪ್ರಮುಖ ಸುದ್ದಿ29 mins ago

Haryana Government : ಹರಿಯಾಣದ ಬಿಜೆಪಿ ಸರ್ಕಾರ ಪತನ ಸಾಧ್ಯತೆ; 3 ಪಕ್ಷೇತರರು ಕಾಂಗ್ರೆಸ್ ಕಡೆಗೆ

Prajwal Revanna Case HD Revanna refuses to face to face with 2nd accused in kidnapping case
ಕ್ರೈಂ31 mins ago

Prajwal Revanna Case: ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ ಜತೆ ಮುಖಾಮುಖಿ ವಿಚಾರಣೆಗೆ ಒಪ್ಪದ ರೇವಣ್ಣ!

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
ತುಮಕೂರು35 mins ago

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Bidar Lok Sabha constituency BJP candidate Bhagwanth Khooba voting in Aurad
ಬೀದರ್‌38 mins ago

Lok Sabha Election 2024: ಔರಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮತದಾನ

Lok Sabha Election
ದೇಶ40 mins ago

Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

Prajwal Revanna Case HD Revanna suffers heartburn and gastric problems Shift to hospital
ರಾಜಕೀಯ1 hour ago

Prajwal Revanna Case: ಎಚ್.ಡಿ. ರೇವಣ್ಣಗೆ ಎದೆ ಉರಿ, ಗ್ಯಾಸ್ಟ್ರಿಕ್‌ ತೊಂದರೆ; ಆಸ್ಪತ್ರೆಗೆ ಶಿಫ್ಟ್

Lok Sabha Election 2024
Lok Sabha Election 20241 hour ago

Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

Met Gala 2024
ಫ್ಯಾಷನ್1 hour ago

Met Gala 2024: ಮೆಟ್ ಗಾಲಾದಲ್ಲಿ 200 ಕ್ಯಾರಟ್ ವಜ್ರ ಧರಿಸಿ ಗಮನ ಸೆಳೆದ ಸುಧಾ ರೆಡ್ಡಿ! ಯಾರಿವರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ4 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌