Site icon Vistara News

Tempo Accident: ಸೀಮಂತಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ; ಮಹಿಳೆ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

Accident

ಶಿವಮೊಗ್ಗ: ಸೀಮಂತಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿಯಾಗಿ ಮಹಿಳೆ ಮೃತಪಟ್ಟು, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಿಕಾರಿಪುರ ಸಮೀಪದ ಚಿನ್ನಿಕಟ್ಟೆ ಬಳಿ ನಡೆದಿದೆ. ಶಿವಮೊಗ್ಗದಿಂದ ಸಿಮಂತಕ್ಕೆಂದು ಕೊಡಮಗ್ಗಿಗೆ ತೆರಳುತ್ತಿದ್ದ ವೇಳೆ ವಾಹನ ಪಲ್ಟಿಯಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಳದಲ್ಲೇ ಮೃತಪಟಿದ್ದು, ಗಾಯಾಳುಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Bantwal News: ಗುಡ್ಡದಲ್ಲಿ ಬೆಂಕಿ ನಂದಿಸಲು ಹೋದ ವೃದ್ಧ ದಂಪತಿ ಸಜೀವ ದಹನ

ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಬಿದ್ದು ಮಗು ಸಾವು

ಶಿವಮೊಗ್ಗ: ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್‌ನಲ್ಲಿ ನಡೆದಿದೆ. ಸಮೀಕ್ಷಾ (6) ಮೃತ ದುರ್ದೈವಿ.

ಭಾನುವಾರವಾಗಿದ್ದರಿಂದ ಆಟವಾಡಲು ಪಾರ್ಕ್‌ಗೆ ಪೋಷಕರ ಜತೆ ಮಗು ತೆರಳಿತ್ತು. ಸಿಮೆಂಟ್‌ ಜಿಂಕೆ ಮೇಲೆ ಕುಳಿತಿದ್ದಾಗ, ಅದು ಮುರಿದು ಬಿದ್ದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡು ಮಗು ಮೃತಪಟ್ಟಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ಯಾಸ್ ಸೋರಿಕೆಯಾಗಿ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ

ಬೆಳಗಾವಿ: ಗ್ಯಾಸ್ ಸೋರಿಕೆಯಾಗಿ ಸ್ಫೋಟವಾಗಿದ್ದರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಸವನ ಗಲ್ಲಿಯಲ್ಲಿ ನಡೆದಿದೆ. ಗ್ಯಾಸ್‌ ಸೋರಿಕೆಯಾಗಿರುವುದು ಗೊತ್ತಾಗದೆ ಮಹಿಳೆ ಟೀ ಮಾಡಲು, ಲೈಟರ್ ಆನ್ ಮಾಡುತ್ತಿದ್ದಂತೆ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಲಲಿತಾ ಭಟ್, ಮೋಹನ್ ಭಟ್, ಕಮಲಾಕ್ಷಿ ಭಟ್, ಹೇಮಂತ್ ಭಟ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version