Site icon Vistara News

Zomato : ಪ್ಯೂರ್​ ವೆಜ್​ ಫುಡ್​ ಮಾತ್ರ ವಿತರಿಸುವ ಹೊಸ ಯೋಜನೆ ಘೋಷಿಸಿದ ಜೊಮ್ಯಾಟೊ

Zomato Deli vary

ಬೆಂಗಳೂರು: ಆನ್​ಲೈನ್ ಬುಕಿಂಗ್ ಮೂಲಕ ಆಹಾರ ವಿತರಣೆ ಮಾಡುವ ಕಂಪನಿ ಜೊಮ್ಯಾಟೊ (Zomato) ನೂರಕ್ಕೆ 100ರಷ್ಟು ಸಸ್ಯಾಹಾರಿ ಆಹಾರವನ್ನು ಗ್ರಾಹಕರಿಗೆ ಪೂರೈಸುವ ‘ಪ್ಯೂರ್ ವೆಜ್ ಮೋಡ್’ ಮತ್ತು ‘ಪ್ಯೂರ್ ವೆಜ್ ಫ್ಲೀಟ್’ (Pure Veg Mode Pure Veg Fleet) ಅನ್ನು ಘೋಷಿಸಿದೆ. ಜೊಮ್ಯಾಟೊ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಮಂಗಳವಾರ ಎಕ್ಸ್ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಈ ಪ್ರಕಟಣೆಯನ್ನು ಹೊರಡಿಸಿದ್ದಾರೆ.

“ಭಾರತವು ವಿಶ್ವದಲ್ಲೇ ಅತಿಹೆಚ್ಚು ಸಸ್ಯಾಹಾರಿಗಳನ್ನು ಹೊಂದಿರುವ ದೇಶ. ಅವರೆಲ್ಲರಿಗೂ ತಮ್ಮ ಆಹಾರವನ್ನು ಹೇಗೆ ಬೇಯಿಸಲಾಗುತ್ತದೆ ಮತ್ತು ಆಹಾರವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಕಾಳಜಿಯಿತ್ತು. ಅದಕ್ಕೆ ಪರಿಹಾರವಾಗಿ ವೆಜ್ ಆರಂಭಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಸಸ್ಯಾಹಾರಿಗಳಿಂದ ಪಡೆದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಆಹಾರ ವಿತರಣಾ ಕಂಪನಿಯ ಸಂಸ್ಥಾಪಕರು ಹೇಳಿದ್ದಾರೆ.

“ಗ್ರಾಹಕರ ಆಹಾರದ ಆದ್ಯತೆಗಳನ್ನು ಪರಿಹರಿಸಲು, ನಾವು ಇಂದು ಜೊಮ್ಯಾಟೊದಲ್ಲಿ “ಪ್ಯೂರ್ ವೆಜ್ ಫ್ಲೀಟ್” ಜೊತೆಗೆ “ಪ್ಯೂರ್ ವೆಜ್ ಮೋಡ್” ಅನ್ನು ಪ್ರಾರಂಭಿಸುತ್ತಿದ್ದೇವೆ. ಶೇಕಡಾ 100 ರಷ್ಟು ಸಸ್ಯಾಹಾರಿ ಆಹಾರ ಆದ್ಯತೆಯನ್ನು ಹೊಂದಿರುವ ಗ್ರಾಹಕರಿಗಾಗಿ ಈ ಸೇವೆ” ಎಂದು ದೀಪಿಂದರ್ ಗೋಯಲ್ ಹೇಳಿದರು.

ವೆಜ್ ಹೋಟೆಲ್ ಮಾತ್ರ ಪಟ್ಟಿಯಲ್ಲಿ

ಶುದ್ಧ ಸಸ್ಯಾಹಾರಿ ಮೋಡ್ ನಲ್ಲಿರುವ ರೆಸ್ಟೋರೆಂಟ್ ಗಳು ಸಸ್ಯಾಹಾರಿ ಆಹಾರವನ್ನು ಮಾತ್ರ ಬೇಯಿಸುವ ಮತ್ತು ಬಡಿಸುವ ಮಳಿಗೆಗಳ ಪಟ್ಟಿಯನ್ನು ಒಳಗೊಂಡಿರುತ್ತವೆ. ಪ್ಯೂರ್ ವೆಜ್ ಮೋಡ್ ಶುದ್ಧ ಸಸ್ಯಾಹಾರಿ ಆಹಾರವನ್ನು ಮಾತ್ರ ಪೂರೈಸುವ ರೆಸ್ಟೋರೆಂಟ್​ಗಳ ಕ್ಯೂರೇಶನ್ ಅನ್ನು ಒಳಗೊಂಡಿರುತ್ತದೆ. ಯಾವುದೇ ಮಾಂಸಾಹಾರಿ ಆಹಾರ ಪದಾರ್ಥವನ್ನು ಪೂರೈಸುವ ಎಲ್ಲಾ ರೆಸ್ಟೋರೆಂಟ್​ಗಳನ್ನು ಸೇರಿಸುವುದಿಲ್ಲ ಎಂದು ಗೋಯಲ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Chinese visa scam : ಚೀನಾ ವೀಸಾ ಹಗರಣ: ಕಾರ್ತಿ ಚಿದಂಬರಂ ಸೇರಿ ಹಲವರಿಗೆ ಕೋರ್ಟ್​​ ಸಮನ್ಸ್

ಹೊಸದಾಗಿ ಪ್ರಾರಂಭಿಸಲಾದ ಸೇವೆಯು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಯ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ. “ಈ ಪ್ಯೂರ್ ವೆಜ್ ಮೋಡ್ ಅಥವಾ ಪ್ಯೂರ್ ವೆಜ್ ಫ್ಲೀಟ್ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಬೇಡಿಕೆಗಳನ್ನು ಪೂರೈಸುವುದಿಲ್ಲ. ಇನ್ನೊಬ್ಬರಿಗೆ ತಾರತಮ್ಯ ಮಾಡುವುದಿಲ್ಲ” ಎಂದು ಅವರು ಹೇಳಿದರು.

“ಭವಿಷ್ಯದಲ್ಲಿ, ಗ್ರಾಹಕರ ಅಗತ್ಯಗಳಿಗಾಗಿ ಅನುಗುಣವಾಗಿ ವಿಶೇಷ ಫ್ಲೀಟ್​ಗಳನ್ನು ಸೇರಿಸಲು ನಾವು ಯೋಜಿಸಿದ್ದೇವೆ. ಉದಾಹರಣೆಗೆ, ಹೈಡ್ರಾಲಿಕ್ ಬ್ಯಾಲೆನ್ಸ್​​ಗಳೊಂದಿಗೆ ವಿಶೇಷ ಕೇಕ್ ವಿತರಣಾ ಫ್ಲೀಟ್ ತಯಾರಾಗಿದೆ. ಇದು ವಿತರಣೆಯ ಸಮಯದಲ್ಲಿ ನಿಮ್ಮ ಕೇಕ್ ಹಾಳಾಗದಂತೆ ತಡೆಯುತ್ತದೆ ಎಂದು ಗೋಯಲ್ ಹೇಳಿದರು. ಮುಂದಿನ ಕೆಲವು ವಾರಗಳಲ್ಲಿ ವಿಶೇಷ ಕೇಕ್ ವಿತರಣಾ ಫ್ಲೀಟ್ ಲೈವ್ ಆಗಲಿದೆ ಎಂದು ಅವರು ಬಹಿರಂಗಪಡಿಸಿದರು

Exit mobile version